///// ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ ////// ಕೃಣ್ವಂತೋ ವಿಶ್ವಮಾರ್ಯಂ //// //// ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ /////
Wednesday, October 22, 2014
Saturday, October 18, 2014
ವ್ರತ ಎಂತರೇನು? - ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರ ಪ್ರವಚನ
ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಅನಾರೋಗ್ಯ ಸ್ಥಿತಿಯಲ್ಲೂ ನಮ್ಮಂತವರು ಹೋದರೆ ಮಾತನಾಡಿಸದೇ ಸುಮ್ಮನಿರಲು ಅವರಿಂದ ಸಾಧ್ಯವಿಲ್ಲ. ಮೊನ್ನೆ ಶರ್ಮರನ್ನು ಅವರ ಮನೆಯಲ್ಲಿ ಭೇಟಿಯಾಗಿದ್ದೆ. ಹಾಸನದ ವೇದಭಾರತಿಯ ಚಟುವಟಿಕೆಗಳು, ವೇದದ ಬಗ್ಗೆ ನನ್ನ ಪತ್ರಿಕಾ ಅಂಕಣಗಳು, ವೇದಭಾರತಿಯು ಸಹಕಾರದೊಡನೆ ಪೂಜ್ಯ ಚಿದ್ರೂಪಾನಂದ ಸರಸ್ವತೀ ಸ್ವಾಮೀಜಿ ಮಲಗುಂದದಲ್ಲಿ ಹಮ್ಮಿಕೊಂಡಿರುವ ಸಾವಿರ ದಂಪತಿಗಳ ಸಾಮೂಹಿಕ ಅಗ್ನಿಹೋತ್ರ ಕಾರ್ಯಕ್ರಮದ ಬಗ್ಗೆ ವಿವರ ತಿಳಿದುಕೊಂಡರು. ಹಲವಾರು ತಿಂಗಳುಗಳಿಂದ ಶರ್ಮರ ಮಾತನ್ನು ನಮ್ಮ ವೇದಸುಧೆಯ ಅಭಿಮಾನಿಗಳಿಗೆ ಕೇಳಿಸಲಾಗಿಲ್ಲವಲ್ಲಾ! ಎಂಬ ನೋವು ನನ್ನನ್ನು ಕಾಡಿತ್ತು. ಒಂದೈದು ನಿಮಿಷದ ಆಡಿಯೋ ಆದರೂ ರೆಕಾರ್ಡ್ ಮಾಡಿಕೊಳ್ಳಲು ನಿರ್ಧರಿಸಿದೆ. ಬರೋಬ್ಬರಿ ಇಪ್ಪತ್ತು ನಿಮಿಷಗಳ ಕಾಲ ಕ್ಷೀಣ ಧ್ವನಿಯಲ್ಲಿ ವೇದದ ಗಟ್ಟಿ ವಿಚಾರ ತಿಳಿಸಿದರು. ರೆಕಾರ್ಡ್ ಮಾಡಿಕೊಂಡೆ. ಅದರ ಮಾರನೇ ದಿನವೇ ಆರೋಗ್ಯ ಬಿಗಡಾಯಿಸಿ ಮತ್ತೆ ದಿಢೀರನೆ ಒಂದು ದಿನ ವೈದ್ಯರ ಮೇಲ್ವಿಚಾರಣೆಯಲ್ಲಿರಬೇಕಾದ ಸ್ಥಿತಿ! ಭಗವಂತನು ಶರ್ಮರ ಆರೋಗ್ಯ ಸುಧಾರಿಸಬೇಕು.ಅವರಿಂದ ವೇದದ ಕೆಲಸ ಸಾಕಷ್ಟು ಆಗಬೇಕಿದೆ..ಅವರ ಈ ಆಡಿಯೋ ಕೇಳಿ.
- ನಿತ್ಯನಿರಂತರ ಆಚರಣೆ
- ವ್ರತಗಳು ಐದು
- ಅಹಿಂಸೆ : ಯಾರಿಗೂ ನೋವಾಗದಂತಹ ನಮ್ಮ ವರ್ತನೆ
- ಸತ್ಯ : ಇದ್ದದ್ದನ್ನು ಇದ್ದಹಾಗೆ ಅರ್ಥಮಾಡಿಕೊಂಡು ಅದರಂತೆ ನಡೆಯುವುದು
- ಅಸ್ತೇಯ : ಕದಿಯದಿರುವುದು
- ಬ್ರಹ್ಮಚರ್ಯ : ಜ್ಞಾನ ಸಂಪಾದನೆ
- ಅಪರಿಗ್ರಹ : ಅನವಶ್ಯಕವಾಗಿ ಇನ್ನೊಬ್ಬರಿಂದ ದಾನ ಸ್ವೀಕರಿಸದಿರುವುದು
Saturday, October 4, 2014
ಕೇರಳಾಪುರದಲ್ಲಿ ಹಾಸನ ವೇದಭಾರತಿಯ ಸದಸ್ಯರಿಂದ ಅಗ್ನಿಹೋತ್ರ ಮತ್ತು "ಎಲ್ಲರಿಗಾಗಿವೇದ" ಪರಿಚಯ ಕಾರ್ಯಕ್ರಮ
ಹಾಸನಜಿಲ್ಲೆಯ ಗಡಿಭಾಗದಲ್ಲಿರುವ ಕೇರಳಾಪುರದಲ್ಲಿನ ವೇದಾಭಿಮಾನಿಗಳ ಆಹ್ವಾನದ ಮೇಲೆ ಅಗ್ನಿಹೋತ್ರ ಮಾಡಲು ಹೋಗುವಾಗ ಮಾರ್ಗ ಮಧ್ಯೆ ಜಪ್ಯೇಶ್ವರ ದೇವಾಲಯಕ್ಕೆ [ಜಪದ ಕಟ್ಟೆ] ಗೆ ಹಾಸನ ವೇದಭಾರತಿಯ ಸದಸ್ಯರು ಭೇಟಿನೀಡಿದಾಗ
ಕೇರಳಾಪುರ ದೇವಾಲಯದಲ್ಲಿ ನಡೆದ ಅಗ್ನಿಹೋತ್ರ ಕಾರ್ಯಕ್ರಮದ ದೃಶ್ಯಗಳು
ದೇವಾಲಯ ಭಕ್ತರಿಂದ ತುಂಬಿದ್ದು ಕಾರ್ಯಕ್ರಮವು ಅತ್ಯಂತ ಯಶಸ್ಸು ಪಡೆಯಿತು. ಚಿತ್ರೀಕರಣ ಮಾಡಲು ಬೆಳಕಿನ ಅಡ್ದಿಯಿಂದ ಚಿತ್ರಗಳು ಸುಂದರವಾಗಿ ಮೂಡಿಬಂದಿಲ್ಲ.
ಕೇರಳಾಪುರ ದೇವಾಲಯದಲ್ಲಿ ನಡೆದ ಅಗ್ನಿಹೋತ್ರ ಕಾರ್ಯಕ್ರಮದ ದೃಶ್ಯಗಳು
ದೇವಾಲಯ ಭಕ್ತರಿಂದ ತುಂಬಿದ್ದು ಕಾರ್ಯಕ್ರಮವು ಅತ್ಯಂತ ಯಶಸ್ಸು ಪಡೆಯಿತು. ಚಿತ್ರೀಕರಣ ಮಾಡಲು ಬೆಳಕಿನ ಅಡ್ದಿಯಿಂದ ಚಿತ್ರಗಳು ಸುಂದರವಾಗಿ ಮೂಡಿಬಂದಿಲ್ಲ.
Friday, October 3, 2014
ಜೀವನವೇದ-12
ವೇದಸುಧೆಯ ಆತ್ಮೀಯ ಅಭಿಮಾನಿಗಳೇ ,
ನಮಸ್ಕಾರಗಳು.
ಇದು ಜೀವನವೇದ ಸರಣಿಯ ಹನ್ನೆರಡನೆಯ ಕಂತು. ಲೇಖನವನ್ನು ಓದುವ ಮುಂಚೆ ನನ್ನದೊಂದು ಮನವಿ. ಬ್ಲಾಗ್ ನ ಮುಖ ಪುಟದಲ್ಲಿ ಸಂಪಾದಕರನ್ನು ಸಂಪರ್ಕಿಸಲು ಒಂದು ಕಾಂಟಾಕ್ಟ್ ಕಾಲಮ್ ಇದೆ.ಸಾಮಾನ್ಯವಾಗಿ ಓದುಗರು ಲೇಖನಗಳ ಬಗ್ಗೆ ತಮ್ಮ ಅಭಿಪ್ರಾಯವನ್ನೂ ಕೂಡ ಅಲ್ಲೇ ಬರೆಯುತ್ತಾರೆ. ಹಾಗೆ ಬರೆದಾಗ ಅದು ಸಂಪಾದಕರಿಗೆ ನೇರವಾಗಿ ಮೇಲ್ ತಲುಪುತ್ತದೆ. ಅದರಲ್ಲಿ " ಈ ಲೇಖನ ತುಂಬಾ ಅರ್ಥಪೂರ್ಣವಾಗಿದೆ" ಎಂದು ಬರೆದರೆ ಸಂಪಾದಕರಿಗೆ ಈ ಅಭಿಪ್ರಾಯವು ಯಾವ ಲೇಖನದ ಬಗ್ಗೆ ಎಂದು ತಿಳಿಯುವುದಿಲ್ಲ. ಆಯಾ ಲೇಖನಗಳ ಕೆಳಗೆ ಇರುವ ಕಾಮೆಂಟ್ ಕಾಲಮ್ ನಲ್ಲಿ ಬರೆದಾಗ ಅದು ಬ್ಲಾಗ್ ನಲ್ಲಿ ಪ್ರಕಟವಾಗಿ ಎಲ್ಲರೂ ಅದನ್ನು ಓದಬಹುದಾಗಿರುತ್ತದೆ.ಅಲ್ಲದೆ ಬೇರೆ ಓದುಗರೂ ಕೂ ತಮ್ಮ ಅಭಿಪ್ರಾಯವನ್ನು ತಿಳಿಸಲು ಅದು ನೆರವಾಗುತ್ತದೆ.
ಬ್ಲಾಗ್ ವಿಚಾರದಲ್ಲಿ ಏನಾದರೂ ನೀವು ಸಲಹೆ ಕೊಡುವುದಿದ್ದರೆ ಮಾತ್ರ ಪಕ್ಕದಲ್ಲಿ ಪ್ರತ್ಯೇಕವಾಗಿ ಇರುವ ಕಾಂಟ್ಯಾಕ್ಟ್ ಫಾರಮ್ ನಲ್ಲಿ ಬರೆಯುವುದು ಸೂಕ್ತ. ಇನ್ನು ಇಂದಿನ ಸರಣಿಯನ್ನು ಓದಲು ಆರಂಭಿಸಬಹುದು.
ನಮಸ್ತೆ
-ಹರಿಹರಪುರಶ್ರೀಧರ್
ಸಂಪಾದಕ
-----------------------------------------------------------------------------------------------------
ಸುಖೀ ರಾಜ್ಯಕ್ಕಾಗಿ ರಾಜ ಮತ್ತು ಪ್ರಜೆಯ ಕರ್ತವ್ಯವೇನು?
ರಾಜ್ಯಭಾರ ಮಾಡುವವರು ಹೇಗಿರಬೇಕೆಂಬುದನ್ನು ವೇದವು ಹಲವು ಮಂತ್ರಗಳಲ್ಲಿ ತಿಳಿಸಿದೆ. ರಾಜನ ಜೊತೆಜೊತೆಗೇ ಪ್ರಜೆಯ ಕರ್ತವ್ಯವೂ ಇದೆ, ಎಂಬುದನ್ನೂ ವೇದವು ಮನದಟ್ಟು ಮಾಡುತ್ತದೆ. ಈ ಬಗ್ಗೆ ಇಂದು ವಿಚಾರ ಮಾಡೋಣ.
ತ್ರೀಣೀ ರಾಜಾನಾ ವಿದಥೇ ಪುರೂಣಿ ಪರಿ ವಿಶ್ವಾನಿ ಭೂಷಥಃ ಸದಾಂಸಿ |
ಅಪಶ್ಯಮತ್ರ ಮನಸಾ ಜಗನ್ವಾನ್ ವ್ರತೇ ಗಂಧರ್ವಾ ಅಪಿ ವಾಯುಕೇಶಾನ್ ||
[ಋಕ್. ೩.೩೮.೬]
ಅನ್ವಯಾರ್ಥ :
ರಾಜಾನಾ = ರಾಜ ಮತ್ತು ಪ್ರಜೆಗಳೇ
ವೃತೇ = ಸತ್ಯವಾದ
ಗಂಧರ್ವಾನ್ = ಸುಶಿಕ್ಷಿತ ವಾಣಿಯನ್ನು
ವಾಯುಕೇಶಾನ್ = ವಾಯುವಿನಂತೆ ವೇಗ ಗತಿ ಹೊಂದಿರುವ ಉತ್ತಮ ಪುರುಷರನ್ನು
ಮನಸಾ = ವಿಜ್ಞಾನದೊಂದಿಗೆ
ಜಗನ್ವಾನ್ = ಪಡೆದುಕೊಂಡಿರುವ
ಅಪಶ್ಯಮ್ = ನಿನ್ನನ್ನು ನಾನು ನೋಡುವೆನು
ತ್ರೀಣಿ ಸದಾಂಸಿ = ಮೂರು ರೀತಿಯ ಸಭೆಗಳನ್ನು ನಿಶ್ಚಿತಗೊಳಿಸಿ
ವಿಧಥೇ = ಜ್ಞಾನಕಾರಕ ವ್ಯವಹಾರಗಳಲ್ಲಿ
ಪುರೂಣಿ = ಬಹಳಷ್ಟು
ವಿಶ್ವಾನಿ = ಸಮಗ್ರ ವ್ಯವಹಾರಗಳನ್ನು
ಪರಿಭೂಷಥ: = ಪರಿಪೂರ್ಣಗೊಳ್ಳುವಂತೆ ಮಾಡಿರಿ
ಭಾವಾರ್ಥ:
ಪ್ರಜೆಗಳೇ, ನೀವು ಉತ್ತಮ ಗುಣಕರ್ಮ ಸ್ವಭಾವದವರಾಗಿ ಯಥಾರ್ಥವನ್ನು ನುಡಿಯುವ ಪ್ರತಿನಿಧಿಗಳಿರುವಂತಹ ರಾಜಸಭೆ, ವಿದ್ಯಾಸಭೆ ಮತ್ತು ಧರ್ಮಸಭೆ ಎಂಬ ಮೂರು ರೀತಿಯ ಸಂಸತ್ತನ್ನು ರಚಿಸಿಕೊಂಡು ರಾಜ್ಯಕ್ಕೆ ಸಂಬಂಧಿಸಿದ ಸಮಗ್ರ ಕರ್ಮಗಳನ್ನು ಯೋಗ್ಯ ರೀತಿಯಲ್ಲಿ ಮಾಡುವವರಾಗಿರಿ. ಅದರಿಂದ ನಿಮಗೂ ಮತ್ತು ರಾಜ್ಯಕ್ಕೂ ಅತಿಶಯ ಸುಖವು ಲಭಿಸುತ್ತದೆ.
ಈ ವೇದ ಮಂತ್ರವನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟವೇನಿಲ್ಲ. ಅತ್ಯಂತ ಸರಳ ವಾಗಿದೆ.ವೇದವು ಎಲ್ಲಾ ಕಾಲಕ್ಕೂ ಪ್ರಸ್ತುತವೆಂಬುದನ್ನು ನಾವು ಈ ಮಂತ್ರದಿಂದ ಕಾಣಬಹುದಾಗಿದೆ. ಈ ಮಂತ್ರವು ಏನು ಕರೆ ಕೊಡುತ್ತದೆ?...
ಪ್ರಜೆಗಳೇ, ನೀವು ಉತ್ತಮ ಗುಣಕರ್ಮ ಸ್ವಭಾವದವರಾಗಿ ಪ್ರಜಾಪ್ರಭುಗಳಾದ ನಮ್ಮ ಯೋಗ್ಯತೆ ಬಗ್ಗೆ ನಾವೀಗ ಯೋಚಿಸಬೇಕು.ಪ್ರಜೆಗಳು ಉತ್ತಮ ಗುಣ ಕರ್ಮ ಸ್ವಭಾವದವರಾದರೆ ಅವರಿಗೆ ತಕ್ಕನಾದ ಸರ್ಕಾರವನ್ನು ಚುನಾಯಿಸುತ್ತಾರೆ. ಆದರೆ ಈಗ ನಡೆದಿರುವುದೆಲ್ಲಾ ಪ್ರಜಾಪ್ರಭುತ್ವದ ನಗೆಪಾಟಲಲ್ಲವೇ? ನಿಜವಾಗಿ ಭಾರತದ ಒಬ್ಬ ಪ್ರಜೆ ತನ್ನ ಕರ್ತವ್ಯದ, ತನ್ನ ಸ್ವಭಾವ, ತನ್ನ ಗುಣದ ಬಗ್ಗೆ ಯೋಚಿಸಿದ್ದಾನೆಯೇ? ಸಭ್ಯ ನಾಗರೀಕನೆನಿಸಿಕೊಂಡವರು ಬಹಳಷ್ಟು ಜನ ಚುನಾವಣೆ ಸಂದರ್ಭದಲ್ಲಿ ಮತಕೇಂದ್ರಗಳಿಗೆ ಹೋಗದೆ ಟಿ.ವಿ. ಮುಂದೆ ಕುಳಿತು “ ದೇಶದ ರಾಜಕಾರಣವನ್ನು” ಮಾತನಾಡುವುದನ್ನು ನಾವು ನೋಡಿಲ್ಲವೇ? ದೇಶಕ್ಕೆ ಇಂತಹ ಸರ್ಕಾರ ಬರಬೇಕೆಂದು ಅಪೇಕ್ಷಿಸುವುದಕ್ಕೆ ಇಂತವರಿಗೆ ಯಾವ ನೈತಿಕ ಹಕ್ಕಿದೆ?
ಚುನಾವಣೆಯ ದಿನ ೭೦% ಮತ ಚಲಾಯಿಸಿದರೆ ಅದು ಅತ್ಯಂತ ಹೆಚ್ಚಿನ ಮತದಾನ ಎಂದು ಹೇಳಬಹುದು. ಉಳಿದ ೩೦% ಜನರಲ್ಲಿ ವಿದ್ಯಾವಂತರೇ ಹೆಚ್ಚೆಂಬುದು ಸರಿಯಾಗಿ ಸರ್ವೇ ಮಾಡಿದರೆ ಗೊತ್ತಾಗುತ್ತದೆ. ಸಾಮಾನ್ಯವಾಗಿ ಕೂಲಿ ಕಾರ್ಮಿಕರು, ಅವಿದ್ಯಾವಂತರು, ಶ್ರಮಿಕರು ಪ್ರತಿಶತ ಹೆಚ್ಚು ಮತ ಚಲಾಯಿಸುತ್ತಾರೆ. ದುರ್ದೈವವೆಂದರೆ ಅವರಿಗೆ ದೇಶಕ್ಕೆ ಒಳ್ಳೆಯದು ಮಾಡುವವರಾರು? ದೇಶದ ಸಂಪತ್ತನ್ನು ಲೂಟಿಹೊಡೆಯುವವರಾರು? ಎಂಬ ಅರಿವಿರುವುದಿಲ್ಲ. ಇಂತವರಲ್ಲಿ ಸಾಮಾನ್ಯವಾಗಿ ಯಾವುದಾದರೂ ಪ್ರಲೋಭನೆಗೆ ಒಳಗಾಗಿ ಮತ ಚಲಾಯಿಸುವವರೇ ಹೆಚ್ಚು. ಮತದಾರರನ್ನು ಜಾಗೃತಿ ಮಾಡುವವರಾರು?
