ನಮ್ಮ ದೇಶದಲ್ಲಿ ರಾಜ ಮಹಾರಾಜರ ಕಾಲದಿಂದಲೂ ದೇವಾಲಯಗಳನ್ನು ಕಟ್ಟುವುದು, ಕೆರೆ ಕಟ್ಟೆಗಳನ್ನು ನಿರ್ಮಿಸುವುದು, ಕೊಳಗಳನ್ನು ನಿರ್ಮಿಸುವುದು, ಅರಳೀಕಟ್ಟೆಗಳ ನಿರ್ಮಾಣ, ತೋಪು ಬೆಳೆಸುವುದು,ಗೋಮಾಳಗಳನ್ನು ಬಿಡುವುದು, ಸಾಲು ಮರಗಳನ್ನು ನೆಡುವುದು,ಛತ್ರಗಳನ್ನು ಸ್ಥಾಪಿಸುವುದು, ಮಠ ಮಂದಿರಗಳಿಗೆ ಪ್ರೋತ್ಸಾಹಿಸುವುದು...ಮುಂತಾದ ಹಲವು ಸತ್ಕಾರ್ಯಗಳನ್ನು ನಮ್ಮ ಪೂರ್ವಜರು ಮಾಡಿದ್ದಾರೆ. ನನ್ನ ಸ್ವಂತ ಊರಾದ ಹರಿಹರಪುರವನ್ನು ಎರಡನೇ ಹರಿಹರಮಹಾರಾಜನು ಮಾಧವಾಧ್ವರಿ ಎಂಬ ವೇದ ವಿದ್ವಾಂಸನಿಗೆ ಅವನ ವೇದಜ್ಞಾನಕ್ಕೆ ಮನ್ನಣೆ ಕೊಟ್ಟು ದಾನವಾಗಿ ನೀಡಿದ್ದನು, ಎಂಬ ಶಾಸನ ಇದೆ.ಮಾಧವಾಧ್ವರಿ ಎಂಬ ವೇದವಿದ್ವಾಂಸನಿದ್ದ ಊರಿನಲ್ಲಿ ನಾನು ಜನಿಸಿದ್ದೇನೆ, ಎಂಬುದರಿಂದಲೇ ನನಗೆ ಸಂತೋಷವಿದೆ. ಆದರೆ ಮಾಧವಾಧ್ವರಿಯ ನಂತರ ನಮ್ಮೂರಿನಲ್ಲಿ ವೇದಜ್ಞಾನ ಯಾವ ಕಾರಣಕ್ಕೆ ಹಿನ್ನಡೆ ಪಡೆಯಿತು, ಎಂಬಬಗ್ಗೆ ಅರಿವಿಲ್ಲ, ಆದರೆ ನಿಜವಾದ ವೇದಜ್ಞಾನ ಮರೆಯಾಗುತ್ತಾ,ಪುರಾಣದ ಮೇಲುಗೈಯ್ಯಾದಂತೆ ತೋರುವುದು ಸತ್ಯ.ಏನೇ ಇರಲಿ, ದೇವಾಲಯಗಳ ಸ್ಥಾಪನೆಯ ಹಿಂದಿನ ಉದ್ಧೇಶವನ್ನು ಶ್ರೀ ಸುಧಾಕರಶರ್ಮರ ಮಾತುಗಳಲ್ಲಿ ಕೇಳೋಣ. ಅವರ ಮಾತುಗಳು ನಿಷ್ಟುರವಾಗಿರುತ್ತವೆ. ಕಹಿಸತ್ಯವನ್ನು ಅರಗಿಸಿಕೊಳ್ಳುವುದು ಕಷ್ಟವಾದರೂ ನಿಜವನ್ನು ಅರಿತುಕೊಳ್ಳಲೇ ಬೇಕು.
///// ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ ////// ಕೃಣ್ವಂತೋ ವಿಶ್ವಮಾರ್ಯಂ //// //// ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ /////
Monday, July 30, 2012
ಒಂದು ವಿಭಿನ್ನವಾದ, ವಿಶಿಷ್ಟವಾದ ವೇದೋಕ್ತ ವಿವಾಹ
![]() |
ವಿವಾಹ ಆಮಂತ್ರಣ ಓದಲು:
Right clik on invitation , open link in new window, clik on image,ಈಗ ಅಕ್ಷರ ದೊಡ್ದದು ಮಾಡಿ ಓದಬಹುದು
ಈ ದಿನಗಳಲ್ಲಿ ಮದುವೆ ಎಂದಾಗ ಕಲ್ಯಾಣ ಮಂಟಪದಲ್ಲಿ ವಧು ವರರ ಬಂಧು ಮಿತ್ರರು ಅಪಾರ ಸಂಖ್ಯೆಯಲ್ಲಿ ಸೇರಿದಾಗ ವಿವಾಹ ಮಂಟ ಪದಲ್ಲಿ ನಡೆಯುವ ಕಲಾಪಗಳನ್ನು ನೋಡಲು ಹಲವರಿಗೆ ವ್ಯವಧಾನವೇ ಇರುವುದಿಲ್ಲ. ಅಪರೂಪಕ್ಕೆ ಸಿಕ್ಕ ಬಂಧುಮಿತ್ರರೊಡನೆ ಹರಟೆ ಹೊಡೆಯ ಬೇಡವೇ? ತಪ್ಪೇನಿಲ್ಲಾ ಬಿಡಿ. ಆದರೆ ಈ ವಧುವರರಿಗೆ ಮಾತ್ರ ಜೀವನದಲ್ಲಿ ಇದು ಅತೀ ಮಹತ್ವದ ಸಂದರ್ಭ. ಇದರ ಔಚಿತ್ಯ ಹಲವರಿಗೆ ಅರ್ಥವಾಗುವುದೇ ಇಲ್ಲ. ಹರಟೆ ಹೊಡೆಯೋಕೆ ಮದುವೆ ಮಂತಪವೇ ಬೇಕಾ ? ನೀವೇ ಹೇಳಿ. ಇವೆಲ್ಲಾ ರೂಢಿಯಾಗಿ ಬಿಟ್ಟಿದೆ. ಪುರೋಹಿತರು ಮಂತ್ರ ಹೆಳ್ತಾರೆ , " ಮಮ" ಅಂತ ಹೇಳಿ ಅಂತಾರೆ. ವರನ/ವಧುವಿನ/ತಂದೆಯ/ತಾಯಿ ಯಾರಿಗೆ ಮಂತ್ರ ಸಂಬಂಧಿಸಿರುತ್ತೋ ಅವರು "ಮಮ" ಅಂತಾ ಅಂತಾರೆ, ಕಿವಿಗೆ ಬೀಳದಿದ್ದರೆ ಪುರೋಹಿತರು " ಮಮ" ಅಂತಾ ಹೇಳಿ ವಿಧಿಯನ್ನು ಮುಗಿಸಿ ಬಿಡುತ್ತಾರೆ. ವೈದಿಕ ವಿಧಿಗೆ ಹೊರತಾದ ಹಲವು ಕಾರ್ಯಕ್ರಮಗಳು ಮದುವೆ ಮಂಟಪದಲ್ಲಿ ನಡೆಯುತ್ತೆ. ವೀಡಿಯೋ ತೆಗೆಯುವವರು ಎಲ್ಲವನ್ನೂ ಸೆರೆ ಹಿಡಿಯುತ್ತಾರೆ. ಮದುವೆ ಆದ ಮೇಲೆ ನಾಲ್ಕಾರು ದಿನ ವೀಡಿಯೋ ವನ್ನು ಮತ್ತು ಆಲ್ಬಮ್ ನ್ನು ನೋಡಿ ಆ ನಂತರ ಬೇಸರ ವಾದರೆ ಅದರ ಜಾಗಕ್ಕೆ ಸೇರಿಸುತ್ತಾರೆ. ಅಲ್ಲಿಗೆ ಮದುವೆಯ ಆಟ ಮುಗಿಯುತ್ತೆ.
ವಿವಾಹ ಎಂಬುದು ಜೀವನದಲ್ಲಿ ಎಂತಹ ಮಹತ್ವ ಪೂರ್ಣ ಘಟ್ಟ! ಅದಕ್ಕೆ ಕೊಡುತ್ತಿರುವ ಮಹತ್ವ? ಒಂದು ಮದುವೆಯಲ್ಲಿ ಅಕ್ಕಿಗೆ ನಾಲ್ಕಾರು ರೀತಿಯ ಬಣ್ಣ ಹಾಕಿ ಅದನ್ನು ವಧು ವರರ ತಲೆಯ ಮೆಲೆ ಸುರಿಸಿದಾಗ ಅಲ್ಲಿ ಚೆಲ್ಲಾಡಿದ್ದ ಅಕ್ಕಿ ಕಂಡು ಬೇಸರಗೊಂಡೆ. ಐದಾರು ಕೆ.ಜಿ.ಅಕ್ಕಿ! ಬಣ್ಣ ಬಳಿದಿದೆ! ಹಕ್ಕಿ ತಿಂದರೂ ಸಾಯುತ್ತವೆ! ಎಲ್ಲವೂ ತಿಪ್ಪೆಯ ಪಾಲು! ಇದು ನಾವು ಕಷ್ಟ ಪಟ್ಟು ಅನ್ನ ಬೆಳೆದ ರೈತನಿಗೆ ನಾವು ಕೊಡುವ ಬೆಲೆ!
ಈಗ ರೂಡಿಯಲ್ಲಿರುವ ವಿವಾಹದ ಹಲವು ಆಚರಣೆಗಳು ವೇದೋಕ್ತವಲ್ಲ! ಆದರೂ ನಮ್ಮ ಹಿಂದಿನವರು ಆಚರಿಸಿಕೊಂಡು ಬಂದರು, ನಾವೂ ಆಚರಿಸುತ್ತೇವೆ.ಆದರೆ ಇಲ್ಲೊಂದು ಮದುವೆಯ ಕರೆಯೋಲೆ ನನ್ನ ಕೈ ತಲುಪಿದೆ. ಎಲ್ಲವೂ ವೇದೋಕ್ತ. ವಿವಾಹವಾಗುತ್ತಿರುವ ವಧುವಿಗೆ ಶಾಸ್ತ್ರೋಕ್ತ ಉಪನಯನ ವಾಗಿದೆ. ವಧು ವರರು ವೇದೋಕ್ತವಾಗಿ ವಿವಾಹ ಸಂಸ್ಕಾರವನ್ನು ಪಡೆಯುತ್ತಿದ್ದಾರೆ. ಆಸಕ್ತರು "ವೇದೋಕ್ತವಿವಾಹವನ್ನು" ಬಂದು ವೀಕ್ಷಿಸಬಹುದು.
-ಹರಿಹರಪುರ ಶ್ರೀಧರ್.
Sunday, July 29, 2012
ವೇದದ ಮೂಲ
* ಯತಾರ್ಥ ಜ್ಞಾನ
* ಇದ್ದದ್ದನ್ನು ಇದ್ದಹಾಗೆ ಕಂಡರೆ ಅದು ದರ್ಶನ
* ಪೂರ್ವಾಗ್ರಹ ಇಲ್ಲದೆ ಕಂಡುಕೊಳ್ಳುವ ಜ್ಞಾನ
* ವೈರಾಗ್ಯ ಎಂದರೇನು?
* ಋತಂಭರ ಪ್ರಜ್ಞಾ
Saturday, July 28, 2012
ತಾನು ಮಾಡಿದ ಕರ್ಮದ ಫಲವನ್ನು ತಾನು ಅನುಭವಿಸಲೇ ಬೇಕು
* ಸಂಚಿತ,ಪ್ರಾರಬ್ಧ ಮತ್ತು ಆಗಾಮಿ ಕರ್ಮಗಳೆಂದರೇನು?
* ನಮ್ಮ ನಮ್ಮ ಯೋಗ್ಯತೆಗನುಗುಣವಾಗಿ ಮುಂದಿನ ಜನ್ಮ
ನಿರ್ಧಾರಿತವಾಗಲಿದೆಯೇ?
* ಸಾವಿಗೆ ಹೆದರ ಬೇಕೆ?
* ನಮ್ಮ ಆಯಸ್ಸು ಪೂರ್ವ ನಿರ್ಧಾರಿತವೇ?
* ಇನ್ನೂ ಹಲವು ವಿಚಾರಗಳ ಮೇಲೆ ಬೆಳಕು ಚೆಲ್ಲಿದ್ದಾರೆ
ಶ್ರೀ ಸುಧಾಕರ ಶರ್ಮರು
ನಮ್ಮೊಡನೆ ಶ್ರೀ ಸುಧಾಕರಶರ್ಮರು
ವೇದಾಧ್ಯಾಯೀ ಶ್ರೀ ಶ್ರೀ ಸುಧಾಕರಶರ್ಮರು ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ತೀವ್ರ ಬಳಲಿದ್ದರು. ಅವರ ಸ್ಥಿತಿಯನ್ನು ಕಳೆದ ಹತ್ತು ತಿಂಗಳ ಹಿಂದೆ ಪ್ರತ್ಯಕ್ಷ ನೋಡಿದ ನನ್ನ ತಂಗಿ ಹೇಳುತ್ತಾಳೆ " ಅವರ ಅಂದಿನ ಸ್ಥಿತಿಯಲ್ಲಿ ಅವರು ಬದುಕುಳಿಯುತ್ತಾರೆಂಬ ನಂಬಿಕೆ ನನಗಿರಲಿಲ್ಲ! ಶರ್ಮರ ಸಂದರ್ಶನ ಮಾಡಲು ಹೋಗುವೆನೆನ್ನುತ್ತೀಯಲ್ಲಾ!! ಅವರು ಮಾತನಾಡಬಲ್ಲರೇ?
ಅಬ್ಭಾ! ನನ್ನಂತವನಾಗಿದ್ದರೆ ನನ್ನ ಬದುಕಿನ ಆಸೆ ಮರೆಯುತ್ತಿದ್ದೆ. ಅಷ್ಟು ತೀವ್ರ ಸ್ಥಿತಿಯಿಂದ ಚೇತರಿಸಿಕೊಂಡು ಈಗಾಗಲೇ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರಷ್ಟೇ ಅಲ್ಲಾ, ಈ ಸ್ಥಿತಿಯಲ್ಲೂ ಚಂದನದಲ್ಲಿ ನಡೆಯುವ "ಹೊಸ ಬೆಳಕು" ದಾರವಾಹಿಗಾಗಿ ಮುಂದಿನ ಹಲವು ಎಪಿಸೋಡ್ ಗಳಿಗಾಗಿ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ, ಅಷ್ಟೇ ಅಲ್ಲಾ, ಮುಂದಿನ 5-8-2012 ರಂದು ಒಂದು ವೇದೋಕ್ತ ವಿವಾವಹವನ್ನು ಸ್ವತ: ಶರ್ಮರು ನಡೆಸಿಕೊಡಲಿದ್ದಾರೆ. ಮೊನ್ನೆ ಅವರನ್ನು ಭೇಟಿಯಾಗಿ ಹಲವು ವಿಚಾರಗಳ ಬಗ್ಗೆ ವೀಡಿಯೋ ತೆಗೆದೆ. ಇನ್ನು ಒಂದೊಂದಾಗಿ ಶರ್ಮರ ಆಡಿಯೋ /ವೀಡಿಯೋ ಕ್ಲಿಪ್ ಗಳನ್ನು ಪ್ರಕಟಿಸಲಾಗುವುದು. ನಮ್ಮ ನೆಮ್ಮದಿಯ ಬದುಕಿಗೆ ಅಗತ್ಯವಾದ ಹಲವು ಅಂಶಗಳನ್ನು ಶ್ರೀ ಶರ್ಮರು ವೇದಸುಧೆಯ ಓದುಗರೊಡನೆ ಹಂಚಿಕೊಂಡಿದ್ದಾರೆ. ವೇದಸುಧೆಯ ಅಭಿಮಾನಿಗಳು ಎಂದಿನಂತೆ ಈ ವಿಚಾರಗಳನ್ನು ಕೇಳಿ ನಿಮಗೆ ಉಂಟಾಗಬಹುದಾದ ಅನುಮಾನಗಳನ್ನು/ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವೇದಸುಧೆಯಲ್ಲಿ ಹಂಚಿಕೊಂಡರೆ ಶ್ರೀ ಶರ್ಮರು ಉತ್ತರಿಸುವರು
Wednesday, July 25, 2012
"ಷಡ್ದರ್ಶನ"ಗಳು -ಮುನ್ನುಡಿ
ಶ್ರೀಯುತ ಶ್ರೀಧರ್ ಭಂಡ್ರಿ ಯವರು ಅಂತರ್ಜಾಲ ತಾಣದಲ್ಲಿ ಸಂಪದ, ಫೇಸ್ ಬುಕ್ ಮುಂತಾದೆಡೆ ಸದ್ವಿಚಾರಗಳನ್ನು ಸಮಾನ ಮಾನಸಿಕರಲ್ಲಿ ಹಂಚಿಕೊಳ್ಳುವ ಉತ್ತಮ ಚಿಂತಕರು. ವೇದಸುಧೆಗಾಗಿ ಶ್ರೀಯುತರು ಸ್ವಾಮಿ ಹರ್ಷಾ ನಂದರ ಷಡ್ ದರ್ಶನ ಗ್ರಂಥವನ್ನು ಪರಿಚಿಸಲು ಆರಂಭಿಸಿದ್ದಾರೆ. ವೇದಸುಧೆಯ ಓದುಗರು ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕೆಂದು ಕೋರುವೆ. ವೇದಸುಧೆಯ ಪ್ರೇರಕರಾದ ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು ತಮ್ಮ ಅಭಿಪ್ರಾಯವನ್ನು ತಿಳಿಸಿದರೆ ಉತ್ತಮ. ಓದುಗರು ಮತ್ತು ಲೇಖಕರೊಡನೆ ಒಂದು ವಿಚಾರವನ್ನು ಇಲ್ಲಿ ಹಂಚಿಕೊಳ್ಳಲು ಇಚ್ಚಿಸುವೆ. ಈ ತಾಣದಲ್ಲಿ ಲೇಖಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊ ಬಹುದು. ಹಲವು ಭಾರಿ ಸುಧಾಕರ ಶರ್ಮರ ಚಿಂತನೆಗೂ ಉಳಿದವರ ಚಿಂತನೆಗೂ ಬೇಧ ಇರಲು ಸಾಧ್ಯತೆ ಗಳಿವೆ. ಚಿಂತೆ ಇಲ್ಲ. ಒಟ್ಟಿನಲ್ಲಿ ನಮ್ಮ ಚಿಂತನೆಗಳು ಸಮಾಜಮುಖಿಯಾಗಿದ್ದರೆ ಸಾಕು.
-ಹರಿಹರಪುರ ಶ್ರೀಧರ್
ಸಂಪಾದಕ, ವೇದಸುಧೆ
---------------------------------------------------------------------------------
"ಒಬ್ಬ
ಹಿಂದೂ ಎಲ್ಲಾ ಕಾರ್ಯಗಳನ್ನೂ ಒಳ್ಳೆಯದಿರಲಿ ಅಥವಾ ಕೆಟ್ಟದ್ದಿರಲಿ ಅವನು ಅದನ್ನು ಧಾರ್ಮಿಕವಾಗಿಯೇ
ಮಾಡುತ್ತಾನೆ!" ಎನ್ನುತ್ತಾರೆ ಸ್ವಾಮಿ ವಿವೇಕಾನಂದರು. ಅಂದರೆ ಧರ್ಮವೆನ್ನುವುದು ಅವನ ರಕ್ತದಲ್ಲಿಯೇ
ಇದೆ ಎನ್ನುವುದು ಇದರರ್ಥ.
ಆದರೆ
ಹಿಂದೂ ಧರ್ಮ ಎನ್ನುವುದು ಕೇವಲ ಕೆಲವೊಂದು ಪದ್ಧತಿ ಮತ್ತು ನಂಬಿಕೆಗಳ - ಬಾಹ್ಯಾಚರಣೆಯ ಗೊಡ್ಡು ಕಂತೆಯಲ್ಲ.
ಪ್ರತಿಯೊಂದು ಆಚರಣೆಯ ಹಿನ್ನಲೆಯಲ್ಲಿಯೂ ಸಾವಿರಾರು ವರ್ಷಗಳಿಂದ ಪ್ರಚಲಿತದಲ್ಲಿರುವ ಶ್ರುತಿ ಅಥವಾ
ವೇದಗಳಲ್ಲಿ ಪ್ರತಿಪಾದಿಸಲ್ಪಟ್ಟಿರುವ ಗಹನವಾದ ತತ್ವಗಳ ಭದ್ರ ಬುನಾದಿಯಿದೆ.
ಪ್ರತಿಯೊಬ್ಬ
ಪೌರಾಣಿಕ ಋಷಿ ಹಾಗೂ ತತ್ವಶಾಸ್ತ್ರಜ್ಞನಾದವನು ಅದು ಗೌತಮ ಅಥವಾ ಕಪಿಲನಾಗಲಿ; ಅಥವಾ ಜೈಮಿನಿ ಇಲ್ಲಾ
ಬಾದರಾಯಣ ವ್ಯಾಸನಿರಲಿ - ಇವರೆಲ್ಲರೂ ಕಠಿಣತಮ ತಪಗಳನ್ನಾಚರಿಸಿ ವೇದಗಳ ಆಧಾರದ ಮೇಲೆ ತನಗೆ
"ದರ್ಶನ"ವಾದ ಅಥವಾ ಗೋಚರವಾದ ಸತ್ಯಗಳ ಕುರಿತು ತಮ್ಮ ತಮ್ಮ ತತ್ವಗಳನ್ನು ಭೋದಿಸಿದ್ದು.
ಇವೇ ಹಿಂದೂಗಳೆಲ್ಲರಿಗೂ ಇಂದು ಪರಿಚಯವಿರುವ "ಷಡ್ದರ್ಶನ"ಗಳು ಅಥವಾ ಆರು ದರ್ಶನಗಳು.
ಈ
ಆರು ದರ್ಶನಗಳು ಸತ್ಯಾನ್ವೇಷಣೆಯ ವಿವಿಧ ಮಾರ್ಗಗಳನ್ನು ಅನುಸರಿಸಿದರೂ ಕೂಡ ಅವೆಲ್ಲವುಗಳಲ್ಲಿ ಒಂದು
ಏಕತೆಯಿದೆ ಅದೇನೆಂದರೆ - ಮಾನವನ ಅಂತಿಮ ಗುರಿ ಏನು ಎಂಬುದರ ಕುರಿತಾಗಿ. ಅದು ಮಾನವನನ್ನು ದುಃಖ ಅಥವಾ
ಯಾತನೆಯಿಂದ ಮುಕ್ತಗೊಳಿಸಬೇಕೆನ್ನುವುದು ಮತ್ತು ಅತ್ಯುನ್ನತ ಆನಂದವನ್ನು ಹೊಂದಬೇಕೆಂಬುದು ಹಾಗೂ ಅದನ್ನು
ಹೇಗೆ ಪಡೆಯಬೇಕೆನ್ನುವ ವಿಧಾನವನ್ನು ಕುರಿತಾಗಿದೆ.
ಇದನ್ನೇ ಒಟ್ಟಾರೆಯಾಗಿ ಹೇಳಬೇಕೆಂದರೆ "ಅಂತಿಮ ಸತ್ಯದ ಜ್ಞಾನ" ಅಥವಾ "ತತ್ವಜ್ಞಾನ"ವನ್ನು
ಪಡೆಯಬೇಕೆನ್ನುವುದೇ ಎಲ್ಲ ದರ್ಶನಗಳ ಅಂತಿಮ ಗುರಿಯಾಗಿತ್ತು. ಆದ್ದರಿಂದ ಈ ಅಂತಿಮ ಸತ್ಯದ ದರ್ಶನವೇ
ಹಿಂದೂಗಳ ತತ್ವವೆಂದು ನಾವು ಹೇಳಬಹುದು ಮತ್ತು ಈ ಆರು ವಿಧಾನಗಳು ಅದನ್ನು ಹೊಂದುವ ವಿವಿಧ ಮಾರ್ಗಗಳು
ಎನ್ನಬಹುದು. ಈ ವಿವಿಧ ಮಾರ್ಗಗಳನ್ನು ಮತ್ತು ಅವುಗಳು ಪ್ರತಿಪಾದಿಸಿದ ವಿಧಾನದ ಆಧಾರದಿಂದ ಅವನ್ನು
"ನ್ಯಾಯ ದರ್ಶನ", "ಸಾಂಖ್ಯ ದರ್ಶನ" ಮುಂತಾದವುಗಳಾಗಿ ಕರೆಯಬಹುದು.
ಡಾ!
ಸರ್ವೇಪಲ್ಲಿ ರಾಧಾಕೃಷ್ಣನ್, ಸುರೇಂದ್ರನಾಥ್ ದಾಸ್ಗುಪ್ತ ಮತ್ತು ಎಂ. ಹಿರಿಯಣ್ಣನಂತಹ ಹಲವಾರು ಮೇಧಾವಿಗಳು
ಮತ್ತು ಹೆಚ್ಚು ಪರಿಚಿತರಲ್ಲದ ಆದರೆ ಪ್ರಬುದ್ಧರಾಗಿರುವ ಹಲವಾರು ಪಂಡಿತರು "ಷಡ್ದರ್ಶನ"ಗಳು
ಅಥವಾ ಆರು ದರ್ಶನಗಳ ಕುರಿತಾಗಿ ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಆದರೆ ಅವೆಲ್ಲವುಗಳೂ ವಿಶ್ವವಿದ್ಯಾಲಯಗಳಲ್ಲಿ
ಸಂಶೋಧನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅಥವಾ ತತ್ವಶಾಸ್ತ್ರವನ್ನು ಆಳವಾಗಿ ತಿಳಿದುಕೊಳ್ಳಬೇಕೆನ್ನುವವರಾಗಿ
ಮೀಸಲಾಗಿವೆ.
ಈ
ಕಿರುಹೊತ್ತಿಗೆಯು ಮೂಲಭೂತವಾಗಿ ಹೆಚ್ಚು ಓದಿಲ್ಲದ ಆದರೆ "ಷಡ್ದರ್ಶನ"ಗಳ ಕುರಿತಾಗಿ ಸಾಮಾನ್ಯ
ತಿಳುವಳಿಕೆಯನ್ನು ಹೊಂದಲು ಬಯಸುವ ಜನಸಾಮನ್ಯನಿಗಾಗಿ ಬರೆಯಲ್ಪಟ್ಟಿದೆ. ಅವನಿಗೆ ಈ ಪುಸ್ತಕ ಹಿಡಿಸಿದರೆ
ನಾವು ಕೃತಾರ್ಥರಾದಂತೆ.
-ಸ್ವಾಮಿ
ಹರ್ಷಾನಂದ
-ಶ್ರೀಧರ್ ಭಂಡ್ರಿ
Subscribe to:
Posts (Atom)



