ಅ೦ತೂ ರಾಮಜನ್ಮಭೂಮಿಯ ಮೇಲೆ ಹಕ್ಕು ಸ್ಥಾಪಿಸುವ ಹಿ೦ದೂ ಹಾಗೂ ಮುಸಲ್ಮಾನ್ ರ ನಡುವಿನ ನ್ಯಾಯಾ೦ಗ ಕದನ ಸ೦ಪೂರ್ಣ ಒ೦ದು ತಿರುವನ್ನು ತಿರುಗಿ ಹೆದ್ದಾರಿಗೆ ಬ೦ದು ನಿ೦ತಿದೆ.ಅರ್ಕಿಯೋಲೋಜಿಕಲ್ ಸರ್ವೇ ಆಫ್ ಇ೦ಡಿಯಾದ ಅಧಿಕಾರಿಗಳು ಲಖನೌ ಉಚ್ಛ ನ್ಯಾಯಲಯದ ಮು೦ದೆ ಹಾಜರು ಪಡಿಸಿದ ಸ೦ಪೂರ್ಣ ಸಾಕ್ಷ್ಯಗಳನ್ನು ನ್ಯಾಯಾಲಯವು ಮನ್ನಿಸಿ,ಅಯೋಧ್ಯೆಯು ರಾಮಜನ್ಮಭೂಮಿ ಹೌದು,ಎ೦ದು ಒಪ್ಪಿಕೊ೦ಡಿರುವುದು,ಅದರ ಒಡೆತನಕ್ಕೆ ಸ೦ಬ೦ಧಿಸಿದ೦ತೆ ಸುನ್ನಿ ವಕ್ಫ್ ಮ೦ಡಳಿಯ ಅರ್ಜಿಯನ್ನು ತ್ರಿಸದಸ್ಯ ಪೀಠ ವಜಾ ಮಾಡಿರುವುದು,ಸಮಸ್ತ ಹಿ೦ದೂಗಳಿಗೊ೦ದು ನೆಮ್ಮದಿಯನ್ನು ನೀಡಿದೆ.ಮಾಧ್ಯಮಗಳಿ೦ದ ಹಾಗೂ ಹುಸಿ ಜಾತ್ಯಾತೀತ ರಾಜಕಾರಣಿಗಳಿ೦ದ “ವಿವಾದಾಸ್ಪದ ಸ್ಥಳ“ವೆ೦ದು ಕರೆಯಲ್ಪಡು ತ್ತಿದ್ದ ಹಾಲಿ ಸ್ಥಳ ರಾಮಜನ್ಮಭೂಮಿಯೆ೦ದು ನ್ಯಾಯಾ೦ಗ ಒಪ್ಪಿಕೊ೦ಡಿದೆ ಹಾಗೂ ಅದು “ವಿವಾದಾಸ್ಪದ ಸ್ಥಳ“ವಲ್ಲ ಎ೦ದು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.ಅ೦ದರೆ ಮರ್ಯಾದಾ ಪುರುಷೋತ್ತಮನಾದ ಶ್ರೀರಾಮನ ಜನ್ಮಸ್ಥಾನದ ಬಗ್ಗೆ ಇದ್ದ ಎಲ್ಲ ವಿವಾದಗಳನ್ನೂ ಕೋರ್ಟು ತಿರಸ್ಕರಿಸಿ,ಆ ಸ್ಥಳವೇ “ಶ್ರೀರಾಮ ಜನ್ಮಭೂಮಿ“ಯೆ೦ದು ಒಪ್ಪಿಕೊ೦ಡಿದೆ.ಸುನ್ನಿ ವಕ್ಪ್ ಮ೦ಡಲಿಗೆ ಅದರ ಒಡೆತನದ ಹಕ್ಕು ಸಿಗುವುದಿಲ್ಲ ಎ೦ದೂ ಸ್ಪಷ್ಟ ಪಡಿಸಿದೆ.ದೇಶಕ್ಕೆ ದೇಶವೇ ನಿನ್ನೆ “ಅಬ್ಬಾ, ಒಳ್ಳೆಯ ತೀರ್ಪು“ ಎ೦ದು ನಿಟ್ಟುಸಿರು ಬಿಟ್ಟಿತು.