ಪ್ರಜ್ಞಾವಂತ ಮತದಾರರು ವೇದದ ಆದೇಶದಂತೆ ಯಥಾರ್ಥವನ್ನು ನುಡಿಯುವ ಪ್ರತಿನಿಧಿಗಳಿರುವಂತಹ ಸರ್ಕಾರವನ್ನು ಆರಿಸಿದರೆ ಆ ಸರ್ಕಾರದಲ್ಲಿ ರಾಜಸಭೆ, ವಿದ್ಯಾಸಭೆ ಮತ್ತು ಧರ್ಮ ಸಭೆ ಎಂಬ ಮೂರುಮುಖ್ಯ ಅಂಗಗಳಲ್ಲಿ ವೇದದ ಆಶಯ ಏನಿದೆಯೋ ಅದರಂತೆ ಒಳ್ಳೆಯ ಆಡಳಿತ ಕೊಡಲು ಸಾಧ್ಯವಾಗಲಾರದೇ?
ರಾಜನಾದವನು ಹೇಗಿರಬೇಕೆಂಬುದನ್ನು ಮುಂದಿನ ಮಂತ್ರದಲ್ಲಿ ತಿಳಿಸಲಾಗಿದೆ.
ತದಿನ್ನ್ವಸ್ಯ ವೃಷಭಸ್ಯ ಧೇನೋ-ರಾ ನಾಮಭಿರ್ಮಮಿರೇ ಸಮ್ಯಕಂ ಗೋಃ |
ಅನ್ಯದನ್ಯದಸುರ್ಯಂ ವಸಾನಾ ನಿ ಮಾಯಿನೋ ಮಮಿರೇ ರೂಪಮಸ್ಮಿನ್ ||
[ಋಕ್. ೩.೩೮.೭]
ಅನ್ವಯಾರ್ಥ :
ಅಸ್ಯ ವೃಷಭಸ್ಯ = ಈ ಬಲಿಷ್ಟ ಮನುಷ್ಯನ
ಧೇನೋಃ= ನುಡಿಯ
ನಾಮಭಿಃ = ಹೆಸರುಗಳಿಂದ
ನು ಆ ಮಿಮಿರೇ = ಬೇಗ ಬೇಗನೇ ಅಳೆಯುವವರಾಗಿರಿ
ತತ್ = ಅದನ್ನು
ಸಮ್ಯಕ್ = ಸಂಯೋಜನಗೊಳಿಸುವುದರ ಮೂಲಕ ಉತ್ಪನ್ನವಾದ
ಗೋಃ = ಮಾತಿನಿಂದ
ಅನ್ಯದನ್ಯತ್ = ಪ್ರತ್ಯೇಕಪ್ರತ್ಯೇಕವಾಗಿರುವ
ಅಸುರ್ಯಂ = ಮೇಘದ ಸ್ವತ್ತನ್ನು
ವಸಾನಾಃ = ಮರೆಮಾಡುತ್ತಾ
ಮಾಯಿನಃ = ಬುದ್ಧಿವಂತರಿರುವ
ಅಸ್ಮಿನ್ = ಈ ರಾಜ್ಯದಲ್ಲಿ
ರೂಪಂ = ಸೌಂದರ್ಯವನ್ನು
ನೀ ಮಮೀರೇ = ಉತ್ಪಾದಿಸುತ್ತಾರೆ.
ಇತ್ = ಅವರೇ ಶಾಸನ ಮಾಡಲು ಅರ್ಹರು
ಭಾವಾರ್ಥ :
ಯಾವ ರಾಜನು ತನ್ನ ರಾಜ್ಯವನ್ನು ಮೃದುವಚನದಿಂದ ಪಾಲನೆ ಮಾಡುತ್ತಾನೋ ಅವನು ಮೋಡದಿಂದ ಮಳೆಗರೆಯುವ ರೀತಿಯಲ್ಲಿ ಬಹು ವಿಧವಾದ ಸಂಪತ್ತನ್ನು ಪಡೆಯುತ್ತಾನೆ.
ಒಂದು ಉತ್ತಮ ಆಡಳಿತವನ್ನು ನೀಡಬೇಕೆಂದರೆ ರಾಜನು ಮೃದುವಚನದಿಂದ ಆಡಳಿತ ನಡೆಸಬೇಕೆಂಬುದು ವೇದದ ಆಶಯ. ಸರ್ಕಾರವನ್ನು ನಡೆಸುವ ಪಕ್ಷಗಳು ಮತ್ತು ಅದರ ನಾಯಕರುಗಳು ವೇದದ ಈ ಆದೇಶವನ್ನು ಗಮನಿಸಬೇಕು. ವೇದವು ಎಲ್ಲಾ ಕಾಲಕ್ಕೂ ಎಷ್ಟು ಪ್ರಸ್ತುತವೆಂಬುದನ್ನೂ ನಾವು ಎಲ್ಲಾ ಮಂತ್ರಗಳಲ್ಲೂ ಕಾಣಬಹುದಾಗಿದೆ. ಒಂದು ಮಾತು ನೆನಪಾಗುತ್ತದೆ “ ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ” ವಜ್ರದಷ್ಟು ಕಠೋರವಾಗಿರಬೇಕು ಆದರೆ ಸಂದರ್ಭವರಿತು ಹೂವಿನಂತೆ ಮೃದುವೂ ಆಗಬೇಕು. ಇದು ಒಬ್ಬ ಆಡಳಿತಗಾರನ ಲಕ್ಷಣ. ಯಾರ ಹತ್ತಿರ ಕಠೋರವಾಗಿರಬೇಕು, ಯಾರ ಹತ್ತಿರ ಮೃದುವಾಗಿರಬೇಕೆಂಬ ವಿವೇಕ ರಾಜನಿಗಿರಬೇಕು. ಆದರೆ ದುರ್ದೈವವೆಂದರೆ ಸಧ್ಯದ ನಮ್ಮ ವ್ಯವಸ್ಥೆಯಲ್ಲಿ ಅದು ತದ್ವಿರುದ್ಧವಾಗಿದ್ದು ಉತ್ತಮ ಆಡಳಿತವನ್ನು ನಿರೀಕ್ಷಿಸುವುದಾದರೂ ಹೇಗೆ? ಮುಂದಿನ ಮಂತ್ರದಲ್ಲಿ ಸರ್ಕಾರದ ಕಾರ್ಯಾಂಗ ವ್ಯವಸ್ಥೆ ಹೇಗಿರಬೇಕೆಂಬುದನ್ನು ವಿವರಿಸಲಾಗಿದೆ
ಶುನಂ ಹುವೇಮ ಮಘವಾನಮಿಂದ್ರ-ಮಸ್ಮಿನ್ ಭರೇ ನೃತಮಂ ವಾಜಸಾತೌ|
ಶೃಣ್ವಂತಮುಗ್ರಮೂತಯೇ ಸಮತ್ಸು ಘ್ನಂತಂ ವೃತ್ರಾಣಿ ಸಂಜಿತಂ ಧನಾನಾಮ್ ||
[ಋಕ್. ೩.೩೮.೧೦]
ಅನ್ವಯಾರ್ಥ :
ಊತಯೇ = ರಕ್ಷಣೆಗಾಗಿ
ಸಮತ್ಸು = ಸಂಗ್ರಾಮದಲ್ಲಿ
ಘ್ನಂತಂ = ನಾಶ ಮಾಡುವ
ಉಗ್ರಂ = ಕಠೋರ ಸ್ವಭಾವದ
ಧನಾನಾಂ = ದ್ರವ್ಯಗಳ
ಸಂಜಿತಂ = ಉತ್ತಮ ರೀತಿಯಲ್ಲಿ ಶತೃಗಳನ್ನು ಜಯಿಸುವಂತಹ
ವೃತ್ರಾಣಿ =ಸುವರ್ಣಾದಿ ಧನಗಳನ್ನು
ಶೃಣ್ವಂತಂ = ಆಲೈಸುವವನನ್ನು
ಅಸ್ಮಿನ್ = ಈ ವ್ಯವಹಾರದಲ್ಲಿ
ವಾಜಸಾತೌ = ಧನ ಅನ್ನಾದಿಗಳ ವಿಭಾಗ ಮಾಡುವವನು
ಭರೇ = ಸಂಗ್ರಾಮದಲ್ಲಿ
ನೃತಮಂ = ಶ್ರೇಷ್ಠನಾದ
ಮಘವಾನಂ = ಐಶ್ವರ್ಯ ಸಂಪನ್ನನಾದ
ಇಂದ್ರಂ = ಶತೃಗಳನ್ನು ನಾಶಮಾಡುವಂತಹ ರಾಜನನ್ನು
ಹುವೇಮ = ಕರೆಯೋಣ[ಅವನ ಸಹಕಾರದಿಂದ]
ಶುನಂ = ಸುಖವನ್ನೂ ಜಯವನ್ನೂ ಪಡೆಯೋಣ..
