| 1. ವೇದಘೋಷ: | 9.30-9.35 |
| 2. ಸ್ವಾಗತ ಪರಿಚಯ: | 9.35-9.40 |
| 3. ಪ್ರಾಸ್ತಾವಿಕನುಡಿ: | 9.40-9.50 |
| 4. ದೀಪ ನೃತ್ಯ ಮತ್ತು ಉದ್ಘಾಟನೆ: | 9.50-10.00 |
| 5. ಉದ್ಘಾಟನಾ ಭಾಷಣ: | 10.00-10.10 |
| 6. ಸಿ.ಡಿ ಪರಿಚಯ: | 10.10-10.20 |
| 7. ಸಿಡಿ ಬಿಡುಗಡೆ: | 10.20-10.25 |
| 8. ಅಧ್ಯಕ್ಷರ ನುಡಿ: | 10.25-10.35 |
| 9. ಚಹಾ ವಿರಾಮ: | 10.35-10.40 |
| 10. ವಯೊಲಿನ್ ವಾದನ: | 10.40-11.10 |
| 11. ವಿಚಾರ ಸಂಕಿರಣ [1 ಗಂಟೆ] | 11.10-12.30 |
| 12.ಗೀತಗಾಯನ [ 20 ನಿಮಿಷ] | |
| 13. ಸುಧಾಕರ ಶರ್ಮರನುಡಿ: | 12.30- 1.20 |
| 14. ಅಭಿನಂದನೆ: | 1.20-1.25 |
| 15. ಶಾಂತಿಪಾಠ: | 1.25-1.30 |
///// ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ ////// ಕೃಣ್ವಂತೋ ವಿಶ್ವಮಾರ್ಯಂ //// //// ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ /////
Tuesday, January 18, 2011
ವೇದಸುಧೆ ವಾರ್ಷಿಕೋತ್ಸವ ಯೋಜಿತ ವೇಳಾ ಪಟ್ಟಿ
ವಾರ್ಷಿಕೋತ್ಸವ ಬೆಳಗಿನ ಅವಧಿ
Monday, January 17, 2011
"ನಿಜವ ತಿಳಿಯೋಣ"
30.01.2011 ರಂದು ಹಾಸನದಲ್ಲಿ ನಡೆಯಲಿರುವ ವೇದಸುಧೆಯ ವಾರ್ಷಿಕೋತ್ಸವದಲ್ಲಿ ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ "ನಿಜವ ತಿಳಿಯೋಣ" ಪ್ರವಚನ ಮಾಲಿಕೆ ಸಿಡಿ ಬಿಡುಗಡೆಯಾಗಲಿದ್ದು ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ಅದರ ಪರಿಚಯವನ್ನು ಮಾಡಿಕೊಡಲಿದ್ದಾರೆ. ಅದರ ಒಂದು ಕ್ಲಿಪ್ ವೇದಸುಧೆಯ ಅಭಿಮಾನಿಗಳಿಗಾಗಿ
ಸತ್ಯಪಥವ ಹುಡುಕಬೇಕಲ್ಲಾ!
ನಮ್ಮ ಸಮಾಜ ಬಲು ವಿಚಿತ್ರ. ಬೆಳಗಿನಿಂದ ರಾತ್ರಿಯವರೆಗೂ ದುಡಿದು ಸೋತು ಸೊಪ್ಪಾಗಿ ರಾತ್ರಿ ಮನೆಗೆಬಂದು ಹಾಸಿಗೆಯಲ್ಲಿ ಕಾಲು ಚಾಚುವವರು ಕೆಲವರು. ಅವರಿಗೆ ದುಡಿಮೆಯೇ ಜೀವನ.ಇಂತವರು ಯಾವಾಗಲಾದರೊಮ್ಮೆ ಸಾವಿರಾರು ರೂಪಾಯಿಗಳನ್ನು ಖರ್ಚುಮಾಡಿ ಯಾವುದಾದರೂ ದೇವಾಲಯಗಳಲ್ಲಿ ಸೇವೆ ಮಾಡಿಸಿ ಸಮಾಧಾನ ಪಡುವುದುಂಟು. ಇನ್ನೊಂದು ವರ್ಗವಿದೆ.ಜೀವನದಲ್ಲಿ ನೈತಿಕ ಮೌಲ್ಯಗಳನ್ನುಳನ್ನು ಬಿಟ್ಟು ವಾಮಮಾರ್ಗಗಳಲ್ಲಿ ಹಣ ಸಂಪಾದಿಸುವುದು, ಆದರೆ ಧಾರ್ಮಿಕ ಕೆಲಸಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡುವುದು. ಮತ್ತೊಂದು ವರ್ಗವಿದೆ. ಪ್ರಾಮಾಣಿಕವಾಗಿ ದುಡಿದು ನಮ್ಮ ಪರಂಪರೆಯಲ್ಲಿ ಬಂದಿರುವ ಎಲ್ಲಾ ವ್ರತಾಚರಣೆಗಳು, ಹಬ್ಬ ಹರಿದಿನಗಳನ್ನು ಆಚರಿಸುತ್ತಾ ತಾವು ಆಚರಿಸುತ್ತಿರುವ ಯಾವ ಆಚರಣೆಯನ್ನೂ ವೈಜ್ಞಾನಿಕವಾಗಿ ವಿಶ್ಲೇಷಿಸದೆ ಸುಮ್ಮನೆ ಅನುಸರಿಸುವುದು. ಇದು ದೊಡ್ಡ ಸಮೂಹ. ನಮ್ಮ ಹಿಂದಿನವರು ಹೀಗೆ ಮಾಡುತ್ತಿದ್ದರು. ನಾವೂ ಮಾಡುತ್ತೇವೆ. ನಮ್ಮ ಮಕ್ಕಳಿಗೂ ಮಾಡಲು ಕಲಿಸುತ್ತೇವೆ, ಎನ್ನುವ ಈ ವರ್ಗ ಯಾವುದಕ್ಕೂ ತಲೆ ಕೆಡಸಿಕೊಳ್ಳುವುದಿಲ್ಲ. ಭಯದಿಂದ ಧರ್ಮಾಚರಣೆ ಮಾಡುವ ಕೆಲವರು. ಪ್ರತೀ ವರ್ಷವೂ ತಮ್ಮ ಮನೆದೇವರಿಗೆ ಯಾತ್ರೆ ಮಾಡುವ ಕೆಲವರು ಕಾರಣಾಂತರದಿಂದ ಒಂದು ವರ್ಷ ಯಾತ್ರೆ ಮಾಡದಿದ್ದಾಗ ಅವರ ಮನೆಯಲ್ಲಿ ಯಾವುದಾದರೂ ಅಪತ್ತು ಎದುರಾದರೆ ಅದಕ್ಕೆ ಅವರು ಮನೆ ದೇವರ ದರ್ಶನವನ್ನು ಮಾಡದಿದ್ದುದೇ ಕಾರಣವೆಂದು ತಿಳಿದು ತಪ್ಪು ಕಾಣಿಕೆಯನ್ನು ತಮ್ಮ ಮನೆಯೆ ಪೂಜಾಗೃಹದಲ್ಲಿ ದೇವರ ಮುಂದಿಟ್ಟು " ಭಗವಂತಾ, ನನ್ನ ತಪ್ಪು ಕ್ಷಮಿಸಿ ನಮ್ಮ ಮನೆಯನ್ನು ಕಾಪಾಡು, ಮುಂದಿನ ವರ್ಷ ಮನೆಮಂದಿಯೆಲ್ಲಾ ಬಂದು ನಿನ್ನ ಸೇವೆ ಮಾಡಿಸಿ ಕೊಂಡು ಬರುತ್ತೇವೆಂದು" ಮನ: ಪೂರ್ವಕ ದೇವರಲ್ಲಿ ಬೇಡುವ ಒಂದು ಮುಗ್ಧ ವರ್ಗ.
ಭಗವಂತನ ಪೂಜೆಯನ್ನು ನೂರಾರು ರೀತಿಯಲ್ಲಿ ತಮ್ಮದೇ ಸರಿ ಎನ್ನುತ್ತಾ ನಿತ್ಯವೂ ತಮ್ಮದೇ ರೀತಿಯಲ್ಲಿ ಪೂಜೆಮಾಡುವ ಹಲವಾರು ಸಮೂಹ. ಅಷ್ಟೇ ಅಲ್ಲ, ಧರ್ಮದ, ದೇವರ, ಮತದ, ಮಠದ ಹೆಸರಲ್ಲಿ ಬಡಿದಾಡುವ ಗುಂಪುಗಳು.
ನಿತ್ಯವೂ ಪುರಾಣ ಪಠಣ-ಶ್ರವಣ ಮಾಡುತ್ತಾ,ಇದೇ ಸರಿಯಾದ ಮಾರ್ಗವೆಂದು ಭಾವಿಸಿರುವ ಒಂದು ಸಮೂಹ. ಪುರಾಣವೇ ಸುಳ್ಳು, ಅದು ಬರೀ ಕಟ್ಟುಕಥೆ ಎನ್ನುವ ಒಂದು ಗುಂಪು.ಇಷ್ಟೇ ಅಲ್ಲ, ಇನ್ನೂ ಸಾಕಷ್ಟು ಗೊಂದಲಗಳು.ಇವುಗಳ ಮಧ್ಯೆದಲ್ಲೇ ಇದ್ದು ಸತ್ಯಪಥವ ಹುಡುಕಬೇಕಲ್ಲಾ! ಹಿಂದಿನಿಂದ ನಡೆದು ಬಂದಿರುವ ಎಲ್ಲವನ್ನೂ ಸಾರಾಸಗಟಾಗಿ ತಿರಸ್ಕರಿಸದೆ, ಕುರುಡು ಆಚರಣೆ ಎಂದು ಮನವರಿಕೆ ಆದದ್ದನ್ನು ಬಿಡುತ್ತಾ, ಯಾವುದು ಅನೈತಿಕವೆಂದು ನಮ್ಮ ಅಂತರಾತ್ಮ ತಿಳಿಯುತ್ತದೋ ಅದರಿಂದ ದೂರವಿರುತ್ತಾ, ಒಂದು ಸತ್ಯದ ಹಾದಿಯಲ್ಲಿ ಸಾಗುವುದೇ ಒಂದು ಮಹಾನ್ ಯಜ್ಞ. ಅಂತಾ ಒಂದು ಯಾತ್ರೆಯಲ್ಲಿ ಸಾಗುವುದೇ ವೇದಸುಧೆಯ ಉದ್ಧೇಶ. ಹಲವು ಗೊಂದಲಗಳು ಎದುರಾದರೂ ಸತ್ಯದ ಶೋಧನೆಯಲ್ಲಿ ಮುಂದುವರೆಯೋಣ ಬನ್ನಿ.ಇದೊಂದು ಸತ್ಯದ ಹಾದಿಯನ್ನು ಹುಡುಕುವ ವೇದಿಕೆಯಾದ್ದರಿಂದ ಯಾರು ಏನೇ ಅಭಿಪ್ರಾಯ ಹೊರಹಾಕಿದರೂ ಅದರ ಬಗ್ಗೆ ವಿಮರ್ಷೆ ಮಾಡೋಣ. ಯಾವುದನ್ನೂ ವೈಯಕ್ತಿಕನೆಲೆಯಲ್ಲಿ ನೋಡದೆ ವೈಚಾರಿಕ ಹಿನ್ನೆಲೆಯಲ್ಲಿ ಚರ್ಚಿಸಿದಾಗ ಒಂದಲ್ಲಾ ಒಂದು ದಿನ ಋಜುಮಾರ್ಗದಲ್ಲಿ ಸಾಗುವುದು ಯಾರಿಗೂ ಕಷ್ಟವಾಗಲಾರದು.
Sunday, January 16, 2011
ಹಸಿವು
ಹಸಿದವಗೆ ಹುಸಿ ವೇದಾಂತ ಬೇಡ|
ಕಥೆ ಕವನ ಸಾಹಿತ್ಯ ಬೇಡವೇ ಬೇಡ||
ಬಳಲಿದ ಉದರವನು ಕಾಡಬೇಡ|
ಮುದದಿ ಆದರಿಸಿ ಮೋದಪಡು ಮೂಢ||
ಹೊಟ್ಟೆಯ ತೊಟ್ಟಿಯದು ತುಂಬುವುದು ಎಂದು?
ಹಸಿವು ಮಾಡಿಸುವ ಕುಕರ್ಮಗಳೆನಿತೊಂದು||
ಬಂಧಗಳ ಹೆಣೆಯುವುದು ಪಾಶಗಳ ಬೀಸುವುದು|
ಆತ್ಮಾಭಿಮಾನ ಮರೆಸುವುದೊ ಮೂಢ||
ಹಸಿವಿನಿಂ ಬಳಲುತಿರೆ ಹೊನ್ನು ಬೇಕೇನು?
ಹಸಿವಿನಿಂ ನರಳುತಿರೆ ಹೆಣ್ಣು ಬೇಕೇನು?
ಹಸಿವು ಹಿಂಗಿಸಲು ಅನ್ನವೇ ಬೇಕು|
ಹೊಟ್ಟೆ ತುಂಬಿರಲೆಲ್ಲವೂ ಬೇಕು ಮೂಢ||
ಪರಮಾತ್ಮನೆಂಬುವನು ಎಲ್ಲಿಹನು ಕೇಳಿ|
ದೇವಭಕ್ತರೆ ಹೇಳಿ ಅರಿತವರೆ ತಿಳಿ ಹೇಳಿ||
ದೇವನಿರದಿಹನೆ ಜೀವಿಗಳ ಉದರದಲಿ|
ಹಸಿವಿರದಿರೆ ಪರಮಾತ್ಮನೆಲ್ಲಿ ಮೂಢ||
ರಾಗ ಸಂಯೋಜಿಸಿ ಹಾಡಿದ್ದಾರೆ ಶ್ರೀಮತಿ ಲಲಿತಾ ರಮೇಶ್,ಹಾಸನ
ಕಥೆ ಕವನ ಸಾಹಿತ್ಯ ಬೇಡವೇ ಬೇಡ||
ಬಳಲಿದ ಉದರವನು ಕಾಡಬೇಡ|
ಮುದದಿ ಆದರಿಸಿ ಮೋದಪಡು ಮೂಢ||
ಹೊಟ್ಟೆಯ ತೊಟ್ಟಿಯದು ತುಂಬುವುದು ಎಂದು?
ಹಸಿವು ಮಾಡಿಸುವ ಕುಕರ್ಮಗಳೆನಿತೊಂದು||
ಬಂಧಗಳ ಹೆಣೆಯುವುದು ಪಾಶಗಳ ಬೀಸುವುದು|
ಆತ್ಮಾಭಿಮಾನ ಮರೆಸುವುದೊ ಮೂಢ||
ಹಸಿವಿನಿಂ ಬಳಲುತಿರೆ ಹೊನ್ನು ಬೇಕೇನು?
ಹಸಿವಿನಿಂ ನರಳುತಿರೆ ಹೆಣ್ಣು ಬೇಕೇನು?
ಹಸಿವು ಹಿಂಗಿಸಲು ಅನ್ನವೇ ಬೇಕು|
ಹೊಟ್ಟೆ ತುಂಬಿರಲೆಲ್ಲವೂ ಬೇಕು ಮೂಢ||
ಪರಮಾತ್ಮನೆಂಬುವನು ಎಲ್ಲಿಹನು ಕೇಳಿ|
ದೇವಭಕ್ತರೆ ಹೇಳಿ ಅರಿತವರೆ ತಿಳಿ ಹೇಳಿ||
ದೇವನಿರದಿಹನೆ ಜೀವಿಗಳ ಉದರದಲಿ|
ಹಸಿವಿರದಿರೆ ಪರಮಾತ್ಮನೆಲ್ಲಿ ಮೂಢ||
ರಾಗ ಸಂಯೋಜಿಸಿ ಹಾಡಿದ್ದಾರೆ ಶ್ರೀಮತಿ ಲಲಿತಾ ರಮೇಶ್,ಹಾಸನ
Saturday, January 15, 2011
ವೇದಸುಧೆ ವಾರ್ಷಿಕೋತ್ಸವದಲ್ಲಿ ಭಾಗವಹಿಸುವ ಬೆಂಗಳೂರಿನ ಅಭಿಮಾನಿಗಳ ಗಮನಕ್ಕಾಗಿ
ವೇದಸುಧೆಯ ವಾರ್ಷಿಕೋತ್ಸವವು ನಡೆಯುವ ದಿನ 30.01.2011 ರಂದು ಭಾನುವಾರ ಬೆಳಗ್ಗೆ 5.30 ರ ಸುಮಾರಿಗೆ ಬೆಂಗಳೂರಿನಿಂದ ಹೊರಟು ಹಾಸನವನ್ನು 9.00 ಗಂಟೆಗೆ ತಲುಪನುಕೂಲವಾಗುವಂತೆ ಒಂದು ವಾಹನದ ವ್ಯವಸ್ಥೆ ಮಾಡಬೇಕೆಂಬ ಯೋಜನೆ ಇದೆ. ವಾಹನವು ಯಾವುದಾಗಿರಬೇಕೆಂಬುದು ಹೊರಡುವ ಸಂಖ್ಯೆಯನ್ನು ಅವಲಂಭಿಸಿದೆ. ಹಾಗೊಂದು ವೇಳೆ ಬೆಂಗಳೂರಿನಿಂದ ವಾಹನವು ಹೊರಟರೆ ಬಸವನಗುಡಿ, ವಿಜಯನಗರ ಮತ್ತು ಇನ್ನೊಂದೆರಡು ಪಿಕ್ ಅಪ್ ಪಾಯಿಂಟ್ ಗಳನ್ನು ಗುರುತಿಸಿ ಕರೆದುಕೊಂಡು ಬರುವ ವ್ಯವಸ್ಥೆ ಮಾಡಲಾಗುವುದು. ಸಮಾರಂಭವು ಮುಗಿದ ಮೇಲೆ ಹೊರಟು ಬೆಳಿಗ್ಗೆ ಬೆಂಗಳೂರಿನಲ್ಲಿಪಿಕ್ ಅಪ್ ಮಾಡಿದ ಸ್ಥಳಗಳಿಗೆ ರಾತ್ರಿ ಡ್ರಾಪ್ ಮಾಡುವ ಉದ್ಧೇಶವಿದೆ. ಸಾಮಾನ್ಯವಾಗಿ ಈ ದಿನಗಳಲ್ಲಿ ಅಯ್ಯಪ್ಪಸ್ವಾಮಿ ಯಾತ್ರೆಗಾಗಿ ವಾಹನಗಳು ಬಾಡಿಗೆಗೆ ಹೋಗುವುದರಿಂದ ಆದಷ್ಟು ಬೇಗ ನಮ್ಮ ಈ ಪ್ರವಾಸಯೋಜನೆ ಫಿಕ್ಸ್ ಆಗಬೇಕು.ಇಲ್ಲವಾದರೆ ಸ್ವಂತ ವಾಹನದಲ್ಲೋ ಸರ್ಕಾರಿ ಬಸ್ ನಲ್ಲೋ ಹೊರಡಬೇಕಾಗುತ್ತದೆ. ಸಾಮೂಹಿಕವಾಗಿ ಒಂದು ಮಿನಿ ಬಸ್ ನಲ್ಲೋ ಅಥವಾ ಸಂಖ್ಯೆ ಹೆಚ್ಚಾದರೆ ದೊಡ್ದ ಬಸ್ ನಲ್ಲೋ ಹೊರಟರೆ ಎಲ್ಲರ ಪರಿಚಯ, ಮಾತುಕತೆ, ಹರಟೆ, ವಿಚಾರ ವಿನಿಮಯಕ್ಕೆ ಅವಕಾಶಗಳಿರುತ್ತದೆ. ಆದ್ದರಿಂದ ಬೆಂಗಳೂರಿನಿಂದ ಹೊರಡುವ ಅಭಿಮಾನಿಗಳು ಇಲ್ಲಿ ಪ್ರತಿಕ್ರಿಯೆ ಬರೆಯುವುದರ ಮೂಲಕ ಅಥವಾ ಕೆಳಗಿನ ಫೋನ್ ನಂಬರುಗಳಿಗೆ ದಿನಾಂಕ 20.01.2011 ರೊಳಗಾಗಿ ಕರೆಮಾಡಿ ತಿಳಿಸಬೇಕಾಗಿ ಕೋರುವೆ.
ಈಗಾಗಲೇ ವೇದಸುಧೆಯ ಗಮನಕ್ಕೆ ಬಂದಿರುವಂತೆ ಹಾಸನಕ್ಕೆ ಕುಟುಂಬ ಸಹಿತರಾಗಿ ಹೊರಟಿರುವ ಅಭಿಮಾನಿಗಳ ಪಟ್ಟಿ
೧] ವೇದಾಧ್ಯಾಯೀ ಸುಧಾಕರ ಶರ್ಮ
೨] ಶ್ರೀ ವಿಷ್ಣುಭಟ್
ಈಗಾಗಲೇ ವೇದಸುಧೆಯ ಗಮನಕ್ಕೆ ಬಂದಿರುವಂತೆ ಹಾಸನಕ್ಕೆ ಕುಟುಂಬ ಸಹಿತರಾಗಿ ಹೊರಟಿರುವ ಅಭಿಮಾನಿಗಳ ಪಟ್ಟಿ
೧] ವೇದಾಧ್ಯಾಯೀ ಸುಧಾಕರ ಶರ್ಮ
೨] ಶ್ರೀ ವಿಷ್ಣುಭಟ್
೩] ಶ್ರೀ ವಿಶಾಲ್
೪] ಜಗದೀಶ್
೫] ಎಂ.ಡಿ.ಎನ್ ಪ್ರಭಾಕರ್
೫] ಎಂ.ಡಿ.ಎನ್ ಪ್ರಭಾಕರ್
೬] ಶ್ರೀ ಹರೀಶ್ ಆತ್ರೇಯ
೭] ಶ್ರೀಮತಿ ಚಿತ್ರ ಮತ್ತು ಶ್ರೀ ಪ್ರಸನ್ನ
೮] ಶ್ರೀ ಕೃಷ್ಣಮೂರ್ತಿ
೯] ಡಾ|| ವಿವೇಕ್
೧೦] ಶ್ರೀ ದಕ್ಷಿಣಾಮೂರ್ತಿ
ಸಂಪರ್ಕಿಸಲು ದೂರವಾಣಿ:
ಶ್ರೀಸುಧಾಕರಶರ್ಮ: 9448842474 / 08022421950
ಶ್ರೀ ವಿಶಾಲ್: 9880455251
ಶ್ರೀ ಹರಿಹರಪುರಶ್ರೀಧರ್: 9663572406/ 08172250566
೭] ಶ್ರೀಮತಿ ಚಿತ್ರ ಮತ್ತು ಶ್ರೀ ಪ್ರಸನ್ನ
೮] ಶ್ರೀ ಕೃಷ್ಣಮೂರ್ತಿ
೯] ಡಾ|| ವಿವೇಕ್
೧೦] ಶ್ರೀ ದಕ್ಷಿಣಾಮೂರ್ತಿ
ಸಂಪರ್ಕಿಸಲು ದೂರವಾಣಿ:
ಶ್ರೀಸುಧಾಕರಶರ್ಮ: 9448842474 / 08022421950
ಶ್ರೀ ವಿಶಾಲ್: 9880455251
ಶ್ರೀ ಹರಿಹರಪುರಶ್ರೀಧರ್: 9663572406/ 08172250566
ಮೇಲ್ ಮೂಲಕ ಕೂಡ ನಿಮ್ಮೊಡನೆ ಹಾಸನಕ್ಕೆ ಬರುವವರ ವಿವರವನ್ನು ದಿನಾಂಕ 20.01.2011 ರೊಳಗೆ ನೀಡಬಹುದಾಗಿದೆ.
ನಮ್ಮ ಮೇಲ್ ವಿಳಾಸ: vedasudhe@gmail.com
ಹೊಸಬೆಳಕು
ವೇದಾಭಿಮಾನಿಗಳೇ,
ನಿನ್ನೆ ರಾತ್ರಿ [14.01.2011]ಚಂದನ ವಾಹಿನಿಯಲ್ಲಿ ಪ್ರಸಾರವಾಗಬೇಕಿದ್ದ ಈ ದಾರಾವಾಹಿಯು ಕಾರಣಾಂತರಗಳಿಂದ ಎರಡುವಾರಗಳು ಮುಂದೂಡಲ್ಪಟ್ಟಿದೆ. ಬರುವ 28.01.2011 ರಿಂದ ಪ್ರತೀ ಶುಕ್ರವಾರ ರಾತ್ರಿ 8.00 ರಿಂದ 8.30 ರವರಗೆ ಪ್ರಸಾರವಾಗಲಿರುವ ಈ ದಾರಾವಾಹಿಯನ್ನು ನಿಮ್ಮ ಪರಿಚಿತರೆಲ್ಲರಿಗೂ ನೋಡುವಂತೆ ತಿಳಿಸಿ.ನಮ್ಮ ಜೀವನಕ್ಕೆ ಬೆಳಕಾಗಬಲ್ಲ ಈ ದಾರಾವಾಹಿಯು ಇಂದಿನ ದಿನಗಳಲ್ಲಿ ಒಂದು ಅತ್ಯಂತ ವಿನೂತನ ಮತ್ತು ಉತ್ತಮವಾದ ಪ್ರಯತ್ನ. ಸುಮಾರು 30 ಕ್ಕೂ ಹೆಚ್ಚು ಕಂತುಗಳಲ್ಲಿ ಪ್ರಸಾರವಾಗಲಿರುವ ಈ ದಾರಾವಾಹಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಚಂದನ ವಾಹಿನಿಗೂ ಮತ್ತು ವೇದಸುಧೆಗೂ ಬರೆಯಿರಿ. ವೇದಸುಧೆಗೆ ಬರೆದ ನಿಮ್ಮ ಅಭಿಪ್ರಾಯಗಳನ್ನು ಗೌರವಪೂರ್ವಕವಾಗಿ ಪ್ರಕಟಿಸಲಾಗುವುದು. ಅಗತ್ಯವಿದ್ದರೆ ಈ ದಾರಾವಾಹಿಗಾಗಿಯೇ ಒಂದು ಪುಟ ತೆರೆಯಲಾಗುವುದು.
Subscribe to:
Posts (Atom)
