Pages

Wednesday, September 29, 2010

ತೊಟ್ಟು ಕಿತ್ತು ರಸ್ತೆಯಲ್ಲಿ ಬಿದ್ದಿದ್ದ ಹೂವನ್ನು ಕಂಡು ನನ್ನ ಮನ ಚಡಪಡಿಸಿದ್ದು ಹೀಗೆ

[ಚಿತ್ರ ಅಂತರ್ಜಾಲದಿಂದ]



[ಅಂತರ್ಜಾಲದ ಚಿತ್ರದಿಂದ ಸಮಾಧಾನವಾಗಲಿಲ್ಲ. ತೊಟ್ಟು ಕಿತ್ತು ನೆಲದ ಮೇಲೆ ಬಿದ್ದ ಹೂವಿನ ಚಿತ್ರ ನಾನೇ ಸೆರೆಹಿಡಿದಾಗ]



ತೊಟ್ಟು ಕಿತ್ತು ರಸ್ತೆಯಲ್ಲಿ ಬಿದ್ದಿದ್ದ ಹೂವನ್ನು ಕಂಡು ನನ್ನ ಮನ ಚಡಪಡಿಸಿದ್ದು ಹೀಗೆ

ಎಂತ ಚಂದದ ಹೂವು
ಹೀಗಿದೇತಕೆ ಬಿತ್ತು?
ಮನದಲಿ ವ್ಯಥೆಯ ಹೊತ್ತು|
ಯಾವ ಬೆರಳದು ಕ್ರೂರ
ಕೊಟ್ಟಿದೇತಕೆ ನೋವ
ಉಗರಲಿ ತೊಟ್ಟ ಕಿತ್ತು||

ನಗುನಗುತಲಿದೆ ಇನ್ನೂ
ಮುಚ್ಚಲಿಲ್ಲವು ಕಣ್ಣು
ಪಾಪ ಅದಕೇನು ಗೊತ್ತು?
ತಾನೀಗ ಕಾಲರಾಯನ ತುತ್ತು||

ಮೆಲ್ಲ ಮೆಲ್ಲನೆ ಮಾಸಿ
ಆವರಿಸಿದೆ ಕಪ್ಪು
ಕರಗುತಿದೆ ಕೊನೆಯ ಕಂತು|
ತನ್ನ ತಾನೇ ಮರೆತು
ಕೊಡುತಲಿದೆ ನೋಡು
ತುಳಿದವರ ಕಾಲಿಗೇ ಮುತ್ತು!!


8 comments:

  1. ಸರ್‍,
    ದಾಸವಾಳದ ಅಂತರಾಳದ ಮಾತುಗಳನ್ನು ಕವನರೂಪದಲ್ಲಿ ಕೊಟ್ಟಿದ್ದೀರಿ ಎನ್ನಬಹುದು. ಕೊನೆಯ ಸಾಲುಗಳು... ಏನ ಹೇಳಬೇಕೆಂದು ತೋಚುವುದಿಲ್ಲ...
    ಧನ್ಯವಾದಗಳು.
    ಚಂದ್ರಶೇಖರ

    ReplyDelete
  2. [ಕೊನೆಯ ಸಾಲುಗಳು... ಏನ ಹೇಳಬೇಕೆಂದು ತೋಚುವುದಿಲ್ಲ ........ತನ್ನ ತಾನೇ ಮರೆತು
    ಕೊಡುತಲಿದೆ ನೋಡು
    ತುಳಿದವರ ಕಾಲಿಗೇ ಮುತ್ತು!!]
    ಹೂವು ಇಲ್ಲಿ ಒಂದು ಸಂಕೇತ ಅಷ್ಟೆ. ಸಾಮಾನ್ಯ ಅರ್ಥದಲ್ಲಿ--- ಗಿಡದಲ್ಲಿ ಇದ್ದಾಗ ತಾನೆ ಹೂವು ಜೀವಂತ. ಗಿಡದಿಂದ ಕಿತ್ತು ನೆಲದ ಮೇಲೆ ಬಿದ್ದಿದೆ.ಇನ್ನು ಕೆಲವೇ ಕ್ಷಣಗಳಲ್ಲಿ ಬಾಡಿಹೋಗುತ್ತೀನೆಂದು ಗೊತ್ತಿದ್ದರೂ ಆ ಹೂವನ್ನು ತುಳಿದವರಿಗೆ ಹಿತವೇ ಆಗಿದೆ[ಮುತ್ತು] . ತಾನು ಬಾಡಿಹೋಗುತ್ತೀನೆಂದು ಅದಕ್ಕೆ ಗೊತ್ತಿದ್ದರೂ ಕೂಡ ತುಳಿದವರಿಗೇ ಅದು ಹಿತವನ್ನು ಕೊಟ್ಟಿತಲ್ಲವೇ?
    .....ಇದನ್ನೇ ಸಮಾಜಕ್ಕೆ ಅನ್ವಯಿಸಿದಾಗ ಸಮಾಜದಿಂದ ತುಳಿತಕ್ಕೆ ಒಳಗಾದವರು ತುಳಿದವರಿಗೆ ಎಂದೂ ಮುಳ್ಳಾಗುವುದೇ ಇಲ್ಲ... ತಮ್ಮ ಮೇಲಿನ ದೌಜನ್ಯಕ್ಕೆ ಇವರು ಕಾರಣವೆಂದು ತಿಳಿದಿದ್ದರೂ ಸಹಿಸಿಕೊಂಡು ಬಿಡತ್ತಾರೆ. ಅಥವಾ ಸಹಿಸಿಕೊಳ್ಳಲೇ ಬೇಕಾಗುತ್ತದೆ. ಅಲ್ಲವೇ?

    ReplyDelete
  3. ಸರ್‍, ನಿಮ್ಮ ವಿವರಣೆ ಓದಿದೆ. ಅದು ಸಂಕೇತವಾದರೂ ವಾಸ್ತವಿಕತೆಯನ್ನು ಪ್ರತಿಬಿಂಬಿಸುತ್ತದೆ...
    ಧನ್ಯವಾದಗಳೂ.

    ReplyDelete
  4. ಸುಂದರ ಸಾಲುಗಳು, ಅದ್ಬುತ ಕಲ್ಪನೆ, ಸುಮಧುರ ಸಾಹಿತ್ಯ ,,,,,,
    ಸರ್ ನಾನು ನಿಮ್ಮ ಬ್ಲಾಗಿಗೆ ಇದೆ ಮೊದಲ ಬೇಟಿ ಸುಂದರ ನಿಮ್ಮ ಕವೊತೆಗಳನ್ನು ಕಂಡ ನನ್ನೀ ಮನಸು ಮೃದುವಾಗಿದೆ ಕವಿತೆಗಳು ತುಂಬಾ ಚನ್ನಾಗಿ ಮೊಡಿ ಬಂದಿವೆ , ಬಿಡುವು ಮಾಡಿಕೊಂಡು ನನ್ನವಳಲೋಕಕ್ಕೆ ಒಮ್ಮೆ ಬೇಟಿ ನೀಡಿ . ನಾನು ನಿಮ್ಮನ್ನು ಆತ್ಮೀಯವಾಗಿ ಸ್ವಾಗತಿಸುತ್ತೇನೆ

    SATISH N GOWDA
    ನನ್ನ ಬ್ಲಾಗ್ : ನನ್ನವಳಲೋಕ
    http://nannavalaloka.blogspot.com
    ನನ್ನ ಸ್ನೇಹಲೋಕ :(orkut)
    satishgowdagowda@gmail.com

    ReplyDelete
  5. ವಿಚಾರಾರ್ಹವಾಗಿದೆ, ಶ್ರೀಧರ್.

    ReplyDelete
  6. ಶ್ರೀ ಸತೀಶ್ ಮತ್ತು ನಾಗರಾಜ್,
    ನಿಮ್ಮ ಮೆಚ್ಚುಗೆಗೆ ಅಭಿನಂದನೆಗಳು. ಸತೀಶ್ ನಿಮ್ಮ ಬ್ಲಾಗ್ ನೋಡುವೆ. ಇಲ್ಲಿ ಬರುತ್ತಿರಿ.
    ನಮಸ್ತೆ
    -ಶ್ರೀಧರ್

    ReplyDelete
  7. ತುಂಬಾ ಚಂದದ ಕವನ. ಹೂವಿನ ಬಗ್ಗೆ ತಮಗನ್ನಿಸಿದ್ದು ತುಂಬಾ ಚೆನ್ನಾಗಿ ಅಭಿವ್ಯಕ್ತಿಸಿದ್ದಿರಾ.. ತಮ್ಮ ಭಾವನೆಗೆ ನಮನಗಳು.

    ReplyDelete
  8. ಶ್ರೀ ಸೀತಾರಾಮ್
    ನಿಮ್ಮ ಮೆಚ್ಚುಗೆಗೆ ಅಭಿನಂದನೆಗಳು.

    ReplyDelete