ಭಾವಾರ್ಥ:
ಯಾವ ರಾಜನು ಪ್ರಮುಖ ವ್ಯಕ್ತಿಗಳನ್ನೂ, ರಾಜ ವಿದ್ಯೆಯಲ್ಲಿ ಚತುರರನ್ನೂ, ಶೂರರಾದ ಸೈನಿಕರನ್ನೂ, ನ್ಯಾಯಾಧೀಶರನ್ನೂ, ವಾದಮಾಡುವ ವಕೀಲರನ್ನೂ, ಸೇವೆ ಮಾಡುವ ಸೇವಕರನ್ನೂ ಗೌರವ ಪೂರ್ವಕವಾಗಿ ರಾಜ್ಯಾಂಗದಲ್ಲಿ ನೇಮಿಸಿಕೊಳ್ಳುತ್ತಾನೋ, ಅವನು ಯಾವಾಗಲೂ ವಿಜಯಶೀಲನೂ, ಕೀರ್ತಿವಂತನೂ,ಐಶ್ವರ್ಯಸಂಪನ್ನನೂ ಆಗುತ್ತಾನೆ. ಇಂದಿನ ಸರ್ಕಾರದ ಮುಖ್ಯಸ್ಥರಿಗೂ ಕೂಡ ಈ ಮಂತ್ರದಲ್ಲಿ ಅದ್ಭುತವಾದ ಮಾರ್ಗದರ್ಶನವಿದೆ. ತನ್ನ ಆಡಳಿತಕ್ಕೆ ಯಾವ ಯಾವ ಹುದ್ಧೆಗೆ ಎಂತಹ ವ್ಯಕ್ತಿಗಳನ್ನು ನೇಮಿಸಿಕೊಳ್ಳಬೇಕೆಂಬುದಕ್ಕೆ ಸೂಕ್ತ ಸಲಹೆ ಇಲ್ಲಿದೆ. ಒಂದು ರಾಜ್ಯದ ಆಡಳಿತ ನಡೆಸುವವನು ವೇದದ ಮಾರ್ಗದರ್ಶನವನ್ನು ಅನುಸರಿಸಿದ್ದೇ ಆದರೆ ಆ ರಾಜ್ಯದಲ್ಲಿ ಉತ್ತಮ ಆಡಳಿತವಿರುವುದರಲ್ಲಿ ಸಂಶಯವಿಲ್ಲ. ಉತ್ತಮ ಆಡಳಿತವಿದ್ದಾಗ ಸಹಜವಾಗಿ ಪ್ರಜೆಗಳು ನೆಮ್ಮದಿ ಯಿಂದಿದ್ದು ಸರ್ಕಾರವೂ ಕೂಡ ಸಂಪತ್ಭರಿತವಾಗಿರಲು ಸಾಧ್ಯ. ಯಾವಾಗ ಪ್ರಜೆಗಳ ನೆಮ್ಮದಿಯ ಜೀವನಕ್ಕೆ ಅಗತ್ಯವಾದ ಸೌಕರ್ಯಗಳನ್ನು ಸರ್ಕಾರವು ನೀಡುತ್ತದೆ, ಆಗ ಸಹಜವಾಗಿ ಪ್ರಜೆಗಳೂ ತೆರಿಗೆಯನ್ನು ಸಂತೋಷದಿಂದಲೇ ಪಾವತಿಸುತ್ತಾರೆ.ಆಗ ರಾಜ್ಯ/ಕೇಂದ್ರ ಸರ್ಕಾರವೂ ಸಂಪತ್ಭರಿತವಾಗಿದ್ದು ಅದರ ಕೀರ್ತಿಯು ಹೆಚ್ಚುತ್ತದೆ.
ಹೀಗೆ ರಾಜನಾದವನ ಮತ್ತು ಪ್ರಜೆಗಳ ಕರ್ತವ್ಯವನ್ನು ತಿಳಿಸುವ ಹಲವಾರು ಮಂತ್ರಗಳು ವೇದದಲ್ಲಿ ಲಭ್ಯ. ಇದನ್ನು ಅಧ್ಯಯನ ಮಾಡಿ ಸರ್ಕಾರದ ವ್ಯವಸ್ಥೆಗೆ ಲಾಭವನ್ನು ಮಾಡಿಕೊಳ್ಳಲು ಸಾಕಷ್ಟು ಅವಕಾಶಗಳಂತೂ ಇದೆ. ಆದರೆ ನಮ್ಮ ಸೆಕ್ಯೂಲರ್ ಆಡಳಿತದಲ್ಲಿ ವೇದದ ಕರೆಯನ್ನು ಆಲಿಸುವವರಾರು?

Saturday, September 27, 2014
ಜೀವನವೇದ-11
ಮೇಲೆದ್ದು ನಡೆ, ಅಧ:ಪತನ ಹೊಂದಬೇಡ
ಈ ಸಂಚಿಕೆಯಲ್ಲಿ ಮನುಷ್ಯನು ಕಷ್ಟ-ಸುಖಗಳನ್ನು ಹೇಗೆ ಸ್ವೀಕರಿಸಬೇಕೆಂಬುದನ್ನು ತಿಳಿಸುವ ಅಥರ್ವ ವೇದದ ಒಂದು ಮಂತ್ರದ ಬಗ್ಗೆ ವಿಚಾರ ಮಾಡೋಣ.
ಉತ್ ಕ್ರಾಮಾತ: ಪುರುಷ ಮಾವ ಪತ್ಥಾ
ಮೃತ್ಯೋ: ಪಡ್ವೀಶಮವಮುಂಚಮಾನ: |
ಮಾ ಚ್ಛಿತ್ಥಾ ಅಸ್ಮಾಲ್ಲೋಕಾದಗ್ನೇ: ಸೂರ್ಯಸ್ಯ ಸಂದೃಶ: ||
[ಅಥರ್ವ : ೮.೧.೪]
ಅರ್ಥ:
ಪುರುಷ = ಹೇ ಜೀವನೇ
ಮೃತ್ಯೋ: ಪಡ್ವೀಶಂ ಅವಮುಂಚಮಾನ: = ಸಾವಿನ ಬಂಧವನ್ನು ಕೆಳಕ್ಕೆ ಸರಿಸಿಹಾಕುತ್ತಾ
ಅತ: ಉತ್ ಕ್ರಾಮಾ = ಇಲ್ಲಿಂದ ಮೇಲಕ್ಕೆದ್ದು ನಡೆ
ಮಾ ಅವ ಪತ್ಥಾ: = ಕೆಳಗೆ ಬೀಳಬೇಡ
ಅಸ್ಮಾತ್ ಲೋಕಾತ್ = ಈ ಲೋಕದಿಂದ
ಮಾ ಛಿತ್ಥಾ: = ಕಡಿದುಹೋಗಬೇಡ
ಅಗ್ನೇ: = ರಾತ್ರಿಯಲ್ಲಿ ಅಗ್ನಿಯಂತೆ
ಸೂರ್ಯಸ್ಯ = ಹಗಲಿನಲ್ಲಿ ಸೂರ್ಯನಂತೆ
ಸಂದೃಶ: = ಸಮಾನವಾಗಿ ಪ್ರಕಾಶಿಸು
ಭಾವಾರ್ಥ:
ಹೇ ಜೀವನೇ, ನೀನು ಈಗಿರುವ ಸ್ಥಾನದಿಂದ ಮೇಲೆದ್ದು ನಡೆ, ಅಧ: ಪತನ ಹೊಂದಬೇಡ. ಸಾವಿನ ಬಂಧವನ್ನು ಬಿಡಿಸಿ ಕೊಳ್ಳುತ್ತಾ ಈ ಲೋಕದಿಂದ ಕಡಿದುಹೋಗಬೇಡ.
ಉತ್ಕ್ರಾಮಾ, ಮಾ ಅವಪತ್ಥಾ: , ಈ ಎರಡು ಪದಗಳು ಮನುಷ್ಯನಿಗೆ ಅದೆಷ್ಟು ಆತ್ಮವಿಶ್ವಾಸವನ್ನೂ, ಚೇತನವನ್ನೂ ಕೊಡುತ್ತದೆ! ವೇದಗಳೇ ಹಾಗೆ. ಯಾರನ್ನೂ ಬೀಳಲು ಬಿಡುವುದಿಲ್ಲ. ಮೇಲೆತ್ತುವುದೇ ವೇದದ ಹೆಚ್ಚುಗಾರಿಕೆ. ಒಂದೊಂದು ಮಂತ್ರದಲ್ಲೂ ಮನುಷ್ಯನ ಏಳಿಗೆ,ಉನ್ನತಿಯ ಬಗ್ಗೆ ಸ್ಪೂರ್ಥಿದಾಯಕ ನುಡಿಗಳೇ! ಕಷ್ಟ ಸುಖಗಳನ್ನು ಹೇಗೆ ಸ್ವೀಕರಿಸಬೇಕೆಂಬುದಕ್ಕೆ ಹೇಳುತ್ತ “ ರಾತ್ರಿಯಲ್ಲಿ ಅಗ್ನಿಯಂತೆ, ಹಗಲಿನಲ್ಲಿ ಸೂರ್ಯನ ಸಮಾನವಾಗಿ ಪ್ರಕಾಶಿಸು.ಅಂದರೆ ಆಧ್ಯಾತ್ಮಿಕ ಜೀವನದ ಗುಂಗಿನಲ್ಲಿ ಈ ಲೋಕದಿಂದ ಕರ್ತವ್ಯಗಳಿಂದ ದೂರ ಓಡಬಾರದು. ಜೀವನದ ರಾತ್ರಿಯಲ್ಲಿ ಅಂದರೆ ದು:ಖಮಯ ಸ್ಥಿತಿಯಲ್ಲಿ ಅಗ್ನಿಯಂತೆ ಉರಿದು ದು:ಖವನ್ನು ದಹಿಸಬೇಕು. ಜೀವನದ ಹಗಲಿನಲ್ಲಿ ಅಂದರೆ ಸುಖಮಯ ಸ್ಥಿತಿಯಲ್ಲಿ ಸೂರ್ಯನಂತೆ ಬೆಳಗಿ ಎಲ್ಲರಿಗೂ ಆ ಸುಖವನ್ನು ಕೊಡಬೇಕು. ವೇದದ ಒಂದೊಂದು ಮಾತೂ ಚೇತೋಹಾರಿ. ಇಲ್ಲಿ ಆಲಸ್ಯಕ್ಕೆ ಆಸ್ಪದವೇ ಇಲ್ಲ. ಹೇಡಿತನಕ್ಕೆ ಜಾಗವಿಲ್ಲ. ಜೀವನದಲ್ಲಿ ಬರುವ ಕಷ್ಟಸುಖಗಳನ್ನು ಸ್ವೀಕರಿಸುವ ಬಗೆಯನ್ನು ಅದ್ಭುತವಾಗಿ ಈ ಮಂತ್ರದಲ್ಲಿ ವರ್ಣಿಸಿದೆ. ಈ ಮಂತ್ರವನ್ನು ನೋಡುವಾಗ ಸಹಜವಾಗಿ ಇದೊಂದು ಜೀವನ ಸೂತ್ರವಲ್ಲದೆ ಬೇರೇನೂ ಆಗಿರಲು ಸಾಧ್ಯವಿಲ್ಲ, ಎಂಬುದು ಮನವರಿಕೆಯಾಗದೆ ಇರದು ಅಲ್ಲವೇ?
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದು ಏಳನೇ ದಶಕವೂ ಮುಗಿಯುತ್ತಾ ಬಂತು. ಬ್ರಿಟಿಶರೇನೋ ನಮ್ಮನ್ನು ಒಟ್ಟಾಗಿ ಇರಲು ಬಿಡಲಿಲ್ಲ. ಒಡೆದು ಆಳುವ ನೀತಿಯನ್ನು ಅನುಸರಿಸಿ ನಮ್ಮ ಸಮಾಜದಲ್ಲಿ ಮೇಲು-ಕೀಳುವರ್ಗಗಳನ್ನು ಉಳಿಸಿಬಿಟ್ಟರು. ಆದರೆ ನಮ್ಮವರ ಕೈಗೆ ಆಡಳಿತದ ಚುಕ್ಕಾಣಿ ಬಂದಮೇಲೆ ಮಾಡಿದ್ದೇನು? ಮತ್ತೆ ಬ್ರಿಟಿಶರದೇ ನೀತಿ. ಎಲ್ಲವೂ ಗದ್ದುಗೆ ಉಳಿಸಿಕೊಳ್ಳುವ ಉಪಾಯಗಳೇ ಹೊರತೂ ನಮ್ಮ ಜನರ ಕೈಗೇ ಆಡಳಿತದ ಹೊಣೆ ಸಿಕ್ಕಮೇಲೂ ನಮ್ಮ ಋಷಿಮುನಿಗಳು ತಮ್ಮ ತಪಸ್ಸಿನ ಪರಿಣಾಮವಾಗಿ ಕಂಡುಕೊಂಡ ಸತ್ಯದ ಮಾರ್ಗದಲ್ಲಿ ಸರ್ಕಾರ ನಡೆಸುವ ಪ್ರಯತ್ನವನ್ನು ಮಾಡಲೇ ಇಲ್ಲ.
ಒಂದು ಸಮಾಜವು ಉತ್ತಮವಾಗಿರಲು, ಮೇಲು ಕೀಳು ಹೋಗಲಾಡಿಸುವ ಸೂತ್ರಗಳು ವೇದದಲ್ಲಿ ಹೇರಳವಾಗಿ ಕಾಣಬರುತ್ತವೆ. ವೇದವು ಒಬ್ಬ ಮನುಷ್ಯನನ್ನು ಸೋಮಾರಿಯಾಗಿರಲು ಬಿಡುವುದೇ ಇಲ್ಲ. ಬದಲಿಗೆ ಜೀವನದಲ್ಲಿ ಕಷ್ಟಗಳು ಬಂದರೆ ಅದನ್ನು ಹೇಗೆ ಸ್ವೀಕರಿಸಬೇಕು, ಅದನ್ನು ಮೆಟ್ಟಿ ನಿಲ್ಲುವ ಬಗೆ ಹೇಗೆ? ಎಂದು ಎಲ್ಲರಲ್ಲೂ ಉತ್ಸಾಹವನ್ನು ತುಂಬುತ್ತದೆ. ನಮ್ಮ ಸರ್ಕಾರದ ನೀತಿಯಾದರೂ ಇದಕ್ಕೆ ತದ್ವಿರುದ್ಧವಾಗಿರುವುದನ್ನು ನಾವು ನೋಡುತ್ತೇವೆ. ಬಡವರಿಗೆ ಒಂದಿಷ್ಟು ಧನಸಹಾಯ ಮಾಡಿ ತತ್ ಕಾಲಕ್ಕೆ ಬಡವನ ಮೂತಿಗೆ ಬೆಣ್ಣೆ ಹಚ್ಚುವ ಕೆಲಸವನ್ನು ಮಾಡುತ್ತದೆಯೇ ಹೊರತೂ , ಅವನಿಗೆ ದುಡಿಯಲು ಅಗತ್ಯವಾದ ಅವಕಾಶವನ್ನೇ ಮಾಡಿಕೊಡುವುದಿಲ್ಲ. ಅಂತೂ ಸರ್ಕಾರದ ಸಹಾಯಧನ ಪಡೆದು ಅದರ ಹಂಗು ಒಂದು ಕಡೆಯಾದರೆ ಶ್ರಮವಹಿಸಿ ದುಡಿಯುವ ಬದಲು ಸೋಮಾರಿಯಾಗಿ ದೇಶಕ್ಕೆ ದೊಡ್ದ ಸಮಸ್ಯೆಯಾಗುವುದು ಮತ್ತೊಂದು ದುರಂತ. ಆದರೆ ನಮ್ಮ ವೇದ ಮಂತ್ರಗಳು ಬೀಳುತ್ತಿರುವವನನ್ನು ನೀನು ಬೀಳಬೇಡ, ನಿನ್ನಲ್ಲಿ ಎದ್ದು ನಿಲ್ಲುವ ಸಾಮರ್ಥ್ಯವಿದೆ,ಏಳು ಎಲ್ಲವನ್ನೂ ಎದುರಿಸಿ ಮುಂದೆ ನಡೆಎ॒ಂದು ಪ್ರೇರಣೆಯನ್ನು ತುಂಬುತ್ತವೆ.
ವೇದದ ಮಾತಿಗೆ ಕಿವುಡಾದವರು ಅರ್ಥಾತ್ ಸುವಿಚಾರಗಳನ್ನು ಕೇಳಿಸಿಕೊಳ್ಳದವರ ಪರಿಸ್ಥಿತಿ ಹೇಗಾಗುತ್ತದೆಂಬುದನ್ನೂ ಋಗ್ವೇದದ ಒಂದು ಮಂತ್ರದಿಂದ ತಿಳಿದುಕೊಳ್ಳೋಣ.
ಪ್ರತ್ನಾನ್ಮಾನಾದಧ್ಯಾ ಯೇ ಸಮಸ್ವರನ್ಛ್ಲೋಕಯಂತ್ರಾಸೋ ರಭಸಸ್ಯ ಮಂತವ: |
ಅಪಾನಕ್ಷಾಸೋ ಬಧಿರಾ ಅಹಾಸತ ಋತಸ್ಯ ಪಂಥಾಂ ನ ತರಂತಿ ದುಷ್ಕೃತ: ||
[ಋಗ್-೯.೭೩.೬]
ಅರ್ಥ:-
ಯೇ = ಯಾರು
ಪ್ರತ್ನಾತ್ ಮಾನಾತ್ ಅಧಿ = ಶಾಶ್ವತ ಪ್ರಮಾಣವಾದ ವೇದ ಜ್ಞಾನದ ಆಶ್ರಯದಲ್ಲಿ
ಆ ಸಂ ಅಸ್ವರನ್ = ಎಲ್ಲೆಡೆಯಿಂದಲೂ ಒಳಿತಾಗಿ ಜ್ಞಾನ ವನ್ನು ಪಡೆದುಕೊಳ್ಳುತ್ತಾರೋ ಅವರು
ಶ್ಲೋಕ ಯಂತ್ರಾಸ: = ವೇದ ಮಂತ್ರಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವವರೂ
ರಭಸಸ್ಯ ಮಂತವ: = ಸರ್ವಶಕ್ತಿಮಾನ್ ಪ್ರಭುವನ್ನು ತಿಳಿದವರೂ ಆಗುತ್ತಾರೆ.
ಅನಕ್ಷಾಸ: = ಜ್ಞಾನದೃಷ್ಟಿಯಿಂದ ಕುರುಡುರೂ
ಬಧಿರಾ: = ಕಿವುಡರೂ
ಋತಸ್ಯ ಪಂಥಾಮ್ = ಧರ್ಮದ ಮಾರ್ಗವನ್ನು
ಅಹಾಸತ = [ವೇದಜ್ಞಾನವನ್ನು] ತ್ಯಜಿಸುತ್ತಾರೆ
ದುಷ್ಕೃತ: = ದುಷ್ಕರ್ಮ ನಿರತರು
ನ ತರಂತಿ = ಪಾರುಗಾಣುವುದಿಲ್ಲ
ಭಾವಾರ್ಥ:-
ವೇದದ ಸೂತ್ರಗಳು ಶಾಶ್ವತವೂ, ಸಾರ್ವಕಾಲಿಕವೂ, ಸಾರ್ವಭೌಮವೂ ಆಗಿದೆ ಎಂಬುದನ್ನು ಹಲವು ಮಂತ್ರಗಳಲ್ಲಿ ಈಗಾಗಲೇ ನೋಡಿದ್ದೇವೆ. ಅದು ಬೋಧಿಸುವ ಮಾರ್ಗವು ಧರ್ಮ ಮಾರ್ಗ.ವೇದಗಳ ನಿರ್ಮಲಜ್ಞಾನವನ್ನು ಪಡೆದು , ಜ್ಞಾನದಾಯಕ ಮಂತ್ರಗಳ ಮೇಲೆ ಅಧಿಕಾರ ಪಡೆದು ಪ್ರಭುಸಾಕ್ಷಾತ್ಕಾರವನ್ನು ಮಾಡಿಕೊಳ್ಳ ಬಹುದು. ಆದರೆ ಜ್ಞಾನದ ಬೆಳಕನ್ನು ನೋಡಲಾರದ, ಜ್ಞಾನದ ಉಪದೇಶವನ್ನು ಕೇಳಲಾರದ ಮೂಢಜನರು ಋತದಮಾರ್ಗವನ್ನು ಅಂದರೆ ಧರ್ಮಮಾರ್ಗವನ್ನು ಬಿಡುತ್ತಾರೆ. ಅಂತಹ ದುಷ್ಕರ್ಮಿಗಳು ಜೀವನದ ಪಥವನ್ನು ಎಂದಿಗೂ ಕಾಣಲಾರರು.ಜೀವನಕ್ಕೆ ಎರಡು ಮುಖಗಳಿವೆ.ಆತ್ಮೋದ್ಧಾರಕ್ಕಾಗಿ ಆಧ್ಯಾತ್ಮಿಕ ಸಾಧನೆ, ದೇಹ ಪೋಷಣೆಗಾಗಿ ಲೌಕಿಕ ಕರ್ಮಗಳು. ಸಾಂಸಾರಿಕ ಅಭ್ಯುದಯ ಮತ್ತು ಪಾರಮಾರ್ಥಿಕ ಉತ್ಕರ್ಷ ?ಈ ಎರಡನ್ನೂ ಸಾಧಿಸಿಕೊಡುವ ಜೀವನ ಪಥವೇ ಧರ್ಮ.
“ವೇದ ಮಂತ್ರಗಳ ಮೇಲೆ ಅಧಿಕಾರ ಪಡೆದು ಪ್ರಭುಸಾಕ್ಷಾತ್ಕಾರವನ್ನು ಮಾಡಿ ಕೊಳ್ಳ ಬಹುದು. ಅಂದರೆ ಆನಂದಮಯ ಜೀವನ ಮಾಡಬಹುದು ಎಂದು ಅರ್ಥ. ಆದರೆ ಜ್ಞಾನದ ಬೆಳಕನ್ನು ನೋಡಲಾರದ, ಜ್ಞಾನದ ಉಪದೇಶವನ್ನು ಕೇಳಲಾರದ ಮೂಢಜನರು ಋತ ದಮಾರ್ಗವನ್ನು ಅಂದರೆ ಧರ್ಮಮಾರ್ಗವನ್ನು ಬಿಡುತ್ತಾರೆ. ಅಂತಹ ದುಷ್ಕರ್ಮಿಗಳು ಜೀವನದ ಪಥವನ್ನು ಎಂದಿಗೂ ಕಾಣಲಾರರು, ಅಂದರೆ ಅವರಿಗೆ ಆನಂದಮಯ ಜೀವನ ಲಭ್ಯವಾಗಲು ಅವಕಾಶವೇ ಇಲ್ಲದಂತಾಗುತ್ತದಲ್ಲವೇ?
ಈ ವಿವರಣೆ ನೋಡಿದಾಗ ಇಸ್ಲಾಮ್ ಅಥವಾ ಕ್ರೈಸ್ತಮತಗಳಲ್ಲಿ ಹೇಳುವಂತೆ “ ಈ ಮಾರ್ಗವನ್ನು ನಂಬಿದರೆ ಮಾತ್ರ ನೀನು ಮೋಕ್ಷ ಪಡೆಯಬಲ್ಲೆ” ಎಂಬಂತೆ ಬಾಸವಾಗುತ್ತಲ್ಲಾ! ಎನಿಸದೆ ಇರದು.ಆದರೆ ವೇದವನ್ನು ಸರಿಯಾಗಿ ಅರ್ಥಮಾಡಿಕೊಂಡವರಿಗೆ ಇಂತಹ ಸಂದೇಹ ಬರಲಾರದು. ಕಾರಣ “ನಿನ್ನನ್ನು ಕಲ್ಯಾಣಮಾರ್ಗದಲ್ಲಿ ಯಾವುದು ಕರೆದುಹೊಂಡು ಹೋಗುತ್ತದೋ ಆ ಮಾರ್ಗದಲ್ಲಿ ನಿನ್ನ ಜೀವನ ರಥ ಸಾಗಲಿ, ಎಂಬ ಮಂತ್ರದ ವಿವರಣೆಯನ್ನು ಈಗಾಗಲೇ ನಾವು ನೋಡಿದ್ದೇವೆ.ಹಾಗಾಗಿ ವೇದವು ನೆಮ್ಮದಿಯ ಮತ್ತು ಆರೋಗ್ಯಕರ ಜೀವನ ಸೂತ್ರಗಳನ್ನು ಹೇಳುವುದರಿಂದ ಈ ತಿಳುವಳಿಕೆ ಪಡೆದವನು ಸುಖಿಯಾಗಿರಬಲ್ಲನೆಂದೂ ಈ ಅರಿವನ್ನು ತಿರಸ್ಕರಿಸುವವನು ಸುಖಿಯಾಗಿರಲಾರನೆಂದಷ್ಟೇ ಈ ಮಂತ್ರದ ಅರ್ಥ. ಪ್ರಭುಸಾಕ್ಷಾತ್ಕಾರವೆಂದರೆ ಭಗವಚ್ಛಕ್ತಿಯ ಸ್ವರೂಪವನ್ನು ನಮ್ಮ ಅಂತರ್ಯದಲ್ಲಿ ಅನುಭವಿಸುವುದೆಂದು ಅರ್ಥ ಮಾಡಿಕೊಂಡರೂ ತಪ್ಪಿಲ್ಲ.
-ಹರಿಹರಪುರಶ್ರೀಧರ್
Friday, September 26, 2014
ಜೀವನವೇದ-10
ಸತ್ಯವನ್ನು ಆವಿಷ್ಕರಿಸಿ-ನಿರ್ಭೀತರಾಗಿ ಜೀವನ ನಡೆಸಿ
ಧರ್ಮದ ಆಚರಣೆ ಎಂದರೆ ಯಾವುದು ತಲೆತಲಾಂತರದಿಂದ ನಡೆದು ಬಂದಿದೆ, ಅದನ್ನು ಪ್ರಶ್ನೆ ಮಾಡದೆ ಅನುಸರಿಸುವುದು-ಎಂಬುದು ಸಾಮಾನ್ಯ ಅಭಿಪ್ರಾಯ. ಇದಕ್ಕೆ ವಿದ್ಯಾವಂತ-ಅವಿದ್ಯಾವಂತ ಎಂಬ ಭೇದವಿಲ್ಲ. ಹಾಗೆ ನೋಡಿದರೆ ವಿದ್ಯಾವಂತರೆನಿಸಿಕೊಂಡು ಪದವಿಗಳ ಸರಮಾಲೆಯನ್ನು ಹಾಕಿಕೊಂಡವರೇ ಪ್ರಶ್ನೆ ಮಾಡದೆ ಕುರುಡಾಗಿ ಅನುಸರಿಸುವುದನ್ನು ನಾವು ಸಮಾಜದಲ್ಲಿ ಹೆಚ್ಚು ಕಾಣಬಹುದು.ಇದಕ್ಕೆ ಕಾರಣ ಸ್ಪಷ್ಟ.ಅದುವೇ ಭಯ.
ಹೆಸರಿನ ಮುಂದೆ ಹಲವು ಪದವಿಗಳಿವೆ. ಒಳ್ಳೆಯ ಉದ್ಯೋಗ ಸಿಕ್ಕಿದೆ. ಲಕ್ಷಕ್ಕೆ ಕಮ್ಮಿ ಇಲ್ಲದಂತೆ ದುಡಿಮೆ ಇದೆ. ವಾಸಕ್ಕೆ ಸುಸಜ್ಜಿತ ಮನೆ.ಅದರಲ್ಲಿ ಪತ್ನಿ ಮತ್ತು ಮುದ್ದಾದ ಮಗುವಿನೊಡನೆ ಹಾಯಾಗಿ ಜೀವನ ಸಾಗಿರುವಾಗ ಯಜಮಾನನಿಗೆ ಅವನಿಗೆ ಅರಿವಿಲ್ಲದಂತೆ ಭಯ,ಅಭದ್ರತೆ ಕಾಡುತ್ತದೆ. ಭಗವಂತ! ಪತ್ನಿ ಮತ್ತು ಮಗುವಿನೊಡನೆ ನನ್ನನ್ನು ಸುಖವಾಗಿ ಕಾಪಾಡೆಂದು ಎಲ್ಲಾ ದೇವರಿಗೂ ಪ್ರಾರ್ಥಿಸಿ ಮನೆ ಮುಂದೆ ಬಂದ ಬುಡುಬುಡುಕೆಯವನ ಬಾಯಲ್ಲಿ ಏನಾದರೂ ಕೆಟ್ಟ ಮಾತು ಬಂದೀತೆಂದು ಮನೆಯಲ್ಲಿದ್ದ ಬಟ್ಟೆಯನ್ನೋ ಹತ್ತಿಪ್ಪತ್ತು ರೂಪಾಯಿ ದುಡ್ದನ್ನೋ ಕೊಟ್ಟು ಅವನು ಹೋದಮೇಲೆ ನಿರಾಳನಾಗುತ್ತಾನೆ.
ಇಂತಾ ಉಧಾಹರಣೆಗಳಿಗೇನೂ ಕೊರತೆ ಇಲ್ಲ. ಜೀವನ ದುಸ್ತರವಾಗಿದ್ದಾಗ ಕಾಡದಿದ್ದ ಅಭದ್ರತೆ ಜೀವನವು ಸುಖವಾಗಿರುವಾಗ ಕಾಡಲಾರಂಭಿಸುವುದೇಕೇ? ಜೀವನದಲ್ಲಿ ಕಷ್ಟವಿದ್ದಾಗ ಇಲ್ಲದಿದ್ದ ಭಯ ಸುಖದಲ್ಲಿ ಕಾಡುವುದಾದರೂ ಏಕೇ? ಸತ್ಯದ ಅರಿವಾಗದಿರುವುದೇ ಜೀವನದಲ್ಲಿ ಭಯಕ್ಕೆ ಕಾರಣ. ಅಭದ್ರತೆಯ ಭಾವನೆಗೆ ಕಾರಣ.
