Pages

Friday, October 8, 2010

ಭಗವಂತನೇ ಕಾಪಾಡಿದ.

ಇವತ್ತು ಬೆಳಿಗ್ಗೆ .೦೦ ಗಂಟೆಗೆ ವೇದಸುಧೆಯಲ್ಲಿ ಸುಧಾಕರ ಶರ್ಮರ ಉಪನ್ಯಾಸದ ಬರಹ ರೂಪವನ್ನು ಪ್ರಕಟಿಸಬೇಕಾಗಿತ್ತು. ಆದರೆಬೆಳಗಿನ ಜಾವ .೩೦ ಕ್ಕೆ ನಾನು ಕಾರ್ಯನಿರ್ವಹಿಸುವ ವಿದ್ಯುತ್ ಕೇಂದ್ರದಿಂದ ಕರೆಬಂತು " ಟ್ರಾನ್ಸ್ ಪ್ಹಾರ್ಮಮಾರ್ ಡಿಫೆರೆನ್ಶಿಯಲ್ ನಲ್ಲಿ ಟ್ರಿಪ್ ಆಗಿದೆ ಸರ್"- ಪಾಳಿ ಇಂಜಿನಿಯರ್ ಸುನಿತ ಕರೆಮಾಡಿದ್ದರು. ಸರಿ ಮುಖ ತೊಳೆದು ಹೊರಟೆ. ದೋಷವೇನೆಂದು ತಿಳಿದು ಅದನ್ನು ಸರಿಪಡಿಸುವಾಗ ಬೆಳಿಗ್ಗೆ .೩೦ ಆಗಿತ್ತು. ಜೊತೆಯಲ್ಲಿ .. ಮಂಜುನಾಥ್, ಜೆ..ಅಜಯ್ ಹಾಗೂ ಜನ ಸಿಬ್ಬಂಧಿ ಗಳು ಕೆಲಸ ಮಾಡಿದ್ದರು. ಎಲ್ಲಾ ಸರಿಯಾಯ್ತೆನ್ನುವಷ್ಟರಲ್ಲಿ ನಮ್ಮ ಮತ್ತೊಬ್ಬ .. ಅವರು ೧೧೦೦೦ವೋಲ್ಟೇಜ್ ಹರಿಯುತ್ತಿದ್ದ ಉಪಕರಣದ ತೀರಾ ಹತ್ತಿರ ಬಂದಿದ್ದರು. ಭಗವತ್ ಕೃಪೆಯಿಂದ ಕೇವಲ - ಇಂಚುಗಳ ಅಂತರದಲ್ಲಿಪಾರಾದರು. ಅಬ್ಭಾ! ಆದೃಶ್ಯ ನೆನಸಿಕೊಂಡರೆ ಮೈ ಝುಮ್ ಎನ್ನುತ್ತೆ. ಆದರೆ ನಮ್ಮನ್ನು ಮೀರಿದ ಶಕ್ತಿಯೊಂದು ಕಾಪಾಡಿತ್ತು. ನಮ್ಮಬುದ್ಧಿ, ವಿವೇಕ ಎಲ್ಲಾ ಗಾಳಿಗೆ ತೂರಿತ್ತು. ಆದರೆ ದೈವ ಕೃಪೆ ಮಾತ್ರ ನಮ್ಮ ಮೇಲಿತ್ತು. ಎಲ್ಲಾ ಸರಿಹೋದನಂತರ ೧೧. ಕ್ಕೆಮನೆಗೆ ಬರಲು ಸಾಧ್ಯವಾಯ್ತು. ನಂತರ ವೇದಸುಧೆಗೆ ಶರ್ಮರ ಮಾತುಗಳನ್ನು ಪೋಸ್ಟ್ ಮಾಡಿ ತುಣುಕನ್ನೂ ಬರೆದಿರುವೆ.

3 comments:

  1. ಸರ್‍, ಈ ಘಟನೆಯ ವಿವರ ಓದುತ್ತಿದ್ದಂತೆ ನನಗೂ ಒಂದೆರಡು ಕ್ಷಣ ಕಂಪಿಸುವಂತಾಯಿತು. ಯಾವುದೇ ಅಪಾಯವಿಲ್ಲದೇ ಪಾರು ಮಾಡಿದ ಆ ಶಕ್ತಿಗೆ ಅನಂತ ವಂದನೆಗಳು. ಎಲ್ಲರಿಗೂ ಶುಭವಾಗಲಿ..

    ReplyDelete
  2. There is God, everytime we realise it by one or the other way, ellarigoo shubhavannu haaraisuttiddene, navaraatriya shubhaashayagalu

    ReplyDelete
  3. ಶ್ರೀ ಚಂದ್ರಶೇಖರ್ ಮತ್ತು ಭಟ್ಟರೇ,
    ಪ್ರತಿಕ್ರಿಯೆಗೆ ಧನ್ಯವಾದಗಳು. ಎಲ್ಲರಿಗೂ ನವರಾತ್ರಿಯ ಶುಭಾಷಯಗಳು

    ReplyDelete