೨. ನಾವು ಮಾಡುವ ಬಹು ದೊಡ್ಡ ತಪ್ಪೆ೦ದರೆ ಯಾವುದೇ ವಿಷಯವಾಗಲೀ, ಅದರ ಅರ್ಧ ಬಾಗವನ್ನು ಕೇಳಿ,ಕಾಲು ಭಾಗ ವನ್ನಷ್ಟೇ ಅರ್ಥೈಸಿಕೊ೦ಡು, ಎರಡರಷ್ಟು ವಿಸ್ತಾರವಾಗಿ ಆ ವಿಷಯದ ಬಗ್ಗೆ ಇನ್ನೊಬ್ಬರಿಗೆ ತಿಳಿ ಹೇಳುವುದು!
೩. ಸದಾ ಸ೦ತಸದಿ೦ದಿದ್ದು, ನಗುವನ್ನು ಎಲ್ಲರೊ೦ದಿಗೂ ಹ೦ಚಿಕೊಳ್ಳುತ್ತಾ, ಕೋಪ ಮತ್ತು ದು:ಖಗಳನ್ನು ನಾಶಪಡಿಸುತ್ತಾ, ನಮ್ಮ ಮನಸ್ಸನ್ನು ಸದಾ ಚಲನಶೀಲತೆಯಲ್ಲಿಟ್ಟುಕೊ೦ಡರೆ ನಮ್ಮ ಜೀವನವೇ ಒ೦ದು ಮೊಬೈಲ್ ರಿ೦ಗ್ ಟೋನ್ ಇದ್ದ೦ತೆ!
೪. ಆಪ್ತ ಮಿತ್ರರ ನಡುವೆ ಮಾತಿಗಿ೦ತಲೂ ಹೆಚ್ಚು ಮೌನವೇ ಪರಸ್ಪರ ಭಾವನೆಗಳನ್ನು ಹೇಳಿಕೊಳ್ಳುತ್ತದೆ!
೫. ಅಳುವಿನ ಬದಲು ಮುಗುಳ್ನಗುತ್ತಾ, ಭಯದ ಬದಲು ಸ೦ತೋಷಿಸುತ್ತಾ ಹಾಗೂ ನೋವಿನ ಬದಲು ನಲಿಯುತ್ತಾ ಇದ್ದಾಗ, ಬದುಕಿನ ಸೊಗಸನ್ನು ವರ್ಣಿಸಲಸಾಧ್ಯ!
೬. ಪೆನ್ನನ್ನು ಕಳೆದುಕೊ೦ಡರೆ ಹೊಸ ಪೆನ್ನನ್ನು ಖರೀದಿಸಹುದು.ಆದರೆ ಆ ಪೆನ್ನಿನ ಕ್ಯಾಪ್ ಅನ್ನು ಕಳೆದುಕೊ೦ಡರೆ ಅದೇ ಪೆನ್ನಿನ ಮತ್ತೊ೦ದು ಹೊಸ ಕ್ಯಾಪ್ ಅನ್ನು ಖರೀದಿಸಲು ಸಾಧ್ಯವೇ?ಪೆನ್ನಿನ ಕ್ಯಾಪ್ ಎ೦ಬುದು ಸಣ್ಣ ವಸ್ತುವಾಗಿದ್ದರೂ ಅದೆಷ್ಟು ಮುಖ್ಯವೋ, ಹಾಗೆಯೇ ನಮ್ಮ ಜೀವನದಲ್ಲಿ ಎಷ್ಟೇ ಸಣ್ಣ ಘಟನೆಗಳಾದರೂ ಅವುಗಳನ್ನು ಕ್ಷುಲ್ಲಕವೆಂದು ನಿರ್ಲಕ್ಷಿಸಲಾಗದು.
೭. ಜೀವನದಲ್ಲಿ ಎರಡು ರೀತಿಯ ಶ್ರೀಮ೦ತಿಕೆಯನ್ನು ಅನುಭವಿಸಬಹುದು! ಒ೦ದು ಎಲ್ಲವನ್ನು ಗಳಿಸಿ ಅನುಭವಿಸುವುದಾದರೆ, ಮತ್ತೊ೦ದು ಇದ್ದುದ್ದರಲ್ಲಿಯೇ ತೃಪ್ತಿಯನ್ನು ಅನುಭವಿಸುವುದು!
೭. ಜೀವನದಲ್ಲಿ ಎರಡು ರೀತಿಯ ಶ್ರೀಮ೦ತಿಕೆಯನ್ನು ಅನುಭವಿಸಬಹುದು! ಒ೦ದು ಎಲ್ಲವನ್ನು ಗಳಿಸಿ ಅನುಭವಿಸುವುದಾದರೆ, ಮತ್ತೊ೦ದು ಇದ್ದುದ್ದರಲ್ಲಿಯೇ ತೃಪ್ತಿಯನ್ನು ಅನುಭವಿಸುವುದು!
೮. ಸುಲಭವಾಗಿ ಗಳಿಸಿದ ಯಾವುದೇ ವಸ್ತುವಾಗಲೀ, ಸ೦ಪತ್ತಾಗಲೀ ಬಹುಕಾಲ ಬಾಳಲಾರದು! ಅ೦ತೆಯೇ ಬಹುಕಾಲ ಬಾಳುವ ವಸ್ತುವಾಗಲೀ ಯಾ ಸ೦ಪತ್ತನ್ನಾಗಲೀ ಗಳಿಸುವುದು ಸುಲಭ ಸಾಧ್ಯವಲ್ಲ!
೯. ಜೀವನದಲ್ಲಿ ಎಲ್ಲರನ್ನೂ ನಗಿಸುತ್ತಾ ,ಸ೦ತಸದಿ೦ಡುವವನು ಪ್ರಾಯಶ: ಜೀವನ ಪೂರ್ತಿ ಏಕಾ೦ಗಿಯಾಗಿರುತ್ತಾನೆ!
೧೦. ಕೆಲವೊಮ್ಮೆ ನಗುವೆ೦ಬುದು ಸಮಸ್ಯೆಗೆ ಪರಿಹಾರ ತೋರಿದರೆ, ಮೌನವು ಸಮಸ್ಯೆಯನ್ನೇ ಉಧ್ಬವಿಸಲು ಬಿಡುವುದಿಲ್ಲ!
೧೧. ಜೀವನದಲ್ಲಿ ಕೆಲವನ್ನು ಕೊಟ್ಟು ಇಟ್ಟುಕೊಳ್ಳಬೇಕು ಹಾಗೆಯೇ ಕೆಲವನ್ನು ಕೊಟ್ಟು ಕಳೆದುಕೊಳ್ಳಬೇಕು!
೧೨.ಕೋಪಗೊ೦ಡಾಗಲೂ ಸ೦ಯಮಿಯಾಗಿರುವವನೇ ನಿಜವಾದ ವೀರನೇ ಹೊರತು ಎದುರಾಳಿಯನ್ನು ಹೊಡೆದು ಉರುಳಿಸುವವನಲ್ಲ!
೧೩. “ಡ್ರಾಯಿ೦ಗ್“ ಎ೦ದರೆ ಒಬ್ಬ ಕಲಾವಿದನನ್ನು ಅರಿತುಕೊಳ್ಳುವುದೆ೦ದರ್ಥ!
೧೪.ಕಾವ್ಯರಸದಲ್ಲಿ ಮಿ೦ದ ಮನಸ್ಸೆ೦ಬುದು ಒಣಗಿದ ಮೇಲೂ ಪರಿಮಳವನ್ನು ಬೀರುತ್ತಲೇ ಇರುವ,ಪನ್ನಿರಿನಲ್ಲಿ ಅದ್ದಿದ ವಸ್ತ್ರದ೦ತೆ!
೧೫.ಭ್ರಾತೃತ್ವ ಬೆಳೆಯಲು ಸಾಮೂಹಿಕ ಕರ್ತವ್ಯ ಯಾ ಚಟುವಟಿಕೆಗಳಿಗೆ ಅಗತ್ಯವಾಗಿರುವ ಪರಸ್ಪರ ಅವಲ೦ಬನೆಯ ಅರಿವು ಅತ್ಯಗತ್ಯ!
nija, sundara saalugalu
ReplyDeleteಸುಂದರ ವಿಚಾರ.
ReplyDeleteಚೆನ್ನಾಗಿದೆ,
ReplyDeleteರಾಘವೇಂದ್ರರೇ. ವಿಜಯ ದಶಮಿಯ ಶುಭಾಶಯಗಳು.