ಧರ್ಮಾಚರಣೆಯ ಹೆಸರಲ್ಲಿ ಮೌಢ್ಯದಿಂದ ವರ್ತಿಸುವ ಹಲವು ಉಧಾಹರಣೆಗಳಿವೆ.ಸಾಮಾನ್ಯವಾಗಿ ಬಳಕೆಯಲ್ಲಿರುವ ಒಂದು ಕಥೆ ಎಲ್ಲರಿಗೂ ತಿಳಿದದ್ದೇ.ಆದರೂ ನೆನಪು ಮಾಡುವೆ.
ಬ್ರಾಹ್ಮಣನೊಬ್ಬನ ಮನೆಯಲ್ಲಿ ಅವನ ತಂದೆಯ ಶ್ರಾದ್ಧದ ದಿನ ಮನೆಯಲ್ಲಿದ್ದ ಬೆಕ್ಕಿನ ಮೇಲೆ ಕುಕ್ಕೆಯೊಂದನ್ನು ಮುಚ್ಚಿ ನಂತರ ಶ್ರಾದ್ಧ ಮಾಡುತ್ತಿದ್ದ. ಕಾರಣ ಬಲು ಸರಳ. ಮನೆಯಲ್ಲಿ ಬೆಕ್ಕು ಓಡಾಡುತ್ತಿದ್ದರೆ ಶ್ರಾದ್ಧದ ಊಟ ಮಾಡುತ್ತಿದ್ದವರ ಎಲೆಗೆ ಬೆಕ್ಕಿನ ಕೂದಲು ಬಿದ್ದೀತೆಂಬ ಮುನ್ನೆಚ್ಚರಿಕೆ. ಹೀಗೇ ಹಲವು ವರ್ಷಗಳು ನಡೆಯಿತು. ಮನೆಯ ಯಜಮಾನ ಮರಣ ಹೊಂದಿದ. ಅವನ ಮಗ ಈಗ ಅವನ ಶ್ರಾದ್ಧಮಾಡಬೇಕು. ಶ್ರಾದ್ಧದ ದಿನ ಬಂತು. ತನ್ನ ಅಪ್ಪ ಶ್ರಾದ್ಧ ಮಾಡುವಾಗ ಬೆಕ್ಕಿನ ಮೇಲೆ ಕುಕ್ಕೆ ಮುಚ್ಚಿ ನಂತರ ಶ್ರಾದ್ಧ ಮಾಡುತ್ತಿದ್ದ. ಆದರೆ ಇವನ ಕಾಲಕ್ಕೆ ಮನೆಯಲ್ಲಿ ಬೆಕ್ಕು ಇಲ್ಲದಂತಾಗಿದೆ. ಏನು ಮಾಡುವುದು? ಊರೆಲ್ಲಾ ಸುತ್ತಿ ಒಂದು ಬೆಕ್ಕು ತಂದ. ಅದರ ಮೇಲೆ ಕುಕ್ಕೆ ಮುಚ್ಚಿದ. ಶ್ರಾದ್ಧ ಮಾಡಿದ್ದಾಯ್ತು. ಎಲ್ಲರೂ ಊಟವನ್ನೂ ಮಾಡಿದರು. ರಾತ್ರಿಯಾಯ್ತು. ಆ ದಿನ ಕಳೆದು ಹೋಯ್ತು. ಬೆಳಿಗ್ಗೆ ಎದ್ದಾಗ ಕುಕ್ಕೆ ಮುಚ್ಚಿದ್ದ ಬೆಕ್ಕಿನ ಬಗ್ಗೆ ನೆನಪಾಯ್ತು. ಕುಕ್ಕೆ ಎತ್ತುತ್ತಾನೆ. ಬೆಕ್ಕು ಉಸಿರಾಡದೆ ಮಲಗಿದೆ. ಗಾಳಿಯೇ ಆಡದ ಪ್ಲಾಸ್ಟಿಕ್ ಕುಕ್ಕೆಯನ್ನು ಮುಚ್ಚಿ ಅದರ ಮೇಲೆ ಅಲುಗಾಡದಂತೆ ತೂಕವನ್ನು ಇಟ್ಟಿದ್ದ ಪರಿಣಾಮ ಉಸಿರಾಡಲೂ ಸಾಧ್ಯವಿಲ್ಲದೆ ಬೆಕ್ಕು ಕೊನೆ ಉಸಿರೆಳೆದಿತ್ತು!! ಇಂತಾ ಘೋರ ಕೃತ್ಯಕ್ಕೆ ಕಾರಣವಾದರೂ ಏನು? ಹಿಂದಿನ ಉದ್ಧೇಶವನ್ನೇ ತಿಳಿಯದೆ ಆಚರಿಸಿದ ಕುರುಡು ಆಚರಣೆಯಲ್ಲವೇ?
ವೇದದ ಹೆಸರು ಕೇಳಿದೊಡನೆ ಒಂದು ಜಾತಿಗೆ ಸೀಮಿತಗೊಳಿಸಿ ಹರಿಹಾಯುವ ಜನರು ತಾವು ನಿರ್ಭೀತ ಜೀವನ ಮಾಡಬೇಕಾದರೆ ವೇದದ ಮಾರ್ಗದರ್ಶನವನ್ನೇ ಪಡೆಯಬೇಕು. ವೇದವು ಜನರಲ್ಲಿ ಎಂತಹಾ ನಿರ್ಭೀತ ಸ್ಥಿತಿಯನ್ನು ಉಂಟುಮಾಡುತ್ತದೆಂಬುದನ್ನು ತಿಳಿಯಲು ಈ ವೇದಮಂತ್ರದ ಅರ್ಥವನ್ನು ಒಮ್ಮೆ ವಿಚಾರ ಮಾಡೋಣ.
ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ | ವಿಧ್ಯತಾ ವಿದ್ಯುತಾ ರಕ್ಷ: ||
[ಋಕ್-೧.೮೬.೯]
ಸತ್ಯಶವಸ: = ಸತ್ಯವನ್ನೇ ಶಕ್ತಿಯಾಗಿ ಹೊಂದಿರುವ ಧೀರರೇ
ಯೂಯಮ್ = ನೀವು
ಮಹಿತ್ವನಾ = ನಿಮ್ಮ ಸ್ವಂತ ಮಹಿಮೆಯಿಂದ
ತತ್ ಆವಿಷ್ಕರ್ತ =ಆ ಸತ್ಯವನ್ನು ಆವಿಷ್ಕರಿಸಿರಿ
ರಕ್ಷ: = ದುಷ್ಕಾಮನೆಗಳನ್ನು
ವಿದ್ಯುತಾ = ನಿಮ್ಮ ಜ್ಞಾನಜ್ಯೋತಿಯಿಂದ
ವಿಧ್ಯತಾ = ಸೀಳಿಹಾಕಿರಿ
ಭಾವಾರ್ಥ:-
ಓ ಧೀರರೇ, ನಿಮ್ಮ ಸ್ವಂತ ಮಹಿಮೆಯಿಂದ ಸತ್ಯವನ್ನು ಆವಿಷ್ಕರಿಸಿ. ದುಷ್ಕಾಮನೆಗಳನ್ನು ನಿಮ್ಮ ಜ್ಞಾನಜ್ಯೋತಿಯಿಂದ ಸೀಳಿ ಹಾಕಿರಿ.
ಒಂದೊಮ್ಮೆ ಈ ಮಂತ್ರದ ಅರಿವಿದ್ದಿದ್ದರೆ ಬೆಕ್ಕನ್ನು ಕೊಲ್ಲುವ ಮೌಢ್ಯದ ಕೆಲಸವನ್ನು ಯಾರೂ ಮಾಡುತ್ತಿರಲಿಲ್ಲ. ಬೆಕ್ಕಿನ ಕಥೆಯಲ್ಲಿ ಅತಿರೇಕವಿರ ಬಹುದು. ಆದರೆ ಸತ್ಯವಿಲ್ಲದೆ ಇಲ್ಲ!
ಈ ಮಂತ್ರವನ್ನು ಆಳವಾಗಿ ಅರ್ಥೈಸುತ್ತಾ ಹೋದರೆ ನನ್ನ ಕಣ್ಮುಂದೆ ಒಬ್ಬ ಗುರು ತನ್ನ ಯುವ ಶಿಷ್ಯನಿಗೆ ಸಿಡಿಲಿನಂತಹ ಮಾತುಗಳಿಂದ ಉಪದೇಶ ಮಾಡುತ್ತಿದ್ದಾನೇನೋ ಎಂದು ಭಾಸವಾಗುತ್ತದೆ. ಒಬ್ಬ ತಂದೆ ತನ್ನ ಮಗನಿಗೆ, ಗುರು ತನ್ನ ಶಿಷ್ಯನಿಗೆ ಈ ಮಂತ್ರದ ಅರ್ಥವನ್ನು ತಿಳಿಸಿದರೆ ಅವನಲ್ಲಿ ಅದೆಂತಹಾ ಅದ್ಭುತ ಶಕ್ತಿ ಮೂಡೀತು! ಭಯವೆಂಬುದಕ್ಕೆ ಆಸ್ಪದವೇ ಇಲ್ಲ. ಅಭದ್ರತೆಯ ಭಯವು ಕಾಡಲಾರದು. ಸತ್ಯದ ದರುಶನವಾದಾಗ ನಿರ್ಭೀತ ಜೀವನ ನಮ್ಮ ದಾಗುತ್ತದೆ.
