///// ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ ////// ಕೃಣ್ವಂತೋ ವಿಶ್ವಮಾರ್ಯಂ //// //// ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ /////
Monday, March 14, 2016
Sunday, March 13, 2016
ಸಾಮಾಜಿಕ ಜಾಗೃತಿಗಾಗಿ .......
ನಿಮ್ಮ ಮನೆಯಲ್ಲಿ ಮಕ್ಕಳ ಜನ್ಮದಿನ, ವಿವಾಹವಾಗಿ 25 ವರ್ಷ ನಿಮಿತ್ತ ವಿವಾಹ ರಜತಮಹೋತ್ಸವ, 60ವರ್ಷ ತುಂಬಿದಾಗ ಶಷ್ಠ್ಯಬ್ಧಿ ಕಾರ್ಯಕ್ರಮ.........ಇತ್ಯಾದಿ ಕಾರಣ ಗಳಿಂದ ಏನಾದರೊಂದು ಶುಭಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಏನಿಲ್ಲದಿದ್ದರೂ ಮಕ್ಕಳು ಪ್ರತಿ ವರ್ಷ ತಮ್ಮ ಹುಟ್ಟು ಹಬ್ಬ, ಅಪ್ಪ-ಅಮ್ಮನ ಹುಟ್ಟು ಹಬ್ಬಕ್ಕಾಗಿ ಸ್ನೇಹಿತರನ್ನು ಕರೆದು ಪಾರ್ಟಿ ಮಾಡುವ ಹೊಸ ಸ್ಟೈಲಂತೂ ಶುರುವಾಗಿದೆ.
ಹೇಗೂ ಕಾರ್ಯಕ್ರಮಗಳು ನಡೆಯುತ್ತವೆ, ಅದನ್ನೇ ಏಕೆ ವೇದೋಕ್ತವಾಗಿ ನಡೆಸಬಾರದು! ಹೀಗೊಂದು ಆಲೋಚನೆ ನನ್ನ ತಲೆಯಲ್ಲಿ ಯಾವಾಗಲೂ ಇದ್ದದ್ದೇ!
ತಮ್ಮ ಮದುವೆಯಾಗಿ 25 ವರ್ಷ ಆಯ್ತು. ಶನಿವಾರ ನಮ್ಮ ಮನೆಗೆ ಬನ್ನಿ, ಒಟ್ಟಿಗೆ ಊಟ ಮಾಡೋಣ,ಎಂದು ಮಿತ್ರರಾದ ಶ್ರೀ ಶೇಷಪ್ಪ ಆಹ್ವಾನಿಸಿದರು. ನಾನು ಅವರಿಗೆ ಒಂದು ಸಲಹೆ ಕೊಟ್ಟೆ. ಅದನ್ನೇ ನಮ್ಮ ಸತ್ಸಂಗದಲ್ಲಿ ಆಚರಿಸೋಣ.ಮಿತ್ರರನ್ನೆಲ್ಲಾ ಕರೆಯಿರಿ, ಎಂದೆ. ಇಂದು 13.3.2016] ಕಾರ್ಯಕ್ರಮ ನಡೆದೇ ಹೋಯ್ತು. ಎಲ್ಲಾ ವೇದ ಮತ್ತು ಯೋಗ ಬಂಧುಗಳೂ ನಮ್ಮ ಮನೆಯಲ್ಲಿ ಸೇರಿದರು. ಒಟ್ಟಿಗೆ ಅಗ್ನಿಹೋತ್ರ ಮಾಡಿದೆವು. ಹಿಂದೂ ಕುಟುಂಬ ವ್ಯವಸ್ಥೆಯ ವೈಶಿಷ್ಠ್ಯ ಮತ್ತು ಅದು ಕುಸಿಯುತ್ತಿರುವ ವಿಚಾರಗಳನ್ನು ಸ್ನೇಹಿತರ ಮುಂದೆ ತೆರೆದಿಡುವ ಪ್ರಯತ್ನ ಮಾಡಿದೆ. ಇಂತಾ ಸಂದರ್ಭಗಳನ್ನು ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸಲು ಉಪಯೋಗಿಸಿಕೊಳ್ಳಬೇಕೆಂಬ ಅಂಶವನ್ನು ಕವಿನಾಗರಾಜ್ ಕೂಡ ತಿಳಿಸಿದರು.ಮಿತ್ರರೆಲ್ಲಾ ಶುಭಹಾರೈಸಿದಮೇಲೆ ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು. ನಂತರ ಲಘು ಭೋಜನವನ್ನು ಸ್ವೀಕರಿಸಿ ಎಲ್ಲರೂ ಮನೆಗೆ ತೆರಳಿದರು. ಒಂದು ಸರಳಸಮಾರಂಭವನ್ನು ಸಾಮಾಜಿಕಜಾಗೃತಿಗಾಗಿ ಪೂರ್ಣ ಬಳಸಿಕೊಳ್ಳಲಾಯ್ತು. ಇಂತಾ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಾಗಬೇಕಲ್ವಾ?

Thursday, March 3, 2016
ವೇದಭಾರತಿಯ ಚಟುವಟಿಕೆಗಳ ಬಗ್ಗೆ ಶ್ರೀ ಕೆ.ಎಸ್.ಕರಂಜೆ ಅವರ ಅಭಿಮಾನದ ಮಾತು ಭಾಗ-1
ಕೆಲವೊಮ್ಮೆ ಕೆಲವು ಸಾಮಾಜಿಕ ಚಟುವಟಿಕೆಗಳು ಜನರ ಮೆಚ್ಚುಗೆ ಪಡೆಯುತ್ತವೆ. ಕೆಲವಕ್ಕೆ ಅಡೆತಡೆಗಳು ಬರುತ್ತವೆ. ಏನೇ ಆದರೂ ಸಾಮಾಜಿಕ ಕಳಕಳಿ ಇರುವ ಕಾರ್ಯಕರ್ತನಾದವನು ತನ್ನ ಆತ್ಮಸಾಕ್ಶಿ ಒಪ್ಪಿದ್ದನ್ನು ಮಾಡುತ್ತಾ ಹೋಗುತ್ತಾನೆ. ಅದು ಸಮಾಜದ ಹಿತ ಕಾಪಾಡುವಂತಿದ್ದರೆ ಇಂದಲ್ಲಾ ನಾಳೆ ಜನರು ಒಪ್ಪುತ್ತಾರೆ, ಇಲ್ಲವಾದರೆ ತಿರಸ್ಕರಿಸುತ್ತಾರೆ. ಇಷ್ಟೆಲ್ಲಾ ಮಾತೇಕೆ ಎಂದರೆ ವೇದಭಾರತಿಯ ಹೆಸರಲ್ಲಿ ನಾವುಗಳು ಚಟುವಟಿಕೆ ಆರಂಭಿಸಿದ ಹೊಸದರಲ್ಲಿ ಹಲವರು ಭಾವಿಸಿದ್ದರು ಇಲ್ಲಿ ಪೂಜಾ ಮಂತ್ರವನ್ನು ಹೇಳಿಕೊಡುತ್ತಾರೆಂದು.ಇನ್ನು ಕೆಲವರು ನಮ್ಮ ಮಕ್ಕಳಿಗೆ "ಸಂಧ್ಯಾವಂದನೆ ಹೇಳಿಕೊಡುತ್ತೀರಾ? ಋಗ್ವೇದದಲ್ಲೋ? ಯಜುರ್ವೇದದಲ್ಲೋ? ಹೀಗೆ ಕೇಳುತ್ತಿದ್ದರು.
ನಾವು ಹೇಳುತ್ತಿದ್ದುದು ಒಂದೇ " ಇಲ್ಲಿ ನಿತ್ಯಪೂಜಾ ಮಂತ್ರ ಹೇಳಿಕೊಡುವುದಿಲ್ಲ" ಇಲ್ಲಿ ವೇದದ ಪರಿಚಯ ಮಾಡಿಕೊಡಲಾಗುತ್ತದೆ. ಅಗ್ನಿಹೋತ್ರವನ್ನು ಕಲಿಸಲಾಗುತ್ತದೆ. " ವೇದಪಾಠವು ನಡೆಯುತ್ತದೆ"
ಆಗ ಕೆಲವರು ಕೇಳುತ್ತಿದ್ದರು - ಕೇವಲ ಬ್ರಾಹ್ಮಣಹುಡುಗರು ಮಾತ್ರಾ ಬರುತ್ತಾರಲ್ಲವೇ?
- ನಮ್ಮ ಉದ್ದೇಶ ಇರುವುದೇ "ಎಲ್ಲರಿಗಾಗಿ ವೇದ " ಪರಿಚಯ ಮಾಡಿಕೊಡುವುದು. ಇಲ್ಲಿ ಎಲ್ಲಾ ಜಾತಿಯವರಿಗೂ ಪ್ರವೇಶ ಇದೆ. ನಾವು ಯಾರ ಜಾತಿಯನ್ನೂ ಕೇಳುವುದಿಲ್ಲ.
ವೇದ ಪಾಠ ಶುರುವಾಯ್ತು. ಬರುತ್ತಿದ್ದ ಕೆಲವರು ನಿಲ್ಲಿಸಿದರು. ಹೊಸಬರು ಬಂದರು. ನೂರಾರು ಕಡೆಯಿಂದ ಅಗ್ನಿಹೋತ್ರಕ್ಕಾಗಿ ಆಹ್ವಾನ ಬಂತು. ಸಾಧ್ಯವಾದಲ್ಲೆಲ್ಲಾ ವೇದಭಾರತಿಯ ಕಾರ್ಯಕರ್ತರು ಹೋಗಿ ಉಚಿತವಾಗಿ ಅಗ್ನಿಹೋತ್ರ ನಡೆಸಿ ವೇದದ ಸರಳ ಪರಿಚಯ ಮಾಡಿಕೊಟ್ಟು ಬಂದೆವು.
ಕ್ರಮೇಣ ಸಾಮೂಹಿಕ ಅಗ್ನಿಹೋತ್ರ ಕಾರ್ಯಕ್ರಮಗಳು ನಡೆದವು.ಶಿಬಿರಗಳು ನಡೆದವು. ವೇದಭಾರತಿಯ ಹೆಸರು ಪ್ರಚಾರವಾಯ್ತು. ನಾವು ನಡೆಸಿದ ವೇದೋಕ್ತ ಜೀವನ ಶಿಬಿರದಲ್ಲಿ ಮೊಟ್ಟ ಮೊದಲಿಗೆ ಏಳು ಜನರಿಗೆ ಉಪನಯನ ಮಾಡಿಸಿ ಯಜ್ಞೋಪವೀತ ಧಾರಣೆ ನಡೆಸಿದೆವು.ಅದರಲ್ಲಿ ನಾಲ್ವರು ಸ್ತ್ರೀಯರು,ಮೂವರು ಪುರುಷರು. ಕೆಲವರ ಜಾತಿ ಗೊತ್ತಿದ್ದರೂ ಕೆಲವರದ್ದು ನಮಗೆ ಗೊತ್ತಿಲ್ಲ. ವೇದಭಾರತಿಗೆ ಬರುವವರು ಯಾರು ಯಾವ ಜಾತಿಗೆ ಸೇರಿದವರೆಂದು ಗೊತ್ತಾಗುವುದೇ ಇಲ್ಲ. ಕಾರಣ ಅದು ನಮಗೆ ಬೇಕಿಲ್ಲ.
