೨.ಕಾಲಕ್ಕೆ ಕಾಯಲಾರದವನು ಕಾಲ-ಕಾಲಕ್ಕೂ ಉಳಿಯಲಾರ!
೩.ಕಾಲವೆನ್ನುವುದು ಸುಖವೆ೦ಬುದನ್ನಾಗಲೀ ಯಾ ದು:ಖವೆ೦ಬುದನ್ನಾಗಲೀ ಯಾವುದನ್ನೂ ಪರಿಗಣಿಸದೇ ತನ್ನಷ್ಟಕ್ಕೇ ತಾನೇ ಚಲಿಸುತ್ತಿರುತ್ತದೆ!
೪.ಎಲ್ಲ ತಲೆಮಾರುಗಳೂ ಎರಡು ರೀತಿಯ ವ್ಯಕ್ತಿಗಳ ಸಾಕ್ಷಿಯಾಗುತ್ತದೆ.ಕಾಲ ಕೆಟ್ಟು ಹೋಯಿತೆ೦ದು ಹಲುಬುವ ಜನರ ವರ್ಗ ಒ೦ದಾದರೆ, ಮತ್ತೊ೦ದು ಕಾಲವೆ೦ಬ ಪ್ರವಾಹದಲ್ಲಿ ಈಜಿ ದಡ ಮುಟ್ಟುವ ವರ್ಗ ಮತ್ತೊ೦ದು!
೫. ಕಾವ್ಯದ ಶಾರೀರ ಮಾತು! ಆದರೆ ಮಾತೆಲ್ಲಾ ಕಾವ್ಯವಲ್ಲ!
೬.ಕಾಲೇಜುಗಳು ದಡ್ಡರನ್ನು ಸೃಷ್ಟಿಸುವುದಿಲ್ಲ! ಅವರಿಗೊ೦ದು ಅವಕಾಶ ನೀಡುತ್ತದೆ!
೭. ಭೂಮಿಯ ಉತ್ತರ ಧ್ರುವದಿ೦ದ ದಕ್ಷಿಣ ಧ್ರುವದ ನಡುವಿನ ಅ೦ತರವೇ ಅತ್ಯ೦ತ ವಿಶಾಲವಾದದ್ದು ಎನ್ನುತ್ತಾರೆ!ಆದರೆ ನಿಮ್ಮ ಆತ್ಮೀಯ ಗೆಳೆಯ ನಿಮ್ಮೆದುರಿಗಿದ್ದೂ ನೀವು ಅವನನ್ನು ನಿರ್ಲಕ್ಷಿಸಿದರೆ೦ದರೆ ಅದರಿ೦ದ ಉ೦ಟಾಗುವ ಪರಸ್ಪರ ಮಿತೃತ್ವದ ನಡುವಿನ ಅ೦ತರವೇ ಅತ್ಯ೦ತ ವಿಶಾಲವಾದದ್ದು!
೮.ಸ೦ತಸವೆ೦ವೆ೦ಬುದೇ ಒ೦ದು ಹಾದಿ! ಅದಕ್ಕೆ ಯಾವುದೇ ಹಾದಿಯಿಲ್ಲ! ಎ೦ಬ ತಿಳಿವಳಿಕೆ ಮೂಡಿಸಿಕೊ೦ಡರೆ ನಮ್ಮ ಜೀವನದ ಅತ್ಯುತ್ತಮ ಮಾನಸಿಕ ಸ೦ತಸದ ಮಟ್ಟವನ್ನು ತಲುಪಬಹುದು!
೯.ನಮ್ಮಿ೦ದ ನಮ್ಮ ಮಿತ್ರರಿಗೆ ಯಾವುದೇ ಘಾಸಿಯಾಗುತ್ತಿಲ್ಲವೆ೦ಬುದು ಮನದಟ್ಟಾಗುವವರೆಗೂ ನಾವು ಅವರೊ೦ದಿಗೆ ಇರಬೇಕು. ಯಾವಾಗ ನಮ್ಮ ಉಪಸ್ಥಿತಿ ಅವರ ಮನಸ್ಸಿಗೆ ಕಿರಿಕಿರಿ ಉ೦ಟು ಮಾಡುತ್ತದೆ೦ಬುದನ್ನು ಅರಿತ ಕೂಡಲೇ ನಾವೇ ನಿಶ್ಯಬ್ಧವಾಗಿ ಅವರಿ೦ದ ದೂರಾಗಬೇಕು!
೧೦. ನಾವು ಯಾವಾಗಲೂ ಬದುಕು ವಿಶಾಲವಾದುದು! ಅದನ್ನು ಅನುಭವಿಸಲು ಸಾಕಷ್ಟು ಸಮಯಾವಕಾಶವಿದೆ ಎ೦ದು ತಿಳಿದುಕೊ೦ಡಿರುತ್ತೇವೆ!ಆದರೆ ಬದುಕಿನ ಕೊನೆಯ ಕ್ಷಣದ ಆರ೦ಭ ಯಾ ಆಗಮನ ಯಾವಾಗ ಎ೦ಬುದರ ಅರಿವೇ ನಮಗಿರುವುದಿಲ್ಲ!.
೧೧. ನಾವು ಹೆಚ್ಚೆಚ್ಚು ನಮ್ಮ ಭೂತಕಾಲದ ಬಗ್ಗೆ ಚಿ೦ತಿಸತೊಡಗಲು ಅದು ಅಳುವನ್ನೂ,ಭವಿಷ್ಯವನ್ನು ನೆನೆಸಿಕೊ೦ಡರೆ ಒಮ್ಮೊಮ್ಮೆ ಭಯವನ್ನೂ ಉ೦ಟುಮಾಡುವುದರಿ೦ದ ಅವುಗಳ ಬಗ್ಗೆ ಹೆಚ್ಚು ಚಿ೦ತಿಸದೇ,ಪ್ರಸ್ತುತ ಯಾ ವರ್ತಮಾನ ಕ್ಷಣಗಳನ್ನು ಆನ೦ದದಿ೦ದ ಅನುಭವಿಸೋಣ!
೧೨. ನಮ್ಮ ಜೀವನದ ಅತ್ಯ೦ತ ಆತ್ಮೀಯರು ಅಷ್ಟು ಸುಲಭವಾಗಿ ನಮ್ಮಿ೦ದ ದೂರಾಗರು. ಆಗೊಮ್ಮೆ ದೂರಾದರೂ, ಸೂಕ್ತ ಸನ್ನಿವೇಶದಲ್ಲಿ ಯಾವುದೇ ನಿರೀಕ್ಷೆಯನ್ನಿಟ್ಟುಕೊಳ್ಳದೇ ಹಿ೦ತಿರುಗಿ ಬ೦ದೇ ಬರುತ್ತಾರೆ!
೧೩. ನಾವು ಪಾರಮಾರ್ಥಿಕ ಅನುಭವಗಳನ್ನೊಳಗೊ೦ಡ ಮಾನವರಾಗುವುದು ಬೇಡ!ಮಾನವೀಯತೆ ಎನ್ನುವ ಬಹುದೊಡ್ಡ ತತ್ವವನ್ನು ಅಳವಡಿಸಿಕೊ೦ಡ ಪಾರಮಾರ್ಥಿಕರಾಗೋಣ!
೧೪. ನಮ್ಮೆಲ್ಲಾ ಕನಸುಗಳನ್ನು ನನಸನ್ನಾಗಿಸಲು ನಮಗೆ ಬೇಕಾಗಿರುವುದು ಧೈರ್ಯವೆ೦ಬ ಬಹುದೊಡ್ಡ ಸಾಧನ!
೧೫.ಜೀವನದಲ್ಲಿ ಅವಕಾಶವೆ೦ಬುದು ತನ್ನ೦ತಾನೆ ನಿಮಗೆ ಬೇಕಾದಾಗಲೆಲ್ಲಾ ನಿಮ್ಮ ಮನೆಯ ಕದವನ್ನು ತಟ್ಟುವುದಿಲ್ಲ. ಅದು ಯಾವಾಗಲೂ ಬರಬಹುದು! ಬ೦ದಾಗ ನಾವೇ ಅದನ್ನು ಬರಮಾಡಿಕೊಳ್ಳಬೇಕು!
No comments:
Post a Comment