ಶ್ರೀ ಸುಧಾಕರ ಶರ್ಮರಿಗೆ ನಮಸ್ಕಾರಗಳು.
ವೇದಸುಧೆಯಲ್ಲಿ ನಿಮ್ಮ ಉಪನ್ಯಾಸಗಳು ಚೆನ್ನಾಗಿವೆ, ನಿಮಗೂ ಹಾಗೂ ಪ್ರಕಟಿಸಿದ ಶ್ರೀಧರ್ ರವರಿಗೆ ಧನ್ಯವಾದಗಳು.
ನನಗೆ ಬಂದ ಕೆಲವು ಅನುಮಾನಗಳಿಗೆ ತಾವು ಪರಿಹರಿಸುತ್ತೀರಿ ಎನ್ನುವ ಆಶಯದೊಂದಿಗೆ ನನ್ನ ಒಂದೆರಡು ಪ್ರಶ್ನೆಗಳು:
1. ತಾವು ತಮ್ಮ ಉಪನ್ಯಾಸದಲ್ಲಿ 2೦,೦೦೦ ಕ್ಕೂ ಹೆಚ್ಚಿರುವ ವೇದಮಂತ್ರಗಳಿಗೆ amendment ಇಲ್ಲ ಅಂತ ಹೇಳಿದ್ದೀರಿ, ಹಾಗಾದರೆ ನಮಕ, ಚಮಕ, ಪುರುಷಸೂಕ್ತ ಇತ್ಯಾದಿಗಳು, ಒಂದಕ್ಕಿಂತ ಹೆಚ್ಚು ವೇದಗಳಲ್ಲಿ ಬರುತ್ತವೆ. ಅವು ಋಗ್ವೇದದಲ್ಲಿ ಬರುವ ನಮಕ, ಚಮಕ, ಪುರುಷಸೂಕ್ತಕ್ಕೂ ಯಜುರ್ವೇದದಲ್ಲಿ ಬರುವುದಕ್ಕೂ ಬಹಳಷ್ಟು ವ್ಯತ್ಯಾಸ ಇದೆ. ಇದು amendment ಅಲ್ಲವೇ? ಈ ವ್ಯತ್ಯಾಸಕ್ಕೆ ಕಾರಣಗಳೇನು ?
2. ನಾವು ನಮಕ, ಚಮಕ, ಪುರುಷಸೂಕ್ತ ಪಠಣ ಮಾಡುವುದಾದರೆ ಅಥವಾ ಕೇಳುವುವುದಾದರೆ ಯಾವುದನ್ನು ಕೇಳಬೇಕು?ಓದಬೇಕು? ಋಗ್ವೇದದ್ದೇ?ಯಜುರ್ವೇದದ್ದೇ ? ಇದಕ್ಕೇನಾದರು ನಿಯಮಗಳಿವೆಯೇ? ಬೆಳಿಗ್ಗೆ, ಸಾಯಂಕಾಲ ಪಠಣ ಮಾಡಬೇಕಾದರೆ ಯಾವುದನ್ನು ಅನುಸರಿಸಬೇಕು?
3. ಶುಕ್ಲ ಯಜುರ್ವೇದ ಮಾಧ್ಯಂದಿನದಲ್ಲಿ ಪುರುಷಸೂಕ್ತದಲ್ಲಿ ಸಹರ್ಸಶೀರ್ಷಾ, ಪುರುಷ ಇತ್ಯಾದಿ ಶಬ್ದಗಳಿಗೆ ಸಹಸ್ರ ಶೀರುಖಾ, ಪುರೂಖಾ ಇತ್ಯಾದಿ ಹೇಳುತ್ತಾರಲ್ಲ ಕಾರಣವೇನು? (ಇದರೊಟ್ಟಿಗೆ ಅ ಆಡಿಯೋ ಫೈಲ್ ಕಳುಹಿಸಿದ್ದೇನೆ)
-ಜಿ.ಎಸ್.ಶ್ರೀನಾಥ್
-----------------------------------------------------------ಶ್ರೀ ಸುಧಾಕರಶರ್ಮರು ಏನು ಹೇಳುತ್ತಾರೆ, ನೋಡೋಣ.....
1. Amendmentನ ಅರ್ಥವೇನೆಂದರೆ ಈಗಿರುವುದು ಸರಿಯಿಲ್ಲ, ಆದ್ದರಿಂದ ತಿದ್ದಿ ಬರೆಯಲಾಗಿದೆ. ಆಗ ಹಳೆಯದು ಅನೂರ್ಜಿತವಾಗುತ್ತದೆ.
ಇಲ್ಲಿ ಆ ತರಹದ ತಿದ್ದುಪಡಿಗಳಿಲ್ಲ.
