ಹಾಸನದಲ್ಲಿ ಪತಂಜಲಿ ಮತ್ತು ವೇದಭಾರತಿಯ ಸಹಯೋಗದಲ್ಲಿ ಹಲವು ಸತ್ಸಂಗಗಳಾಗಿವೆ. ಆದರೆ ಜೂನ್ 21 ರಂದು ನಡೆದ ಯೋಗ ಸಂಬ್ರಮ ಮತ್ತು ಇತ್ತೀಚೆಗೆ ಪತಂಜಲಿ ಸಮಿತಿಯ ರಾಜ್ಯ ಪ್ರಭಾರಿ ಶ್ರೀ ಭವರ್ ಲಾಲ್ ಆರ್ಯರ ಮತ್ತು ದೊಡ್ಡಬಳ್ಳಾಪುರ ಸಮೀಪ ತಪಸಿಹಳ್ಳಿಯ ಪುಷ್ಪಾಂಡಜ ಮಹರ್ಷಿ ಆಶ್ರಮದ ಪೂಜ್ಯ ದಿವ್ಯ ಜ್ಞಾನಾನಂದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆದ ಸತ್ಸಂಗಗಳು ಹಾಸನದಲ್ಲಿ ಪತಂಜಲಿ ಯೋಗ ಸಮಿತಿಯ ಚಟುವಟಿಕೆಗಳಿಗೆ ಹಿಡಿದ ಕನ್ನಡಿಯಾಗಿವೆ. ಯೋಗಾಭ್ಯಾಸ ಮಾಡಲು ಬರುವ ಯೋಗ ಸಾಧಕರಿಗೆ ಸಾಕಷ್ಟು ಸ್ಥಳಾವಕಾಶ ಇಲ್ಲವಾಗಿದೆ. ಹಾಸನದಲ್ಲಿ ಯೋಗವನ್ನು ಮನೆ ಮನೆಗೆ ತಲುಪಿಸಲು ಈಗಾಗಲೇ ಇರುವ ಶಿಕ್ಷಕರ ಜೊತೆಗೆ ಇನ್ನೂ 50 ಕ್ಕಿಂತ ಹೆಚ್ಚು ಶಿಕ್ಷಕರು ಸೇರ್ಪಡೆಯಾಗುತ್ತಿದ್ದಾರೆ. ನಗರದ ಎಲ್ಲಾ ವಾರ್ಡ್ ಗಳಲ್ಲಿ ಯೋಗ ತರಗತಿ ನಡೆಸಲು ನಾವು ತಯಾರ್ ಎಂದು ಸಿದ್ಧವಾಗುತ್ತಿದ್ದಾರೆ. ಅದಕ್ಕೆ ಬೇಕಾಗಿರುವುದು ಎಲ್ಲಾ ವಾರ್ಡ್ ಗಳಲ್ಲೂ ಸ್ಥಳಾವಕಾಶ. ಇದನ್ನು ಒದಗಿಸ ಬೇಕಾದವರು ಸ್ಥಳೀಯ ನಗರ ಸಭೆಯವರು ಮತ್ತು ಶಾಲಾ ಕಾಲೇಜು ಮುಖ್ಯಸ್ಥರು.
ನೀವು ಸ್ಥಳಾವಕಾಶ ಕಲ್ಪಿಸಿ. ನಾವು ಉಚಿತವಾಗಿ ಯೋಗ ಹೇಳಿಕೊಡುತ್ತೇವೆ, ಎಂಬುದು ನಮ್ಮ ಮನವಿ. ಯೋಗವು ಎಲ್ಲರಿಗಾಗಿ. ಇದರಲ್ಲಿ ಜಾತಿ, ಮತ, ಪಂಥ, ರಾಜಕೀಯ ಆಸಕ್ತಿ ಯಾವುದೂ ಇಲ್ಲ. ಹಾಸನವನ್ನು ಯೋಗ ಮಯವನ್ನಾಗಿ ಮಾದಬೇಕೆಂಬುದಷ್ಟೇ ನಮ್ಮ ಇಚ್ಛೆ. ಅದಕ್ಕೆ ಬೇಕಾಗಿದೆ ಎಲ್ಲಾ ಸಾಮಾಜಿಕ ಮತ್ತು ರಾಜಕೀಯ ಮುಖಂಡರ ಸಹಕಾರ.
ಹಾಸನದ ಕಲಾಭವನದ ಆವರಣದಲ್ಲಿ ದಿನಾಂಕ 2.10.2016 ರಂದು ಮಹಾ ಸತ್ಸಂಗವನ್ನು ನಡೆಸಿಕೊಟ್ಟ ಪತಂತಜಲಿ ಯೋಗ ಸಮಿತಿಯ ಕರ್ನಾಟಕ ರಾಜ್ಯ ಪ್ರಭಾರಿ ಯೋಗಾಚಾರ್ಯ ಶ್ರೀ ಭವರ್ ಲಾಲ್ ಆರ್ಯ
ಹಾಸನದ ಲೋಕಲ್ ನೆಟ್ವರ್ಕ್ ಅಮೋಘ್ ವಾಹಿನಿಯ ಮುಖ್ಯಸ್ಥರಾದ ಶ್ರೀ KPS ಪ್ರಮೋದ್ ಅವರಿಗೆ ಶ್ರೀ ಭವರ್ ಲಾಲ್ ಜಿ ಆರ್ಯ ಅವರಿಂದ ಮಾಲಾರ್ಪಣೆ
ಗಣ್ಯರೊಡನೆ ಹಾಸನ ಜಿಲ್ಲಾ ಟೀಮ್ . ಎಡದಿಂದ ಬಲಕ್ಕೆ 1] ಕಿಸಾನ್ ಸೇವಾಸಮಿತಿಯ ಜಿಲ್ಲಾ ಪ್ರಭಾರಿ ಶ್ರೀ ನಾಗಭೂಷಣ್ 2] ಯುವ ಭಾರತ್ ಜಿಲ್ಲಾ ಪ್ರಭಾರಿ ಶ್ರೀ ಸುರೇಶ್ 3] ಭಾರತ್ ಸ್ವಾಭಿಮಾನ್ ಜಿಲ್ಲಾ ಪ್ರಭಾರಿ ಶ್ರೀ ಶೇಷಪ್ಪ 4] ರಾಜ್ಯ ಪ್ರಭಾರಿ ಶ್ರೀ ಭವರ್ ಲಾಲ್ ಜಿ ಆರ್ಯ 5] ಹಾಸನದ ಹಿರಿಯರಾದ ಶ್ರೀ ಸಿ.ಎಸ್.ಕೃಷ್ಣಸ್ವಾಮಿಯವರು 6] ಹಾಸನದ ಶಾಸಕರಾದ ಶ್ರೀ ಹೆಚ್.ಎಸ್.ಪ್ರಕಾಶ್ 7] ಯುವ ಭಾರತ್ ರಾಜ್ಯ ಪ್ರಭಾರಿ ಶ್ರೀ ಪ್ರದೀಪ್ 8] ಹಾಸನದ ಅಮೋಘ್ ವಾಹಿನಿಯ ಮುಖ್ಯಸ್ಥರಾದ ಶ್ರೀ KPS ಪ್ರಮೋದ್ 9] ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ಶ್ರೀ ಹರಿಹರಪುರ ಶ್ರೀಧರ್
ಶ್ರೀ ಭವರ್ ಲಾಲ್ ಜಿ ಆರ್ಯ ಅವರಿಂದ ಭಾರತ ಮಾತೆಗೆ ಪುಷ್ಪಾರ್ಚನೆ
ಅರೆಮಾದನಹಳ್ಳಿ ಮೂಲ ಮಠದ ವಿಶ್ವಕರ್ಮ ಜಗದ್ಗುರು ಶ್ರೀ ಶ್ರೀ ಶ್ರೀ ಶಿವ ಸುಜ್ಞಾನ ತೀರ್ಥ ಮಹಾಸ್ವಾಮಿಗಳು
ಮುಂದಿನ ಸಾಲಿನಲ್ಲಿ ಶಾಸಕರಾದ ಶ್ರೀ ಹೆಚ್.ಎಸ್. ಪ್ರಕಾಶ್ ಮತ್ತು ಶ್ರೀ KPS ಪ್ರಮೋದ್
ಮುಂದಿನ ಸಾಲಿನಲ್ಲಿ ಶಾಸಕರಾದ ಶ್ರೀ ಹೆಚ್.ಎಸ್. ಪ್ರಕಾಶ್ ಮತ್ತು ಶ್ರೀ ಹರಿಹರಪುರಶ್ರೀಧರ್