ಏನಂತೆ? ? . . .! !
ಏನಂತೆ? ಸೋತರೇನಂತೆ?
ಸೋಲೆಂಬುದೇನೆಂದು ತಿಳಿಯಿತಂತೆ!
ಗೆಲುವಿನ ದಾರಿಯದು ಕಂಡಿತಂತೆ!!
ಏನಂತೆ? ಬಿದ್ದರೇನಂತೆ?
ನೋವೆಂಬುದೇನೆಂದು ತಿಳಿಯಿತಂತೆ!
ನೋಡಿ ನಡೆಯಲು ಕಲಿತೆನಂತೆ!!
ಏನಂತೆ? ಹಸಿವಾದರೇನಂತೆ?
ದುಡಿದು ಉಣ್ಣಲು ಮಾರ್ಗವಂತೆ!
ಹಳಸಿದ ಅನ್ನವೂ ರುಚಿಯಂತೆ!!
ಏನಂತೆ? ದುಃಖವಾದರೇನಂತೆ?
ಸಂತೋಷದ ದಾರಿ ಸಿಕ್ಕಿತಂತೆ!
ಸುಖವೆಂಬುದೊಳಗೇ ಇದೆಯಂತೆ!!
ಏನಂತೆ? ತಪ್ಪಾದರೇನಂತೆ?
ನಡೆ ತಿದ್ದಿ ಸಾಗುವ ಮನಸಂತೆ!
ತಲೆ ಎತ್ತಿ ನಡೆಯುವ ಕನಸಂತೆ!
ಏನಂತೆ? ನಿಂದಿಸಿದರೇನಂತೆ?
ನಿಂದಕರ ಬಾಯಿ ಹೊಲಸಂತೆ!
ನಾನಾರೆಂದು ನನಗೆ ತಿಳಿಯಿತಂತೆ!!
ಏನಂತೆ? ಸೂರಿಲ್ಲದಿರೇನಂತೆ?
ಲೋಕವೆ ನನ್ನ ಮನೆಯಂತೆ!
ಬಹು ದೊಡ್ಡ ಮನೆಯೇ ನನ್ನದಂತೆ!!
ಏನಂತೆ? ದಿಕ್ಕಿಲ್ಲದಿರೇನಂತೆ?
ಜನರೆಲ್ಲ ನನ್ನ ಬಂಧುಗಳಂತೆ!
ಬಲು ದೊಡ್ಡ ಸಂಸಾರ ನನ್ನದಂತೆ!!
? ? ! !
ಬಾಳಿನ ಅಂತೆಕಂತೆಗಳ ಕೊರಗಿನಲ್ಲೂ ಸಂಬ್ರಮಿಸಬೇಕಾದ ತಮ್ಮ ಪಾಠ ನಿಜಕ್ಕೂ ಅವಶ್ಯವಾಗಿದೆ ಇಂದಿನ ಪೈಪೋಟಿ ಜಗತ್ತಿಗೆ.
ReplyDeleteಚೆಂದದ ಕವನ.
ಅರ್ಥವತ್ತಾದ ಕವನ...ಬಾಳಲ್ಲಿ ಅಳವಡಿಸಿಕೊಳ್ಳಬೇಕಾದ೦ತಹ ತತ್ವ ಅಡಗಿದೆ.
ReplyDeleteನಾಗರಾಜ್,
ReplyDeleteಮನೆಯಲ್ಲಿ ಕಂಪ್ಯೂಟರ್ ತೊಂದರೆ ಇತ್ತು, ಹಾಗಾಗಿ ಬ್ಲಾಗ್ ನೋಡಲಾಗಿಲ್ಲ. ಕಛೇರಿಯಲ್ಲಿ ಎರಡು ನಿಮಿಷ ಇಣುಕಿರುವೆ ಅಷ್ಟೆ. ವಿಶೇಷವಿದ್ದರೆ ತಿಳಿಸಿ. ನಿಮ್ಮ ಕವನಗಳನ್ನು ನೋಡಿ ಪ್ರತಿಕ್ರಿಯಿಸುತ್ತಿರುವವರ ಸಂಖ್ಯೆ ಬೆಳೆಯುತ್ತಿದೆ.ಹೀಗೇ ಸಾಗಲಿ.
ಧನ್ಯವಾದಗಳು, ಶ್ರೀಧರ್.
ReplyDeleteಧನ್ಯವಾದಗಳು, ಮನಮುಕ್ತಾ ಮತ್ತು ಸೀತಾರಾಮರವರಿಗೆ.
ReplyDelete[ಬಲು ದೊಡ್ಡ ಸಂಸಾರ ನನ್ನದಂತೆ!!]
ReplyDeleteChinnadantaa maatu. Super kavana.
Vandanegalu
-Sridhar