ಕಳೆದ ಒಂದುವರ್ಷದಿಂದ ವೇದಭಾರತಿಯ ಬಗ್ಗೆ ತಿಳಿದುಕೊಂಡಿದ್ದ ಸೇವಾಬಸ್ತಿಯ ಬಂಧು ಒಬ್ಬರಿಗೆ ತಮ್ಮ ಮಗನಿಗೆ ಉಪನಯನ ಮಾಡಿಸುವ ಇಚ್ಛೆಯಾಯ್ತು. ವಿಚಾರ ನಮಗೆ ತಿಳಿಸಿದರು. ಫೆಬ್ರವರಿ 19 ರಂದು ಅವರ ಗ್ರಾಮದಲ್ಲೇ ವೇದೋಕ್ತವಾಗಿ ಉಪನಯನ ವಾಯ್ತು. ಪತ್ರಿಕೆಗಳಲ್ಲಿ ಅದು ಬಿಸಿ ಸುದ್ಧಿಯಾಯ್ತು. ಸಾಮಾಜಿಕ ತಾಣಗಳಲ್ಲೂ ಸುದ್ದಿ ಹರಿದಾಡಿತು. ಹಲವರು ಮೆಚ್ಚಿದರು.ಯಾರೋ ಒಬ್ಬಿಬ್ಬರು ಇದು ಶಾಸ್ತ್ರ ಸಮ್ಮತವಲ್ಲ-ಎಂದರು. ಶಾಸ್ತ್ರಸಮ್ಮತವಲ್ಲ ಎನ್ನುವವರಿಗೆ ವೇದ ಮಂತ್ರದ ಆಧಾರ ಕೊಡುವುದಾಗಿ ತಿಳಿಸಿದ್ದಾಯ್ತು. ವಿಷಯ ಹಳೆಯದಾಯ್ತು.
ಇಲ್ಲಿ ಒಂದು ಮಾತು ನಾನು ಹೇಳಲೇ ಬೇಕು. ಸಾಮಾನ್ಯವಾಗಿ ನಮ್ಮ ಚಟುವಟಿಕೆಗಳನ್ನು ಮೆಚ್ಚುತ್ತಿದ್ದ ಹಲವರು ಯಾವ ಪ್ರತಿಕ್ರಿಯೆಯನ್ನೂ ನೀಡಲಿಲ್ಲ! ಮೌನಮ್ ಸಮ್ಮತಿ ಲಕ್ಷಣಮ್ ಎಂಬುದು Facebook ಮತ್ತು ಇತರ ಸಾಮಾಜಿಕ ತಾಣಗಳಿಗೆ ಹೊಂದುವ ಮಾತಲ್ಲ. ಇಲ್ಲಿ ಮೆಚ್ಚಬೇಕು.ಇಲ್ಲ ವಿರೋಧಿಸಬೇಕು. ಅಥವ ಕೀಟಲೆ ಮಾಡಬೇಕು.ಯಾವಾಗಲೂ ಪ್ರತಿಕ್ರಿಯೆ ನೀಡುತ್ತಿದ್ದವರು ಈ ಸುದ್ದಿಗೆಪ್ರತಿಕ್ರಿಯಿಸಲಿಲ್ಲ ವೆಂದರೆ ಅವರುಗಳಿಗೆ ಇದು ಸಮಾಧಾನವಾಗದ ವಿಷಯವೆಂದೇ ಅರ್ಥ.ಪರವಾಗಿಲ್ಲ.ಅದು ಅವರ ಇಷ್ಟ. ಆದರೆ ಈ ಪೋಸ್ಟ್ ಬರೆಯಲು ಪ್ರಮುಖ ಕಾರಣ ಶ್ರೀ ಕೆ.ಎಸ್.ಕರಂಜೆ ಎಂಬ facebook ಮಿತ್ರರು. ಅವರು ಬೀದರ್ ನ ಶ್ರೀಮದ್ ವೀರ ಶೈವ ರಾಜ ಪೀಠದ ಅಧ್ಯಕ್ಷರು.ಶಿವಾದ್ವೈತ ಆಗಮಿಕ ಅನುಯಾಯಿ.ಹಿಂದಿಯಲ್ಲಿ ಸೊಗಸಾಗಿ ಮಾತನಾಡುತ್ತಾರೆ. ಕನ್ನಡ ಕಷ್ಟ. ಮೊನ್ನೆ ರಾತ್ರಿ ನನಗೆ ಫೋನ್ ಮಾಡಿದರು. ಅವರು ಮಾತು ಆರಂಭಿಸುವುದೇ " ನಮಸ್ತೆ ಪ್ರಭು ಕೈಸೆ ಹೈ?"
ನನಗೆ ಹಿಂದಿ ಅರ್ಥವಾದರೂ ಮಾತನಾಡಲು ಬಲು ಕಷ್ಟ. ಆದರೂ ತಪ್ಪು ತಪ್ಪಾಗಿ ಮಾತನಾಡಿದರೂ. ಭಾವನೆಯನ್ನು ಅರ್ಥಮಾಡಿಕೊಂಡು ಸೊಗಸಾಗಿ ಮಾತು ಮುಂದುವರೆಸುತ್ತಾ 40 ನಿಮಿಷ ಮಾತನಾಡಿದರು. ಅವರ ಕಳಕಳಿಯನ್ನು ಸ್ನೇಹಿತರ ಗಮನಕ್ಕೆ ತರಲು ಈ ಪ್ರಯತ್ನ.
ಕರಂಜೆ : ವಿಶೇಷ ಕಾರ್ಯಕ್ರಮವನ್ನು ನೀವು ಮಾಡಿದಿರಂತೆ. ವಿಷಯ ತಿಳಿಯಿತು
ನಾನು : ಹೌದು ಸೇವಾಬಸ್ತಿಯ ಯುವಕನಿಗೆ ಉಪನಯನ ಮಾಡಿಸಿದೆವು
ಕ: ತುಂಬಾ ಸಂತೋಷ. ಇಂತಾ ಕಾರ್ಯಕ್ರಮಗಳು ನಡೆಯಬೇಕು
ನಾನು : ಸಂತೋಷ
ಕ : ನೋಡಿ, ಅವರಿಗೆ ಮುಂದಿನ ಸಂಸ್ಕಾರಕ್ಕೆ ಏನು ಮಾಡುವಿರಿ? ನಾನು ಹಲವು ಕಡೆ ನೋಡಿದ್ದೀನಿ. ಸಾವಿರಾರು ಜನರಿಗೆ ಶಿವ ದೀಕ್ಷೆ ಕೊಡಿಸಿಬಿಡುತ್ತಾರೆ. ನಂತರ ಮುಂದೆ ಅವರಿಗೆ ಏನೂ ಸಂಸ್ಕಾರವಾಗುವುದಿಲ್ಲ.
