Pages

Saturday, July 17, 2010

ಯೋಚಿಸಲೊ೦ದಿಷ್ಟು..... ೩

೧. ಉರಿಯುತ್ತಿರುವ ಮೇಣದ ಬತ್ತಿಯೊ೦ದಿಗೆ,ಮತ್ತೊ೦ದು ಮೇಣದ ಬತ್ತಿಯನ್ನು ಹಚ್ಚಿದರೆ,ಉರಿಯುತ್ತಿರುವ ಮೇಣದ ಬತ್ತಿಯ ಬೆಳಕಿನ ಪ್ರಖರತೆ ಎ೦ದಿಗೂ ಕಡಿಮೆಯಾಗುವುದಿಲ್ಲ. ಹಾಗೆಯೇ ಇನ್ನೊಬ್ಬರ ಕಷ್ಟದಲ್ಲಿ ಅವರತ್ತ ನಮ್ಮ ಸಹಾಯ ಹಸ್ತವನ್ನು ಚಾಚಿದಾಗ, ನಮ್ಮ ಬದುಕು ಸು೦ದರವೂ ಹಾಗೂ ಅರ್ಥಪೂರ್ಣವೂ ಆಗುತ್ತದೆ.
೨.ಎರಡು ಕ್ಷಣಗಳ ಕಾಲ ನಮ್ಮನ್ನು ನಗಿಸಿದ ಮಿತ್ರನಿಗಾಗಿ, ಕಷ್ಟಕಾಲದಲ್ಲಿ ನಮ್ಮ ಕಣ್ಣೀರು ಒರೆಸಿದ ಮಿತ್ರನ್ನು ಕಳೆದುಕೊಳ್ಳು ವುದು ಸಾಧುವಲ್ಲ!

೩. ಸಾಧನೆಗೆ ಅನುಭವದ ಅಗತ್ಯವಿಲ್ಲ. ಅದಕ್ಕೆ ಛಲದ ಮತ್ತು ಬುಧ್ಧಿಶಕ್ತಿಯ ಅಗತ್ಯವಿದೆ!

೪. ಮಾಡಿದ ತಪ್ಪಿನ ಬಗ್ಗೆ ಪಶ್ಚಾತ್ತಾಪಿಸುವುದು ಒಳ್ಳೆಯದೇ. ಆದರೆ ಅದು ಮು೦ದಿನ ತಪ್ಪಿಗೆ ರಹದಾರಿಯಾಗಬಾರದು!

೫. “ ತಪ್ಪು ಎಲ್ಲರಿ೦ದಲೂ ಆಗುತ್ತದೆ“ ಎ೦ದು ನಾವು ಮಾಡಿಕೊಳ್ಳುವ ಮಾನಸಿಕ ಸಮಾಧಾನವೇ, ನಮ್ಮ ಮು೦ದಿನ ತಪ್ಪಿಗೆ ಪ್ರೇರೇಪಣೆಯಾಗಬಲ್ಲುದು!

೬.ನನ್ನದಾಗಿ ಏನೂ ಇಲ್ಲ ಎ೦ದುಕೊಳ್ಳುವ ಬದಲು “ಸ್ವಲ್ಪವಾದರೂ ಇದೆ “ಎ೦ದುಕೊಳ್ಳುವುದು ಚಿ೦ತೆಗೆ ಆಸ್ಪದವೀಯು ವುದಿಲ್ಲ.

೭.“ಏನನ್ನೂ ಸಾಧಿಸಲಾಗುತ್ತಿಲ್ಲ “ಎ೦ದುಕೊ೦ಡು ಕೊರಗುವುದಕ್ಕಿ೦ತ,ಸಾಧನೆಯ ಹಾದಿಯತ್ತ ನಮ್ಮನ್ನು ತೊಡಗಿಸಿಕೊಳ್ಳು ವುದೇ ಉತ್ತಮ.

೮. ಯಾವುದೇ ವಿಚಾರದ ಬಗ್ಗೆಯೂ ತೀವ್ರ ಚಿ೦ತನೆ ತರವಲ್ಲ. ಅದು ನಮ್ಮ ಸಾಧನೆಯ ಹಾದಿಯನ್ನು ಗೊ೦ದಲಮಯವಾಗಿಸಬಲ್ಲುದು!

೯. .ಪರರ ಅನುಭವಗಳು ಒಮ್ಮೊಮ್ಮೆ ನಮ್ಮ ಸಾಧನೆಯ ಹಾದಿಯಲ್ಲಿನ ಗೊ೦ದಲಗಳಿಗೆ ಉತ್ತರವಾಗಬಲ್ಲವು!

೧೦. ಹಸಿದವರಿಗಾಗಿ ಪ್ರಾರ್ಥಿಸುವ ತುಟಿಗಳಿಗಿ೦ತ, ಆಹಾರ ನೀಡುವ ಸಹಾಯ ಹಸ್ತಗಳೇ ಮಿಗಿಲು!

11. ಕೆಲವರಿಗಾಗಿ ಜೀವನದಲ್ಲಿ ಕೆಲವೊ೦ದನ್ನು ತ್ಯಜಿಸಬೇಕಾಗುತ್ತದೆ. ಆದರೆ ಕೆಲವೊ೦ದಕ್ಕಾಗಿ ಕೆಲವರನ್ನು ತ್ಯಜಿಸಬಾರದು. ಆ ಕೆಲವು ನಮ್ಮನ್ನು ಬಿಟ್ಟರೂ ಆ ಕೆಲವರು ನಮ್ಮನ್ನು ಪ್ರೀತಿಸುವವರಾಗಿರಬಹುದು!

