Pages

Wednesday, September 24, 2014

ವೇದಮಂತ್ರ ಪಠಣ

           ವೇದಮಂತ್ರಗಳನ್ನು ಇಂತಾ ಮಹಾತ್ಮರ ಕಂಠದಿಂದ ಕೇಳಲು ಬಲು ಹಿತವಾಗುತ್ತೆ. ನಮ್ಮ "ವೇದಭಾರತಿಯ" "ಎಲ್ಲರಿಗಾಗಿ ವೇದ" ಎಂಬ ಧ್ಯೇಯವನ್ನು ಕೇಳಿದ ಹಲವರು "ಇದು ಸಾಧ್ಯವೇ?" ವೇದಾಭ್ಯಾಸ  ಮಾಡಲು  ಎಷ್ಟು ಅರ್ಹತೆಗಳು ಬೇಕು!! ಇದೆಲ್ಲಾ ಶಾಸ್ತ್ರೋಕ್ತವಾಗಿ ಒಂದೆರಡು ದಶಕಗಳು ಕಲಿತಿರುವ ಗುರುಮುಖೇನ ಮಾಡಬೇಕಾದ್ದು ಎಂಬ ಅಭಿಪ್ರಾಅಯವನ್ನು ಪ್ರೀತಿಯಿಂದಲೇ ವ್ಯಕ್ತ ಪಡಿಸುತ್ತಾರೆ. ನನಗೂ ಹೌದೆನಿಸುತ್ತದೆ.ಆದರೆ ವೇದಭಾರತಿಯ ಪ್ರಯತ್ನವೇನೆಂದರೆ  "ಸಾಮಾನ್ಯ ಜನರಿಗೂ ವೇದದ ಅರಿವು ಮೂಡಿಸುವುದು" ಇದರರ್ಥ ವೇದಮಂತ್ರವನ್ನು ಕಲಿಸಬೇಕೆಂದಲ್ಲ. ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳದವರು ವೇದಭಾರತಿಯಿಂದ ವೇದಮಂತ್ರವನ್ನು ಕಲಿಸಿಕೊಡಿ ಎಂದು ದಂಬಾಲು ಬೀಳುತ್ತಾರೆ. ನಮ್ಮ ಪ್ರಯತ್ನದಲ್ಲಿ ಗುರು ಮುಖೇನವೇ ಸಾಮಾನ್ಯವಾಗಿ ಮಾಡುವಂತಹ "ದೈನಂದಿನ ಅಗ್ನಿಹೋತ್ರ " ಮತ್ತು ಅದರೊಟ್ಟಿಗೆ ಕೆಲವು ಸರಳವಾದ ಸೂಕ್ತಗಳನ್ನು   ಕಲಿಸಿಕೊಡಲಾಗುತ್ತಿದೆ. ನಮ್ಮ ಪ್ರಮುಖ ಉದ್ದೇಶವೇ  ಮನುಷ್ಯನ ನೆಮ್ಮದಿಯ ಆರೋಗ್ಯಕರವಾದ ಬದುಕಿಗಾಗಿ ವೇದದ ಮಾರ್ಗದರ್ಶನದ ಅರಿವು ಮೂಡಿಸುವುದಾಗಿದೆ. ಅದರರ್ಥ ಪರಂಪರೆಯಿಂದ ಬಂದಿರುವ ಇಂತಹ ಪಂಡಿತರಿಗೆ ಇದು ಪರ್ಯಾಯವಲ್ಲ. ಇಂತಾ ಘನಕಾರ್ಯ ಯಾವಾಗಲೂ ಇನ್ನೂ ಹೆಚ್ಚು ಮುಂದುವರೆಯಬೇಕು



ವೇದಸುಧೆಯ ನಿರ್ವಹಣಾ ತಂಡಕ್ಕೆ ಸೇರ್ಪಡೆ


 ವೇದಸುಧೆಯ ಆತ್ಮೀಯ ಅಭಿಮಾನಿಗಳೇ,

          ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಪ್ರೇರಣೆಯಿಂದ ಆರಂಭವಾದ "ವೇದಸುಧೆ"ಯಲ್ಲಿ ಶ್ರೀ ಶರ್ಮರ ಉಪನ್ಯಾಸಗಳು,ಲೇಖನಗಳು,ವೀಡಿಯೋಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಪ್ರಕಟಿಸಲಾಗಿದೆ. ಸಧ್ಯಕ್ಕೆ ಶರ್ಮರ ಅನಾರೋಗ್ಯದಿಂದ ಅವರ ಲೇಖನಗಳನ್ನು  ಹೆಚ್ಚು  ಪ್ರಕಟಿಸಲು ಸಾಧ್ಯವಾಗಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಪ್ರತೀ ವರ್ಷವೂ  ಓದುಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಈಗಾಗಲೇ ಓದುಗರ ಸಂಖ್ಯೆಯು ಒಂದು ಲಕ್ಷವನ್ನು ದಾಟಿ 1,35,000 ಪುಟಗಳ ವೀಕ್ಷಣೆಯಾಗಿದೆ ಎಂದು ತಿಳಿಸಲು ಹರ್ಷವಾಗುತ್ತದೆ. ಕಳೆದೆರಡು ವರ್ಷದಿಂದ ಪತ್ರಿಕೆಗಳಲ್ಲಿಯೂ ಸಾಮಾನ್ಯಜನರಿಗೆ ವೇದದ ಅರಿವು ಮೂಡಿಸುವ ಪ್ರಯತ್ನವಾಗಿ  ರಾಜ್ಯಮಟ್ಟದ ವಾರ ಪತ್ರಿಕೆಯಾದ " ವಿಕ್ರಮದಲ್ಲಿ "   "ಜೀವನವೇದ" ಎಂಬ ಅಂಕಣವನ್ನು ಬರೆಯಲಾಗುತ್ತಿದೆಯಲ್ಲದೆ ಹಾಸನದ ಸ್ಥಳೀಯ ಪತ್ರಿಕೆಗಳಾದ  "ಜನಮಿತ್ರ" ಮತ್ತು ಜನಹಿತ" ಪತ್ರಿಕೆಗಳ ಲ್ಲಿಯೂ ಪ್ರತೀ ವಾರ   ಅಂಕಣಗಳನ್ನು   ಬರೆಯಲಾಗುತ್ತಿದೆ. ಜೊತೆಗೆ ವೇದಭಾರತಿಯ ಹೆಸರಲ್ಲಿ ನಿತ್ಯವೂ ಅಗ್ನಿಹೋತ್ರ ಮತ್ತು ಸತ್ಸಂಗ ,ಪ್ರತೀ ಬುಧವಾರ ವಿಶೆಷ ಸತ್ಸಂಗದಲ್ಲಿ ಉಪನ್ಯಾಸಗಳ ಯೋಜನೆ, ಪ್ರತೀ ವಾರ ವೇದ ಪಾಠ ,ಅಲ್ಲದೆ  ಆಗಿಂದಾಗ್ಗೆ  ವಿಶೇಷ ಉಪನ್ಯಾಸಕಾರ್ಯಕ್ರಮಗಳನ್ನು  ನಡೆಸಲಾಗುತ್ತಿದೆ. ಈ ಎಲ್ಲಾ  ಕೆಲಸಗಳ  ಒತ್ತಡದಲ್ಲಿ  ವೇದಸುಧೆಯ ನಿರ್ವಹಣೆ ಸ್ವಲ್ಪ ಕಷ್ಟವಾಗಿತ್ತು. ಅದಕ್ಕಾಗಿ ಓದುಗರ ಸಹಕಾರವನ್ನು ಅಪೇಕ್ಷಿಸಿದ್ದೆವು. ಅದರಂತೆ  ವೇದಾಭಿಮಾನಿಗಳಾದ ಶ್ರೀಮತಿ ಪ್ರಿಯಾಭಟ್ ಅವರು ವೇದಸುಧೆಯನ್ನು ಅಚ್ಚುಕಟ್ಟಾಗಿಡಲು ಸಹಕರಿಸುವುದಾಗಿ ಒಪ್ಪಿ ಕೆಲಸವನ್ನು ಆರಂಭಿಸಿದ್ದಾರೆ. ಈಗಾಗಲೇ   ನಮ್ಮ ಗುಂಪಿನಲ್ಲಿ ಶ್ರೀಮತಿ ಪ್ರಿಯಾಭಟ್ ಅವರು ವೇದಸುಧೆಯ ನಿರ್ವಹಣೆಯಲ್ಲಿ ತಮ್ಮ ಯೋಗದಾನವನ್ನು ನೀಡಲು ಆರಂಭಿಸಿದ್ದಾರೆಂದು ತಿಳಿಸಲು ಹರ್ಷಿಸುತ್ತಾ ವೇದಸುಧೆಯ ಎಲ್ಲಾ ಆತ್ಮೀಯ ಅಭಿಮಾನಗಳ ಪರವಾಗಿ ಅವರನ್ನು ವೇದಸುಧೆಯ ನಿರ್ವಹಣಾ  ತಂಡಕ್ಕೆ    ಆಹ್ವಾನಿಸುತ್ತೇನೆ

-ಹರಿಹರಪುರಶ್ರೀಧರ್
 ಸಂಪಾದಕ

Thursday, September 18, 2014

ವೇದ ಭಾರತೀ,ಹಾಸನ : ಸಾಮೂಹಿಕ ಅಗ್ನಿಹೋತ್ರ

ವೇದ ಭಾರತೀ,ಹಾಸನ : ಸಾಮೂಹಿಕ ಅಗ್ನಿಹೋತ್ರ: ಹಾಸನ ವೇದಭಾರತಿಯು ನಡೆಸುವ ನಿತ್ಯ ಸತ್ಸಂಗ ಹುಬ್ಬಳ್ಳಿಯ ಪೂಜ್ಯ ಸ್ವಾಮಿ ಚಿದ್ರೂಪಾನಂದರ ಕನಸು-ಸಾವಿರ ದಂಪತಿಗಳಿಂದ ಸಾಮೂಹಿಕ ಅಗ್ನಿಹೋತ್ರ ಬೃಹತ್ ಕ...

ಹಾಸನ ವೇದಭಾರತೀ ಸತ್ಸಂಗದಲ್ಲಿ ಸಾಹಿತಿ ಬೆಳವಾಡಿ ಅಶ್ವತ್ಥನಾರಾಯಣ್ ಉಪನ್ಯಾಸದ ಆಡಿಯೋ ಕೇಳಿ









Monday, September 15, 2014

ನನ್ನ ಬಾಯಲ್ಲಿ ಮಧುರವಾದ ಮಾತುಗಳೇ ಹೊರಬರಲಿ

ಅಥರ್ವ ವೇದದದ ೧೨ನೇ ಕಾಂಡದ ಮೊದಲನೇ ಸೂಕ್ತದ ೫೮ನೇ ಮಂತ್ರದಲ್ಲಿ ಈ ಬಗ್ಗೆ ಏನು ಹೇಳಿದೆ, ವಿಚಾರ ಮಾಡೋಣ.

ಯದ್ ವದಾಮಿ ಮಧುಮತ್ ತದ್ ವದಾಮಿ ಯದೀಕ್ಷೇ ತದ್ ವನಂತಿ ಮಾ| ತ್ವಿಷೀಮಾನಸ್ಮಿ ಜೂತಿಮಾನವಾನ್ಯಾನ್ ಹನ್ಮಿ ದೋಧತಃ ||

ಅನ್ವಯ:
ಯದ್ ವದಾಮಿ = ಯಾವಾಗ ನುಡಿಯುತ್ತೀನೋ
ತತ್ ಮಧುವತ್ ವದಾಮಿ = ಆಗೆಲ್ಲಾ ಮಧುರವಾದ ಸುಂದರವಾದ ಮಾತನ್ನೇಆಡುತ್ತೇನೆ
ಯತ್ ಈಕ್ಷೇ = ಯಾವಾಗ ನೋಡುತ್ತೇನೋ
ತತ್ ಮಾ ವನಂತಿ = ಆಗೆಲ್ಲಾ ಜನರು ನನ್ನನ್ನು ಪ್ರೀತಿಯಿಂದಲೇ ಕಾಣಲಿ
ತ್ವಿಷೀಮಾನ್ = ಆಕರ್ಷಣೀಯನೂ
ಜೂತಿಮಾನ್ = ಪ್ರೀತನೂ
ಅಸ್ಮಿ = ಆಗಿದ್ದೇನೆ
ದೋಧತಃ ಅನ್ಯಾನ್ ಅವಹನ್ಮಿ = ನನ್ನನ್ನು ಪೀಡಿಸುವವರನ್ನು ನಾನು ಸೆದೆಬಡೆದುಹಾಕುತ್ತೇನೆ

ಭಾವಾರ್ಥ:
ನಾನು ಮಾತನಾಡುವಾಗಲೆಲ್ಲಾ ನನ್ನ ಬಾಯಲ್ಲಿ ಮಧುರವಾದ ಮಾತುಗಳೇ ಹೊರಬರಲಿ.ನಾನು ನೋಡುವಾಗಲೆಲ್ಲಾ ಜನರು ನನ್ನನ್ನು ಪ್ರೀತಿಯಿಂದಲೇ ಕಾಣುವಂತಾಗಲಿ.ಎಲ್ಲರಿಗೂ ಆಕರ್ಷಣೀಯನೂ, ಪ್ರೀತನೂ ಆದ ನನ್ನನ್ನು ಪೀಡಿಸುವವರನ್ನು ನಾನು ಸದೆಬಡಿಯುವಂತಾಗಲಿ.

ವೇದಭಾರತಿಯ ವಿಶೇಷ ಸತ್ಸಂಗ