Pages

Tuesday, June 15, 2010

ಸಂಜೆಯಾಯ್ತು ದೇವರ ದೀಪ ಹಚ್ಚಬೇಡವೇ?

ಎರಡು ಮೂರು ವರ್ಷದ ಹಿಂದಿನ ಘಟನೆ.ಮಿತ್ರರೊಬ್ಬರು ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಬೇಕಾಯ್ತು.ಆಗ ಸಮಯ ಸಂಜೆ ಐದುಗಂಟೆ. ಮಿತ್ರರ ಮಡದಿ ಹಾಗೂ ಮೂರ್ನಾಲ್ಕು ಜನ ಹತ್ತಿರದ ಬಂಧುಗಳು ಹಾಗೂ ನಾನು ಮತ್ತು ನನ್ನ ಮಡದಿ ಆಸ್ಪತ್ರೆಯಲ್ಲಿ ಜೊತೆಗಿದ್ದೆವು.ವೈದ್ಯರಿಂದ ತಪಾಸಣೆಯಾಯ್ತು. ಮೂರ್ನಾಲ್ಕು ಪರೀಕ್ಷೆಗಳಾದವು.ಆ ಹೊತ್ತಿಗೆ ಸಮಯ ೬.೩೦. ಒಬ್ಬ ಬಂಧು ಸತ್ಸಂಗಕ್ಕೆಂದು ಹೊರಟರು. ಮಿತ್ರನ ಸೋದರನಾದರೋ ಸಂಧ್ಯಾವಂದನೆ ಮಾಡಲು ಸಮಯವಾಯ್ತೆಂದು ಹೊರಟ.ಮಿತ್ರನ ತಂಗಿ ಯೋಗಾಸನಕ್ಕೆಂದು ಹೊರಟಳು. ಹೀಗೆ ಒಬ್ಬಬ್ಬರಾಗಿ ಎಲ್ಲರೂ ಖಾಲಿ. ಮಿತ್ರನ ಮಡದಿ ಜೊತೆಗೆ ನಾವಿಬ್ಬರು ಮಾತ್ರ. ನನ್ನ ಪತ್ನಿ ಹೇಳಿದಳು" ಸಂಜೆಯಾಯ್ತು ದೇವರ ದೀಪ ಹಚ್ಚಬೇಡವೇ?" ನಾನು ಹೇಳಿದೆ" ನೀನು ದೇವರಿಗೆ ದೀಪ ಹಚ್ಚಲೇ ಬೇಕೆಂದರೆ ಹೋಗು, ನಾನು ತಡೆಯಲಾರೆ. ಆದರೆ ಆನಂದನನ್ನು[ನನ್ನ ಮಿತ್ರ] ಒಮ್ಮೆ ನೋಡು. ಅವನ ಇಂತಹಾ ಪರಿಸ್ಥಿತಿಯಲ್ಲಿ ಬಿಟ್ಟು ಹೋಗಬೇಕೆಂದರೆ ಹೇಳು"
ಎರಡು ನಿಮಿಷ ಯೋಚಿಸಿದ ನನ್ನಾಕೆ ಇಲ್ಲಾರೀ, ನಾವು ಹೋಗ್ಬಿಟ್ರೆ, ಆನಂದನನ್ನು ನೋಡುವವರು ಯಾರ್ರೀ?...............
ಆನಂದನ ಪತ್ನಿಯ ಕಣ್ಣಲ್ಲಿ ನೀರು ಕಂಡ ನನ್ನಾಕೆ ಹೇಳಿದಳು" ಇಲ್ಲ, ನಿರ್ಮಲಾ, ಅಳಬೇಡ, ನಾವು ಹೋಗುವುದಿಲ್ಲ. ರಾತ್ರಿ ಇಲ್ಲೇ ನಿದ್ರೆಗೆಟ್ಟರೂ ಚಿಂತೆ ಇಲ್ಲ, ನಿನ್ನೊಬ್ಬಳನ್ನೇ ಬಿಟ್ಟು ಹೋಗುವುದಿಲ್ಲ........

............ಆನಂದನ ಆಯಸ್ಸು ಗಟ್ಟಿಯಾಗಿತ್ತು, ಬದುಕುಳಿದ. ಈಗ ನಾವೆಂದರೆ ಪಂಚ ಪ್ರಾಣ.

Sunday, June 13, 2010

ಭಾರತದ ಹಿರಿಮೆ

ವಿಜ್ಞಾನಿ ಡಾ. ಎಂ. ಗೋಪಾಲಕೃಷ್ಣರ ಮಾತುಗಳಲ್ಲಿ ಭಾರತದ ಹಿರಿಮೆ ಕೇಳಲು ಬಲು ಚೆಂದ.


ಮೂರ್ತಿಪೂಜಾ ಜಿಜ್ಞಾಸೆ?

ಪಂ.ಸುಧಾಕರ ಚತುರ್ವೇದಿಗಳ " ಮೂರ್ತಿಪೂಜಾ ಜಿಜ್ಞಾಸೆ? " ಕಿರುಹೊತ್ತಿಗೆಯಲ್ಲಿನ ಒಂದು ವೇದ ಮಂತ್ರ ಹೀಗಿದೆ.

ನ ತಂ ವಿದಾಥ ಯ ಇಮಾ ಜಜಾನಾSನ್ಮದ್ಯುಷ್ಮಾಕಮಂತರಂ ಬಭೂವ|
ನೀಹಾರೇಣ ಪ್ರಾವೃತಾ ಜಲ್ಪ್ಯಾ ಚಾSಸುತೃಪ ಉಕ್ಥಶಾಸಶ್ಚರಂತಿ||
[ಋಕ್.೧೦.೮೨.೭]
ಅರ್ಥ:
ಯಾವನು ಈ ಸೃಷ್ಟಿಯನ್ನು ರಚಿಸಿದ್ದಾನೋ ಮತ್ತು ಯಾವನು ನಿಮ್ಮ ಅಂತರಂಗದಲ್ಲಿಯೂ ವ್ಯಾಪಿಸಿದ್ದಾನೋ ಆ ಪರಮಾತ್ಮನನ್ನು ನೀವು ತಿಳಿದಿಲ್ಲ. ಅಜ್ಞಾನದ ಮೊಬ್ಬಿನಲ್ಲಿ ಮಾನವರು ವ್ಯರ್ಥವಾಗಿ ವಿತಂಡವಾದಮಾಡುತ್ತಾ ಕಟ್ಟುಕಳೆಗಳನ್ನು ನಿರ್ಮಿಸುತ್ತಾ ಓಡಾಡುತ್ತಾರೆ. ಸರ್ವಾಂತರ್ಯಾಮಿಯಾದ ಜಗದೀಶ್ವರನಿಗೆ ಆಕಾರ ಕಲ್ಪಿಸುವುದು ಬರಿಯದೊಂದು ಕಲ್ಪನೆ ಮಾತ್ರ.

Saturday, June 12, 2010

ಬುನಾದಿ -೨-

ವೇದೋಕ್ತ ಜೀವನಪಥ
ಜೀವನ ಬುನಾದಿ -೨-
ನೈಮಿತ್ತಿಕ ಜ್ಞಾನದ ಅನಿವಾರ್ಯತೆ ಬಗ್ಗೆ ಪಂ. ಸುಧಾಕರ ಚತುರ್ವೇದಿಯವರ ಮಾತು:
ನೈಮಿತ್ತಿಕ ಜ್ಞಾನ ಗುರುಹಿರಿಯರಿಂದ, ಋಷಿಮುನಿಗಳಿಂದ, ವಿದ್ವಜ್ಜನರಿಂದ ನಮಗೆ ಲಭಿಸಬಹುದು; ವಿಶ್ವದ ವಿವಿಧ ಘಟನೆಗಳನ್ನು ನೋಡುವುದರಿಂದ ಹಾಗೂ ಕೇಳುವುದರಿಂದ,ಇಲ್ಲವೇ ಘಟನೆಗಳಲ್ಲಿ ಭಾಗವಹಿಸುವುದರಿಂದ ಲಭಿಸಬಹುದು. ಬಗೆಯ ನೈಮಿತ್ತಿಕ ಜ್ಞಾನ ಸಾಮಾನ್ಯ ದೃಷ್ಟಿಯಿಂದ ನೋಡಿದಾಗ, ಜಗತ್ತಿನಲ್ಲಿ ಸಾಧಾರಣತಃ ಗೌರವದಿಂದ ಜೀವಿಸಲು ಸಾಕಾದಷ್ಟು ಸಾಮರ್ಥ್ಯವನ್ನು ಮಾನವನಿಗೆ ಒದಗಿಸಲೂಬಹುದು. ಆದರೆ ಇನ್ನೂ ಗಂಭೀರ ದೃಷ್ಟಿಯಿಂದ ಅವಲೋಕಿಸಿದಾಗ ಬಗೆಯ ನೈಮಿತ್ತಕಜ್ಞಾನ ಇಂದ್ರಿಯಗಮ್ಯವಾದ ಭೌತಿಕವಸ್ತುಗಳಲ್ಲೇ ಸಂಚರಿಸುತ್ತದಯೇ ಹೊರತು, ಅತೀಂದ್ರಿಯ ವಿಷಯಗಳಾದ ಪರಮಾತ್ಮ, ಜೀವಾತ್ಮ, ಬಂಧ, ಮೋಕ್ಷ, ಧರ್ಮ - ಮೊದಲಾದ ತತ್ವಗಳ ಆಂತರ್ಯವನ್ನು ಸ್ಪರ್ಶಿಸಲಾರದು - ಎಂಬಂಶ ಸ್ಫುಟವಾಗಿ ಗೋಚರಿಸುತ್ತದೆ. ವಿಕಸಿತ ಮನಸ್ಕನಾದ ಮಾನವನ ಜೀವನಕ್ಕೆ ಕೇವಲ ಇಂದ್ರಿಯಗಮ್ಯಗಳಾದ ಪದಾರ್ಥಗಳ ನೆರವೇ ಸಾಲದು; ಅತೀಂದ್ರಿಯ ತತ್ವಗಳ ಆಶ್ರಯವೂ ಬೇಕೇ ಬೇಕು. ಆದಕಾರಣ ಅನ್ಯಜೀವರಿಂದ ಹಾಗೂ ವಿಶ್ವದಆಗು ಹೋಗುಗಳಿಂದ ಲಭಿಸುವ ನೈಮಿತ್ತಿಕ ಜ್ಞಾನಕ್ಕಿಂತ ಮಿಗಿಲಾಗಿ, ದಿವ್ಯ ನೈಮಿತ್ತಿಕ ಜ್ಞಾನ ಮಾನವನ ಜೀವನದ ಪರಿಪೂರ್ಣ ವಿಕಾಸಕ್ಕೆ ಆವಶ್ಯಕ ಮಾತ್ರವಲ್ಲ, ಅನಿವಾರ್ಯವೂ ಆಗಿದೆ.
-ಕವಿ ನಾಗರಾಜ್

Wednesday, June 9, 2010

ಅನೌಪಚಾರಿಕ ಚರ್ಚೆ

ದಿನಾಂಕ ೬.೬.೨೦೧೦ ರಂದು ಬೆಂಗಳೂರಿನ ವಿಜಯನಗರದಲ್ಲಿ ನಡೆದ ಸತ್ಸಂಗದಲ್ಲಿ ಸುಧಾಕರ ಶರ್ಮರು ಪ್ರವಚನ ಮಾಡಿದನಂತರ ಅನೌಪಚಾರಿಕ ಚರ್ಚೆ ನಡೆಯಿತು. ಚರ್ಚೆಯಲ್ಲಿ ಭಾಗವಹಿಸಿದ್ದ ಹಲವರಲ್ಲಿ " ತಮ್ಮ ವಿಚಾರಧಾರೆಯನ್ನು ತಮ್ಮ ಮನೆಗಳಲ್ಲಿಒಪ್ಪಿಲ್ಲವೆಂಬ ಬೇಸರ ಅವರ ಮಾತುಗಳಿಂದಲೇ ವ್ಯಕ್ತವಾಗುತ್ತಿತ್ತು. " ಇನ್ನೂ ಮೂರ್ತಿ ಪೂಜೆ ಮಾಡುತ್ತಾರಲ್ಲಾ!!" ಎಂಬುದುಅವರಿಗೆ ಸಹಿಸಲು ಅಸಾಧ್ಯವಾದ ಸಂಗತಿಯಾಗಿತ್ತು. ಈ ಬಗ್ಗೆ ಸ್ವಲ್ಪ ನಿಷ್ಟುರವಾಗಿಯೇ ಚರ್ಚೆಗಿಳಿದ ನನ್ನಿಂದ ಸತ್ಸಂಗಿಗಳಿಗೆ ಸ್ವಲ್ಪಬೇಸರವೂ ಆಗಿರಬಹುದು. ಯಾರಿಗದರೂ ಬೇಸರವಾಗಿದ್ದರೆ ಈ ಮೂಲಕ ನಾನು ಅವರ ಕ್ಷಮೆಕೋರುತ್ತಾ ಆನಂತರ ಶರ್ಮರೊಡನೆಹಾಗೂ ವಿಶಾಲ್ ಇವರೊಡನೆ ಈ ಮೇಲ್ ಮೂಲಕ ಮಾಡಿದ ಮಾತುಕತೆಯನ್ನು ಎಲ್ಲರ ಗಮನಕ್ಕೆ ತರಬಯಸುವೆ.
--------------------------------------------------------
I wanted to thankyou for yesterday's invitation,I really enjoyed
the discussion as it brought out so many new things.

Please express my thanks to your sister & family also and yea
the food was superb.