೧೨.ಮಿತೃತ್ವವು ಹೃದಯದ ಒ೦ದು ಭಾಗವಾದರೆ, ಹೃದಯವು ಭಾವನೆಗಳ ಗೂಡು. ಭಾವನೆಗಳು ಆರೈಕೆಯ ಸ೦ಕೇತವಾ ದರೆ, ಆರೈಕೆಯು ಮಿತೃತ್ವದ ನಡುವೆ ಬಳಸಬಹುದಾದ ಹೃದ್ಯ ಪದ!

13. ಸತ್ಯದ ಹಾದಿಯಲ್ಲಿ ಎಡರು ತೊಡರುಗಳು ಹೆಚ್ಚಾದರೂ, ಅದೇ ಹಾದಿಯಲ್ಲಿ ನಡೆದಾಗ ಮಾತ್ರವೇ ಬದುಕಿಗೊ೦ದು ಸಾರ್ಥಕ್ಯ ಲಭಿಸುತ್ತದೆ!

೧೪.ನಮಗಿ೦ತ ಉನ್ನತ ಮಟ್ಟದಲ್ಲಿರುವವರನ್ನು ಗಮನಿಸುತ್ತಾ,ನಮ್ಮ ಸಾಧನೆಯ ಹಾದಿಯನ್ನು ಆಗ್ಗಾಗ್ಗೆ ಪರಾಮರ್ಶಿಸಿ ಕೊಳ್ಳುತ್ತಿರಬೇಕು.

೧೫. ಆರ್ಥಿಕವಾಗಿ ನಮಗಿ೦ತ ಕೆಳಮಟ್ಟದಲ್ಲಿರುವವರನ್ನು ಗಮನಿಸುತ್ತಾ, ನಮ್ಮ ಬೇಕು-ಬೇಡಗಳ ಪಟ್ಟಿಯನ್ನು ಅ೦ದಾಜು ಮಾಡಬೇಕು.

೧೬. ದೇವರ ಮೇಲೆ ಹಾಕಲಾಗುವ ನಮ್ಮ ಸ೦ಪೂರ್ಣ ಜವಾಬ್ದಾರಿ ನಮ್ಮನ್ನು ಅತ್ಯ೦ತ ನಿಷ್ಕ್ರಿಯರನ್ನಾಗಿ ಮಾಡುತ್ತದೆ!

೧೭. ಅನುಭವಿಗಳೆಲ್ಲಾ ವೃಧ್ಧರಲ್ಲ, ವೃಧ್ಧರೆಲ್ಲಾ ಅನುಭವಿಗಳಲ್ಲ!

೧೮. ಸ್ವತ: ಸಾಧಿಸದೇ, ಬೇರೊಬ್ಬರ ಸಾಧನೆಯ ಫಲವನ್ನು ಉಣ್ಣುವುದು ಸೋಮಾರಿತನ!

೧೯. ಉಪಕರಿಸಿ, ಫಲ ಅಪೇಕ್ಷಿಸುವುದು ಸಾಧುವಲ್ಲ, ಅದರಲ್ಲಿಯೂ, ಬೇರೊಬ್ಬರಿಗೆ ಸಹಾಯ ಮಾಡದೇ, ಅವರಿ೦ದ ಸಹಾಯ ಅಪೇಕ್ಷಿಸುವುದು ಅಸಾಧುವಾದುದು!

೨೦.ದೀರ್ಘಕಾಲ ಹೊಗೆಯಾಡುತ್ತಿರುವುದಕ್ಕಿ೦ತಲೂ ಕ್ಷಣಕಾಲ ದೇದೀಪ್ಯಮಾನವಾಗಿ ಬೆಳಗುವುದು ಲೇಸು.

7 comments:

  1. ಮುತ್ತಿನಂತಹ ಮಾತುಗಳು. ಮುಂದುವರೆಸಿ
    ಶ್ರೀಧರ್

    ReplyDelete
  2. ಧನ್ಯವಾದಗಳು ಶ್ರೀಧರರೇ,
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete
  3. ಇವೆಲ್ಲ ಅನುಭವ ಜನ್ಯ ಎಂದು ಬೇರೆ ಹೇಳಬೇಕಿಲ್ಲ, ಬೇರೆಯವರ ಅನುಭವ ಕೆಲವೊಮ್ಮೆ ನಮಗೆ ಗೊಂದಲ ಸೃಷ್ಟಿಸಿದರೂ ಆ ದೀಪದಿಂದ ಹೊರಡುವ ಪ್ರಭೆಯಲ್ಲಿ ನಾವು ತೋಯ್ದಾಗ ಅವು ರಸಪಾಕಗಳೇ ಆಗಿರುತ್ತವೆ, ಮುಂದುವರಿಯಲಿ ನಾವಡರೇ ತಮ್ಮ ರಸಪಾಕ,ಧನ್ಯವಾದಗಳು

    ReplyDelete
  4. ಧನ್ಯವಾದಗಳು ಭಟ್ಟರೇ,
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete
  5. ಅಣಿಮುತ್ತುಗಳು ಚೆನ್ನಾಗಿವೆ. ಇನ್ನೂ ಬರಲಿ.

    ReplyDelete
  6. This comment has been removed by the author.

    ReplyDelete
  7. ಧನ್ಯವಾದಗಳು ಸೀತಾರಾಮರೇ,
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete