Pages

Saturday, July 31, 2010

ಅವಧೂತ-1

ಈಗತಾನೇ ನನಗೊಂದು ದು:ಖದ ಸುದ್ಧಿ ಬಂತು. ಸಕ್ಕರಾಯ ಪಟ್ಟಣದ ಅವಧೂತರಾದ ಪೂಜ್ಯ ವೆಂಕಟಾಚಲಯ್ಯನವರು ಇನ್ನಿಲ್ಲ ವೆಂಬ ಸುದ್ಧಿಯನ್ನು ಮಿತ್ರ ಮಂಜು ಮುಟ್ಟಿಸಿದ್ದಾರೆ.ವೇದಸುಧೆಯ ಅಭಿಮಾನಿಗಳಿಗೂ ಅವಧೂತರ ಶಿಷ್ಯರಿಗೂ ದು:ಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲೆಂದು ಅವನಲ್ಲಿ ವೇದಸುಧೆಯು ಪ್ರಾರ್ಥಿಸುತ್ತದೆ.
ಮೊನ್ನೆ ರಾತ್ರಿ ನನಗೊಂದು ಕನಸು. ಹೊಳೇನರಸೀಪುರದ ಅಧ್ಯಾತ್ಮಪ್ರಕಾಶ ಕಾರ್ಯಾಲಯದಲ್ಲಿ ಐವತ್ತಕ್ಕೂ ಹೆಚ್ಚು ವರ್ಷಗಳು ಸೇವೆ ಸಲ್ಲಿಸಿದ ಪಂಡಿತ ಶ್ರೀ ಲಕ್ಷ್ಮೀನರಸಿಂಹಮೂರ್ತಿಗಳು ನಮ್ಮನ್ನಗಲಿ ೩-೪ ವರ್ಷಗಳಾಗಿರಬಹುದು. ಅವರೊಡನೆ ಸಕ್ಕರಾಯಪಟ್ಟಣದ ಪೂಜ್ಯ ಅವಧೂತರನ್ನು ಕಂಡೆ. ಬೆಳಿಗ್ಗೆ ಎದ್ದವನೇ ಪತ್ನಿಗೆ ಕನಸನ್ನು ಹೇಳಿದ್ದೆ. ನಾಳಿದ್ದು ಸೋಮವಾರ ಅವಧೂತರನ್ನು ನೋಡಬೇಕೆಂದುಕೊಂಡಿದ್ದೆ.ಇನ್ನೆಲ್ಲಿ ನೋಡಲಿ? ಕನಸಲ್ಲಂತೂ ಇಬ್ಬರು ಪೂಜ್ಯರೂ ಕೊಟ್ಟ ದರ್ಷನ ಜೀವನದಲ್ಲಿ ಮರೆಯಲಾರೆ.

1 comment:

  1. ಸಖರಾಯ ಪಟ್ಟಣದಲ್ಲಿ ಒಬ್ಬ ಅವಧೂತರಿದ್ದರು, ಅವರು ಸಾದಾ ಸೀದಾ ಜನರಂತೆ ಇದ್ದರು, ತ್ರಿಕಾಲ ಜ್ನಾನಿಗಳಾಗಿದ್ದರು ಎಂದು ಕೇಳಿದ್ದೆ, ಅವರನ್ನು ಒಮ್ಮೆ ದರ್ಶಿಸುವ ಬಯಕೆ ಇತ್ತು, ಈಗ ಅದು ಅಪೂರ್ಣ, ಒಂದು ಮಾತು ಸತ್ಯ, ಇಂಥವರೆಲ್ಲ ಹೋದರು ಎನ್ನುವುದಕ್ಕಿಂತ ನಮಗೆ ಸಿಗುವ ವೃತ್ತದಿಂದ ಹೊರಗೆ ನಡೆದರು ಎನ್ನುವುದು ಸೂಕ್ತ, ಅವರು ನಡೆದು ಹೋದರೂ ಅವರ ಪ್ರಭೆ ಆ ಪ್ರಕಾಶ ಅವರು ವಾಸವಿದ್ದಲ್ಲಿ, ಅವರು ಹೆಚ್ಚಾಗಿ ಜಪತಪಾದಿಗಳನ್ನು ಮಾಡುತ್ತಿದ್ದರೋ ಅಲ್ಲಿ ಇರುತ್ತದೆ, ಆ ಜಾಗವನ್ನು ದರ್ಶಿಸಿದರೂ ಪುಣ್ಯವೇ! ಅವರ ಶಿಷ್ಯರು ಎಲ್ಲೆಲ್ಲಿದ್ದರು ತಿಳಿದಿಲ್ಲ, ಭಾಗವನ್ ಕೃಷ್ಣ ಹೇಳುತ್ತಾನಲ್ಲ, "ಹೋದಾಗ ದುಃಖಿಸಬೇಡಿ, ಸ್ಥಿತಪ್ರಜ್ಞರಾಗಿ ನಿಮ್ಮ ಕರ್ತವ್ಯ ಮಾಡಿ" -ಎಂದು ಹಾಗೇ ಆ ಗುರುವಿನ ಭೌತಿಕ ಕಾಯದ ಮುಂದಿನ ಸಮಾಧಿಯೇ ಮೊದಲಾಗಿ ಕಾರ್ಯಗಳನ್ನು ನೆರವೇರಿಸಲಿ, ಆರಾಧಿಸಲಿ, ಅವರಿಗೂ, ನಿಮಗೂ, ನಮಗೂ ಸೇರಿದಂತೆ ಜಗದ ಎಲ್ಲರಿಗೂ ಒಳಿತಾಗಲಿ ಎಂದು ಪ್ರಾರ್ಥಿಸುತ್ತೇನೆ.

    ReplyDelete