ಭಗವಂತನು ನಮ್ಮೆಲ್ಲರ ತಂದೆ, ನಮ್ಮೆಲ್ಲರ ತಾಯಿಯೂ ಹೌದು. ಋಗ್ವೇದ ಹೇಳುತ್ತದೆ:
ತ್ವಂ ಹಿ ನಃ ಪಿತಾ ವಸೋ ತತ್ವಂ ಮಾತಾ ಶತಕ್ರತೋ ಬಭೂವಿಥ|
ಅಧಾ ತೇ ಸುಮ್ನಮೀಮಹೇ|| (ಋಕ್. ೮.೯೮.೧೧.)
[ವಸೋ] ಸರ್ವಾಶ್ರಯನೇ! [ಶತಕ್ರತೋ] ನೂರಾರು ರಚನೆ ಮಾಡುವವನೇ! [ತ್ವಂ ಹಿ] ನೀನೇ [ನಃ ಪಿತಾ] ನಮ್ಮ ತಂದೆ, [ತ್ವಂ ಮಾತಾ] ನೀನೇ ತಾಯಿ, [ಬಭೂವಿಥ] ಆಗಿದ್ದೀಯೆ. [ಅಧಾ] ಈ ಅಧಿಕಾರದಿಂದ [ತೇ ಸುಮ್ನಮ್] ನಿನ್ನ ಸುಖ-ಶಾಂತಿಗಳನ್ನು [ಈಮಹೇ] ಕೋರುತ್ತೇವೆ.
ಇಷ್ಟು ಮಾತ್ರವಲ್ಲ, ಅದೇ ಪ್ರಭುವಿನಲ್ಲಿ ಈ ರೀತಿ ಬೇಡಿಕೆಯನ್ನೂ ಮಂಡಿಸುತ್ತೇವೆ:
ಸ ನಃ ವಿತೇವ ಸೂನವೇsssಗ್ನೇ ಸೂಪಾಯನೊ ಭವ|
ಸಚಸ್ವಾ ನಃ ಸ್ವಸ್ತಯೇ|| (ಋಕ್. ೧.೧.೯.)
[ಅಗ್ನೇ] ಓ ತೇಜಸ್ವಿ ಪ್ರಭೋ, [ಸಃ] ಆ ನೀನು [ಪಿತಾ ಸೂನವೇ ಇವ] ತಂದೆಯು ತನ್ನ ಮಗನಿಗೆ ಸುಲಭವಾಗಿ ಸಿಕ್ಕುವಂತೆ [ನಃ] ನಮಗೆ [ಸು ಉಪಾಯನಃ ಭವ] ಸುಲಭವಾಗಿ ಲಭಿಸುವವನಾಗು. [ನಃ ಸ್ವಸ್ತಯೇ] ನಮ್ಮ ಆತ್ಮಕಲ್ಯಾಣಕ್ಕಾಗಿ [ಸಚಸ್ವ] ಪ್ರಾಪ್ತನಾಗು.
ನಮ್ಮ ತಂದೆಯಾದ, ಮಾತ್ರವಲ್ಲ, ತಾಯಿಯೂ ಆದ ಭಗವಂತನ ನಡುವೆ ನಿಲ್ಲುವುದಕ್ಕೆ ಯಾವ ಕಲ್ಪಿತ ಪ್ರಭುವಿನ ಏಕಮಾತ್ರ ಔರಸಪುತ್ರನಿಗೂ, ಯಾವ ದೇವಪ್ರೇಷಿತ ಸಂದೇಶವಾಹಕನಿಗೂ ಅಧಿಕಾರವಿಲ್ಲ, ಯಾವ ಧರ್ಮದ ಗುತ್ತಿಗೆದಾರನಿಗೂ ಇಲ್ಲ.