ನಾನು : ಉಪನಯನ ಮಾಡಿಸಿಕೊಂಡ ವಟುವೂ ಅವನ ತಂದೆಯೂ ನಮ್ಮ ಗುರುಗಳ ಹತ್ತಿರ ಪಾಠಕ್ಕೆ ಬರುತ್ತಾರೆ.
ಕ : ಆ ಕೆಲಸ ಆಗಬೇಕು. ಸಾವಿರ ಜನರಿಗೆ ದೀಕ್ಷೆ ಕೊಟ್ಟರೆ ಪ್ರಯೋಜನವಿಲ್ಲ. ಒಮ್ಮೆ ದೀಕ್ಷೆಕೊಟ್ಟಮೇಲೆ ಆ ಮಾರ್ಗದಲ್ಲಿ ಅವನು ಮುಂದುವರೆಯಬೇಕು. ಆ ಒಂದು ಕುಟುಂಬಕ್ಕೆ ಪೂರ್ಣ ವೈದಿಕ ಸಂಸ್ಕಾರವಾದರೆ ಅವರಿಂದ ಮುಂದೆ ಹತ್ತಿಪ್ಪತ್ತು ವರ್ಷಗಳಲ್ಲಿ ನೂರಾರು ಮನೆಗಳಿಗೆ ವೈದಿಕ ಸಂಸ್ಕಾರ ಸಿಗುವಂತಾಗುತ್ತದೆ.
ಕರಂಜೆಯವರು 40 ನಿಮಿಷ ಮಾತನಾಡಿದರು. ಅವರ ಮಾತಿನಲ್ಲಿ ಕಳಕಳಿಯಿತ್ತು. ವೇದಭಾರತಿಯೇ ಆಗಲೀ ಅಥವಾ ಬೇರೆ ಯಾವುದೇ ಸಂಘಟನೆಯೇ ಆಗಲೀ ಈ ಅಂಶವನ್ನು ಮನಸ್ಸಿನಲ್ಲಿಟ್ಟುಕೊಂಡೇ ಕಾರ್ಯಕ್ರಮಗಳನ್ನು ರೂಪಿಸಬೇಕೆನ್ನಿಸಿತು.
ವೇದಭಾರತಿಯ ಚಟುವಟಿಕೆಗಳ ಬಗ್ಗೆ ಶ್ರೀ ಕೆ.ಎಸ್.ಕರಂಜೆ ಅವರ ಅಭಿಮಾನದ ಮಾತು ಭಾಗ-2
ಬೀದರ್ ನ ಶ್ರೀಮದ್ ವೀರಶೈವ ರಾಜಪೀಠದ ಅಧ್ಯಕ್ಷರೂ,ಶಿವಾದ್ವೈತ ಆಗಮಿಕ ಅನುಯಾಯಿಗಳೂ ಆದ ಶ್ರೀ ಕೆ.ಎಸ್.ಕರಂಜೆ ಎಂಬ facebook ಮಿತ್ರರು ನನ್ನೊಡನೆ ತಮ್ಮ ವಿಚಾರವನ್ನು ಹಂಚಿಕೊಂಡ ಬಗ್ಗೆ ನಿನ್ನೆ ಬರೆದಿದ್ದೆ.
ನಿನ್ನೆ ಸಂಜೆ facebook vedio chat ಮೂಲಕ ವೇದಭಾರತಿಯ ಸದಸ್ಯರನ್ನುದ್ದೇಶಿಸಿ ಅವರು ಮಾತನಾಡಿದರು. ಅಲ್ಲದೆ ನಾವು ಮಾಡುವ ಅಗ್ನಿಹೋತ್ರವನ್ನು ನೋಡಿ ಸಂತೋಷವನ್ನು ವ್ಯಕ್ತಪಡಿಸಿದರು. ಅವರ ಮಾತಿನ ಸಾರಾಂಶವನ್ನು ಇಲ್ಲಿ ಬರೆದಿರುವೆ.
"ವೇದ ಬಂಧುಗಳೇ ಅತ್ಯಧಿಕ ಸಂಖ್ಯೆಯ ಮಹಿಳೆಯರೂ ಮತ್ತು ಪುರುಷರೂ ಮಾಡಿದ ಅಗ್ನಿಹೋತ್ರವನ್ನು ನೋಡಿ ಬಲು ಸಂತೋಷವಾಯ್ತು.ಕಳೆದ ಕೆಲವು ದಿನಗಳಲ್ಲಿ ದಲಿತ ಬಂಧುಒಬ್ಬನಿಗೆ ಉಪನಯನ ಮಾಡಿದ ವಿಚಾರವೂ ತಿಳಿಯಿತು. ನೀವು ಬಹಳ ಅದ್ಭುತ ಕೆಲಸ ಮಾಡುತ್ತಿದ್ದೀರಿ. ಇಂತಾ ಕೆಲಸ ಮಾಡುವಾಗ ಹಲವು ವಿರೋಧಗಳೂ ಬರುತ್ತವೆ.ತಿಳುವಳಿಕೆಯ ಕೊರತೆಯಿಂದ ಬರುವ ವಿರೋಧಗಳು ಅವು ಅಷ್ಟೆ. ಆದರೆ ಮುಂದಿನ ದಿಗಳಲ್ಲಿ ನಿಮ್ಮ ಕಾರ್ಯವನ್ನು ಜನರು ಮೆಚ್ಚಲೇ ಬೇಕಾಗುತ್ತದೆ. ಅಂತಾ ಸಮಾಜಮುಖಿಕಾರ್ಯವನ್ನು ನೀವೆಲ್ಲರೂ ಮಾಡುತ್ತಿದ್ದೀರಿ. ನಿಮಗೆ ನನ್ನ ಧನ್ಯವಾದಗಳು.
