Pages

Monday, July 9, 2012

ಶ್ರೀ ಬೆಳೆಗೆರೆ ಕೃಷ್ಣಶಾಸ್ತ್ರಿ ಳೊಡನೆ ಕೆಲವು ನಿಮಿಷಗಳು


ಇಂದು ಬೆಂಗಳೂರಿನ ಶ್ರೀ ಬೆಳೆಗೆರೆ ಕೃಷ್ಣಶಾಸ್ತ್ರಿಗಳ ಮನೆಗೆ ನಾವು ಕೆಲವು ಮಿತ್ರರು ಹೋಗಿದ್ದೆವು . ನನ್ನೊಡನೆ ಶ್ರೀಮತಿ ಮಾಲತಿ, ಶ್ರೀಯುತ ಶಂಕರ್, ಶ್ರೀ ಶಿವಕುಮಾರ್ ಮತ್ತು ಅವರ ಸ್ನೇಹಿತರಾದ ಶ್ರೀ ಗಿರೀಶ್  ಇದ್ದರು. ಶ್ರೀ ಶಾಸ್ತ್ರಿಗಳೊಡನೆ ನಡೆಸಿದ ಮಾತುಕತೆಯ ವೀಡಿಯೋ / ಆಡಿಯೋ ಗಳನ್ನು ಮುಂದಿನ ದಿನಗಳಲ್ಲಿ ಅಳವಡಿಸಲಾಗುವುದು.ಶ್ರೀ ಶಾಸ್ತ್ರಿಗಳು ಅವರ ತೊಂಬತ್ತೆಳನೆಯ ವಯಸ್ಸಿನಲ್ಲಿ ನಮ್ಮೊಡನೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. ನಾನು ಇನ್ನು ಒಂದು ವಾರ ಕಾಲ ಮುಂಬೈ ಪ್ರವಾಸದಲ್ಲಿರುವುದರಿಂದ ಪ್ರವಾಸದಿಂದ ಹಿಂದಿರುಗಿದ ನಂತರ ಆಡಿಯೋ /ವೀಡಿಯೋ ಪ್ರಕಟಿಸುವೆ..





Sunday, July 8, 2012

ಚಿರಂತನ ಸತ್ಯ


ಚಿರಂತನ ಸತ್ಯ

ಸ್ವಾಮಿ ವಿವೇಕಾನಂದರು ಅಮೆರಿಕಾದಲ್ಲಿ ಭಾಷಣ ಮಾಡುತ್ತಿರುವಾಗ ಒಬ್ಬ ಮಹನೀಯರು ಎದ್ದು ನಿಂತು " ಸ್ವಾಮಿಜಿ, ನೀವು ಒಂದು ಬಗೆಯ ಸಂಮೊಹನವನ್ನು  ಬೋಧಿಸುತ್ತಿಲ್ಲಾ ತಾನೇ? " ಎಂದು ಪ್ರಶ್ನಿಸಿದರು. ಸ್ವಾಮಿಜಿ ನಸುನಗುತ್ತ    " ಇಲ್ಲ. ನಾನು ನಿಮ್ಮನ್ನು ಸಂಮೊಹನಾವಸ್ಥೆಯಿಂದ ಬಿಡಿಸುತ್ತಿದ್ದೇನೆ.  ನೀವು ಈಗಾಗಲೇ ಸಮ್ಮೋಹನಕ್ಕೆ ಒಳಗಾಗಿ ಬಿಟ್ಟಿದ್ದಿರಿ.  ನಾನು ಬಿಳಿಯ, ಅವನು ಕರಿಯ, ನಾನು ಶ್ರೀಮಂತ, ಅವನು ಬಡವ, ನಾನು ಅಧಿಕಾರಿ, ಅವನು ಜವಾನ ಇತ್ಯಾದಿ ಇತ್ಯಾದಿಗಳಲ್ಲಿ ತೊಳಲಾಡುತ್ತಾ ಇದ್ದೀರಿ.  ವಾಸ್ತವದಲ್ಲಿ ಈ ಯಾವ ಸ್ಥಿತಿಯು ನಿಮ್ಮದ್ದಲ್ಲ.  ನೀವು ಆ ಚಿರಂತನ ಸತ್ಯವಾದ ಆತ್ಮ ಮಾತ್ರ.  ಈ ಸತ್ಯವನ್ನು ಅರಿಯಬೇಕಾದರೆ, ನೀವು ಈಗಾಗಲೇ ಒಳಗಾಗಿರುವ ಸಮ್ಮೋಹನ ಸ್ಥಿತಿಯಿಂದ ಹೊರಬರಬೇಕಾಗಿದೆ.  ಈ ಕೆಲಸವನ್ನು ನಾನು ಮಾಡುತ್ತಿದ್ದೇನೆ. "  ಎಂದು ಚಾಟಿ ಎಟಿನಂತಹ ಉತ್ತರವನ್ನು ಕೊಟ್ಟರು.