ವೇದಗಳು ನೀಡುವ ಸಂದೇಶವೇ ಬೇರೆ, ಅದರ ವೈಭವವೇ ಒಂದು ಬಗೆ. ವೇದಗಳು ಬೇರೆಯವರ ಬೆನ್ನೇರಿ ಮೋಕ್ಷಕ್ಕೆ ಹೋಗುವ ಅಪಸಿದ್ಧಾಂತಕ್ಕೂ ಬೆಲೆ ಕೊಡುವುದಿಲ್ಲ. ಯಾವನೋ ಒಬ್ಬ ಎಲ್ಲರ ಪಾಪವನ್ನೂ ತಾನು ಹೊತ್ತು ಎಲ್ಲರಿಗೂ ಮುಕ್ತಿಗೆ ದಾರಿ ಮಾಡಿಕೊಡುತ್ತಾನೆ ಎಂಬ ಅರ್ಥರಹಿತವಾದ, ಬುಡವಿಲ್ಲದ ಕುರುಡುನಂಬಿಕೆಗೂ, ವೇದದ ಬೌದ್ಧಿಕ ಹಾಗೂ ವೈಜ್ಞಾನಿಕ ಸತ್ಯಸಿದ್ಧಾಂತಕ್ಕೂ ಏನೇನೂ ಸಂಬಂಧವಿಲ್ಲ. ವೇದಗಳು ಕಲಿಸುವುದು ಆತ್ಮಾವಲಂಬನೆಯ ಭವ್ಯಪಾಠವನ್ನು. ಪ್ತಿಯೊಬ್ಬ ಜೀವಾತ್ಮನೂ ತನ್ನ ಪತನ ಅಥವಾ ಉತ್ಥಾನಕ್ಕೆ ತಾನೇ ಕಾರಣ. ಕೇಳಿರಿ;-
ಸ್ವಯಂ ವಾಜಿಸ್ವನ್ವಂ ಕಲ್ಪಯಸ್ವ ಸ್ವಯಂ ಯಜಸ್ವ|
ಸ್ವಯಂ ಜುಷಸ್ವ ಮಹಿಮಾ ತೇsನ್ಯೇನ ನ ಸನ್ನಶೇ|| (ಯಜು. ೨೩.೧೫.)
[ವಾಜಿನ್] ಓ ಬಲಶಾಲಿ, ಅನ್ನವಾನ್, ಜ್ಞಾನವಾನ್ ಜೀವಾತ್ಮ! [ಸ್ವಯಂ ತನ್ವಂ ಕಲ್ಪಯಸ್ವ] ಸ್ವತಃ ಶರೀರಧಾರ್ಢ್ಯವನ್ನು ಸಾಧಿಸಿಕೋ. [ಸ್ವಯಂ ಯಜಸ್ವ] ಸ್ವತಃ ಸತ್ಕರ್ಮ ಮಾಡು. [ಸ್ವಯಂ ಜುಷಸ್ವ] ಸ್ವತಃ ಸಂತೋಷಪಡು. [ತೇ ಮಹಿಮಾ] ನಿನ್ನ ಮಾಹಾತ್ಮ್ಯ [ಅನ್ಯೇನ ನ ಸನ್ನಶೇ] ಬೇರೆಯವರಿಂದ ಸಿದ್ಧಿಸದು.
ಸತ್ಯವಾದ ಮಾತು. ಬೇರೆಯವರ ಪುಣ್ಯವನ್ನು ದೋಚಿಕೊಂಡು ತಾನು ಸ್ವರ್ಗ ಅಥವಾ ಮೋಕ್ಷಕ್ಕೆ ಹೋಗಲು ಮೂರು ಕಾಲಕ್ಕೂ ಸಾಧ್ಯವಿಲ್ಲ. ಎಲ್ಲರೂ ಪ್ರತಿಯೊಂದು ಕ್ಷಣದಲ್ಲಿಯೂ ನೆನಪಿಡಲೇಬೇಕಾದ ಅಂಶವೆಂದರೆ ಪ್ರತಿಯೊಬ್ಬ ಜೀವಾತ್ಮನೂ ತನ್ನ ಕರ್ಮಕ್ಕೆ -ಅದು ಪುಣ್ಯವಾಗಿರಲಿ, ಪಾಪವಾಗಿರಲಿ- ತಾನೇ ಹೊಣೆಗಾರ. ಉಚ್ಛೃಂಖಲ ಹಾಗೂ ಹಿಂಸಾಮಯ ಜೀವನ ಸಾಗಿಸುತ್ತಾ. ನಾನು ಈ ದಿವ್ಯ ಪುರುಷನನ್ನು ನಂಬಿದ್ದೇನೆ, ಆದುದರಿಂದ ಮುಕ್ತಿ ನನಗೆ ಕಟ್ಟಿಟ್ಟ ಬುತ್ತಿ ಎಂದು ಯಾರೂ ಹೇಳುವಂತಿಲ್ಲ.