ಒಂದು ವಿಷಯವು ನಿಮಗೆಲ್ಲಾ ತಿಳಿದಿರಬೇಕು. ಜಾತಿ ಎಂಬುದು ಎರಡು ರೀತಿಯಿಂದ ಬರುತ್ತದೆ. ಮೊದಲನೆಯದು ಹುಟ್ಟಿನಿಂದ. ಎರಡನೆಯದು ಕರ್ಮದಿಂದ. ವ್ಯಾಸ, ವಾಲ್ಮೀಕಿ ಯಂತಾ ಹಲವರು ಹುಟ್ಟಿದ್ದು ಬ್ರಾಹ್ಮಣ ಜಾತಿಯಲ್ಲಲ್ಲ. ಆದರೆ ಅವರ ಮಹಾನ್ ಸಾಧನೆಯಿಂದ ಮಹರ್ಷಿಗಳಾದರು.ಬ್ರಾಹ್ಮಣ ಕರ್ತವ್ಯವನ್ನು ನಿರ್ವಹಿಸಿದರು. ಪೂಜ್ಯರಾದರು. ವೇದದ ರಾಶಿಯನ್ನು ಋಕ್ ,ಯಜುರ್, ಸಾಮ ಮತ್ತು ಅಥರ್ವ ವೇದಗಳಾಗಿ ವಿಂಗಡಿಸಿ ವೇದವ್ಯಾಸರಾದರು. ಯಾವ ಸಾಹಿತ್ಯವನ್ನು ಇಡೀ ಜಗತ್ತು ಅತ್ಯಂತ ಪ್ರಾಚೀನವೆಂದು ಭಾವಿಸುತ್ತದೋ ಅಂತಾ ವೇದವನ್ನು ವಿಂದಡಿಸಿದವನೇ ಹುಟ್ಟಿನಿಂದ ಬ್ರಾಹ್ಮಣನಲ್ಲ. ಪ್ರಪಂಚಕ್ಕೇ ಆದರ್ಶ ಗ್ರಂಥವಾಗಿರುವ ರಾಮಾಯಣ ಮಹಾಗ್ರಂಥವನ್ನು ರಚಿಸಿದ ವಾಲ್ಮೀಕಿ ಬೇಡರ ಜಾತಿಯಲ್ಲಿ ಹುಟ್ಟಿ ಪ್ರಾಣಿಗಳನ್ನು ಕೊಲ್ಲುತ್ತಿದ್ದವನು. ಆದರೆ ಅಂತಾ ಸ್ಥಿತಿಯಿಂದ ಮಹರ್ಷಿಯಾಗಬೇಕಾದರೆ ಅವನ ಸಾಧನೆ ಎಷ್ಟಿರಬಹುದು! ರಾಮಾಯಣ ಬರೆದು ಮಹರ್ಷಿ ವಾಲ್ಮೀಕಿಯಾದ.
ಶ್ರೀ ಶಂಕರರ ವಿಚಾರಕ್ಕೆ ಬಂದಾಗ ಚಾಂಡಾಲನ ಭೇಟಿಯ ಸಂದರ್ಭವು ಅವರ ಜೀವನದಲ್ಲೇ ಅತ್ಯಂತ ಮಹತ್ವವನ್ನು ಪಡೆಯುತ್ತದೆ. ಗಂಗಾ ನದಿಯಿಂದ ಶ್ರೀ ಶಂಕರರು ಸ್ನಾನ ಮಾಡಿ ಕಾಶಿಯ ಬೀದಿಯಲ್ಲಿ ಬರುತ್ತಿದ್ದಾಗ ಎದುರು ಚಾಂಡಾಲನೊಬ್ಬನು ಬರುತ್ತಾನೆ. ಶಂಕರರ ಶಿಷ್ಯರು ಅವನನ್ನು ದೂರಸರಿ, ದೂರ ಸರಿ, ಎನ್ನುತ್ತಾರೆ. ಆಗ ಚಾಂಡಾಲ ಶಂಕರರಿಗೆ ಕೇಳುತ್ತಾನೆ. " ನಿಮ್ಮ ಶಿಷ್ಯರು ಯಾವುದಕ್ಕೆ ದೂರಸರಿ ಎನ್ನುತ್ತಿದ್ದಾರೆ? ಈ ಶರೀರಕ್ಕೋ? ಅಥವಾ ನನ್ನೊಳಗಿರುವ ಆತ್ಮಕ್ಕೋ? ನೀವು ಅಧ್ವೈತ ಸಿದ್ಧಾಂತವನ್ನು ಬೋಧಿಸುತ್ತಿದ್ದೀರಿ. ಭಗವಂತ ಮತ್ತು ನಾನು ಒಂದೇ ಎಂಬುದಲ್ಲವೇ ಸಿದ್ಧಾಂತ. ನೀವು ದೂರಸರಿ ಎಂದರೆ ನಾನು ಬೇರೆ , ನನ್ನೊಳಗಿರುವ ಪರಮಾತ್ಮ ಬೇರೆ , ಎಂದಾಗುತ್ತದಲ್ಲವೇ? ಇದು ಅಧ್ವೈತ ಸಿದ್ಧಾಂತಕ್ಕೆ ಹೊಂದುತ್ತದೆಯೇ?
ಆಗ ಶಂಕರರು ನೇರವಾಗಿ ಚಾಂಡಾಲನ ಪಾದಗಳಿಗೆರಗಿ " ನೀನು ನನ್ನ ಕಣ್ತೆರೆಸಿದೆ, ನೀನೇ ನನ್ನ ಗುರು" ಎಂದು ಅವನನ್ನು ಗುರುವಾಗಿ ಸ್ವೀಕರಿಸುತ್ತಾರೆ. ಮಣಿಷಾ ಪಂಚಕವನ್ನು ಬರೆಯುತ್ತಾರೆ. ಶ್ರೀ ಬಸವೇಶ್ವರರೂ ದೀನ ದಲಿತ ಬಂಧುಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿದ್ದಾರೆ. ಆದರೆ ಅವರೂ ಸಹ ಒಬ್ಬ ದಲಿತ ಬಂಧುವನ್ನು ಗುರುವಾಗಿ ಸ್ವೀಕರಿಸಲಿಲ್ಲ. ಹಾಗೆಂದು ಅವರ ಕಾರ್ಯವನ್ನು ನಾನು ಕಡಿಮೆ ಎಂದು ಹೇಳುತ್ತಿಲ್ಲ. ಆದರೆ ಶಂಕರರು ಒಬ್ಬ ಚಾಂಡಾಲನನ್ನು "ನೀನು ನನ್ನ ಕಣ್ ತೆರೆಸಿ ಗುರುವಾದೆ " ಎಂಬ ಮಾತು ನಮ್ಮ ಕಣ್ ತೆರೆಸಬೇಡವೇ?

ಸ್ತ್ರೀಯರು ವೇದಾಧ್ಯಯನ ಮಾಡಕೂಡದೆನ್ನುವವರಿಗೂ ಶ್ರೀ ಶಂಕರರೇ ಆದರ್ಶವಾಗಬೇಕು. ಮಂಡನ ಮಿಶ್ರರರಿಗೂ ಶಂಕರರಿಗೂ ಸಂವಾದ ನಡೆದು ಪಂಥಾಹ್ವಾನಕ್ಕೆ ವೇದಿಕೆ ನಿರ್ಮಾಣವಾದಾಗ ಒಬ್ಬ ತೀರ್ಪುಗಾರರು ಬೇಕಾಯ್ತು. ಆಗ ಪುರುಷ ವಿದ್ವಾಂಸರಿಗೇನೂ ಕೊರತೆ ಇರಲಿಲ್ಲವಾದರೂ ಮಂಡನ ಮಿಶ್ರರ ಪತ್ನಿ ಭಾರತೀ ದೇವಿಯನ್ನು ತೀರ್ಪುಗಾರರ ಸ್ಥಾನದಲ್ಲಿ ಕೂರಿಸಿದ ಘಟನೆ ನಮ್ಮ ಕಣ್ತೆರಸ ಬೇಡವೇ?
ಕಾಲಗರ್ಭವನ್ನು ನೋಡುತ್ತಾ ಹೋದರೆ ಇಂತಹ ಹಲವು ಉಧಾಹರಣೆಗಳು ಸಿಗುತ್ತವೆ. ಇಂದು ಸಮಾಜದಲ್ಲಿ ಸಾಮರಸ್ಯಕ್ಕಾಗಿ ಕೆಲಸಮಾಡುವುದು ಅತ್ಯಂತ ಅಗತ್ಯವಾದ ಪವಿತ್ರವಾದ ಕೆಲಸವಾಗಿದೆ. ವೇದಭಾರತಿಯಿಂದ ಇಂತಾ ಒಂದು ಪವಿತ್ರಕಾರ್ಯದಲ್ಲಿ ತೊಡಗಿರುವ ನಿಮಗೆಲ್ಲಾ ಆಭಗವಂತನು ಮಂಗಳವನ್ನುಂಟುಮಾಡಲಿ.Saturday, February 20, 2016
ಹೀಗೊಂದು ವೇದೋಕ್ತ ಉಪನಯನ
ಬೇಲೂರು ತಾಲ್ಲೂಕಿನ ಆಂದಲೆ ಗ್ರಾಮದ ಶ್ರೀ ಕೃಷ್ಣಮೂರ್ತಿ ಶನಿದೇವಾಲಯದ ಅರ್ಚಕರು. ವೇದಭಾರತಿಯ ಚಟುವಟಿಕೆಗಳ ಬಗ್ಗೆ ಬೇಲೂರಿನ ಮಿತ್ರರಿಂದ ತಿಳಿದು ದೂರವಾಣಿ ಮೂಲಕ ಸಂಯೋಜಕ ಶ್ರೀ ಹರಿಹರಪುರ ಶ್ರೀಧರರನ್ನು ಕೆಲವು ದಿನಗಳ ಹಿಂದೆ ಸಂಪರ್ಕಿಸಿದರು. ದಲಿತ ಸಮುದಾಯಕ್ಕೆ ಸೇರಿದ ಅವರು ತಮ್ಮ ಮಗ ಚಂದನನಿಗೆ ವೇದೋಕ್ತವಾಗಿ ಉಪನಯನ ಮಾಡಿಸುವ ತಮ್ಮ ಮನದ ಆಸೆಯನ್ನು ಹಂಚಿಕೊಂಡರು. ಸ್ವತಃ ಹಾಸನಕ್ಕೆ ಬಂದು ಮಾತನಾಡಿ ತಮ್ಮ ಇಚ್ಛೆಯನ್ನು ಪುನರುಚ್ಛರಿಸಿದರು. ವೇದಭಾರತಿಯ ಕಾರ್ಯಕರ್ತರು ಇದಕ್ಕೆ ಒಪ್ಪಿದರು. ಅದರಂತೆ ದಿನಾಂಕ 19.02.2016ರಂದು ಗ್ರಾಮದಲ್ಲಿ ಈ ಕಾರ್ಯ ಮಾಡುವುದೆಂದೂ ನಿಶ್ಚಯವಾಯಿತು. ಉತ್ಸಾಹಿ ಕೃಷ್ಣಮೂರ್ತಿಯವರು ಗ್ರಾಮದ ದೇವಸ್ಥಾನದ ಪಕ್ಕದ ಅರಳಿಮರದ ನೆರಳಿನಲ್ಲಿ ಶಾಮಿಯಾನಾ ಹಾಕಿಸಿದರು. ಉಪನಯನಕ್ಕೆ ಅಗತ್ಯದ ಎಲ್ಲಾ ಸಿದ್ಧತೆಗಳನ್ನೂ ವಿವರಗಳನ್ನು ಕೇಳಿ ಮಾಡಿಕೊಂಡಿದ್ದರು. ಗ್ರಾಮಸ್ಥರು, ಬಂಧುಗಳನ್ನು ಆಹ್ವಾನಿಸಿದ್ದರು.
ಹಾಸನದಿಂದ ಶ್ರೀಧರ್, ನಾನು, ಸತೀಶ, ರಾಜಶೇಖರ್ ಮತ್ತು ವೇದಾಧ್ಯಾಯಿ ಶ್ರೀ ನವೀನ ಬೆಳಿಗ್ಗೆ 8ರ ವೇಳೆಗೆ ಸ್ಥಳ ತಲುಪಿದಾಗ ಅಲ್ಲಿನ ಹಬ್ಬದ ವಾತಾವರಣ ಕಂಡು ಹರ್ಷಿತರಾದೆವು. ಶ್ರೀ ನವೀನರು ವೇದೋಕ್ತ ರೀತಿಯಲ್ಲಿ ಉಪನಯನ ಕಾರ್ಯ ನಡೆಸಿಕೊಟ್ಟರು. ಸಹಕಾರಿಗಳಾಗಿ ನಾವು ಜೊತೆಯಲ್ಲಿದ್ದೆವು. ಪ್ರತಿ ಕ್ರಿಯೆಯನ್ನೂ ಶ್ರದ್ಧೆಯಿಂದ ಮಾಡುತ್ತಿದ್ದ ವಟು ಚಂದನ್ ಮತ್ತು ಅವನ ತಂದೆ-ತಾಯಿಯರು ಋತ್ವಿಕರು ಪ್ರತಿ ಮಂತ್ರದ ಅರ್ಥ, ಉದ್ದೇಶಗಳನ್ನು ವಿವರಿಸುತ್ತಿದ್ದುದನ್ನು ಗಮನವಿಟ್ಟು ಕೇಳುತ್ತಿದ್ದುದು ವಿಶೇಷವಾಗಿತ್ತು. ಹಾಜರಿದ್ದ ಗ್ರಾಮಸ್ಥರೂ ಸಹ ಆಸಕ್ತಿಯಿಂದ ವೀಕ್ಷಿಸುತ್ತಿದ್ದರು.
ಯಜ್ಞೋಪವೀತ ಧಾರಣೆಯಾದ ನಂತರದಲ್ಲಿ ಶ್ರೀ ನವೀನರು ಮಾತನಾಡಿ ಉಪನಯನವೆಂದರೆ 'ಹತ್ತಿರಕ್ಕೆ ಕರೆದೊಯ್ಯುವುದು' ಎಂದು ಅರ್ಥ, ಅಂದರೆ ವಟುವನ್ನು ಗುರುಗಳ ಹತ್ತಿರ ವೇದಾಧ್ಯಯನ ಮತ್ತು ಜ್ಞಾನಸಂಪಾದನೆ ಸಲುವಾಗಿ ಕರೆದೊಯ್ಯುವ ಕ್ರಿಯೆಯಾಗಿದೆ. ವೇದ ಎಂಬ ಪದದ ಅರ್ಥ ಸಹ ಜ್ಞಾನ ಎಂಬುದೇ ಆಗಿದೆ. ಅಗ್ನಿಸಾಕ್ಷಿಯಾಗಿ, ಸೂರ್ಯ, ಚಂದ್ರ, ಸಕಲ ದೇವತೆಗಳ ಸಾಕ್ಷಿಯಾಗಿ, ಗುರು-ಹಿರಿಯರ ಸಾಕ್ಷಿಯಾಗಿ ಸತ್ಯಪಥದಲ್ಲಿ ನಡೆಯತ್ತೇನೆ, ಸಮಾಜಕ್ಕೆ ಹಿತಕಾರಿಯಾಗಿ ಬಾಳುತ್ತೇನೆ ಎಂದು ಈ ಸಂದರ್ಭದಲ್ಲಿ ಸಂಕಲ್ಪವನ್ನೂ ಮಾಡಬೇಕಾಗುತ್ತದೆ ಎಂದರಲ್ಲದೆ ಧರಿಸುವ ಮೂರು ಎಳೆಯ ಯಜ್ಞೋಪವೀತ ದೇವಋಣ, ಪಿತೃಋಣ ಮತ್ತು ಆಚಾರ್ಯಋಣಗಳನ್ನು ನೆನಪಿಸುವ, ಸತ್ಯಪಥದಲ್ಲಿ ಸಾಗಬೇಕೆಂಬುದನ್ನು ನೆನಪಿಸುವ ಸಾಧನವಾಗಿದೆಯೆಂದರು. ಎಲ್ಲಾ ಮಾನವರಿಗೂ ವೇದಾಧ್ಯಯನ ಮಾಡಲು ಮತ್ತು ಉಪನಯನ ಸಂಸ್ಕಾರ ಪಡೆಯಲು ಅಧಿಕಾರವಿದೆಯೆಂದರು.
ಹರಿಹರಪುರ ಶ್ರೀಧರ್, "ನಾವೆಲ್ಲರೂ ಭೂತಾಯಿಯ ಮಕ್ಕಳು, ಸೋದರರಂತೆ ಬಾಳಬೇಕು, ಅಸಮಾನತೆಗೆ ಅವಕಾಶವಿಲ್ಲವೆಂದು ಸಾರಿ ಹೇಳುವ ವೇದಮಂತ್ರದ ಉದಾಹರಣೆಯೊಂದಿಗೆ ಹುಟ್ಟಿನಿಂದ ಯಾರೂ ಶ್ರೇಷ್ಠರೂ ಅಲ್ಲ, ಕನಿಷ್ಠರೂ ಅಲ್ಲ; ನಮ್ಮ ನಡವಳಿಕೆ ಮತ್ತು ಕರ್ಮಗಳಿಗೆ ಅನುಸಾರವಾಗಿ ಯೋಗ್ಯತೆ ಬರುತ್ತದೆ; ವೇದಭಾರತಿ ಹಲವು ವರ್ಷಗಳಿಂದ ಯಾವುದೇ ಜಾತಿ, ಮತ, ಪಂಥ, ಲಿಂಗ, ವಯಸ್ಸಿನ ಭೇದವಿಲ್ಲದೆ ವೇದಾಸಕ್ತ ಎಲ್ಲರಿಗೂ ವೇದವನ್ನು ಕಲಿಯಲು ಅವಕಾಶ ಮಾಡಿಕೊಟ್ಟಿದೆ. ಇಂತಹ ಸಾಮರಸ್ಯ ಸಾರುವ ಕಾರ್ಯಗಳು ನಮ್ಮನಮ್ಮಲ್ಲಿ ಬಾಂಧವ್ಯವನ್ನು ಹೆಚ್ಚಿಸಲು ಸಹಕಾರಿ" ಎಂದು ಅಭಿಪ್ರಾಯಪಟ್ಟರು. ಕವಿನಾಗರಾಜರು ಮಾತನಾಡಿ, "ವೇದಭಾರತಿ ಸಮಾಜಮುಖಿಯಾದ ಯಾವುದೇ ಚಟುವಟಕೆಗಳನ್ನು ಯಾರೇ ಮಾಡಲಿ, ಅವರೊಂದಿಗೆ ಕೈಜೋಡಿಸುತ್ತದೆ. ನೀವುಗಳೂ ಸಹ ವೇದಭಾರತಿಯೊಂದಿಗೆ ಕೈಜೋಡಿಸಿದರೆ ಉತ್ತಮ ಕಾರ್ಯಗಳಿಗೆ ಉತ್ತೇಜನ ದೊರೆಯುತ್ತದೆ" ಎಂದರು.
ಹರ್ಷಭರಿತರಾಗಿದ್ದ ವಟುವಿನ ತಂದೆ ಕೃಷ್ಣಮೂರ್ತಿಯವರು ಮನದುಂಬಿ ಹೇಳಿದ ಮಾತುಗಳಿವು: "ನಮಗೆ ಇಂದು ಅತ್ಯಂತ ಸಂತೋಷವಾಗಿದೆ. ಯಾವುದೇ ಸಂಕೋಚ, ತಾರತಮ್ಯವಿಲ್ಲದೆ ನಮ್ಮನ್ನೂ ತಮ್ಮವರಂತೆ ಭಾವಿಸಿ ಉಪನಯನ ಮಾಡಿಸಿರುವುದಕ್ಕೆ ವೇದಭಾರತಿಯವರಿಗೆ ಆಭಾರಿಯಾಗಿದ್ದೇನೆ. ನಮ್ಮಲ್ಲೂ ಸಹ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ತಾಮಸ ಆಹಾರವನ್ನು ಬಿಟ್ಟು, ಸಾತ್ವಿಕ ಆಹಾರ ಸೇವಿಸುವುದು, ನಮ್ಮ ಜೀವನದ ರೀತಿಗಳಲ್ಲಿ ಬದಲಾವಣೆ ಮಾಡಿಕೊಂಡು ಶುದ್ಧಜೀವನ ನಡೆಸುವ ಬಗ್ಗೆ ಗಮನಕೊಡಬೇಕು. ನಮ್ಮ ಅನೇಕ ಬಂಧುಗಳು ಆಮಿಷಕ್ಕೊಳಗಾಗಿ ಅನ್ಯಮತಗಳಿಗೆ ಮತಾಂತರ ಹೊಂದಿದ್ದಾರೆ. ಈಗ ಹೇಳಿದಂತೆ ವೇದದ ಆಶಯದಂತೆ ಒಳ್ಳೆಯ ರೀತಿಯಲ್ಲಿ ಎಲ್ಲರೂ ನಡೆದರೆ ಹಿಂದೂಧರ್ಮದ ಉಳಿವಿಗೆ ಸಹಾಯವಾಗುತ್ತದೆ. ಮತಾಂತರಗಳನ್ನು ತಡೆಯಲು ಹಿಂದಿನಿಂದಲೂ ನನ್ನ ಕೈಲಾದ ಪ್ರಯತ್ನ ಮಾಡುತ್ತಲೇ ಇದ್ದೇನೆ. ಇನ್ನು ಮುಂದೆಯೂ ಈ ಕೆಲಸ ಮುಂದುವರೆಸುತ್ತೇನೆ."
ವೇದಾಭಿಮಾನಿಗಳು, ಹಿರಿಯರು ವಟುವಿಗೆ ಆಶೀರ್ವದಿಸಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಭೋಜನ ಸ್ವೀಕರಿಸಿ ಒಳ್ಳೆಯ ಕೆಲಸವಾಯಿತೆಂಬ ಭಾವದೊಂದಿಗೆ ಹಾಸನಕ್ಕೆ ಹಿಂತಿರುಗಿದೆವು.
ವೇದಾಭಿಮಾನಿಗಳು, ಹಿರಿಯರು ವಟುವಿಗೆ ಆಶೀರ್ವದಿಸಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಭೋಜನ ಸ್ವೀಕರಿಸಿ ಒಳ್ಳೆಯ ಕೆಲಸವಾಯಿತೆಂಬ ಭಾವದೊಂದಿಗೆ ಹಾಸನಕ್ಕೆ ಹಿಂತಿರುಗಿದೆವು.
-ಕ.ವೆಂ.ನಾಗರಾಜ್.
*****************
ಚಿತ್ರಕೃಪೆ: ಹರಿಹರಪುರ ಶ್ರೀದರ್.
*****************
ಚಿತ್ರಕೃಪೆ: ಹರಿಹರಪುರ ಶ್ರೀದರ್.
Subscribe to:
Posts (Atom)