ಮನುಷ್ಯನಿಗೆ ಕಷ್ಟಕಾರ್ಪಣ್ಯಗಳು ಬಂದಾಗ, ರೋಗರುಜಿನಗಳು ಬಂದಾಗ ಸಾಮಾನ್ಯವಾಗಿ ಮಾತುಕತೆ ಹೇಗಿರುತ್ತದೆ? "ಯಾವ ಜನ್ಮದ ಪಾಪದ ಫಲವೋ ಈಗ ಅನುಭವಿಸುತ್ತಿದ್ದಾನೆ!" -ಇದು ಸಾಮಾನ್ಯವಾಗಿ ಜನರು ಆಡಿಕೊಳ್ಳುವ ಮಾತು, ಅಲ್ಲವೇ?
"ಪ್ರೇತಾತ್ಮ"- ಇದು ನಿಜವೇ?
ಪೂರ್ವ ಜನ್ಮದ ನೆನಪು! ಎಷ್ಟು ಸತ್ಯ? ಎಷ್ಟು ನಂಬಲರ್ಹ?
ಮೊನ್ನೆ ನಡೆದ "ವೇದೋಕ್ತ ಜೀವನ ಪಥ" ಕಾರ್ಯಾಗಾರದಲ್ಲಿ ಈ ವಿಷಯಗಳೆಲ್ಲಾ ಚರ್ಚೆಗೆ ಬಂದವು. ನನ್ನ ಮೊಬೈಲ್ ನಲ್ಲಿ ಈ ಚರ್ಚೆಯ ಧ್ವನಿಯನ್ನು ಸೆರೆ ಹಿಡಿಯುವ ಪ್ರಯತ್ನ ಮಾಡಿರುವೆ. ಶ್ರೀ ಸುಧಾಕರ ಶರ್ಮರ ಮುಂದೆ ಮೊಬೈಲ್ ಇಡಲಾಗಿತ್ತು. ದೂರದಲ್ಲಿ ಕುಳಿತಿದ್ದವರ ಧ್ವನಿ ಸ್ಪಷ್ಟ ಕೇಳಿಲ್ಲವಾದರೂ ಶರ್ಮರು ಕೊಡುವ ಉತ್ತರದಲ್ಲಿ ಸಾಕಷ್ಟು ವೈಜ್ಞಾನಿಕ ವಿಶ್ಲೇಷಣೆ ಇರುವುದರಿಂದ ವೇದಸುಧೆಯ ಅಭಿಮಾನಿಗಳಿಗೆ ಒಂದಿಷ್ಟು ವಿಚಾರ ಹಂಚಿಕೊಳ್ಳುವ ಪ್ರಯತ್ನ ಮಾಡಲಾಗಿದೆ. ಸಂದೇಹಗಳನ್ನು ಬರೆದರೆ ಶರ್ಮರು ಉತ್ತರಿಸುವರು.
ಶ್ರೀಧರ್ ಸಾರ್,
ReplyDeleteಶ್ರೀ ಶರ್ಮ ಅವರು ನಾನು ಅವರನ್ನು ಮೊದಲ ಬಾರಿ ಭೇಟಿಯಾದಾಗ ಅಂದರೆ ವೇದಸುಧೆ ಪ್ರಾರಂಭಿಕ ಹಂತದ ಸಭೆಯಲ್ಲಿ ಮಾತನಾಡುತ್ತಾ, ವೇದಗಳಲ್ಲಿ ಕೇವಲ ೨೩ ಸಾವಿರ (ಎಷ್ಟೂಂತ ಹೇಳಿದ್ರು ಎಂಬುದು ಮರೆತಿದ್ದೇನೆ) ಮಂತ್ರಗಳಿವೆ ಮಿಕ್ಕೆಲ್ಲವೂ ಬಂದು ಸೇರಿದ್ದು ಅವು ಮೂಲ ಮಂತ್ರಗಳಲ್ಲ ಎಂದು ತಿಳಿಸಿದ್ದರು. ಈ ಪುನರ್ಜನ್ಮಗಳ ವಿಚಾರವೂ ವೇದಗಳಲ್ಲಿ ಪ್ರಸ್ತಾವನೆಯಿದೆಯೆ?
ಹೌದು ಹೌದು - ವೇದಗಳ ರಚನೆಯ ಆರಂಬ ಕಾಲದಲ್ಲಿ ಈ ಪುನರ್ಜನ್ಮ ಎಂಬ ಕಟ್ಟುಕಥೆ ಇರಲಿಕ್ಕಿಲ್ಲ. ಅನಂತರ ಸೇರಿದ್ದಿರಬಹುದು. ವೇದಗಳ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದ ದಯಾನಂದ ಸರಸ್ವತಿಯವರು ಹಾಗೆ ಹೇಳಿದ್ದು ಓದಿದ ನೆನಪು. ತಿಳಿದವರು ಹೇಳಿದರೆ ಅನುಕೂಲ. ಆದರೆ ನಾನು ಗಮನಿಸಿದಂತೆ ಒಂದಿಷ್ಟು ಜನ ಈ ಪುನರ್ಜನ್ಮ ಹಾಗು ಮತ್ತೊಂದು ಡೋಂಗಿ ಫಲಜ್ಯೋತಿಷ್ಯವನ್ನು(ಜ್ಯೋತಿಷ್ಯವನ್ನಲ್ಲ) ಸರ್ವಮಾನ್ಯ ವೇದಗಳೊಂದಿಗೆ ಹೆಣೆಯುವ ಪ್ರಯತ್ನ ಮಾಡುತ್ತಲೇ ಇದ್ದಾರೆ!!!