ಉದ್ಧರೇದಾತ್ಮನಾತ್ಮಾನಾಮ್ ಆತ್ನಾನಮವಸಾಧಯೇತ್
ReplyDeleteಆತ್ಮೈವಹ್ಯಾತ್ಮನೋ ಬಂಧು: ಅತ್ಮೈವರಿಪುರಾತ್ಮನ:||
ಭಗವದ್ಗೀತೆಯಲ್ಲೂ ಇದನ್ನೇ ಹೇಳಿದೆಯಲ್ಲವೇ?
ತನ್ನನ್ನು ತಾನೇ ಉದ್ಧಾರಮಾಡಿಕೊಳ್ಳಬೇಕು.ತನಗೆ ತಾನೇ ಬಂಧು ,ತನಗೆ ತಾನೇ ಶತ್ರು.ತನ್ನ ಆತ್ಮೋದ್ಧಾರಕ್ಕೆ ತಾನೇ ದಾರಿಕಂಡುಕೊಳ್ಳಬೇಕು, ಅದರಂತೆ ಸತ್ಕರ್ಮವನ್ನಾಚರಿಸಬೇಕಲ್ಲದೆ ಬೇರೆ ಯಾರಿಂದಲೂ ಮತ್ತೊಬ್ಬರಿಗೆ ಮೋಕ್ಷವಾಗಲೀ, ಸ್ವರ್ಗವಾಗಲೀ ಸಿಗಲು ಸಾಧ್ಯವೇ ಇಲ್ಲ.ವೇದದಲ್ಲಿ ಇದನ್ನು ಸಾರಿ ಸಾರಿ ಹೇಳಿದ್ದರೂ ವೇದದ ಹೆಸರಿನಲ್ಲಿಯೇ ಜೀವನ ನಡೆಸುವವರೂ ಕೂಡ ಸತ್ತವರಿಗೆ ಶ್ರಾದ್ಧದ ಹೆಸರಲ್ಲಿ ಮಾಡುವ ಆಚರಣೆಗಳು, ಓದುವ ಗರುಡಪುರಾಣ ಎಲ್ಲವೂ ನಗೆಪಾಟಲಾಗಿ ಕಾಣುತ್ತವೆ.
ಸತ್ಯ!
ReplyDeleteಜ್ಞಾನದ ಕೊರತೆ ನಿಮಗೆ ನಗೆಪಾಟಲಾಗಿ ಕಾಣಿಸುತ್ತದೆಯೆ ಶ್ರೀಧರ್ ಸಾರ್?
ReplyDeleteಜ್ಞಾನಿಯ ಕರ್ತವ್ಯ ಅಜ್ಞಾನಿಗೆ ಜ್ಞಾನ ತುಂಬುವುದಾಗಬೇಕಲ್ಲವೆ?
ನಿಮ್ಮ ಪ್ರತಿಕ್ರಿಯೆಯ ಕೊನೆಯ ಸಾಲುಗಳು ನಿಮ್ಮ ಸೃಜನಶೀಲತೆಗೆ ತಕ್ಕುದಲ್ಲವೆನೊ? ಯೋಚಿಸಿ ನೋಡಿ.
ಶ್ರೀ ಪ್ರಸನ್ನ,
ReplyDeleteನಿಮ್ಮಿಂದಲ್ಲದಿದ್ದರೂ ಇಂತಹ ಪ್ರತಿಕ್ರಿಯೆ ನಿರೀಕ್ಷಿತವೇ ಎಂದು ನನಗೆ ಗೊತ್ತಿತ್ತು. ಕಾರಣ ಪುರಾಣದ ಕಥೆಗಳು ವೇದದ ಸತ್ಯವನ್ನು ಅದೆಷ್ಟು ಮರೆಮಾಚಿವೆ ಎಂಬುದು ನನಗೆ ಇತ್ತೀಚೆಗೆ ಸ್ವಲ್ಪ ಸ್ವಲ್ಪವೇ ಅರಿವಾಗುತ್ತಿದೆ.ಅಂದಮಾತ್ರಕ್ಕೆ ನಾನು ವೇದವನ್ನು ಆಳವಾಗಿ ಅಧ್ಯಯನ ಮಾಡುತ್ತಿದ್ದೇನೆಂದೇನೂ ಅಲ್ಲ. ಆದರೆ ಶರ್ಮರು ವೇದದ ಹಲವು ಮಂತ್ರಗಳ ಅರ್ಥವನ್ನು ತಿಳಿಸುತ್ತಿರುವ ಶೈಲಿ ನನಗೆ ಆಪ್ಯಾಯಮಾನವಾಗಿ ಕಾಣುತ್ತಿದೆ.ಯಾವುದೋ ಆಪತ್ಕಾಲದಲ್ಲಿ ಧರ್ಮದ ರಕ್ಷಣೆಗಾಗಿಯೇ ಕಟ್ಟಿರಬಹುದಾದ ಪುರಾಣದ ಕೆಲವು ಕಥೆಗಳು ಇವತ್ತಿನ ಕಾಲಕ್ಕೆ ಬಲು ಬಾಲಿಶವಾಗಿ ಕಾಣುತ್ತವೆ.ಜೊತೆ ಜೊತೆಗೇ ವೇದದ ಸರಿಯಾದ ತಿಳುವಳಿಕೆ ಇಲ್ಲದೆ ನನ್ನಂತವರಿಗೆ ಇದುವರೆಗೂ ತಿಳಿಯುವ ಅವಕಾಶ ಸಿಗದೆ ಕೇವಲ ನಾಲ್ಕಾರು ವೇದಮಂತ್ರಗಳನ್ನು ಕಂಠಪಾಠಮಾಡಿ ಅರ್ಥತಿಳಿಯಲಿಲ್ಲವಲ್ಲಾ! ಎಂಬ ವ್ಯಥೆ ಕೂಡ ಇದೆ.ಹಾಗಾಗಿ ನನ್ನ ಮನದ ಮಾತನಾಡುವಾಗ ಉಪಯೋಗಿಸಿರುವ "ನಗೆಪಾಟಲು" ಶಬ್ಧ ಅಳೆದು ಸುರಿದು ಬರೆದಿದ್ದಲ್ಲ.ಅದು ಹಗುರವೆನಿಸಿ ನಿಮ್ಮ ಮನಸ್ಸಿಗೆ ಬೇಸರವಾದರೆ ಕ್ಷಮೆ ಇರಲಿ.
ನನ್ನ ತಂದೆಯವರು ನಿಧನರಾದ ಸಂದರ್ಭದಲ್ಲಿ ನಾನೂ ಗರುಡಪುರಾಣ ಕೇಳಿದ್ದೇನೆ. ಪುರಾಣ, ಪುಣ್ಯಕಥೆಗಳು ಮನುಷ್ಯನನ್ನು ಸನ್ಮಾರ್ಗಕ್ಕೆ ಪ್ರೇರಿಸಿದರೆ ತಪ್ಪಿಲ್ಲ. ಆದರೆ ಆಧಾರರಹಿತವಾದ ಪುರಾಣಕಥೆ, ಸಂಪ್ರದಾಯಗಳಿಂದ ಲಾಭದಷ್ಟೇ ಹಾನಿಯೂ ಇದೆ. ವಿಮರ್ಶೆ ಮಾಡಿ ಅನುಸರಿಸುವ ಗುಣ, ಸತ್ಯ ತಿಳಿಯುವ ತವಕ ಮೂಡುವವರೆಗೆ ಪರಿಸ್ಥಿತಿ ಹೀಗೆಯೇ ಇರುತ್ತದೆ.
ReplyDeleteಮಾನ್ಯ ಶ್ರೀಧರರೇ, ಗರುಡ ಪುರಾಣ ಸತ್ಯವೋ ಅಸತ್ಯವೋ ಗೊತ್ತಿಲ್ಲ, ಆದರೆ ಸಮಾಜದಲ್ಲಿ ನೀತಿಬಾಹಿರ ಕೆಲಸಗಳಲ್ಲಿ ತೊಡಗುವ ಜನರಿಗೆ ಸ್ವಲ್ಪ ಮೂಗುದಾರವಾಗಿ ಆ ಪುರಾಣ ಕೆಲಸಮಾಡುತ್ತದೆ ಎಂಬುದು ಬಲ್ಲವರ ಅಂಬೋಣ. ಇದಲ್ಲದೇ ಶ್ರಾದ್ಧಕರ್ಮ ಕೂಡ ಸತ್ತವರಿಗೆ ಮೋಕ್ಷ ಕರುಣಿಸಲಲ್ಲ, ಬದಲಾಗಿ ಅವರನ್ನು ನಮ್ಮ ಕುಟುಂಬದ ಕಕ್ಷೆಯಿಂದ ಮೇಲಿನ ಕಕ್ಷೆಗೆ ಬೀಳ್ಕೊಡುವ ದಾರಿ. ಅದಲ್ಲದೇ ಆ ಆತ್ಮಕ್ಕೆ ಮೋಕ್ಷ ಕರುಣಿಸಲು ಆಗದಿದ್ದರೂ ಗತಿಸಿದ ಆತ್ಮದ ಪರವಾಗಿ ಲೌಕಿಕ ವಾರಸುದಾರರು ಎನಿಸಿದವರು [ಅಪ್ಪ ಮಗನಿಗೆ ಮಗ ಅಪ್ಪನಿಗೆ ಹಣಕಳಿಸಿದಂತೇ ]ದೇವರಲ್ಲಿ ಪ್ರಾರ್ಥಿಸುವ ಒಂದು ವಿಧಾನ. ಇದನ್ನು ಅಲ್ಲಗಳೆಯಲಾಗುವುದಿಲ್ಲ. ಇದಕ್ಕೆ ತಕ್ಕ ಆಧಾರಗಳನ್ನು ತಾವು ರಾಮಾಯಣ/ ಭಾರತ ಕಥೆಗಳಲ್ಲೂ ಪರಿಶೀಲಿಸಬಹುದು. ಹೀಗಾಗಿ ಇವೆರಡನ್ನೂ ಕಂಡು ನಗುವಷ್ಟು ಉನ್ನತ ಹಂತಕ್ಕೆ ನಾವಿನ್ನೂ ಸಾಗಿಲ್ಲ ಎಂಬುದು ನನ್ನ ಅಭಿಪ್ರಾಯ. ಆ ಹಂತ ಬಹಳ ಮೇಲಿದೆ!
ReplyDeleteಶ್ರೀಧರ್ ಸಾರ್,
ReplyDeleteಕ್ಷಮೆ ಕೇಳುವ ಅಗತ್ಯವಿಲ್ಲ.
ಇಷ್ಟು ದಿನ ನಾವು ತಿಳಿದಿಕೊಂಡದ್ದು ಇದನ್ನೆ ಈಗ ನಮ್ಗೆ ಅರಿವಿದೆ ಎಂದು ಅರಿವಿರದವರನ್ನು ನಗೆಪಾಟಲಿಗೀಡು ಮಾಡುವುದು ಸರಿಯಲ್ಲವೆಂದು ತಿಳಿಸಲು ಯತ್ನಿಸಿದೆ ಅಷ್ಟೆ. ಅನ್ಯಥಾ ಭಾವಿಸಬೇಡಿ.
ಹೌದು ನೀವು ತಿಳಿಸಿದಂತೆ ಶ್ರೀ ಸುಧಾಕರ ಶರ್ಮ ಅವರಂತೆ ಸರಳವಾಗಿ ವೇದಗಳ ಆಶಯವನ್ನು ತಿಳಿಸುವವರು ಸಿಕ್ಕಾಗಲೇ ವೇದಗಳ ಬೆಳಕು ಎಲ್ಲೆಡೆ ಪಸರಿಸಿ ಸಮಾಜದಲ್ಲಿನ ಅಂಧಕಾರ ತೊಲಗುತ್ತದೆ.
"ಸತ್ಯಾರ್ಥ ಪ್ರಕಾಶ" ಪುಸ್ತಕದಲ್ಲಿ ರಾಜಧರ್ಮದ ಬಗ್ಗೆ ತಿಳಿಸುತ್ತಾ ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನು ವರ್ಣಿಸಿದ್ದಾರೆ. ಅದೆಂತಹ ಅದ್ಭುತ ವ್ಯವಸ್ಥೆ ಬಹುಷಃ ಅಂತಹ ವ್ಯವಸ್ಥೆಯೊಂದು ಜಾರಿಯಾದರೆ ಯಾವುದೇ ರಾಷ್ಟ್ರಗಳು ಕಷ್ಟಕ್ಕೆ ಸಿಲುಕುವುದಿಲ್ಲ ಎನಿಸುತ್ತದೆ.
[ನಗುವಷ್ಟು]ಈ ಪದಕ್ಕೆ ಈಗಾಗಲೇ ನನ್ನ ಮನದ ಮಾತು ತಿಳಿಸಿರುವೆ. ಉಳಿದಂತೆ ಇಂದಿನ ಸಂಪಾದಕೀಯದಲ್ಲಿ ಪ್ರಸ್ತಾಪಿಸಿರುವೆ. ಸಂಪಾದಕೀಯ ಬರಹವನ್ನು ಅವಲೋಕಿಸಿ ಒಂದು ಸತ್ಯಪಥದೆಡೆಗೆ ಸಾಗಲು ಅನುಭವಿಗಳ, ವಿದ್ವಾಂಸರ ಅಭಿಮತಕ್ಕಾಗಿ ಸದಾ ನಿರೀಕ್ಷೆಯಲ್ಲೇ ಇದ್ದೇನೆ.