Regards,


ವಿಶಾಲ್
----------------------------------------------------
ನಿಜ ಹೇಳುವೆ ವಿಶಾಲ್, ನಿನ್ನೆಯ ಚರ್ಚೆಯಿಂದ ನನಗೆ ಬಹಳ ಸಮಾಧಾನವಾಯ್ತು-ಎಂದೇನೂ ಇಲ್ಲ. ನನ್ನ ಸ್ವಭಾವ ವಿಚಿತ್ರ. ಚರ್ಚೆಶುಷ್ಕವೆನಿಸಿತು.ಅಲ್ಲಿದ್ದವರಿಗೆ ಮೂರ್ತಿ ಪೂಜೆ ಮಾಡುವವರ ಬಗೆಗೆ ಇರುವ ಆಕ್ರೋಶವನ್ನು ಕಂಡು ನನಗೆ ಹಿತವೆನಿಸಲಿಲ್ಲ. ಸಮಾಜದಲ್ಲಿ ಹೆಂಡ ಸಾರಾಯಿ ಕುಡಿದು ತೂರಾಡುವವರನ್ನು ಕಾಣುವಂತೆಯೇ ಮೂರ್ತಿ ಪೂಜಕರನ್ನೂ ಕಾಣುವ ಪರಿ ನನಗೆಇಷ್ಟವಾಗಲಿಲ್ಲ. ನಾನು ನಿತ್ಯವೂ ವಿಗ್ರಹ ಪೂಜೆ ಮಾಡುತ್ತಿದ್ದೀನಾ? ಎಂದರೆ ಖಂಡಿತಾ ಇಲ್ಲ. ಆದರೆ ಅದರಲ್ಲಿ ಹಲವಾರು ವರ್ಷಸಂತೋಷ ಅನುಭವಿಸಿರುವೆ. ಅದು ಒಂದು ಹಂತವೆಂದು ಭಾವಿಸುವೆ.ಅದಕ್ಕಿಂತ ಹೆಚ್ಚೇನೂ ಹೇಳಲಾರೆ.
ಶರ್ಮರ "ಎಲ್ಲರಿಗಾಗಿ ವೇದ " ಪ್ರವಚನದಿಂದ ಆಕರ್ಶಿತನಾದ ನಾನು ಅವರ ಜೀವನ ಶೈಲಿಯನ್ನು ಮೆಚ್ಚುತ್ತೇನೆ. ಆದರೆ......
ಅರಿಶಿನ-ಕುಂಕುಮ,ಹೂವು, ಬಳೆ ಇತ್ಯಾದಿ ವಸ್ತುಗಳನ್ನು ಹೆಣ್ಣಿನ ಅಲಂಕಾರ ಸಾಮಗ್ರಿಗಳ ಪಟ್ಟಿಗೆ ಸೇರಿಸುವೆ. ಅವುಗಳು ಅವಳಿಗೆಪ್ರಿಯವಾದ ವಸ್ತುಗಳು. ಅವುಗಳಿಂದ ಅವಳು ಸಾಕ್ಷಾತ್ ಲಕ್ಷ್ಮಿಯಂತೆ ಕಂಗೊಳಿಸುತ್ತಾಳೆ. ಅವುಗಳಿಲ್ಲದ ಹೆಣ್ಣು ನನ್ನ ಕಣ್ಣಿಗೆಶುಷ್ಕಳಾಗಿ, ನಿಸ್ತೇಜಳಾಗಿ ಕಾಣುತ್ತಾಳೆ. ಇದು ನನ್ನ ಕಣ್ಣಿನ ದೋಶವೆಂದರೆ ನಾನೇನೂ ಪ್ರತಿಭಟಿಸುವುದಿಲ್ಲ.ಈ ಬಗ್ಗೆಯೂ ಹೆಚ್ಚುಹೇಳಲಾರೆ.
ಶರ್ಮರಿಗೆ ಇದರ ಪ್ರತಿಯನ್ನು ಕಳಿಸುತ್ತಿರುವೆ. ಅವರೇ ಸಮಾಧಾನ ಹೇಳಬೇಕು.
ಶ್ರೀಧರ್
----------------------------------------------


ಪ್ರೀತಿಯ ಶ್ರೀಧರ್ ಜೀ!
ಯಾವುದೇ ವಿಚಾರವಿರಬಹುದು, ವ್ಯಕ್ತಿ ಸ್ವಾತಂತ್ರ್ಯ, ವಿಚಾರ ಸ್ವಾತಂತ್ರ್ಯವನ್ನು ನಾನು ಸದಾ ಗೌರವಿಸುತ್ತೇನೆ.
ಭಿನ್ನಾಭಿಪ್ರಾಯವಿದ್ದರೆ ಇರಲಿ. ಅದು ದ್ವೇಷವೂ ಆಗಬಾರದು, ಅಸಹ್ಯವೂ ಆಗಬಾರದು.
ಸಮಾಧಾನದಿಂದ ಸತ್ಯದ ಅನ್ವೇಷಣೆ ಮಾಡುತ್ತಾ, ಅದರಂತೆ ನಡೆಯುತ್ತಾ ಸಾಗಿದಾಗ ಒಂದು ದಿನ ಅವರಿಗೂ ಅಥವಾ ನಮಗೂಸತ್ಯದ ಸಾಕ್ಷಾತ್ಕಾರವಾದಾಗ ಎಲ್ಲರಿಗೂ ಹಿತವಾಗುತ್ತದೆ.
ಪ್ರತಿಯೊಂದು ಮಂಡನೆಯೂ ಹಿಂದಿನದರ ಖಂಡನೆಯೇ!
ಹಿಂದಿನದನ್ನು ಖಂಡಿಸುವ ವಿಚಾರಗಳಿಲ್ಲದಿದ್ದರೆ ಹೊಸ ಸಿದ್ಧಾಂತಕ್ಕೆ ಅರ್ಥವೇನು?!!
ಇರಲಿ. ಆದರೆ Let all our criticisms be
1. without malice
2. in good faith
3. constructive
4. without prejudice.
ಬಹುಶಃ ಇದೊಂದೊ ಸಮನ್ವಯ ಸೂತ್ರವಾಗಬಹುದು.
ಹೆಚ್ಚಿನ ವಿಚಾರಗಳನ್ನು ಮತ್ತೊಮ್ಮೆ ವಿವರವಾಗಿ ಚರ್ಚಿಸೋಣ.


ಜ್ಞಾನಾರ್ಜನೆ, ಬೆಳವಣಿಗೆಯ ಹಂತ, ಅನುಭವದ ಕೊರತೆ, ಆತ್ಮಪರಿಶೀಲನೆಯ ಅಗತ್ಯಗಳು ಇನ್ನೂ ಇರುವಾಗ
ಮಾತಿನಲ್ಲಿ ಸ್ವಲ್ಪ ಜೋರೂ, ಇತರರ ಬಗ್ಗೆ ಸ್ವಲ್ಪ ಅಸಹನೆಯೂ ಕಾಣುತ್ತದೆ.
ಕ್ರಮೇಣ ಸರಿಹೋಗುತ್ತದೆ!
-------------------------------------


ಶರ್ಮಾಜಿ
ನಮಸ್ತೆ,
ಇಷ್ಟುಬೇಗ ನಿಮ್ಮಿಂದ ಉತ್ತರ ನಿರೀಕ್ಷಿಸಿರಲಿಲ್ಲ. ವೇದಸುಧೆಯಲ್ಲಿ ನಿನ್ನೆಯ ಆಡಿಯೋ ಕೇಳಿ. ಅಂತೆಯೇ ಹಿಂದಿನ ಪ್ರಶ್ನೆಗಳಿಗೆವೇದಸುಧೆಯಲ್ಲಿ ಉತ್ತರ ನಿರೀಕ್ಷಿಸುವೆ.ಬಹಳ ದಿನಗಳಿಂದ ನಾನು ಅಪೇಕ್ಷಿಸುತ್ತಿರುವ ಅಗ್ನಿಹೋತ್ರ ದ ಬಗ್ಗೆ ಒಂದು ಲೇಖನದಯಮಾಡಿ ಕಳುಹಿಸಿಕೊಡಿ.
ಶ್ರೀಧರ್
-----------------------------------
I can understand your concerns sir.


But if you ask me I am in between your thoughts and the people who
were present yesterday.To be frank I feel you want to be in a feel good
position where in you dont want to get away with some traditions at the
same time you want to bring in few logical/rational thoughts what sharmaji
expresses.Ideally your thoughts are perfect blend and need of the hour.


Having said that, I ll also say that it leads to lots of unanswerable questions.
Sharmaji goes to the ultimate level goes deep into the issue and we know that
it cant be proven wrong.But so many things looks awkward and are unacceptable
for the current society.So instead of looking at brighter part, people go away by
looking at the awkward part.


What I feel awkward may not be for many,I feel awkward when its said,
Girls should go through upanayana(logically it may be right but I cant imagine)
Separate food serving at religious places like Udupi,dharmastala,shringeri,mantralaya etc.


And similar things....


But most of the things we have to agree and I agree as they are logical and rational
and helps people come out of the fear.


Regards,


Vishal
---------------------------------------------------
ಸೀತಾರಾಮ. ಕೆ.

ಚೆ೦ದದ ಮಥನವೊ೦ದರ ಸಾರಾ೦ಶದಿ೦ದ ಮಥನ ಎಷ್ಟು ರೋಚಕವಾಗಿರಬೇಕೆ೦ದು ಕುತೂಹಲವಾಯಿತು. ಸಮನ್ವಯಸೂತ್ರಗಳು ಚೆನ್ನಾಗಿವೆ. ಆದರೇ ವಾದ-ವಿವಾದದಲ್ಲಿ ಅಹ೦-ಗಳು ಇಳಿದಾಗ ಅಳವಡಿಕೆ ಕಷ್ಟ. ಅಹ೦-ಗಳಿಲ್ಲದ ವಾದಗಳುನೀರಸವಲ್ಲವೇ!?
June 11, 2010 3:59 PM

--------------------------------------------------------

ಶ್ರೀ ಸೀತಾರಾಮ್,
ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ. ಧನ್ಯವಾದಗಳು.


