Pages

Friday, December 17, 2010

ಯೋಚಿಸಲೊ೦ದಿಷ್ಟು...೨೧

೧.ಪ್ರೀತಿಯ ಮು೦ದೆ ತಪ್ಪುಗಳು ನಗಣ್ಯವಾಗುತ್ತವೆ!
೨. ಜೀವನ ಯಾನದಲ್ಲಿ ಎದುರಾಗುವ ಪ್ರತಿಯೊ೦ದು ಸಮಸ್ಯೆಗಳನ್ನೂ ಸಕಾರಾತ್ಮಕವಾಗಿ ತೆಗೆದುಕೊ೦ಡಲ್ಲಿ ವಿಫಲತೆ  ಯೇ ವಿಜಯದತ್ತ ನಡೆಯ ಹೆದ್ದಾರಿ ಯೆ೦ಬುದು ಗೋಚರಿಸುತ್ತದೆ!
೩. ಬೇರೊಬ್ಬರ ಮುಖದಲ್ಲಿನ ಮ೦ದಹಾಸದಿ೦ದ ಅವರ ಸ೦ತೋಷವನ್ನು  ಗುರುತಿಸಬಹುದು.. ಆದರೆ ಅವರ ಹೃದಯದಲ್ಲಿ ಅಡಗಿರುವ ನೋವನ್ನು ಗುರುತಿಸಲು ಸಾಧ್ಯವಿಲ್ಲ!
೪. ಕಾಲ ಮತ್ತು ಪ್ರೀತಿ ಯ ಮು೦ದೆ ಮನುಷ್ಯ ಯಾವಾಗಲೂ ಸೋಲುತ್ತಾನೆ!!
೫. ಪ್ರತಿಯೊ೦ದು ಸೋಲಿನಿ೦ದ ನಿರಾಸೆಯನ್ನೇ ಅನುಭವಿಸುತ್ತಿದ್ದರೂ ಸೋಲನ್ನು ಒಪ್ಪಿಕೊಳ್ಳದೇ ಆಶಾವಾದಿಗಳಾಗಿಯೇ,ನಮ್ಮ ಸಾಧನೆಯ ಹಾದಿಯನ್ನು ಪರಾಮರ್ಶಿಸುತ್ತ, ಸರಿಪಡಿಸಿಕೊಳ್ಳುತ್ತಲೇ ಸಾಗೋಣ! ವಿಜಯದ ಶಿಖರ ಸನಿಹವಾಗತೊಡಗುತ್ತದೆ!
೬. ಕನಸುಇದ್ದಲ್ಲಿ ಅದನ್ನು ನನಸಾಗಿಸುವ ಯೋಜನೆಯು, ತುಡಿತ ವಿದ್ದಲ್ಲಿ ಅನುಸರಣೆಯ ಹಾದಿಯು ಇದ್ದೇ ಇರುತ್ತದೆ… ಇವೆರಡೂ ಇದ್ದಲ್ಲಿ ವಿಜಯವೆ೦ಬುದು ನಮ್ಮ ಕೈಗೆಟಕುವ ಸನಿಹದಲ್ಲಿರುತ್ತದೆ!
೭. ಪ್ರತಿಯೊಬ್ಬ ಸಾಧಕನ  ಸಾಧನೆಯ ಹಿ೦ದೆಯೂ ಅವನಲ್ಲಿನ ಸಕಾರಾತ್ಮಕ ಮನೋಭಾವದ ಪಾತ್ರ ವಿದ್ದೇ ಇರುತ್ತದೆ!
೮. ನಮ್ಮ ಆತ್ಮೀಯರು ನಮ್ಮ  ಮೇಲೆ ತೋರಿಸಬಹುದಾದ ಮಮತೆಯನ್ನು ಕಡೆಗಣಿಸುತ್ತಾ ಬ೦ದಲ್ಲಿ ನಾವೊ೦ದು ದಿನ  ಮಮತೆ ಹಾಗೂ ಆತ್ಮೀಯರು ಎರಡನ್ನೂ ಕಳೆದುಕೊಳ್ಳಬೇಕಾಗಬಹುದು!
೯. ಸುತ್ತಿಗೆಯು ಗಾಜನ್ನು ಪುಡಿಗೊಳಿಸಿದರೆ, ಕಬ್ಬಿಣವನ್ನು ಗಟ್ಟಿಯಾಗಿಸುತ್ತದೆ! ಹಾಗೆಯೇ ಸಮಸ್ಯೆಯೆ೦ಬುದೂ ಒ೦ದು ಸುತ್ತಿಗೆಯ೦ತೆ.. ಅದರ ಹೊಡೆತಕ್ಕೆ ಗಾಜಾಗಬೇಕೋ ಅಥವಾ ಕಬ್ಬಿಣವಾಗಬೇಕೋ ಎ೦ಬುದರ ನಿರ್ಧಾರ ಮಾತ್ರ ನಮಗೆ ಬಿಟ್ಟದ್ದು!!
೧೦. ನಮ್ಮಿ೦ದ ಬೇರೆಯವರು ನೋವನ್ನನುಭವಿಸಿದಾಗ ಅದಕ್ಕಾಗಿ ಕ್ಷಮೆಯಾಚಿಸುವುದರಲ್ಲಿ ನಾವೇ ಮೊದಲಿಗರಾಗೋಣ! ಅ೦ತೆಯೇ ನಿಜವಾಗಿಯೂ ಪಶ್ಚಾತಾಪಪಟ್ಟು ನಮ್ಮಲ್ಲಿ ಕ್ಷಮೆಯನ್ನು ಕೇಳುವವರ ತಪ್ಪನ್ನು ಕ್ಷಮಿಸುವ ಮೊದಲಿಗರೂ ನಾವೇ ಆಗೋಣ.
೧೧. ನಮ್ಮನ್ನು ಕಾಯುತ್ತಿರುವವರಿಗೆ ಬೇರೆ ಯಾವುದೇ ಕಾರ್ಯವಿಲ್ಲವೆ೦ದು ತುಚ್ಛೀಕರಿಸುವ ಬದಲು, ನಮಗಿ೦ತ ಬೇರೆ ಯಾವುದೇ ಕಾರ್ಯವೂ ಅವರಿಗೆ ಮುಖ್ಯವಲ್ಲ ಎ೦ಬುದನ್ನು ಗಮನಿಸೋಣ!
೧೨. ನಮ್ಮ ನೋವು ಇನ್ನೊಬ್ಬರಿಗೆ ನಗುವ ವಿಷಯವಾದಾಗ ಚಿ೦ತಿಸದಿದ್ದರೂ..  ನಮ್ಮ ನಗುವು ಮತ್ತೊಬ್ಬರ ನೋವಿಗೆ ಕಾರಣವಾದಲ್ಲಿ ಮಾತ್ರ ಚಿ೦ತಿಸಲೇಬೇಕಾಗುತ್ತದೆ!!
೧೩. ಸ೦ಶೋಧಕನಿಗೆ ಸ೦ಶೋಧನೆಯಲ್ಲಿ ತೊಡಗಿಕೊಳ್ಳುವಲ್ಲಿನ ಖುಷಿ, ಯುಧ್ಧದಲ್ಲಿ ತೊಡಗಿದಾಗಲೂ ದೊರೆಯಲಾರದು!
೧೪. ಪ್ರೀತಿ ಮತ್ತು ಆತ್ಮೀಯತೆಗಳು ಬದುಕಲು ದಾರಿ ಮಾಡಿಕೊಟ್ಟ೦ತೆಯೇ ಬದುಕಿನಿ೦ದ ನಿರ್ಗಮಿಸಲೂ ಹಾದಿ ಮಾಡಿಕೊಡುತ್ತವೆ!!
೧೫. ಏಕಾ೦ತತೆಯನ್ನು ನಾವೇ ಆರಿಸಿಕೊ೦ಡಲ್ಲಿ ಅದರಲ್ಲಿ ಸಿಗುವ ಸ೦ತಸ ಮತ್ಯಾವುದರಲ್ಲಿಯೂ ಸಿಗಲಾರದು! ಆದರೆ ಅದೇ ಅನಿವಾರ್ಯವಾದಾಗ ಮಾತ್ರ ಅದು ನೀಡುವ ನೋವನ್ನು ಅನುಭವಿಸಲಾಗದು!!

1 comment: