Pages

Sunday, April 22, 2018

ಸಾಧನಾ ಪಥ



 ವೇದಿಕ್ ಚಾನಲ್ ನೋಡ್ತಾ ಇದ್ದೆ. ಸಾಧ್ವಿ ದೇವಪ್ರಿಯ ( ಡಾ.ಸುಮನ್) ಅವರ ಮಾತುಗಳು ನನ್ನನ್ನು ಪ್ರಶ್ನೆ ಮಾಡಿಕೊಳ್ಳಲು ಪ್ರೇರೇಪಿಸಿತು.ಏನದು?

ಸಮಾಜದಲ್ಲಿ ಲಕ್ಷ ಲಕ್ಷ ಜನ ಸೇವಾ ಮೋಭಾವನೆಯಿಂದಲೇ ಕೆಲಸ ಮಾಡುತ್ತಿದ್ದೇವೆ. ಆದರೂ ಒಮ್ಮೆ ನಮಗೇ ನಾವು ಪ್ರಶ್ನೆ ಹಾಕಿಕೊಳ್ಳೋಣ " ನಾನು ಮಾಡುತ್ತಿರುವ ಕೆಲಸವನ್ನು ಎಷ್ಟು ಜನರು ಗುರುತಿಸಬಹುದು, ಎಷ್ಟು ಜನ ಮೆಚ್ಚ ಬಹುದು, ಎಷ್ಟು ಜನ ಭೇಶ್! ಅನ್ನ ಬಹುದು !! ಎಂದು ಯಾವಾಗಲೂ ನಮ್ಮ ಮನಸ್ಸು ಬಯಸಿಲ್ಲವೇ?

ಸಾವಿರಾರು ಜನರನ್ನು ಸಂಘಟಿಸಿ ಕಾರ್ಯಕ್ರಮ ಮಾಡುತ್ತಿದ್ದೇವೆ! ಕಾರ್ಯಕ್ರಮ ಅದ್ಭುತ ಯಶಸ್ಸು ಗಳಿಸಿತು!!
ಆದರೆ ನಮ್ಮ ಸೇವೆಯ ಬಗ್ಗೆ ಒಬ್ಬರೂ ಒಂದು ಮೆಚ್ಚುಗೆಯ ಮಾತನಾಡಲಿಲ್ಲ!!
ಎಂದು ಕೊಳ್ಳೋಣ!!
ಆಗಲೂ ನಮ್ಮ ಮನಸ್ಸು ಶಾಂತವಾಗಿ ಸಮಸ್ಥಿತಿಯಲ್ಲಿದೆಯೇ??
ಜನರು ಗೇಲಿಮಾಡಿದರೂ, ಹೀಯಾಳಿಸಿದರೂ ಸಹ ನಮ್ಮ ಮನಸ್ಸು ವಿಚಲಿತವಾಗಲಿಲ್ಲಾ ಎಂದಾದರೆ ನಾವು ಅಧ್ಯಾತ್ಮ ಸಾಧನಾ ಪಥದಲ್ಲಿದ್ದೇವೆ ಎಂದು ಅರ್ಥ.

No comments:

Post a Comment