ಹಲವು ಸೂಕ್ತಗಳು ಒಂದಕ್ಕಿಂತ ಹೆಚ್ಚು ವೇದಗಳಲ್ಲಿ ಕಂಡುಬರುವುದುಂಟು.
ಸಾಮವೇದದಲ್ಲಿ ಸಾಕಷ್ಟು ಮಂತ್ರಗಳು ಋಗ್ವೇದದ್ದೇ ಆಗಿವೆ.
ಇದು repetition ಕೂಡ ಅಲ್ಲ!
ಕಾರಣವಿಷ್ಟೇ.
ಋಗ್ವೇದ ಜ್ಞಾನಪ್ರಧಾನ (ಕರ್ಮ, ಉಪಾಸನೆ, ವಿಜ್ಞಾನುವೂ ಇದೆ)
ಯಜುರ್ವೆದ ಕರ್ಮಪ್ರಧಾನ (ಜ್ಞಾನ, ಉಪಾಸನೆ, ವಿಜ್ಞಾನವೂ ಇದೆ)
ಸಾಮವೇದವು ಉಪಾಸನಾಪ್ರಧಾನ (ಜ್ಞಾನ, ಕರ್ಮ, ವಿಜ್ಞಾನವೂ ಇದೆ)
ಅಥರ್ವವೇದವು ವಿಜ್ಞಾನಪ್ರದಾನ (ಜ್ಞಾನ, ಕರ್ಮ, ಉಪಾಸನೆಗಳೂ ಇದೆ)
ಅದೇ ಮಂತ್ರ/ಸೂಕ್ತವು ಬೇರೆ ಬೇರೆ ವೇದಗಳಲ್ಲಿ ಕಂಡುಬಂದರೂ ಅವುಗಳ
Frame of Reference ಬೇರೆ ಬೇರೆಯೇ ಅಗಿರುತ್ತದೆ! ಅದೇ ಮಂತ್ರದ ಬೇರೆ ಬೇರೆ ಮಗ್ಗುಲಗಳನ್ನು ಕಾಣಬೇಕಾಗುತ್ತದೆ.
2. ವೇದಗಳ ಅಧ್ಯಯನಕ್ಕೆ, ಪಠಣಕ್ಕೆ ಎಲ್ಲ ಕಾಲವೂ ಸೂಕ್ತವೇ! ಧ್ವನಿಯ ರೂಪದಲ್ಲಿ ಮಾಡುವಾಗ ಬಳಿಯಿರುವ ಇತರರ ಹಿತಾಹಿತಗಳು ಗಮನದಲ್ಲಿದ್ದರೆ ಸಾಕು.
ಇನ್ನು ಓದಿ ಅರ್ಥ ತಿಳಿಯುವ ವಿಚಾರ. ನಾಲ್ಕು ವೇದಗಳೂ ಒಂದಕ್ಕೊಂದು ಶತ್ರುಗಳಲ್ಲ, ವಿರೋಧವೂ ಇಲ್ಲ. ಸ್ಮೃತಿಶಕ್ತಿ ಕಡಿಮೆಯಾದಾಗ ಅನುಕೂಲಕ್ಕಾಗಿ ಒಬ್ಬೊಬ್ಬರು ಒಂದೊಂದು ವೇದವನ್ನು ನೆನಪಿನಲ್ಲಿಟ್ಟುಕೊಳ್ಳುವ ಪದ್ಧತಿ ಬಂದಂತೆ ಕಾಣುತ್ತದೆ. ಆದರೆ, ಯಾವುದೇ ವೇದದ ಮಂತ್ರದ ಅರ್ಥವನ್ನು ತಿಳಿಯುವಾಗ ಇತರ ವೇದಗಳಲ್ಲಿರುವ ಪೂರಕ ಮಂತ್ರಗಳ ಸಹಾಯ ಬೇಕೇ ಬೇಕು. ಸರಿಯಾದ ರೀತಿಯಲ್ಲಿ ವೇದಗಳ ಅಧ್ಯಯನವನ್ನು ಮಾಡುವುದೆಂದರೆ ನಾಲ್ಕೂ ವೇದಗಳನ್ನೂ ಅಧ್ಯಯನ ಮಾಡುವುದೇ ಆಗಿದೆ.
3. ನೀವು ಕಳಿಸಿರುವ ಆಡಿಯೋ ಕ್ಲಿಪ್ ಕೇಳಿದೆ. ಬಹುಷಃ ಉತ್ತರಭಾರತದ ವೇದಪಾಠಿಗಳು ಹೇಳಿದಂತೆ ಕಾಣುತ್ತದೆ. ಚಾರಿತ್ರಿಕ ಕಾರಣಗಳಿಂದಾಗಿ (ಮೇಲಿಂದ ಮೇಲಿಂದ ವಿದೇಶೀಯರ ಆಕ್ರಮಣ, ದಬ್ಬಾಳಿಕೆ)ಸ್ವರಶುದ್ಧತೆ, ಭಾಷಾಶುದ್ಧತೆಗಳನ್ನು ನಿರಿಕ್ಷಿಸುವಂತಿಲ್ಲ. ಈ ವಿಚಾರದಲ್ಲಿ ದಾಕ್ಷಿಣಾತ್ಯರ ಸ್ವರ, ಉಚ್ಚಾರಣೆಗಳೇ ಅನುಕರಣೀಯ.
ಇನ್ನು ಸಾಮಗಾನ ಮಾಡುವಾಗ, ಭಾವಾಭಿವ್ಯಕ್ತಿಯೇ ಪ್ರಧಾನವಾದ್ದರಿಂದ ಅಲ್ಲಿಯ ಸ್ವರವ್ಯವಸ್ಥೆಯೇ ಬೇರೆ ರೀತಿಯಲ್ಲಿರುತ್ತದೆ. ಕೆಲವೊಮ್ಮೆ ಪದ, ಅಕ್ಷರಗಳನ್ನು ಎಳೆದು, ಬಿಡಿಸಿ ಹಾಡುವುದುಂಟು.
ಏನೇ ಆದರೂ ಶೀರ್ಷಾ ಎಂಬುದು ಶೀರುಖಾ ಎಂಬಷ್ಟು ವ್ಯತ್ಯಾಸವಾಗುವುದು ಸರಿಯಿಲ್ಲ. (ಇದು ನನ್ನ ಅಭಿಪ್ರಾಯ - ಏಕೆಂದರೆ, Ultimately ಅರ್ಥವು ನಮಗೆ ಬೇಕಾಗುವುದರಿಂದ ಅದು Distort ಆಗುತ್ತದೆ)
ಅಷ್ಟೊಂದು ಉಚ್ಚಾರಣೆಯ ವ್ಯತ್ಯಾಸಕ್ಕೆ, ಅರ್ಥವ್ಯತ್ಯಾಸವಾಗದಂತೆ, ಯಾರಾದರೂ ಸಾಧಾರವಾಗಿ ವಿವರಣೆ ಕೊಡುವುದಾದರೆ, ಪರಿಶೀಲಿಸಲು ಸಿದ್ಧನಿದ್ದೇನೆ.
-ಸುಧಾಕರ ಶರ್ಮಾ
ಸುಧಾಕರ್ ಶರ್ಮರಿಗೆ ಧನ್ಯವಾದಗಳು,
ReplyDeleteನಿಮ್ಮ ಉತ್ತರದಲ್ಲಿ ".................. ಅದೇ ಮಂತ್ರ/ಸೂಕ್ತವು ಬೇರೆ ಬೇರೆ ವೇದಗಳಲ್ಲಿ ಕಂಡುಬಂದರೂ ಅವುಗಳ Frame of Reference ಬೇರೆ ಬೇರೆಯೇ ಅಗಿರುತ್ತದೆ" ಎಂದಿದ್ದೀರಿ, ಇದರ ಬಗ್ಗೆ ಇನ್ನೂ ಕೊಂಚ ವಿವರಣೆ ಕೊಟ್ಟರೆ ಅನುಕೂಲವಾಗುತ್ತದೆ.
- ವಂದನೆಗಳು.
ಋಗ್ವೇದದಲ್ಲಿ ಬರುವ ಮಂತ್ರ Matter of fact ಜ್ಞಾನವನ್ನು ತಿಳಿಸುತ್ತಿದ್ದರೆ, ಅದೇ ಮಂತ್ರ ಸಾಮವೇದದಲ್ಲಿ ಉಪಾಸನೆಯ ಹಿನ್ನೆಲೆಯಲ್ಲಿ ನೋಡಲ್ಪಡುತ್ತದೆ. ಇಂತಹ ಅಪೂರ್ವ ಜ್ಞಾನನಿಧಿಯಾದ ಭಗವಂತನ ವಿಚಾರದಲ್ಲಿ ನಮ್ಮ ಕೃತಜ್ಞತೆಯಿದೆ ಎಂದು ಜ್ಞಾನ, ಅಲ್ಲಿಂದ ಮುಂದೆ ಕೃತಜ್ಞತೆಯವರೆಗೂ ವಿಸ್ತಾರವಾಗುತ್ತದೆ.
ReplyDeleteಧನ್ಯವಾದಗಳು ಸರ್
ReplyDeleteDear Sir/Madam,
ReplyDeleteThis is Madhusudan from Bangalore I'm web Developmant Student in Aptech Jayanagar center our sir not clearing our doubts so can you help me to clar that doubt sir/madam, i hope you will replay to this mail. my E-Mail ID madhu14n87@gmail.com
Regards,
Madhusudn.p
Dear Madhusudan!