ಮಂತ್ರವಾದರೂ ಏನು ಹೇಳುತ್ತದೆ? ಹೇ ಧೀರರೇ, ನಿಮ್ಮ ಸ್ವಂತ ಸಾಮರ್ಥ್ಯದಿಂದ, ನಿಮ್ಮ ವಿವೇಕದಿಂದ, ನಿಮ್ಮ ಬುದ್ಧಿಯಿಂದ, ಸತ್ಯವನ್ನು ಆವಿಷ್ಕರಿಸಿ.ನಿಮ್ಮ ಜ್ಞಾನಜ್ಯೋತಿಯಿಂದ ದುಷ್ಕಾಮನೆಗಳನ್ನು ಸೀಳಿಹಾಕಿರಿ
ಇಲ್ಲಿ ಕುರುಡು ಆಚರಣೆಗೆ ಅವಕಾಶವಿದೆಯೇ? ವೇದವಾದರೂ ಮಂತ್ರದಲ್ಲಿ ಬಳಸಿರುವ ಪದಗಳ ತೀವ್ರತೆಯನ್ನು ಗಮನಿಸಿದಿರಾ? ನಿಮ್ಮ ಜ್ಞಾನಜ್ಯೋತಿಯಿಂದ ದುಷ್ಕಾಮನೆಗಳನ್ನು ಸೀಳಿಹಾಕಿರಿ- ಇಂತಹ ವಿಶ್ವಾಸ ತುಂಬುವ ಮಾತುಗಳನ್ನು ವೇದವು ಮಾತ್ರವೇ ಹೇಳಲು ಸಾಧ್ಯ.
ಅರ್ಥವನ್ನು ಸರಿಯಾಗಿ ತಿಳಿಯದೆ ಆಚರಿಸಿದಾಗ ಅನರ್ಥಕ್ಕೆ ಕಾರಣವಾಗುತ್ತದೆ
ಇಂದು ಸಮಾಜದಲ್ಲಿ ಕಾಣುವ ಸಾಮರಸ್ಯದ ಕೊರತೆಗೆ ಧರ್ಮವನ್ನು ಸರಿಯಾಗಿ ತಿಳಿಯದೆ ತಪ್ಪು ತಪ್ಪಾಗಿ ಆಚರಿಸುವ ಕಂದಾಚಾರಗಳೂ ಕೂಡ ಹಲವು ಸಂದರ್ಭಗಳಲ್ಲಿ ಕಾರಣವಾಗುತ್ತವೆ, ಯಜ್ಞ ಯಾಗಾದಿಗಳನ್ನು ಮಾಡುವಾಗ ಪ್ರಾಣಿಬಲಿಗೆ ಅವಕಾಶವೇ ಇಲ್ಲದಿದ್ದರೂ ಅಶ್ವಮೇಧ, ಅಜಮೇಧದಂತಹ ಯಜ್ಞಗಳನ್ನು ಮಾಡುವಾಗ ಕುದುರೆಯನ್ನು /ಮೇಕೆಯನ್ನು ಬಲಿಕೊಡಬೇಕೆನ್ನುವ ಒಂದು ವರ್ಗ ಈಗಲೂ ಇರುವಾಗ ಅದನ್ನು ವಿರೋಧಿಸುವ ಒಂದು ವರ್ಗ ಸಹಜವಾಗಿ ಇರುತ್ತದೆ. ಆಗ ಸಾಮಾಜಿಕ ಸಾಮರಸ್ಯವು ಹಾಳಾಗುವುದಕ್ಕೆ ಧರ್ಮದ ಹೆಸರಿನಲ್ಲಿ ನಡೆವುವ ಅಧರ್ಮದ ಕ್ರಿಯೆಗಳು ಕಾರಣವಾಗುತ್ತವೆ.
ಯಜ್ಞಕ್ಕೆ ಮತ್ತೊಂದು ಹೆಸರು ಅಧ್ವರ ಎಂದು. ಧ್ವರ ಎಂದರೆ ಹಿಂಸೆ. ಅಧ್ವರ ಎಂದರೆ ಅಹಿಂಸೆ ಎಂದು ಅರ್ಥ. ಹೀಗೆ ಯಜ್ಞಕ್ಕೆ ಅಹಿಂಸೆ ಎಂಬ ಅರ್ಥವಿದ್ದರೂ ಕೂಡ ಅಲ್ಲಿ ಪ್ರಾಣಿಬಲಿ ಮಾಡಲೇ ಬೇಕೆನ್ನುವ ಗುಂಪಿನಿಂದ ಅದನ್ನು ವಿರೋಧಿಸಿದವರನ್ನು ಧರ್ಮದ್ರೋಹಿಗಳೆಂಬ ಹಣೆ ಪಟ್ಟಿ ಕಟ್ಟುವ ಪ್ರಯತ್ನ ನಡೆಯುತ್ತದೆ.
ನಾವು ಧರ್ಮದ ಹೆಸರಿನಲ್ಲಿ ಆಚರಿಸುವ ಪ್ರತಿಯೊಂದು ಕೆಲಸವನ್ನೂ ಆಚರಣೆಗೆ ಮುಂಚೆ ಅದರಲ್ಲಿ ಸತ್ಯವನ್ನು ಆವಿಷ್ಕರಿಸುವ ಪ್ರಯತ್ನವನ್ನು ಮಾಡಿದ್ದೇ ಆದರೆ ಯಾವ ಧರ್ಮಕಾರ್ಯವೂ ಮಾನವತೆಯ ವಿರೋಧಿಯಾಗಿರುವುದಿಲ್ಲ. ಆದ್ದರಿಂದ ನಾವು ಮಾಡುವ ಎಲ್ಲಾ ಕಾರ್ಯದಲ್ಲೂ ಸತ್ಯವನ್ನು ಆವಿಷ್ಕರಿಸುವಂತಹ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಅಶ್ವಮೇಧ ಯಾಗದ ನಿಜವಾದ ಅರ್ಥ ತಿಳಿದಾಗ ಅದನ್ನು ವಿರೋಧಿಸುವ ಪ್ರಸಂಗವೇ ಎದುರಾಗುವುದಿಲ್ಲ. ಶತಪಥ ಬ್ರಾಹ್ಮಣದಲ್ಲಿ ಅಶ್ವಮೇಧದ ಬಗ್ಗೆ ಹೇಳಿದೆ........ "ಅಶ್ವಂ ಇತಿ ರಾಷ್ಟ್ರಂ" ಅದರ ವಿವರಣೆ ಹೀಗಿದೆ. ಶ್ವ: ಅಂದರೆ ನಾಳೆ. ಅಶ್ವ: ಅಂದರೆ ಯಾವುದಕ್ಕೆ ನಾಳೆ ಇಲ್ಲವೋ ಅದು.ಯಾವುದಕ್ಕೆ ನಾಳೆ ಎನ್ನುವುದು ಇಲ್ಲವೋ ಅದಕ್ಕೆ ನಿನ್ನೆ ಎಂಬುದೂ ಇಲ್ಲ. ಅಂದರೆ ಯಾವುದು ನಿರಂತರವಾಗಿ ಇದ್ದೇ ಇರುತ್ತದೋ ಅದಕ್ಕೆ ನಿನ್ನೆ ನಾಳೆಗಳಿಲ್ಲ. ಯಾವುದು ಶಾಶ್ವತವಲ್ಲವೋ ಅದಕ್ಕೆ ನಿನ್ನೆ ನಾಳೆಗಳಿರುತ್ತದೆ. ನಿನ್ನೆ ಇತ್ತು, ಇವತ್ತು ಇದೆ. ನಾಳೆ ಗೊತ್ತಿಲ್ಲ ಅಂದರೆ ಅದು ಶಾಶ್ವತವಲ್ಲ ಎಂದಾಯ್ತು.ಯಾವುದು ನಿನ್ನೆ ಇತ್ತು, ಇವತ್ತೂ ಇದೆ, ನಾಳೆಯೂ ಇರುತ್ತದೋ ಅದು ಮಾತ್ರ ಶಾಶ್ವತ.ಯಾವುದು ನಿರಂತರವಾಗಿರುತ್ತದೆ, ಅದು ಅಶ್ವ.ಆದ್ದರಿಂದಲೇ "ಅಶ್ವಂ ಇತಿ ರಾಷ್ಟ್ರಂ" ನಾನು ಇವತ್ತು ಇದ್ದೀನಿ, ನಾಳೆ ಗೊತ್ತಿಲ್ಲ.ಆದರೆ ರಾಷ್ಟ್ರಶಾಶ್ವತ.["ದೇಹ ನಶ್ವರ-ದೇಶ ಶಾಶ್ವತ] ನಾವೆಲ್ಲಾ ಪ್ರಜೆಗಳು ಇಂದು ಇದ್ದೀವಿ. ಇನ್ನೊಂದು ಐವತ್ತು ವರ್ಷ ನಾವು ಇರಬಹುದೇನೋ , ಮತ್ತೆ ಬೇರೆ ಪ್ರಜೆಗಳ ಹುಟ್ಟು, ಸಾವು, ಇದೆಲ್ಲಾ ನಡೆಯುತ್ತಲೇ ಇರುತ್ತದೆ.ಎಷ್ಟೋ ತಲೆಮಾರು ಕಳೆಯುತ್ತಲೇ ಇರುತ್ತದೆ ,ಅದರೆ ರಾಷ್ಟ್ರ ಮಾತ್ರ ನಿರಂತರ. ಇಂದು ಇದ್ದು ನಾಳೆ ಇಲ್ಲಾವಾಗುವವರು ನಾವು ನೀವು.
ಇನ್ನು "ಮೇಧ" ಎಂದರೆ " ಸಂಗಮೇ" ಅಂದರೆ ಒಟ್ಟು ಗೂಡಿಸು.ಎಂದಾಗ ರಾಷ್ಟ್ರವನ್ನು ಒಟ್ಟು ಗೂಡಿಸಲು ಮಾಡುವ ಕಾರ್ಯಕ್ರಮಗಳೆಲ್ಲಾ " ಅಶ್ವಮೇಧ ಯಾಗವೇ" ಎಂದಂತಾಯ್ತು. ಎಂತಹಾ ಶ್ರೇಷ್ಠವಾದ ಅರ್ಥ ಇದೆಯಲ್ಲವೇ?. ಸತ್ಯವನ್ನು ಆವಿಷ್ಕಾರ ಮಾಡಿದಾಗ ಮಾತ್ರವೇ ಇಂತಹ ಅದ್ಭುತಗಳು ಗೋಚರವಾಗಲು ಸಾಧ್ಯ.
-ಹರಿಹರಪುರಶ್ರೀಧರ್
Subscribe to:
Posts (Atom)