ReplyDeleteಫಲಜ್ಯೋತಿಷ್ಯವಂತೂ ಖಂಡಿತವಾಗಿ ವೇದವಿರುದ್ಧ. ಅದನ್ನು ಇತ್ತಿಹಿಡಿಯುವ ಒಂದೂ ಮಂತ್ರ ನನಗಂತೂ ತಿಳಿದಿಲ್ಲ! ನೂರಕ್ಕಿಂತ ಹೆಚ್ಚು ವರ್ಷಗಳ ಕಾಲ ವೇದಗಳ ಅಧ್ಯಯನ ಮಾಡಿರುವ, ಮಾಡುತ್ತಿರುವ ನನ್ನ ಗುರುಗಳಿಗೂ ಗೊತ್ತಿಲ್ಲ.
ReplyDeleteಪುನರ್ಜನ್ಮದ ವಿಚಾರ ಹಾಗಲ್ಲ. ಇಂದು ಪುನರ್ಜನ್ಮವನ್ನು ಅರ್ಥಮಾಡಿಕೊಂಡಿರುವಂತೆ, ಸಿಕ್ಕಾಪಟ್ಟೆ ಎಳೆದಾಡಿರುವಂತೆ ವೇದಗಳಲ್ಲಿಲ್ಲ ಎಂಬುದಂತೂ ಸತ್ಯ. ಆದರೆ, ಪುನರ್ಜನ್ಮ ಸಿದ್ಧಾಂತವು ವೈಜ್ಞಾನಿಕಾವಾಗಿದೆ. ಎಂದ ಮಾತ್ರಕ್ಕೆ ಅದರೊಡನೆ ಸೇರಿಕೊಂಡಿರುವ ಪ್ರತಿಯೊಂದೂ ಸತ್ಯವಲ್ಲ. ಬಿಡಿಸಿಕೊಳ್ಳಬೇಕು.
ಸಂಕ್ಷಿಪ್ತವಾಗಿ,
ಕಾರಣ-ಕಾರ್ಯ ಎಂಬ ವ್ಯವಸ್ಥೆ, ಸರಪಳಿ ನಿರಂತರವಾಗಿದೆ. ಕಾರಣ ಕಾಣದೆ ಕಾರ್ಯ ಕಂಡಾಗ ಕಾರಣವನ್ನು ತರ್ಕಬದ್ಧವಾಗಿ ಊಹಿಸುತ್ತೇವೆ. ಅಂತೆಯೇ ಕಾರಣ ಕಂಡುಬಂದು ಕಾರ್ಯ ಕಾಣದಿದ್ದಾಗ, ಕಾರ್ಯವನ್ನು ತರ್ಕಬದ್ಧವಾಗಿ ಊಹಿಸುತ್ತೇವೆ. ಇದು Guess ಅಲ್ಲ, Inference, Logical Inference.
ಹುಟ್ಟಿನ ಹಿಂದಿನ ಕ್ಷಣದವರೆಗೂ (ತಾಯಿಯ ಗರ್ಭದಲ್ಲಿ ಜೀವದ ಪ್ರವೇಶ ಹುಟ್ಟು) ಹಿಂದಿನ ಜನ್ಮ. ಅಲ್ಲಿಯವರೆಗಿನ ಕರ್ಮಫಲ "ಸಂಚಿತ" (Accrued). ಹುಟ್ಟಿನಿಂದ ಮುಂದಕ್ಕೆ "ಪ್ರಾರಬ್ಧ" (That which has begun). ಸಾವಿನ ಕ್ಷಣದ ನಂತರದ್ದು "ಆಗಾಮಿ" (Yet to come). ಆಗಾಮಿ ಪ್ರಾರಬ್ಧವಾದಾಗ, ಪ್ರಾರಬ್ಧ ಸಂಚಿತವಾಗುತ್ತದೆ! ಸಂಚಿತ ಕರ್ಮಫಲವು ಪ್ರಾರಬ್ಧದ ಮೊದಲ ಕ್ಷಣದಲ್ಲೇ ನಿಶ್ಚಯವಾಗಿಬಿಡುವುದರಿಂದ ಅಲ್ಲಿಂದ ಮುಂದಕ್ಕೆ ಸಂಚಿತದ ಪ್ರಶ್ನೆಯಿಲ್ಲ, ಎಲ್ಲವೂ ಪ್ರಾರಬ್ಧದ್ದೇ!! ಈ ಕುರಿತಂತೆ ಇನ್ನೂ ವ್ಯಾಪಕವಾದ ವಿವರಣೆಯ ಅಗತ್ಯವಿದೆ, ಇಷ್ಟಕ್ಕೆ ಒಪ್ಪಲು ಸಾಧ್ಯವಿಲ್ಲ ಎಂಬುದು ನಿಮ್ಮ ನಿಲುವಾದರೆ It is alright! ಮತ್ತೊಮ್ಮೆ ವಿವರಗಳನ್ನು ನೋಡೋಣ. ಅಲ್ಲಿಯವರೆಗೂ "ವೇದೋಕ್ತ ಜೀವನ ಪಥ" ಓದುತ್ತಿರಿ. ಪುನರ್ಜನ್ಮದ ಬಗ್ಗೆ ಅಲ್ಲೊಂದಿಷ್ಟು ಮಾಹಿತಿ, ವೇದಮಂತ್ರಗಳು ನಿಮಗೆ ದೊರೆಯುತ್ತವೆ.