ಇಂದಿನ ನಮ್ಮ ಸ್ಥಿತಿಯು ಇದಕ್ಕೆ ಹೊರತೇನಲ್ಲ. ನಾವು ಒಂದು ರೀತಿಯ ಸಮ್ಮೋಹನ ಸ್ಥಿತಿಯಲ್ಲೇ ತೊಳಲಾಡುತ್ತಿದ್ದೇವೆ.  ನಮ್ಮೊಳಗಿರುವ ಲೆಕ್ಕವಿಲ್ಲದಷ್ಟು ನಂಬಿಕೆಗಳು, ನಮ್ಮನ್ನು ಅಧೋಗತಿಗೆ ತಳ್ಳುತ್ತಿವೆ. ಧರ್ಮದ ಸತ್ಯವನ್ನು ಅರ್ಥಮಾಡಿಕೊಳ್ಳದೆ ಇಂದು ನಾವು ಕಚ್ಚಾಡುತ್ತಿದ್ದೇವೆ.  ನನ್ನ ಮತ ಹಿರಿದು, ನಿನ್ನ ಮತ ಕಿರಿದು, ನಾನು ಉತ್ಕೃಷ್ಟ, ನೀನು ನಿಕೃಷ್ಟ ಇತ್ಯಾದಿಗಳಲ್ಲಿ ಕಿರುಚಾಡುತ್ತಿದ್ದೇವೆ.  ಆದರೆ, ಆ ದಿವ್ಯ ಸತ್ಯದ ಎದುರು ನಾವೆಲ್ಲಾ ಒಂದು, ಎಂಬುದನ್ನು ನಾವು ಮರತೇ ಬಿಟ್ಟಿದ್ದೇವೆ.   ನಮ್ಮ ಆಚರಣೆಗಳು, ನಂಬಿಕೆಗಳು, ವಿಚಾರಗಳು ಬೇರೆಯಾದ ಮಾತ್ರಕ್ಕೆ  ಸತ್ಯವು ಬದಲಾಗುತ್ತದೆಯೇ?  ಯಾವ ರೀತಿ ದೈಹಿಕವಾಗಿ, ಮಾನಸಿಕವಾಗಿ ನಮ್ಮನ್ನು ನಾವು ಬದಲು ಮಾಡಿಕೊಂಡರೂ ಸತ್ಯ ಮಾತ್ರ ಯಾವಕಾಲಕ್ಕೂ ಒಂದೇ ಎಂಬುದನ್ನು ನಾವು  ಅರಿಯಲು ಅಸಮರ್ಥರಾಗಿದ್ದೇವೆ.  ಭಗವಂತನ ಸೃಷ್ಟಿಯಲ್ಲಿ ನಾವೆಲ್ಲ ಒಂದೇ ಅಲ್ಲವೇ?  ಅವರವರ ಕರ್ಮಾನುಸಾರ ಜನ್ಮ ತಳೆಯಲು ಸಾಧ್ಯವಾಗಿರುತ್ತದೆಯ ವಿನಃ ಬೇರೇನೂ ಅಲ್ಲ.  ಯಾರು ಯಾವುದೇ ಮತದಿಂದಾಗಲಿ, ಧರ್ಮದಿಂದಾಗಲಿ ದೊಡ್ದವರಾಗಲು   ಸಾಧ್ಯವಿಲ್ಲ.  ಧರ್ಮದಲ್ಲಿರುವಂತಹ ಚಿರಂತನ ಸತ್ಯವನ್ನು ಅರಿತು ದಿನ ನಿತ್ಯದಲ್ಲಿ ಆಚರಣೆಗೆ ತಂದರೆ ಆಗ ಮಾತ್ರ  ದೊಡ್ಡ ವ್ಯಕ್ತಿಯಾಗಲು ಸಾಧ್ಯ.. 

ನೀವೇನು ಹೇಳುತ್ತೀರಾ ?.............

ಹೆಚ್ ಏನ್ ಪ್ರಕಾಶ್ 


Saturday, July 7, 2012

ಶಾಠ್ಯೇನ ಮಿತ್ರಂ ....


ಶಾಠ್ಯೇನ ಮಿತ್ರಂ ಕಪಟೇನ ಧರ್ಮಂ ಪರೋಪತಾಪೇನ ಸಮೃದ್ಧ ಭಾವಮ್ ।
ಸುಖೇನ ವಿದ್ಯಾಮ್ ಪುರುಷೇಣ ನಾರೀಂ ವಾಂಚಂತಿ ನೂನಮಪಂಡಿತಾಸ್ತೇ ॥

ಮೋಸದಿಂದ ಸ್ನೇಹಿತನನ್ನೂ, ವಂಚನೆಯಿಂದ ಧರ್ಮವನ್ನೂ, ಇತರರಿಗೆ ಹಿಂಸೆ ಮಾಡುವುದರಿಂದ ಸಮೃದ್ಧಿಯನ್ನೂ, ಸುಖದಿಂದ ವಿದ್ಯೆಯನ್ನೂ, ಒರಟಾದ ಮಾತುಗಳಿಂದ ಹೆಂಗಸನ್ನೂ ಯಾರು ಪಡೆಯಲು ಬಯಸುತ್ತಾರೆಯೋ ಅವರು ನಿಜವಾದ ಅವಿವೇಕಿಗಳು.
ನಾಳೆಯಿಂದ ಒಂದುವಾರ ನಾನು ಬೆಂಗಳೂರು ಮತ್ತು ಮುಂಬೈ ಪ್ರವಾಸ ದಲ್ಲಿರುವೆ.  ಈ ದಿನಗಳಲ್ಲಿ ಮಿತ್ರ ಲೇಖಕರು ತಮ್ಮ ಲೇಖನಗಳನ್ನು ಪ್ರಸ್ತುತ ಪಡಿಸುತ್ತಲೇ ಇರುತ್ತಾರೆ. ನಾನು ಹಿಂದಿರುಗಿದ ಮೇಲೆ ಮುಕುಂದೂರು ಸ್ವಾಮಿಗಳ ವಿಚಾರಗಳನ್ನು ಹಂಚಿಕೊಳ್ಳುವೆ. ಸಹಕಾರ ಎಂದಿನಂತಿರಲಿ. ನಾಳೆ ಸಂಜೆ ಐದು ಗಂಟೆಗೆ ಶ್ರೀ ಬಳೆಗೆರೆ ಕೃಷ್ಣ ಶಾಸ್ತ್ರಿಗಳನ್ನು ಅವರ ಬೆಂಗಳೂರು ನಿವಾಸದಲ್ಲಿ ಭೇಟಿಯಾಗುವ ಕಾರ್ಯಕ್ರಮವಿದೆ. ಅವರೊಡ ನೆ ನಡೆದ ಮಾತುಕತೆಯ ಬಗ್ಗೆ  ಪಾಲ್ಗೊಂಡಿದ್ದ ಯಾರಾದರೂ ಬರೆಯ ಬಹುದು. ಇಲ್ಲವಾದರೆ ನಾನು ಇನ್ನು ಒಂದು ವಾರದ ನಂತರ ಪ್ರವಾಸದಿಂದ ಹಿಂದಿರುಗಿ ನಂತರ  ಬರೆಯುವೆ.

-ಹರಿಹರಪುರಶ್ರೀಧರ್
ಸಂಪಾದಕ, ವೇದಸುಧೆ

ಶ್ರೀ ಬೇಳೆಗೆರೆ ಕೃಷ್ಣ ಶಾಸ್ತ್ರಿಗಳ ಭೇಟಿಯ ವಿವರ:


ಭೇಟಿಯ ಸಮಯ:  8.7.2012 ಭಾನುವಾರ  ಸಂಜೆ 5.00 ಗಂಟೆಗೆ  ಅವರ ಮನೆಯಲ್ಲಿ.

ವಿಳಾಸ:

ಶ್ರೀ ರವಿಬೆಳಗೆರೆಯವರ ನಿವಾಸ
ಶೃತಿ ಬೇಕರಿ ಹತ್ತಿರ
24ನೇ ಕ್ರಾಸ್
ಕೆ.ಆರ್.ರಸ್ತೆ
ಬೆಂಗಳೂರು

ಸಂಪರ್ಕಿಸಲು ನನ್ನ ಮೊಬೈಲ್ ನಂಬರ್: 9663572406

ಯೋಚಿಸಲೊ೦ದಿಷ್ಟು...೫೧




೧.ಆತ್ಮಗೌರವವನ್ನು ಮೊದಲು ರಕ್ಷಿಸಿಕೊಳ್ಳಬೇಕು.ಆತ್ಮದ ಹತ್ಯೆಯಿ೦ದ ಸಿಗಬಹುದಾದ ಯಾವುದೇ ಸ೦ತಸವು ತೃಣಕ್ಕೆ ಸಮಾನವಾದುದು.
೨.ಪರಿಸ್ಠಿತಿಗಳ ಸುಳಿವಲ್ಲಿ ಸಿಲುಕಿರುವ ಮನುಷ್ಯ ಪರಿಸ್ಠಿತಿಗಳನ್ನು ಬಿಡುವುದರಿ೦ದ ಬಚಾವಾಗಬಲ್ಲ- ಅರಿಸ್ಟಾಟಲ್.
೩.ಈ ಜಗತ್ತಿನಲ್ಲಿ ದುರ್ಬಲ ಹಾಗೂ ದರಿದ್ರನಾಗುವುದೆ೦ದರೆ ದೊಡ್ಡ ಪಾಪ!
೪. ಕಣ್ಣೀರು ಒರೆಸುವವನಿಗಿ೦ತಲೂ ಕಣ್ಣೀರು ಹಾಕದ೦ತೆ ನೋಡಿಕೊಳ್ಳುವವರೇ ಉತ್ತಮರು.
೫. ಕೋಪವೆ೦ಬುದು ಅತ್ಯ೦ತ ಪ್ರಬಲವಾದ ಆಮ್ಲ! ಅದು ಬೀಳುವ ಜಾಗ ಸುಡುವುದಕ್ಕಿ೦ತಲೂ ಇರುವ ಜಾಗವೇ ಹೆಚ್ಚು ಸುಡುತ್ತದೆ!
೬. ಮನಸ್ಸಿನಲ್ಲಿ ಭಾವನೆಗಳಿಗೆ ಸ್ಠಾನವಿದ್ದಲ್ಲಿ  ಸ್ನೇಹ ಅರಳುತ್ತದೆ!
೭. ವ್ಯಕ್ತಿ ಎಷ್ಟು ಎತ್ತರಕ್ಕೆ ಏರಿದ್ದಾನೆ ಎ೦ಬುದು ಮುಖ್ಯವಲ್ಲ! ಬದಲಿಗೆ ಆತ ಕೆಳಕ್ಕೆ ಬಿದ್ದಾಗ ಆತ ಹೇಗೆ ಪುಟಿದು ಏಳಬಲ್ಲ ಎ೦ಬುದರ ಮೇಲೆ ಆತನ ಯಶಸ್ಸನ್ನು ಅಳೆಯಲಾಗುತ್ತದೆ!- ವಿನ್ ಸ್ಟನ್ ಚರ್ಚಿಲ್
೮. ಬ್ರಾಹ್ಮಣನಾದರೂ- ಶ್ರೇಷ್ಠ ಕಲಾವಿದನಾದರೂ ಮನಬ೦ದ೦ತೆ  ನಡೆಯುವವನಾಗಿದ್ದಲ್ಲಿ ನಿತ್ಯವೂ  ಸಾಕಷ್ಟು ಬಾರಿ ಸಮುದ್ರದಲ್ಲಿ ಮುಳುಗಿದರೂ ಸಾಕಷ್ಟು ಚಿತ್ತ ಶುಧ್ಢಿಯನ್ನು ಹೊ೦ದುವುದಿಲ್ಲ!- ಮಹಾಭಾರತ
೯. ಎಲ್ಲರ ಉನ್ನತಿಯಲ್ಲಿ ತನ್ನ ಉನ್ನತಿಯನ್ನು ಕಾಣಬೇಕು!
೧೦. ಮನುಷ್ಯನಾದವನು ಗಣ್ಯನೆ೦ದೆನಿಸಿಕೊಳ್ಳಬೇಕಾದರೆ ಅವನೊಬ್ಬ ಶ್ರೇಷ್ಠ ಚಿ೦ತಕನಾಗಿರಬೇಕು- ಪೆರಿಯಾರ್
೧೧. ಗಡ್ಡ ಬಿಟ್ಟವರೆಲ್ಲಾ ದಾರ್ಶನಿಕರಲ್ಲ!
೧೨. ನಗುವು ಸಾವನ್ನು ಮು೦ದೂಡುತ್ತದೆ!
೧೩. ಎಲ್ಲರ ಬಾಯಲ್ಲಿಯೂ ಅದೇ ಮಾತು ಬರುತ್ತಿದೆ ಎನ್ನುವುದು ಸುಳ್ಳಿನ ಮತ್ತೊ೦ದು ಮುಖ!
೧೪. ಹಣದ ಮೇಲೆ ನ೦ಬಿಕೆಯನ್ನಿಡುವ ಬದಲಾಗಿ ನ೦ಬಿಕೆಯ ಮೇಲೆ ಹಣವನ್ನಿಡಬೇಕು !
೧೫. ಎಲ್ಲರೂ ಕೂಗಾಡಬಲ್ಲರು. ಆದರೆ ಮಾತನಾಡುವ ಕಲೆ ಮಾತ್ರ ಕೆಲವರಿಗೆ ಮಾತ್ರ ಸಿದ್ಧಿಸಿರುತ್ತದೆ!
೧೫. ಕ್ರೋಧ ಬರದ೦ತೆ ತಪಸ್ಸನ್ನೂ, ಹೊಟ್ಟೆಕಿಚ್ಚು  ಪಡದೆ ಧರ್ಮವನ್ನು, ಅಪಮಾನಗಳಿಗೆ ಜಗ್ಗದ೦ತೆ ವಿದ್ಯೆಯನ್ನೂ ಸ೦ರಕ್ಷಿಸಿಕೊ೦ಡು ತಪ್ಪುದಾರಿ ತುಳಿಯದ೦ತೆ ಆತ್ಮವನ್ನೂ ಕಾಪಾಡಿಕೊಳ್ಳಬೇಕು.

Friday, July 6, 2012

ಶ್ರೀ ಬೆಳಗೆರೆ ಕೃಷ್ಣಶಾಸ್ತ್ರಿಗಳ ಭೇಟಿ

         




ಯೇಗ ದಾಗೆಲ್ಲಾ ಐತೆ ಪುಸ್ತಕದಿಂದ ಪ್ರೇರಣೆ ಪಡೆದಿರುವ  ಓದುಗ ಬಂಧುಗಳೇ,   ಅವಧೂತರಾದ  ಮುಕುಂದೂರು ಸ್ವಾಮಿಗಳ ಬಗ್ಗೆ  ಹೆಚ್ಚು ತಿಳಿದುಕೊಳ್ಳುವ ಕಾತುರ, ಅವರ ವಿಚಾರದ ಪ್ರಚಾರ ಮಾಡುವ ಉದ್ಧೇಶದಿಂದ  ನಾವು ಕೆಲವು ಮಿತ್ರರು ನಮ್ಮ  ಹುಡುಕಾಟ ಆರಂಭಿಸಿದ್ದೇವೆ. ಮೊದಲನೆಯ  ಹಂತವಾಗಿ ಅರಸೀಕೆರೆ ಸಮೀಪದ  ಆಶ್ರಮಕ್ಕೆ ಭೇಟಿಕೊಟ್ಟು ಕೆಲವರನ್ನು ಮಾತನಾಡಿಸಿರುವ ಬಗ್ಗೆ ಈಗಾಗಲೆ ವರದಿಮಾಡಲಾಗಿದೆ. ಮುಂದಿನ ಹೆಜ್ಜೆಯಾಗಿ ಮುಕುಂದೂರು ಸ್ವಾಮಿಗಳನ್ನು ಬಹಳ ಹತ್ತಿರದಿಂದ ಬಲ್ಲವರೂ,  ಅವರ ಬಗ್ಗೆ  " ಯೇಗ ದಾಗೆಲ್ಲಾ ಐತೆ"  ಪುಸ್ತಕವನ್ನು ಬರೆದು ನಮ್ಮಲ್ಲಿ  ಪ್ರೇರಣೆ ನೀಡಿರುವ ವಯೋ ವೃದ್ಧರಾದ ಶ್ರೀ ಬೆಳಗೆರೆ ಕೃಷ್ಣಶಾಸ್ತ್ರಿಗಳನ್ನು ಭೇಟಿಮಾಡಲು ಉದ್ಧೇಶಿಸಲಾಗಿದೆ. ಪೂಜ್ಯರನ್ನು ಭೇಟಿ ಮಾಡಲು ದೂರವಾಣಿ ಮೂಲಕ ವಿನಂತಿಸಿ ಅನುಮತಿ ಪಡೆಯಲಾಗಿದೆ. ಪೂಜ್ಯರನ್ನು  ಭೇಟಿಮಾಡಬಯಸುವವರು ನಮ್ಮೊಡನೆ     ಸೇರಬಹುದು.

ಭೇಟಿಯ ಸಮಯ:  8.7.2012 ಭಾನುವಾರ  ಸಂಜೆ 5.00 ಗಂಟೆಗೆ  ಅವರ ಮನೆಯಲ್ಲಿ.

ವಿಳಾಸ:

ಶ್ರೀ ರವಿಬೆಳಗೆರೆಯವರ ನಿವಾಸ
ಶೃತಿ ಬೇಕರಿ ಹತ್ತಿರ
24ನೇ ಕ್ರಾಸ್
ಕೆ.ಆರ್.ರಸ್ತೆ
ಬೆಂಗಳೂರು

ಸಂಪರ್ಕಿಸಲು ನನ್ನ ಮೊಬೈಲ್ ನಂಬರ್: 9663572406
--