ಒಂದು ಹೊಸ ವಿಚಾರವನ್ನು ತಿಳಿದುಕೊಂಡಮೇಲೆ ಅದು ಒಪ್ಪಿಗೆ ಯಾಗಿದ್ದರೆ ಜೀವನದಲ್ಲಿ ಅನುಷ್ಠಾನಕ್ಕೆ ತರಬೇಕು. ಅನುಷ್ಠಾನದಿಂದ ನಮಗೆ ಲಾಭವಾಗಿದ್ದರೆ ಮುಂದುವರೆಸಬೇಕು. ಈಗಂತೂ ಗೂಗಲ್ ನಲ್ಲಿ ಎಲ್ಲವೂ ಲಭ್ಯ. ನಾವೇನು ಮಾಡುತ್ತೇವೆ, ನಾವು ಯಾವ ವಿಚಾರವನ್ನು ಅನುಷ್ಠಾನಕ್ಕೆ ತಂದು ಪ್ರಯೋಜನ ಪಡೆಯುತ್ತಿದ್ದೇವೋ ಅದರ ಬಗ್ಗೆ ಹೆಚ್ಚು ತಿಳಿಯಲು ಹೊರಡುತ್ತೇವೆ. ಅದಕ್ಕೆ ಗೂಗಲ್ ಸರ್ಚ್ ಶುರುವಾಗುತ್ತೆ. ಈಗಾಗಲೇ ನಾವು ಲಾಭ ಪಡೆಯುತ್ತಿದ್ದರೂ, ನಮಗೆ ಅದರಿಂದ ತೊಂದರೆ ಆಗದಿದ್ದರೂ ನಮ್ಮ ಗೂಗಲ್ ಸರ್ಚ್ ನಿಂದ ಸಿಗುವ ಮಾಹಿತಿಗಳಿಂದ ಚಿಂತೆಗೆ ಒಳಗಾಗುತ್ತೇವೆ. ಅನುಮಾನ ಶುರುವಾಗುತ್ತೆ. ಇದರ ಅಡ್ಡ ಪರಿಣಾಮ ಹೀಗಾಗುತ್ತದಂತಲ್ಲಾ!!ನಮ್ಮ ಸಂಶೋಧನೆ ನಮ್ಮನ್ನು ದಾರಿ ತಪ್ಪಿಸುತ್ತದೆ. ನಾವು ನಂಬಿ ಅನುಷ್ಠಾನಕ್ಕೆ ತಂದ ವಿಚಾರದ ಬಗ್ಗೆ ಯಾಕೋ ಸರಿಹೋಗುತ್ತಿಲ್ಲ ಎನಿಸುತ್ತೆ. ಕ್ರಮೇಣ ಯಾವ ವಿಚಾರ ನಮಗೆ ಆರಂಭದಲ್ಲಿ ಆಪ್ಯಾಯಮಾನವಾಗಿತ್ತೋ ಅದರಿಂದ ಕ್ರಮೇಣ ದೂರವಾಗುತ್ತೇವೆ. ನಮ್ಮ ವಿವೇಚನೆಗಿಂತ ದೊಡ್ದದು ಬೇರೆ ಇದೆಯೇ? ಎಲ್ಲದಕ್ಕೂ ಗೂಗಲ್ ಸರ್ಚ್ ಬೇಕೇ?. ಗೂಗಲ್ ನಲ್ಲಿ ಮಾಹಿತಿ ತುಂಬಿರುವವರು ಅವರ ಚಿಂತನೆಗೆ ತಕ್ಕಂತೆ ತುಂಬಿರುತ್ತಾರಲ್ಲವೇ? ನಾವು ನಮ್ಮ ನೆಮ್ಮದಿಯ ಜೀವನಕ್ಕಾಗಿ ಏನನ್ನಾದರೂ ಗೂಗಲ್ ನಲ್ಲಿ ಸರ್ಚ್ ಮಾಡುವ ಮುಂಚೆ ನಮ್ಮ ಜೀವನ ಕ್ರಮ, ಆಹಾರ, ವಿಹಾರ, ಪರಿಸರ ಎಲ್ಲವಕ್ಕೂ ಹೊಂದುವಂತೆ ನಮ್ಮ ಸಂಶೋಧನೆ ಇರಬೇಕು. ಅದಕ್ಕಿಂತ ಹೆಚ್ಚಾಗಿ ನಮ್ಮ ವಿವೇಕವನ್ನೂ ಉಪಯೋಗಿಸೋಣ. ಅಲ್ಲವೇ?
No comments:
Post a Comment