ಮೂಢ ಉವಾಚ -14
ತನುಮನಗಳ ತೀರದ ದಾಹವದೆ ಕಾಮ|
ದಾಹವನು ತಣಿಸಲು ಮಾಡುವುದೆ ಕರ್ಮ||
ತಣಿಯದದು ಕಾಮ ನಿಲ್ಲದದು ಕರ್ಮ|
ದೇವನಾಟವನರಿತವರಾರಿಹರೋ ಮೂಢ||
ಹಿತಕಾಮ ಮಿತಕಾಮ ವಿಕಟಕಟಕಾಮ|
ಸತ್ಕಾಮ ದುಷ್ಕಾಮ ಸುರಾಸುರರ ಕಾಮ||
ಎಂತಪ್ಪ ಜನರಿಹರೋ ಅಂತಪ್ಪ ಕಾಮ|
ನಿಷ್ಕಾಮ ಕಾಮ್ಯತೆಯೆ ಗುರಿಯಿರಲಿ ಮೂಢ||
ಕಾಮವೆಂಬುದು ಅರಿಯು ಕಾಮದಿಂದಲೆ ಅರಿವು|
ಕಾಮವೆಂಬುದು ಪಾಶ ಕಾಮದಿಂದಲೆ ನಾಶ||
ಕಾಮವೆಂಬುದು ಶಕ್ತಿ ಕಾಮದಿಂದಲ್ತೆ ಜೀವಸಂವೃದ್ಧಿ|
ಕಾಮದಿಂದಲೆ ಸಕಲ ಸಂಪದವು ಮೂಢ||
ಕಾಮವನು ಹತ್ತಿಕ್ಕಿ ಮುಖವಾಡ ಧರಿಸದಿರು|
ಕಾಮವನೆ ಬೆಂಬತ್ತಿ ಓಡುತ್ತಾ ಹೋಗದಿರು||
ಧರ್ಮದಿಂ ಬಾಳಿದರೆ ಸಂಯಮದಿ ಸಾಗಿದರೆ|
ದಿವ್ಯಕಾಮ ರಮ್ಯ ಕಾಮ ನಿನದಲ್ತೆ ಮೂಢ||
*****************
-ಕವಿನಾಗರಾಜ್.
{ಸಂಯಮದಿ ಸಾಗಿದರೆ|
ReplyDeleteದಿವ್ಯಕಾಮ ರಮ್ಯ ಕಾಮ ನಿನದಲ್ತೆ ಮೂಢ}
ವಾಹ್!!
ಚೆನ್ನಾಗಿದೆ ನಾಗರಾಜ ಕವಿಗಳೇ !
ReplyDeleteDhanyavaadagalu.
ReplyDelete