ReplyDeleteYou have not made clear as to what are your doubts. To which subject it relates!
Enter your questions, if they are answerable, subject to our limitations, we shall answer.
Hope you will be convinced/informed.
Thanking you,
sudhakarasharma
ಶ್ರೀ ಸುಧಾಕರ ಶರ್ಮರಿಗೆ ಪ್ರಣಾಮಗಳು,
ReplyDeleteಸಗೋತ್ರ ವಿವಾಹದ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಆಗಬಹುದು; ಆಗಬಾರದು ಇತ್ಯಾದಿ. ತಮ್ಮ ಮಾರ್ಗದರ್ಶನಕ್ಕಾಗಿ ಕೋರುವೆ.
ಗೌರವಾದರಗಳೊಂದಿಗೆ,
ಗಾಂ ತ್ರಾಯತ ಇತಿ ಗೋತ್ರಃ|| ದನ ಮೇಯಿಸುವುದರಿಂದ ಬಂದದ್ದು ಗೋತ್ರ!
ReplyDeleteಮೊದಲಿಗೆ ಗುರುಕುಲದಲ್ಲಿರುವಾಗ ಗೋಪಾಲನೆ ಅನಿವಾರ್ಯವಾಗಿತ್ತು. ಪರಿಚಯ ಮಾಡಿಕೊಳ್ಳುವಾಗ ನೀನು ಯಾವ ಗುರುಕುಲದಲ್ಲಿ ಓದಿದ್ದು ಎಂಬುದನ್ನು, ನೀನು ಯಾವ ಗುರುಕುಲದಲ್ಲಿ ದನ ಮೇಯಿಸುತ್ತಿದ್ದೆ? ಎಂಬರ್ಥದಲ್ಲಿ "ಗೋತ್ರ" ಹುಟ್ಟಿದಂತೆ ಕಾಣುತ್ತದೆ.
ಗೋ ಎಂದರೆ ವಾಣಿ ಎಂತಲೂ ಅರ್ಥವಿದೆ. ಅದನ್ನು ರಕ್ಷಿಸುವುದೇ ಗೋತ್ರ. ಹಾಗಾಗಿ ಯಾವ ಅಧ್ಯಯನ ಪರಂಪರೆ ನಿನ್ನದು ಎಂಬುದನ್ನು ತಿಳಿಯಲು ಗೋತ್ರ ಶಬ್ದದ ಪ್ರಯೋಗವೂ ಆಗಿರಬಹುದು.
ಹೀಗೆ ಹಿನ್ನೆಲೆಯಿರುವಾಗ ಇದಕ್ಕೂ ವಿವಾಹಕ್ಕೂ ಯಾವಾಗ ಹೇಗೆ ಗಂಟು ಬಿತ್ತೋ ವಿಚಿತ್ರವಾಗಿದೆ.
ವಿವಾಹ ಸಂದರ್ಭದಲ್ಲಿ ನೋಡಬೇಕಾದ್ದು ಗುಣ, ಸ್ವಭಾವಗಳೊಂದಿಗೆ, ಜೀವನ ಧ್ಯೇಯೋದ್ದೇಶಗಳೊಂದಿಗೆ, ರಕ್ತಸಂಬಂಧ. ಹತ್ತಿರದ ರಕ್ತಸಂಬಂಧಿಗಳಲ್ಲಿ ಲಗ್ನವಾಗದರೆ ಆನುವಂಶಿಕ ರೋಗಗಳು ತಲೆಯೆತ್ತುವ ಸಾಧ್ಯತೆಗಳು ಹೆಚ್ಚು. ತಾಯಿಯ ಕಡೆಯಾಗಲಿ ಅಥವಾ ತಂದೆಯ ಕಡೆಯಾಗಲಿ ಸುಮಾರು ಏಳು ತಲೆಮಾರುಗಳಷ್ಟು ಅಂತರವಿರುವಂತೆ ನೋಡಿಕೊಂಡರೆ ಈ ಸಾಧ್ಯತೆ ಅತ್ಯಂತ ಕಡಿಮೆ ಇರುತ್ತದೆ. ಬಹುಶಃ Almost Zero. ಇಂದು ಹಿಂದಿನ ಏಳು ತಲೆಮಾರುಗಳ ಮಾಹಿತಿ ಇಲ್ಲದಿರುವಾಗ ಎಷ್ಟು ಸಾಧ್ಯವೋ ಅಷ್ಟು ದೂರದ ಸಂಬಂಧ ನೋಡುವುದು ಒಳ್ಳೆಯದು.
ನಮಸ್ಕಾರಪೂರ್ವಕ ಧನ್ಯವಾದಗಳು.
ReplyDelete