[ಅಹ೦-ಗಳಿಲ್ಲದ ವಾದಗಳುನೀರಸವಲ್ಲವೇ!?]
ಇಲ್ಲಿ ಅಹಂ ನುಸುಳುವುದಿಲ್ಲ. ಕಾರಣ ಎಲ್ಲರೂ ಸೇರಿ ಅವರವರ ಅಭಿಪ್ರಾಯ ವ್ಯಕ್ತಪಡಿಸಲು ಸ್ವತಂತ್ರರು.ಕೆಲವರು ಗ್ರಂಥಾಧ್ಯಯನಮಾಡಿ ತಮ್ಮ ವಿಚಾರ ತಿಳಿಸಿದರೆ, ಕೆಲವರು ಜೀವನಾನುಭವ ವ್ಯಕ್ತಪಡಿಸುವರು.ಅಂತೂ ಮಂಥನದಿಂದ ಪ್ರಯೋಜನವಿದೆ ಎಂಬಅನುಭವ ಕಾಣುತ್ತಿದೆ. ಕೇವಲ ಚರ್ಚೆಗಾಗಿ ಚರ್ಚೆ ಮಾಡುವಂತಹ ಬುದ್ಧಿವಂತರು ಇಲ್ಲಿ ಇಣುಕುವುದು ವಿರಳ.
-ಹರಿಹರಪುರಶ್ರೀಧರ್


June 12, 2010 7:07 AM

Tuesday, June 8, 2010

ಪುರೋಹಿತರ ಮನ ಕರಗಲೇ ಇಲ್ಲ!

ನಮ್ಮ ಸೋದರತ್ತೆ ಗೌರಮ್ಮ ನವರು ತಮ್ಮ ಹತ್ತನೆಯ ವರ್ಷದಲ್ಲೇ ಬಾಲ್ಯವಿವಾಹವಾಗಿ ಹನ್ನೆರಡನೆಯ ವಯಸ್ಸಿಗೆ ಪತಿಯನ್ನು ಕಳೆದುಕೊಂಡು, ವಿಧವೆ ಪಟ್ಟ ಕಟ್ಟಿಕೊಂಡು ನಮ್ಮ ಮನೆಯಲ್ಲೇ ತಮ್ಮ ಉಳಿದ ದೀರ್ಘ ಜೀವನವನ್ನು ಅವರ ತಮ್ಮನ ಮಕ್ಕಳಾದ ನಮ್ಮನ್ನೇ ಮಕ್ಕಳೆಂದು ತಿಳಿದು ನಮ್ಮ ಹೆತ್ತ ತಾಯಿ ಗಿಂತಲೂ ಹೆಚ್ಚು ಪ್ರೀತಿಯಿಂದ ನಮ್ಮನ್ನೆಲ್ಲಾ ಬೆಳೆಸುವುದರಲ್ಲೇ ಅವರ ಜೀವನದ ಸಾರ್ಥಕತೆ ಕಂಡುಕೊಂಡ ಮಹಾನ್ ವ್ಯಕ್ತಿ. ೭೫ ನೆಯ ವಯಸ್ಸಿನಲ್ಲಿ ಅವರು ನಮ್ಮ ಮನೆಯಲ್ಲೇ ಕೊನೆಯುಸಿರೆಳೆದರು. ಈ ಘಟನೆ ನಡೆದು ಇಪ್ಪತ್ತೈದು ವರ್ಷಗಳು ಕಳೆದುಹೋಯ್ತು. ಆ ಸಂದರ್ಬದಲ್ಲಿ ನಡೆದ ಒಂದು ಘಟನೆಯನ್ನು ವೇದಸುಧೆಯ ಅಭಿಮಾನಿಗಳ ಗಮನಕ್ಕೆ ತರಬೇಕೆನಿಸುತ್ತಿದೆ.
ಈಗಾಗಲೇ ತಿಳಿಸಿದಂತೆ ನಮ್ಮತ್ತೆ ಗೌರಮ್ಮ ನವರಿಗೆ ಸ್ವಂತ ಮಕ್ಕಳಿಲ್ಲ. ಅವರ ಶ್ರಾದ್ಧ ಕರ್ಮಗಳನ್ನು ಮಾಡುವವರಾರು? ನಮ್ಮ ತಂದೆಗೂ ವಯಸ್ಸಾಗಿದೆ. ಶರೀರದಲ್ಲಿ ತ್ರಾಣವಿಲ್ಲ. ನಾವು ಮಾಡಬೇಕೆಂದರೆ ಅಪ್ಪ-ಅಮ್ಮ ಬದುಕಿರುವಾಗ ನೀವು ಮಾಡಕೂಡದೆಂದು ಹಿರಿಯರು ನಮ್ಮನ್ನು ಕಟ್ಟಿ ಹಾಕಿದರು. ಆಗ ಯಾವ ಶಾಸ್ತ್ರದಲ್ಲಿತ್ತೋ ಗೊತ್ತಿಲ್ಲ ಒಬ್ಬ ಕರ್ತೃವನ್ನು ನೇಮಿಸಿಕೊಂಡಿದ್ದಾಯ್ತು. ಅವರಾರೋ ಮೂರನೆಯ ಸಂಬಂಧವಿಲ್ಲದ ವ್ಯಕ್ತಿ. ಅವರು ಕರ್ತೃವಿನ ಜಾಗದಲ್ಲಿದ್ದು ಶ್ರಾದ್ಧಕರ್ಮಗಳು ನಮ್ಮತ್ತೆ ಮರಣಹೊಂದಿದ ಐದನೆಯ ದಿನ ಶುರುವಾಯ್ತು. ಎರಡು ದಿನಗಳಷ್ಟೇ ಕಳೆದಿದೆ. ಕರ್ತೃ ನಾಪತ್ತೆ ಯಾಗಿಬಿಟ್ಟರು. ಕರ್ಮ ನಡೆಯುವಂತಿಲ್ಲ. ಎಲ್ಲರಿಗೂ ಗಾಭರಿ! ಇದನ್ನೆಲ್ಲಾ ಅತಿಯಾಗಿ ನಂಬಿದ್ದ ನನಗೆ ಆತಂಕ. ಏನಾಗಿ ಬಿಡುತ್ತೋ ಏನೋ!! ಸರಿ, ಕರ್ತೃವನ್ನು ಹೇಗಾದರೂ ಕರೆತರಲು ನನ್ನ ಪ್ರಯತ್ನ ಶುರುವಾಯ್ತು. ನಮ್ಮ ಹುಟ್ಟೂರು ಹರಿಹರಪುರವೆಂಬ ಹಳ್ಳಿ. ಅಲ್ಲಿಗೆ ಸುಮಾರು ಎಂಟು ಮೈಲು ದೂರದ ಹೊಳೆನರಸೀಪುರದಲ್ಲಿ ಕರ್ತೃವಿನ ಮನೆ. ಹೊಳೆನರಸೀಪುರಕ್ಕೆ ಅವರ ಮನೆಗೆ ಹೋದೆ. ಅಲ್ಲಿಲ್ಲ. ಒಬ್ಬ ಪುರೋಹಿತರ ಮನೆಯಲ್ಲಿರುವುದಾಗಿ ತಿಳಿದು ಅಲ್ಲಿ ಹೋದೆ. ಆತ ಆ ಪುರೋಹಿತರೊಡನೆ ಒಂದು ದೇವಸ್ಥಾನಕ್ಕೆ ಹೋಗಿದ್ದಾನೆ. ಅಲ್ಲಿ ಹೋಗಿ ವಿಚಾರಿಸಲಾಗಿ ಪಕ್ಕದಲ್ಲಿದ್ದ ಪುರೋಹಿತರೆಡೆಗೆ ಅವರ ದೃಶ್ಟಿ ಹೋಯ್ತು.
" ಏನು ಗುರುಗಳೇ, ಮೊನ್ನೆಯಿಂದ ನಮ್ಮತ್ತೆ ಕರ್ಮಾದಿಗಳನ್ನು ಕರ್ತೃವಾಗಿ ಮಾಡುತ್ತಿರುವ ಇವರು ಇಂದು ಬಾರದೆ ದಿಕ್ಕೇ ತೋಚದಾಗಿದೆ. ದಯವಿಟ್ಟು ಕಳಿಸಿಕೊಡಿ."-- ನನ್ನ ಕಣ್ಣು ಅದಾಗಲೇ ತೇವವಾಗಿತ್ತು.
ಆ ಪುರೋಹಿತರು ಹೇಳಿದರು" ಅದ್ಯಾವನೋ ಮಾಡಿಸ್ತಾ ಇದಾನಲ್ಲಾ! ಅವನನ್ನೇ ಕೇಳು, ಹೇಗಾದರೂ ಮಾಡಿಕೊಳ್ಳಲಿ, ಇವನನ್ನು ಕಳಿಸುಲ್ಲ."
ನಾನಂತೂ ಧರೆಗೆ ಇಳಿದುಹೋದೆ. ದೇವಸ್ಥಾನದ ಮುಂದೆ ರಸ್ತೆಯಲ್ಲೇ ಆ ಪುರೋಹಿತರ ಪಾದಕ್ಕೆ ಸಾಸ್ಟಾಂಗ ನಮಸ್ಕಾರ ಮಾಡುತ್ತಾ ಕಣ್ಣೀರಿಟ್ಟೆ. ಪುರೋಹಿತರ ಮನ ಕರಗಲೇ ಇಲ್ಲ. ಕೊನೆಗೆ ನಮ್ಮ ಸಂಬಂಧಿಕರೊಬ್ಬರ ಸಹಕಾರದಿಂದ ಬೇರೆ ದಾರಿಯಾಯ್ತು. ಅದು ಬೇರೆ ವಿಚಾರ. ಆದರೆ ಅಂದು ನನಗಾದ ಮಾನಸಿಕ ನೋವು ಈ ಪುರೋಹಿತ ವ್ಯವಸ್ಥೆ ಮೇಲೆ ಕಿಡಿ ಕಾರುವಂತಾಗಿದೆ. ಆದರೂ ಉತ್ತಮ ಮನೋಧರ್ಮದ ಪುರೋಹಿತರುಗಳನ್ನೂ ಕಂಡಿದ್ದೇನೆ. ಹಾಗಾಗಿ ನಾನು ಬಂಡೆದ್ದಿಲ್ಲ!! ಅಂದು ಆ ಪುರೋಹಿತರು ಹಾಗೆ ವರ್ತಿಸಿದ್ದೇಕೆ ಎಂಬುದು ನಿಮಗೆ ತಿಳಿಯಿತಲ್ಲವೇ?
ನೀವೇನು ಹೇಳ್ತೀರಿ?

-ಹರಿಹರಪುರ ಶ್ರೀಧರ್
--------------------------------------------------------------
ಯಾರು ಏನು ಹೇಳಿದರು?
ಸಾಗರದಾಚೆಯ ಇಂಚರ:
ನಿಜಕ್ಕೂ ಕೆಲವೊಮ್ಮೆ ಪುರೋಹಿತರ ಮೇಲೆ ನಂಗೂ ಕೋಪ ಬಂದಿದೆ
ದಿನಕ್ಕೆ ಒಂದೇ ಪೂಜೆ ಯಿದ್ದರೆ ತಾಸು ಬೇಕು,
ಅದೇ ಪೂಜೆ ದಿನಕ್ಕೆ ೧೦ ಇದ್ದರೆ, ೩೦ ನಿಮಿಷ ಸಾಕು
ನಿಮ್ಮ ಘಟನೆ ಮನ ತಟ್ಟುವಂತಿದೆ
June 9, 2010 1:40 PM
--------------------------------------------------------------
ವಿ.ಆರ್.ಭಟ್ :

This Habbit of Purohits are bad, they must understand atleast now! nice article
June 9, 2010 3:14 PM
-------------------------------------------------------------
ವಿಶಾಲ್:
This is a clear example of fear within us.Purohit's arrogance was because of the position he has which he doesn't deserve.Who gave him that position, its we.Why did we give,because of Ignorance and fear.
Lets hope that the society realizes this soon and get out of that dogma.

---------------------------------------------------------

Venkatakrishna.K.K.

ಅಪ್ಪ ಪುರೊಹಿತ, ಆದಕಾರಣ ಮಗ ಪುರೊಹಿತ. ದಕ್ಷಿಣೆಗೆ ತಕ್ಕ ಪ್ರದಕ್ಷಿಣೆ. ವಿಚಾರವಿಲ್ಲದ ಆಚಾರ.ಅನಾಚಾರದ ವಿಚಾರ.ಗೊಡ್ಡು ಸಂಪ್ರದಾಯ ಗೊತ್ತಿದೆ,ಶಾಸ್ತ್ರವಿಚಾರ ಗೊತ್ತಿಲ್ಲ. ಇದು ಇಂದಿನ ನೂರಾರು ಪುರೊಹಿತರ ಕತೆ.
June 13, 2010 6:45 PM

------------------------------------------------------------
ತಮ್ಮ ಅಭಿಪ್ರಾಯಗಳನ್ನು ತಿಳಿಸಿರುವ ಸಾಗರದಾಚೆಯ ಇಂಚರ. ಶ್ರೀಯುತ ವಿ.ಆರ್. ಭಟ್ Venkatakrishna.K.K. ಮತ್ತು ಶ್ರೀ ವಿಶಾಲ್ ಅವರುಗಳಿಗೆ ಧನ್ಯವಾದಗಳು. ನಡೆದ ನೈಜ ಘಟನೆಯನ್ನು ಯಥಾವತ್ತಾಗಿ ಬರೆಯಲು ಕಾರಣವಿದೆ. ಇಪ್ಪತ್ತೈದು ವರ್ಷಗಳ ಹಿಂದಿನ ನನ್ನ ಮಾನಸಿಕತೆಗೂ ಇಂದಿನ ಮಾನಸಿಕತೆಗೂ ಅಜಗಜಾಂತರ ವೆತ್ಯಾಸವಿದೆ. ಇರಲಿ. ಶ್ರಾದ್ಧದ ನಿಜಾರ್ಥವನ್ನು ವೇದಾಧ್ಯಾಯೀ ಸುಧಕರಶರ್ಮರು ವೇದದ ಹಿನ್ನೆಲೆಯಲ್ಲಿ ತಿಳಿಸಬೇಕೆಂದು ವಿನಂತಿಸುವೆ.
-ಶ್ರೀಧರ್