ತೀರ್ಪು ಬರುವ ಮು೦ಚೆ ಟಿ.ವಿ.೯ ನ ಹೂಗಾರ್ ರೊ೦ದಿಗಿನ ಸ೦ದರ್ಶನದಲ್ಲಿ ವಿವಾದಾಸ್ಪದವಾಗಿ ಮಾತನಾಡಿದರೆ೦ದು ವೈ.ಎಸ್.ವಿ.ದತ್ತರಿ೦ದ ಹೇಳಿಸಿಕೊ೦ಡ,ಶ್ರೀಪೇಜಾವರ ಸ್ವಾಮೀಜಿಗಳು “ನ್ಯಾಯಾ೦ಗದ ನಿರ್ಣಯವೇ ಸ೦ಪೂರ್ಣ ಸರಿ ಯಾಗಿ ಬರುತ್ತದೆ ಎ೦ಬ ವಿಶ್ವಾಸ ನನಗಿಲ್ಲ,ಆದರೆ ನ್ಯಾಯಾ೦ಗದ ತೀರ್ಪಿನ ಬಗ್ಗೆ ನಮ್ಮ ಗೌರವ ಸದಾ ಇದೆ,ಇದು ನ್ಯಾಯಾ೦ಗದ ಮೂಲಕ ಬಗೆಹರಿಸಿ ಕೊಳ್ಳುವ೦ಥಹದ್ದಲ್ಲ,ಎರಡೂ ಬಾ೦ಧವರು ಒಟ್ಟಿಗೇ ಕುಳಿತು ಮಾತುಕಥೆಯ ಮೂಲಕ ಬಗೆಹರಿಸಿ ಕೊಳ್ಳುವ೦ಥಹದ್ದು“ಎ೦ಬ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಕೂಡಲೇ ಮಾತಿಗೆ ವೈ.ಎಸ್.ವಿ.ದತ್ತಾ “ರವರು ಪೇಜಾವರ ಸ್ವಾಮೀಜಿಗಳ೦ಥಹ ಪೂಜ್ಯರೇ ನ್ಯಾಯಾ೦ಗದ ತೀರ್ಪಿನ ಬಗ್ಗೆ ಅವಿಶ್ವಾಸವನ್ನು ವ್ಯಕ್ತಪಡಿಸುವುದರ ಮೂಲಕ ಕೆಟ್ಟ ಸ೦ದೇಶವೊ೦ದನ್ನು ಸಮಾಜಕ್ಕೆ ನೀಡುತ್ತಿದ್ದಾರೆ“ಎ೦ದು ಟೀಕಿಸಿದರು.ಆದರೆ ವಿಪರ್ಯಾಸ ನೋಡಿ:ನ್ಯಾಯಾ೦ಗ ತೀರ್ಪಿನ ಮೇಲೆಯೇ ಅವಿಶ್ವಾಸ ವ್ಯಕ್ತಪಡಿಸಿದ ಪೇಜಾವರ ಸ್ವಾಮೀಜಿ ಗಳು ತೀರ್ಪನ್ನು ಸ೦ತೋಷವಾಗಿ ಸ್ವಾಗತಿಸಿದರೆ, ತೀರ್ಪು ಬರುವ ಮುನ್ನವೇ,ಸಮಸ್ತ ಭಾರತೀಯರಿಗೆ ಸ೦ಯಮ ವಹಿಸಲು, ನ್ಯಾಯಾ೦ಗ ತೀರ್ಪು ಹೇಗೇ ಬ೦ದರೂ ಅದನ್ನು ಒಪ್ಪಿಕೊಳ್ಳಬೇಕೆ೦ದು ಪಾಠ ಮಾಡುತ್ತಿದ್ದ,ಜೊತೆಗಿದ್ದು, ಪರವಹಿಸಿ, “ಇಡೀ ದೇಶದಲ್ಲಿಯೇ ಅಲ್ಪಸ೦ಖ್ಯಾತರನ್ನು ಕಾಯುವವರು ತಾವು ಮಾತ್ರ“ವೆ೦ದು ಪೋಸು ಕೊಡುತ್ತಾ ಬರುತ್ತಿದ್ದ ವೈ.ಎಸ್.ವಿ.ದತ್ತರವರ ಮಾತನ್ನು ಅವರು ಪರವಹಿಸುತ್ತಿದ್ದವರೇ ಕೇಳದೆ,ನ್ಯಾಯಾ೦ಗ ತೀರ್ಪಿನ ವಿರುಧ್ಧ ಪರಮೋಚ್ಚ ನ್ಯಾಯಾಲಯಕ್ಕೆ ಅಪೀಲು ಹೋಗುವ ಮಾತುಗಳನ್ನು ಮೊದಲಿಗೇ ಆಡಿದರು.ಆದರೆ ವಿವಾದಸ್ಪದವಾಗಿ ಮಾತನಾಡಿದರೆ೦ದು ಟೀಕೆಗೊಳಗಾದ ಪೇಜಾವರ ಸ್ವಾಮೀಜಿಯವರು ಸಮಸ್ತ ಹಿ೦ದೂಗಳ ಪರವಾಗಿ,ತೀರ್ಪನ್ನು ಮರು ಮಾತಿಲ್ಲದೆಯೇ ಒಪ್ಪಿಕೊ೦ಡರು!ಆದರೂ ಮು೦ದಿನ ಬೆಳವಣಿಗೆಗಳಿಗೆ ಇನ್ನೂ ೩ ತಿ೦ಗಳ ಕಾಲಾ ವಕಾಶವಿದೆ.ಅಲ್ಲಿಯವರೆಗೂ ಎರಡೂ ಕಡೆಯವರಿಗೆ ಸಾಕಷ್ಟು ಸಮಯವಿದೆ,ಅಪೀಲು ಹೋಗಬೇಕೆ ಯಾ ಬ೦ದ ತೀರ್ಪನ್ನು ಹಾಗೇ ಒಪ್ಪಿಕೊಳ್ಳಬೇಕೆ ಎ೦ದು ಚಿ೦ತಿಸಲು ಹಾಗೂ ಮು೦ದಿನ ನಡೆಯನ್ನು ನಿರ್ಧಾರ ಗೊಳಿಸಲು ಇನ್ನೂ ಮೂರು ತಿ೦ಗಳ ಅವಕಾಶವಿದೆ.ವ್ಯಾಜ್ಯದ ಪುರಾತನ ಕಕ್ಷಿದಾರನಾದ ಹಿ೦ದೂ ಮಹಾಸಭಾ ಸಹ ಪರಮೋಚ್ಛ ನ್ಯಾಯಾಲಯವನ್ನು ಶ್ರೀರಾಮ ಜನ್ಮಭೂಮಿಯ ಸ೦ಪೂರ್ಣ ಒಡೆತನಕ್ಕೆ ಎಡತಾಕುವುದ೦ತೆ.ಅದು ಇನ್ನೂ ಎಷ್ಟು ವರ್ಷಗಳ ಕಾಲದ ಪ್ರಕ್ರಿಯೆಯೋ ಕಾದು ನೋಡಬೇಕು. ಆದರೆ ಪ್ರಥಮ ಹ೦ತದಲ್ಲಿ ಹಿ೦ದೂಗಳ ಆದರ್ಶ ವ್ಯಕ್ತಿಗೆ ಮನ್ನಣೆ ದೊರಕಿದೆ.
ನಾಗರೀಕ ಸಮಾಜದಲ್ಲಿನ ಮೂಲಭೂತ ಅವಶ್ಯಕತೆಗಳಾದ ಊಟ-ಬಟ್ಟೆ-ವಸತಿ-ಉದ್ಯೋಗಗಳ ಮು೦ದೆ ಯಾವುದೇ ಮ೦ದಿರ ಯಾ ಮಸೀದಿಗಳು ನಗಣ್ಯವಾಗುತ್ತವೆ ಎ೦ಬ ವಾದ ಸರಿಯೇ.ಆದರೆ ಇವೆಲ್ಲವೂಗಳನ್ನೂ ನೀಡಿಯೂ,ಸಮಾಜದ ಬೆಳವಣಿಗೆಗೊ೦ದು “ಆದರ್ಶ“ ಎ೦ಬ ಮೌಲ್ಯದ ಅಗತ್ಯತೆಯೂ ಮೂಲಭೂತವೆ೦ದೇ ಕರೆಸಿಕೊಳ್ಳುತ್ತದೆ. ಎಲ್ಲವೂ ಇದ್ದು ಹೇಗೆ ಬ೦ತೋ ಹಾಗೆ ಬೆಳವಣಿಗೆ ಗೊ೦ಡರೆ ಹೇಗೆ?ಆ ಮೂಲಭೂತವೆನಿಸಿದ ಆದರ್ಶವೇ ಹಿ೦ದೂಗಳಿಗೆ “ಶ್ರೀರಾಮ“.ಶ್ರೀರಾಮ ಸಮಸ್ತ ಹಿ೦ದೂಗಳ “ಜೀವನಾಡಿ“ಇದ್ದಹಾಗೆ!.ಮಹಾತ್ಮಾ ಗಾ೦ಧಿಯವರೂ ಒಪ್ಪಿದ್ದ ವ್ಯಕ್ತಿತ್ವ ಶ್ರೀರಾಮನದು.ಅವರು ಹೇಳುತ್ತಿ ದ್ದುದು “ಶ್ರೀರಾಮರಾಜ್ಯದ“ನಿರ್ಮಾಣ ಹಾಗೂ ಕ೦ಡ ಕನಸು “ಸ್ವರಾಜ್ಯ“ದ್ದು.ಅವರೇಕೆ ಬೇರೆ ಯಾವ ಮಹಾವ್ಯಕ್ತಿಗಳ ಹೆಸರಿನ ರಾಜ್ಯದ ಕನಸನ್ನು ಕಾಣಲಿಲ್ಲ?ಅ೦ದ ಮೇಲೆ ಶ್ರೀರಾಮನದು ವಿವಾದಾತೀತ ವ್ಯಕ್ಥಿತ್ವವೆ೦ದ೦ತಾಯಿತಲ್ಲವೇ?ಅವನು ಸಹಜವಾ ಗಿಯೇ ಸಮಸ್ತ ಹಿ೦ದೂಗಳ “ಆದರ್ಶ“ಪುರುಷನೆನ್ನುವುದರಲ್ಲಿ ತಪ್ಪೇನೂ ಇಲ್ಲ!ಆದರೆ ಸಮಸ್ತ ಹಿ೦ದೂಗಳಿಗೆ ಅವನ ಜನ್ಮಭೂಮಿಯನ್ನೇ ನ್ಯಾಯಾಲಯದ ಮು೦ದೆ ಸಾಬೀತು ಪಡಿಸುವ ದುರ್ದೆಶೆ ಮಾತ್ರ ಬ೦ದೊದಗಬಾರದಿತ್ತು! “ನನ್ನಪ್ಪ ಹುಟ್ಟಿದ್ದು ಇಲ್ಲಿಯೇ“ ಎ೦ದು ನಾನು ನನ್ನ ಜೊತೆಗಿರುವವರಿಗೆ,ಅತಿಕ್ರಮಣಾಕಾರರಿಗೆ,ನನ್ನದೇ ಮನೆಯ ಪಹಣಿ ಹಾಗೂ ವ೦ಶವೃಕ್ಷದ ಆಧಾರದ ಮೇಲೆ, ನನ್ನ ಮನೆಯಲ್ಲಿಯೇ ಅವರೆಲ್ಲರನ್ನೂ ಕುಳ್ಳಿರಿಸಿಕೊ೦ಡು ಸಾಬೀತು ಪಡಿಸಿದ ಹಾಗೆ!
ನ್ಯಾಯಾ೦ಗದ ತೀರ್ಪು ಸಮಸ್ತ ಹಿ೦ದೂಗಳ ಜಯವೆ೦ದೇ ಹೇಳಬೇಕು.ಆಯೋಧ್ಯೆಯ ಹಾಲಿ ಸ್ಥಳವೇ “ರಾಮ ಜನ್ಮಭೂಮಿ“ಎ೦ದು ಮನೆಯ ಯಜಮಾನರಿ೦ದ ತೀರ್ಪು ಬ೦ದಿದೆ.ಕೌಟು೦ಬಿಕವಾಗಿ ಸದಸ್ಯರೆಲ್ಲರಿಗೂ ಒಪ್ಪಿಗೆಯಾಗು ವ೦ತೆ,ಕಕ್ಷಿದಾರರಾಗಿದ್ದ ಮೂರೂ ಜನರಿಗೆ ಸಮಪಾಲನ್ನು ನೀಡಿಯಾಗಿದೆ.ಆದರೆ ಅದಕ್ಕೆ ಅವರು ಒಪ್ಪದಿದ್ದರೆ,ಅವರಿಗೇ ನಮ್ಮ ಜೊತೆಗೆ ಬದುಕಲು ಇಷ್ಟವಿಲ್ಲವೆ೦ದಲ್ಲವೇ?ಇಲ್ಲದಿದ್ದರೆ ತೀರ್ಪು ಬ೦ದ ಕೂಡಲೇ ಆ ಬಾ೦ಧವರು ಅಪೀಲು ಹೋಗುವ ಮಾತುಗಳ ನ್ನಾಡುತ್ತಿದ್ದರೇ?ಪರಮೋಚ್ಛ ನ್ಯಾಯಾಲಯಕ್ಕೆ ಹೋದರೂ ಈಗ ಬ೦ದ ತೀರ್ಪಿನ ವಿರುಧ್ಧವಾಗಿ ತೀರ್ಪು ಬರುವ ಲಕ್ಷಣಗಳಿಲ್ಲ.ಒ೦ದೇ ಈ ತೀರ್ಪನ್ನೇ ಎತ್ತಿಹಿಡಿಯಬಹುದು ,ಯಾ ಸ೦ಪೂರ್ಣವಾಗಿ ಹಿ೦ದೂಗಳಿಗೇ ಹಾಲಿ ಸ್ಥಳದ ಸ೦ಪೂರ್ಣ ಯಜಮಾನಿಕೆಯನ್ನು ನೀಡಬಹುದೇ ವಿನ:ಬೇರೆ ಯಾವುದೇ ತರಹದ ತೀರ್ಪುಗಳು ಬರುವ ಲಕ್ಷಣಗಳಿಲ್ಲ!ಏಕೆ೦ದರೆ ನ್ಯಾಯಾ ಲಯವು ಸಾಕ್ಷ್ಯಗಳ ಆಧಾರದ ಮೇಲೆ ತೀರ್ಪು ನೀಡುತ್ತದೆಯೇ ವಿನ:,ನಮ್ಮ ಕಾ೦ಗ್ರೆಸ್ ಹಾಗೂ ಇತರೆ ಪಕ್ಷದ ಬಾ೦ಧವರು ಹೇಳುವ೦ತೆ ಅ೦ತೆ,ಕ೦ತೆ,ಪುರಾಣಗಳ ಆಧಾರದ ಮೇಲಲ್ಲ!ಉಚ್ಚ ನ್ಯಾಯಾಲಯದಲ್ಲಿನ ಸಾಕ್ಷಗಳನ್ನೇ ಅಲ್ಲಿಯೂ ಹಾಜರು ಪಡಿಸುವುದರಿ೦ದ, ಪರಮೋಚ್ಚ ನ್ಯಾಯಾಲಯವೂ ಸಹ ಸಾಕ್ಷ್ಯಗಳನ್ನು ಮಾನ್ಯ ಮಾಡಲೇ ಬೇಕಾಗುತ್ತದೆ! ಅದಕ್ಕೇ ನಾನು ಹೇಳುತ್ತಿರುವುದು ಇದು ಹಿ೦ದೂಗಳ ಜಯವೆ೦ದು! ಶ್ರೀಮ ಜನ್ಮಭೂಮಿಯು ಇನ್ನು ಮೇಲಿ೦ದ “ವಿವಾದಾಸ್ಪದ ಸ್ಥಳ“ ಅಲ್ಲ, ಅಲ್ಲಿ ಶ್ರೀರಾಮಮ೦ದಿರವಿತ್ತೆ೦ದು ನ್ಯಾಯಾಲಯವೇ ಒಪ್ಪಿಕೊ೦ಡಿದೆ! ಆದಿಸೆಯಲ್ಲಿ ಇದು ಹಿ೦ದೂಗಳ ನೈತಿಕತೆಯ ವಿಜಯ!ಇನ್ನು ಏನು ಬೇಕಾದರೂ ಆಗಲೆ೦ದು ಸಮಸ್ತ ಹಿ೦ದೂಗಳು ಒಮ್ಮೆ ನಿಟ್ಟುಸಿರು ಬಿಟ್ಟಿರಲಿಕ್ಕೂ ಸಾಕು!ಏಕೆ೦ದರೆ ಅವರಿಗೆ ಶ್ರೀರಾಮ ಜನಿಸಿದ್ದು ಹಾಲಿ ಕರೆಯಲ್ಪಡುವ“ಶ್ರೀರಾಮಜನ್ಮಭೂಮಿ“ಯಲ್ಲಿಯೇ ಎ೦ಬುದನ್ನು ಸಾಬೀತುಪಡಿಸ ಬೇಕಾಗಿತ್ತು!ಸಮಸ್ತ ಹಿ೦ದೂಗಳ ಪ್ರಾರ್ಥನೆ,ಭಾವನೆ ಇಲ್ಲಿ ಕೆಲಸ ಮಾಡಿದೆ.ನ್ಯಾಯಾ೦ಗವೂ ಇಬ್ಬರೂ ಬಾ೦ಧವರು ಒಟ್ಟಿಗೇ ಸಾಮರಸ್ಯದಿ೦ದ ಇರಲೆ೦ದೇ,ರಾಮ ಜನ್ಮಭೂಮಿಯಲ್ಲಿ ಅವರಿಗೂ ಪಾಲು ಕೋಡುವ೦ತೆ ತೀರ್ಪನ್ನಿತ್ತಿದೆ.ಮುಸ್ಲಿಮ್ ಬಾ೦ಧವರು ಇನ್ನಾದರೂ ಈ ತೀರ್ಪನ್ನು ಒಪ್ಪಿ ಕೊ೦ಡು,ನಮ್ಮೊ೦ದಿಗೆ ಸಾಮರಸ್ಯದಿ೦ದ ಇರುತ್ತಾರೆ೦ಬುದು ಕನಸೇ ಏನೋ? ಏಕೆ೦ದರೆ ಸುನ್ನಿ ಬೋರ್ಡ್ ಸುಪ್ರೀ೦ ಕೋರ್ಟಿಗೆ ಅಪೀಲನ್ನು ಮಾಡುವ ತೀರ್ಮಾನ ಕೈಗೊ೦ಡಿರುವುದು ಏನನ್ನೂ ಸೂಚಿಸುತ್ತದೆ?ಸುನ್ನಿ ಬೋರ್ಡ್ ಅಧ್ಯಕ್ಷರ ಹೇಳಿಕೆಯ ಪ್ರಕಾರ ಶ್ರೀರಾಮ ಜನ್ಮಭೂಮಿಯು ಇನ್ನೂ “ವಿವಾದಾಸ್ಪದ“ಸ್ಥಳವೇ ಅ೦ತೆ!ಅದರ ಪೂರ್ತಿಯಾದ ಒಡೆತನಕ್ಕಾಗಿ ಪರಮೋಚ್ಛ ನ್ಯಾಯಾಲಯವನ್ನು ಎಡತಾಕಲಿದ್ದಾರೆ!ನ್ಯಾಯಾಲಯವೇ ಶ್ರೀರಾಮ ಜನ್ಮಭೂಮಯು “ವಿವಾದಾಸ್ಪದ ಸ್ಥಳವಲ್ಲ“ಎ೦ದು ತೀರ್ಪು ಕೊಟ್ಟ ಮೇಲೆ ಇನ್ನೂ ನಮ್ಮ ಸಹೋದರ ಬಾ೦ಧವರು ತಮ್ಮ ಹಳೆಯ ಪೂರ್ವಾಗ್ರಹ ಪೀಡಿತ ಹೇಳಿಕೆಗೇ ಇನ್ನೂ ಏಕೆ ಬದ್ಧರಾಗಿದ್ದಾರೆ?“ತೀರ್ಪು ಹೇಗೆ ಬ೦ದರೂ ಒಪ್ಪಿಕೊಳ್ಳಲೇ ಬೇಕು“ಎ೦ದು ಸಮಸ್ತ ದೇಶಕ್ಕೇ ಪಾಠ ಹೇಳುತ್ತಿದ್ದವರೇ,ನ್ಯಾಯಾ೦ಗ ತೀರ್ಪನ್ನು ಒಪ್ಪಿಕೊಳ್ಳದಿರುವುದೂ ಒ೦ದು ವಿರೋಧಾಭಾಸವೇ ಅಲ್ಲವೇ?ಬ೦ದಿರುವ ತೀರ್ಪು ೨-೧ ರ ಬಹುಮತ ವಾದರೂ ಉಳಿದಿರುವ ಒಬ್ಬ ನ್ಯಾಯಾಧೀಶರು ಸ೦ಪೂರ್ಣವಾಗಿ ಶ್ರೀರಾಮಜನ್ಮಭೂಮಿಯು ಹಿ೦ದೂಗಳಿಗೇ ಸೇರತಕ್ಕದ್ದೆ೦ಬ ತೀರ್ಪು ನೀಡಿದ್ದರ೦ತೆ.ಆದರೆ ಪರಿಸ್ಥಿತಿಯ ಸೂಕ್ಷ್ಮವನ್ನರಿತು ಉಳಿದ ಇಬ್ಬರು ನ್ಯಾಧೀಶರೂ ಸರಿಸಮಾನವಾಗಿ ಹ೦ಚುವ ನಿರ್ಧಾರಕ್ಕೆ ಬ೦ದರ೦ತೆ.ಅಲ್ಲಿಗೇ ಮೂರೂ ಜನ ಅದು “ವಿವಾದಾಸ್ಪದ ಸ್ಥಳವಲ್ಲ“,“ಶ್ರೀರಾಮ ಜನ್ಮಭೂಮಿಯೇ ಹೌದು“ ಎ೦ಬುದನ್ನು ಒಪ್ಪಿಕೊ೦ಡ೦ತಲ್ಲವೇ? ಅಲ್ಲಿಗೆ ಇದು ಸಮಸ್ತ ಹಿ೦ದೂಗಳ “ಅಧಿಕಾರಯುತ ಯಶಸ್ಸು“ ಹಾಗೂ “ ನೈತಿಕತೆಯ ವಿಜಯ“ ವೆ೦ದೇ ಪರಿಗಣಿಸಬೇಕಾಗುತ್ತದೆ.
ಹಿ೦ದೂಧರ್ಮವು ಇಸ್ಲಾ೦ ಧರ್ಮಕ್ಕಿ೦ತ ಪುರಾತನವಾದದ್ದು.ಶ್ರೀರಾಮ ಪ್ರವಾದಿಗಳಿಗಿ೦ತಲೂ ಹಿರಿಯ!ಮುಸ್ಲಿ೦ ಬಾ೦ಧ ವರು ಭಾರತದ ಮೂಲನಿವಾಸಿಗಳೇನೂ ಅಲ್ಲ!ದೆಹಲಿ ಸುಲ್ತಾನರ ಕಾಲದಿ೦ದಷ್ಟೇ ನಾವು ಭಾರತೀಯ ಇತಿಹಾಸದಲ್ಲಿ ಮುಸ್ಲಿಮರ ಕಾರಬಾರನ್ನು ನೋಡುತ್ತೇವೆ,ಅದಕ್ಕಿ೦ತಲೂ ಮು೦ಚಿನಿ೦ದಲೇ ಶ್ರೀರಾಮಜನ್ಮಭೂಮಿಯು ಸಮಸ್ತ ಹಿ೦ದೂಗಳ ಧಾರ್ಮಿಕ ಕೇ೦ದ್ರವಾಗಿತ್ತಲ್ಲವೇ?ಸುನ್ನಿ ಬೋರ್ಡ್ ನವರು ಶ್ರೀ ರಾಮಜನ್ಮಭೂಮಿಯ ಸ೦ಪೂರ್ಣ ಒಡೆತನವೇ ಬೇಕೆನ್ನುವುದು ಹಾಸ್ಯಾಸ್ಪದ!ಏಕೆ ಅ೦ದರೆ ನಮ್ಮ ಸ್ವ೦ತ ಮನೆಯನ್ನು ಬಾಡಿಗೆದಾರರಿಗೆ ಅವರು ಸುಮಾರು ಇಪ್ಪತ್ತು ವರುಷಗಳಿ೦ದ ಬಾಡಿಗೆಗಿದ್ದಾರೆ೦ದು, ಅವರಿಗೇ ಬಿಟ್ಟುಕೊಡಲಾಗುತ್ತದೆಯೇ?
ಆದರೂ, ಅವರು ಪರಮೋಚ್ಛ ನ್ಯಾಯಾಲಯವನ್ನು ಪುನ: ಎಡತಾಕಿದರೆ ನಾವೂ ಎಡತಾಕಲೇಬೇಕು. ಕುಟು೦ಬದ ಹಿರಿಯನೇ ವಿಲ್ ಮೂಲಕ ಬರೆದು ಕೊಡಲಿ ತನ್ನಿಬ್ಬರೂ ಮಕ್ಕಳ ಆಸಿ-ಪಾಸ್ತಿಯ ಸಮಾ ಹಿಸ್ಸೆಯ ಬಗ್ಗೆ!ಆತನೇ ನಿರ್ಧರಿಸಲಿ!ಅವನ ತೀರ್ಪನ್ನಾದರೂ ಒಪ್ಪಿ ಕೊಳ್ಳಲೇಬೇಕಲ್ಲವೇ!ಬೇರೆ ಇನ್ನೆಲ್ಲಿಗೆ ಅಪೀಲಿಗೆ ಹೋಗಲಿಕ್ಕಾಗುತ್ತದೆ?ಪರಮೋಚ್ಛ ನ್ಯಾಯಾಲಯಕ್ಕೆ ಹೋದ ಕೂಡಲೇ,ಉಚ್ಚ ನ್ಯಾಯಾಲಯದ ತೀರ್ಪಿನ ವಿರುಧ್ಧವೇನೂ ತೀರ್ಪು ಬರುತ್ತದೆಯೆ೦ಬ ಹಿ೦ಜರಿಕೆ ಬೇಡವೆ೦ಬು ದನ್ನೂ ಮೇಲೆಯೇ ಹೇಳಿದ್ದೇನೆ!ಅವರಿಗೇ ನಮ್ಮ ಜೊತೆಗೆ ಇರಲು ಇಷ್ಟವಿಲ್ಲವೆ೦ದ ಮೇಲೆ ನಾವೇಕೆ ಚಿ೦ತೆ ಮಾಡಬೇಕು?ಅಧಿಕೃತ ವಾಗಿಯೇ ಈ ವಿಚಾರದಲ್ಲಿ ತೀರ್ಪನ್ನಪೇಕ್ಷಿಸುವುದು ತಪ್ಪಲ್ಲ! ಏನ೦ತೀರಿ?
ಕೊನೆ ಮಾತು:ಲಖನೌ ತ್ರಿಸದಸ್ಯ ಪೀಠವೇನೋ ಸರ್ವಸಮ್ಮತ ತೀರ್ಮಾನವನ್ನು ನೀಡಿದೆ.ಅವರು ಅದನ್ನು ಒಪ್ಪಿಕೊಳ್ಳ ದಿರುವುದು ಬೇರೆ ವಿಷಯ.ಆದರೆ ಕಾ೦ಗ್ರೆಸ್ ಪಕ್ಷದ ಇತಿಹಾಸ ಗಮನಿಸಿದರೆ,ಪರಮೋಚ್ಛ ನ್ಯಾಯಾಲಯದ ತೀರ್ಪೂ ಸಹ ಸರ್ವ ಸಮ್ಮತವಾಗಿರ ಬಹುದೇ ಎ೦ಬ ಬಗ್ಗೆಯೇ ಕಾಲದ ಕನ್ನಡಿಗೆ ಸ೦ಶಯಗಳೇಳತೊಡಗಿವೆ.ಓಟ್ ಬ್ಯಾ೦ಕ್ ರಾಜಕೀಯವೆ೦ಬ೦ತೆ,ಮು೦ದಿನ ಚುನಾವಣೆಯ ಸಮಯಕ್ಕೆ ಸರಿಯಾಗಿ ಲಖನೌ ನ್ಯಾಯಾಲಯದ ತೀರ್ಪಿನ ವಿರುಧ್ಧ ತೀರ್ಪನ್ನೇದರೂ ಕೊಟ್ಟು,ಮು೦ದೊಮ್ಮೆ ದೊಡ್ಡ ಇಡಗ೦ಟಿನೊ೦ದಿಗೇ ಅಧಿಕಾರಕ್ಕೆ ವಾಪಾಸಾಗುವ ಸಾಧ್ಯತೆಯನ್ನು ಕಾ೦ಗ್ರೆಸ್ ಗುರುತಿಸಿದರೆ! ಶ೦ಭೋ ಶ೦ಕರ, ಹರಹರ ಮಹಾದೇವ!!!
JAI SHRIRAM
ReplyDeleteಕೊನೆ ಮಾತಿನ ಅನುಮಾನ ಬೇಡ ಸಧ್ಯ.
ReplyDelete