Pages

Wednesday, July 28, 2010

ಮತ್ತೇನೂ ಬೇಡ..

ಬರುವಾಗ ನಾವು ತ೦ದಿದ್ದೇನೂ ಇಲ್ಲ ಇಲ್ಲಿಗೆ
ಹೋಗುವಾಗ ಒಯ್ಯುವುದೇನೂ ಇಲ್ಲ ಅಲ್ಲಿಗೆ
ಆದರೂ ಬದುಕಲಿಕ್ಕಾಗಿ ಏನಾದರೂ ಬೇಕು
ಅತಿಯಾಗಬಾರದು ಯಾವುದೂ!
ಪ್ರೀತಿಯಿರಲಿ,ನ೦ಬಿಕೆಯಿರಲಿ,
ನಾನು-ನನ್ನವರೆನ್ನದೆ ಎಲ್ಲರೂ
ನನ್ನವರೆ೦ಬ ವಿಶ್ವಾಸವಿರಲಿ
ಯಾರನ್ನೂ ಹೊತ್ತುಕೊಳ್ಳಲೂಬಾರದು
ಇಳಿಸಲೂ ಬಾರದು!
ಎಲ್ಲರೊಳೂ ಒ೦ದಾಗಿ ಸ್ವ೦ತಿಕೆಯ ಮೆರೆಯಬೇಕು,
ಬದುಕಿನ ಬ೦ಡಿಯ ನೊಗವ ಸಮನಾಗಿ ಎಳೆದು,
ಪರಸ್ಪರ ವಿಶ್ವಾಸದಲಿ ಒಟ್ಟಿಗೇ
ಉ೦ಡೆದ್ದು ಕೈತೊಳೆಯಬೇಕು!
ಸಮಪಾಲು-ಸಮಬಾಳು
ಹ೦ಚಿ ತಿನ್ನುವ ಸೌಭಾಗ್ಯ,
ಮುಖದಲೊ೦ದು ಸ೦ತಸದ ನಗು
ಬಾಯ್ತು೦ಬಾ ಮಾತು,
ತು೦ಬಿದ ಹೃದಯದ ಹಾರೈಕೆ
ಮತ್ತೇನು ಬೇಕು ಸ೦ತಸದ ನೆಲೆಗೆ,
ಬದುಕ ಕಟ್ಟಿಕೊಳ್ಳುವುದು ನಾವು
ನಮ್ಮ ಬೇಡಿಕೆಯ ಅರಿವು ನಮಗಿರಬೇಕು
ಮತ್ತೇನೂ ಬೇಡ,ಅಷ್ಟಿದ್ದರೆ ಸಾಕು!

9 comments:

  1. ಮುತ್ತಿನ೦ತಹ ಸಾಲುಗಳು...ಜೇವನಕ್ಕೆ ಅತ್ಯಗತ್ಯವಾದ ಅ೦ಶಗಳು...ತಿಳಿಸಿದ ನಿಮಗೆ ಧನ್ಯವಾದಗಳು.

    ReplyDelete
  2. ಧನ್ಯವಾದಗಳು ಮನಮುಕ್ತಾರವರಿಗೆ.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete
  3. ಧನ್ಯವಾದಗಳು ಸೀತಾರಾಮರೇ,
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete
  4. ರಾಘವೇಂದ್ರರೇ, ಇರುವ ಮೂರು ದಿನ ಜನಕೆ ಬೇಕಾಗಿ, ಜಗಕೆ ಬೆಳಕಾಗಿ ಬಾಳಿದರೆ ಸಾಕಲ್ಲವೇ? ಉತ್ತಮ ಸಂದೇಶ ಹೊಮ್ಮಿಸಿದ ರಚನೆ.

    ReplyDelete
  5. ಮೆಚ್ಚಿಕೊ೦ಡ ಕವಿನಾಗರಾಜರು ಹಾಗೂ ವೇದಸುಧೆಗೆ ಧನ್ಯವಾದಗಳು.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete
  6. ಸಮತ್ವಂ ಯೋಗ ಉಚ್ಯತೇ||
    ಹೆಚ್ಚು-ಕಡಿಮೆಗಳಿಲ್ಲದೆ ಎಷ್ಟಿರಬೇಕೋ ಅಷ್ಟು ಇರುವುದು ಸರಿಯಾದ Balance.
    ಜೀವನವೊಂದು Bicycle Rideನಂತೆ. ಎತ್ತಲೂ ವಾಲುವಂತಿಲ್ಲ. ಬ್ಯಾಲೆನ್ಸ್ ಮಾಡಿಕೊಂಡೇ ಸಾಗಬೇಕು!

    ReplyDelete
  7. ಧನ್ಯವಾದಗಳು ಹಿರಿಯರೇ, ನಿಮ್ಮ ಹಾರೈಕೆ ಎ೦ದೂ ನನ್ನ ಮೇಲೆ ಇರಲಿ.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete