Pages

Friday, April 30, 2021

Friday, April 23, 2021

ಕಾಶೀಪುರ ಉತ್ಸವ -2021 Full vedio


 

ಪ್ರಾತ: ಅಗ್ನಿಹೋತ್ರ

 ಪ್ರಾತ: ಅಗ್ನಿಹೋತ್ರ 


Thursday, April 22, 2021

ಮನವಿ

 ಎಲ್ಲಾ ವೇದಬಂಧುಗಳಿಗೂ, ಅಗ್ನಿಹೋತ್ರ ಸಾಧಕರಿಗೂ ನಮಸ್ಕಾರ.

"ಎಲ್ಲರಿಗಾಗಿ ವೇದ" ಎಂಬ ಉದ್ದೇಶದೊಡನೆ  " ವೇದಸುಧೆ" ಬ್ಲಾಗ್ ಶುರುವಾಗಿ ಹನ್ನೊಂದು ವರ್ಷಗಳಾಯ್ತು. ಆದರೆ ಇತ್ತೀಚಿನ ದಿನಗಳಲ್ಲಿ Facebook ನಲ್ಲಿ ಹೆಚ್ಚು ಬರೆಯುತ್ತಿದ್ದರಿಂದ ಬ್ಲಾಗ್ ಬರೆಯುವುದನ್ನು  ನಿಲ್ಲಿಸಿದ್ದೆ. ಆದರೆ ಇನ್ನುಮುಂದೆ ನನ್ನ ಚಟುವಟಿಕೆಗಳನ್ನು  ವೇದಸುಧೆ ಬ್ಲಾಗ್ ಮೂಲಕವೇ ಮಾಡಲು ಉದ್ದೇಶಿಸಿರುವೆ. ನನ್ನ Facebook ಸ್ನೇಹಿತರೂ ಕೂಡ ನನ್ನ ಈ ಬ್ಲಾಗ್ ನಲ್ಲಿ ನನ್ನ ಚಟುವಟಿಕೆಗಳಲ್ಲಿ ಪಾಲ್ಗೊಳ್ಲಬಹುದು ಎಂದು ವಿನಂತಿಸುತ್ತಿದ್ದೇನೆ.

ನಿಮ್ಮ ಮಿತ್ರ 

ಹರಿಹರಪುರಶ್ರೀಧರ್

Thursday, January 7, 2021

 ಒಂದು ಹೊಸ ವಿಚಾರವನ್ನು ತಿಳಿದುಕೊಂಡಮೇಲೆ ಅದು ಒಪ್ಪಿಗೆ ಯಾಗಿದ್ದರೆ ಜೀವನದಲ್ಲಿ ಅನುಷ್ಠಾನಕ್ಕೆ ತರಬೇಕು. ಅನುಷ್ಠಾನದಿಂದ ನಮಗೆ ಲಾಭವಾಗಿದ್ದರೆ ಮುಂದುವರೆಸಬೇಕು. ಈಗಂತೂ ಗೂಗಲ್ ನಲ್ಲಿ ಎಲ್ಲವೂ ಲಭ್ಯ. ನಾವೇನು ಮಾಡುತ್ತೇವೆ, ನಾವು ಯಾವ ವಿಚಾರವನ್ನು ಅನುಷ್ಠಾನಕ್ಕೆ ತಂದು ಪ್ರಯೋಜನ ಪಡೆಯುತ್ತಿದ್ದೇವೋ ಅದರ ಬಗ್ಗೆ ಹೆಚ್ಚು ತಿಳಿಯಲು ಹೊರಡುತ್ತೇವೆ. ಅದಕ್ಕೆ ಗೂಗಲ್ ಸರ್ಚ್ ಶುರುವಾಗುತ್ತೆ. ಈಗಾಗಲೇ ನಾವು ಲಾಭ ಪಡೆಯುತ್ತಿದ್ದರೂ, ನಮಗೆ ಅದರಿಂದ ತೊಂದರೆ ಆಗದಿದ್ದರೂ ನಮ್ಮ ಗೂಗಲ್ ಸರ್ಚ್ ನಿಂದ ಸಿಗುವ ಮಾಹಿತಿಗಳಿಂದ ಚಿಂತೆಗೆ ಒಳಗಾಗುತ್ತೇವೆ. ಅನುಮಾನ ಶುರುವಾಗುತ್ತೆ. ಇದರ ಅಡ್ಡ ಪರಿಣಾಮ ಹೀಗಾಗುತ್ತದಂತಲ್ಲಾ!!ನಮ್ಮ ಸಂಶೋಧನೆ ನಮ್ಮನ್ನು ದಾರಿ ತಪ್ಪಿಸುತ್ತದೆ. ನಾವು ನಂಬಿ ಅನುಷ್ಠಾನಕ್ಕೆ ತಂದ ವಿಚಾರದ ಬಗ್ಗೆ ಯಾಕೋ ಸರಿಹೋಗುತ್ತಿಲ್ಲ ಎನಿಸುತ್ತೆ. ಕ್ರಮೇಣ ಯಾವ ವಿಚಾರ ನಮಗೆ ಆರಂಭದಲ್ಲಿ ಆಪ್ಯಾಯಮಾನವಾಗಿತ್ತೋ ಅದರಿಂದ ಕ್ರಮೇಣ ದೂರವಾಗುತ್ತೇವೆ. ನಮ್ಮ ವಿವೇಚನೆಗಿಂತ ದೊಡ್ದದು ಬೇರೆ ಇದೆಯೇ? ಎಲ್ಲದಕ್ಕೂ ಗೂಗಲ್ ಸರ್ಚ್ ಬೇಕೇ?. ಗೂಗಲ್ ನಲ್ಲಿ ಮಾಹಿತಿ ತುಂಬಿರುವವರು ಅವರ ಚಿಂತನೆಗೆ ತಕ್ಕಂತೆ ತುಂಬಿರುತ್ತಾರಲ್ಲವೇ? ನಾವು ನಮ್ಮ ನೆಮ್ಮದಿಯ ಜೀವನಕ್ಕಾಗಿ ಏನನ್ನಾದರೂ ಗೂಗಲ್ ನಲ್ಲಿ ಸರ್ಚ್ ಮಾಡುವ ಮುಂಚೆ ನಮ್ಮ ಜೀವನ ಕ್ರಮ, ಆಹಾರ, ವಿಹಾರ, ಪರಿಸರ ಎಲ್ಲವಕ್ಕೂ ಹೊಂದುವಂತೆ ನಮ್ಮ ಸಂಶೋಧನೆ ಇರಬೇಕು.  ಅದಕ್ಕಿಂತ ಹೆಚ್ಚಾಗಿ ನಮ್ಮ ವಿವೇಕವನ್ನೂ ಉಪಯೋಗಿಸೋಣ. ಅಲ್ಲವೇ?