ReplyDeleteನಗೆಪಾಟಲಿಗೆ ಗುರಿಯಾಗಿರುವುದು, ಸೂಕ್ಷ್ಮವಾಗಿ ಗಮನಿಸಿದರೆ, ವ್ಯಕ್ತಿಯಲ್ಲ, ಆಚರಣೆಗಳು ಮತ್ತು ಗರುಡಪುರಾಣಗಳಂತಹ ಸಾಹಿತ್ಯ(?)ಗಳು.
ReplyDeleteಪ್ರಶ್ನಾರ್ಥಕ ಚಿಹ್ನೆ ಏಕೆಂದರೆ, ಸ + ಹಿತಂ = ಸಾಹಿತ್ಯಂ. ಪುರಾಣಾದಿಗಳಲ್ಲಿ ಅಲ್ಲಲ್ಲಿ ಹಿತನುಡಿಗಳಿದ್ದರೂ, ಅಹಿತವೂ, ಅವೈಜ್ಞಾನಿಕವೂ ಆದ ವಿಚಾರಗಳು ಸಾಕಷ್ಟಿವೆ. ಅವನ್ನು "ವಿಷಮಿಶ್ರಿತ ಅನ್ನ"ದಂತೆ ತ್ಯಜಿಸುವುದೇ ಉತ್ತಮ. ಯೋಚಿಸಿ ನೋಡೋಣ.
ಜ್ಞಾನವಿರುವವರ ಕರ್ತವ್ಯ ಜ್ಞಾನವನ್ನು ಹಂಚುವುದು; ಆರೋಗ್ಯಶಾಲಿಗಳ ಕರ್ತವ್ಯ ರೋಗಿಗಳ ಸೇವೆ ಮಾಡುವುದು; ಧನವಂತರ ಕರ್ತವ್ಯ ಇಲ್ಲದವರೊಂದಿಗೆ ಹಂಚಿಕೊಳ್ಳುವುದು ಎಂಬ ಮಾತುಗಳು ಸಂಪೂರ್ಣ ಮಾನವೀಯ. ಸ್ವೀಕರಿಸಲು, ಜೀವನದಲ್ಲಿ ಅಳವಡಿಸಿಕೊಳ್ಳಲು ಯೋಗ್ಯವಾದವು.
ನೀತಿಬಾಹಿರರನ್ನು ನಿಯಂತ್ರಿಸಲು ಬೇಕಾದ್ದು ಯೋಗ್ಯ ವಿಚಾರಗಳೇ ಹೊರತು ಅಯೋಗ್ಯ ವಿಚಾರಗಳನ್ನು ಒಳಗೊಂಡ ಪುರಾಣಗಳಲ್ಲ!!
ಎರಡೇ ಉದಾಹರಣೆ :- ಬ್ರಹ್ಮನ ಮಗಳು ಸರಸ್ವತಿ ಮತ್ತು ಅವಳೇ ಅವನ ಪತ್ನಿ!!
ಶಿವಪುರಾಣದಲ್ಲಿ ಬರುವ ಅನೇಕ ಪ್ರಸಂಗಗಳು ಯಾವುದೇ ಅಶ್ಲೀಲ ಸಾಹಿತ್ಯಕ್ಕೆ ಕಡಿಮೆಯಿಲ್ಲ!!
ಗತಿಸಿದವರ ಪರವಾಗಿ ಯಾರೂ ಏನೂ ಮಾಡಬೇಕಾದ್ದಿಲ್ಲ, ಮಾಡುವುದರಿಂದ ಅವರಿಗೆ ಪ್ರಯೋಜನವೂ ಇಲ್ಲ. ಕಲಬೆರಕೆಗೆ ಪಕ್ಕಾಗಬಹುದಾದ ರಾಮಾಯಣ ಭಾರತಗಳಿಗಿಂತ ಶುದ್ಧವಾದ ವೇದಗಳೇ ಇದಕ್ಕೆಲ್ಲಾ ಪ್ರಮಾಣ.
ದಾರಿಯೂ ತಪ್ಪುವುದಿಲ್ಲ, ಸತ್ಯವೂ ದೊರೆಯುತ್ತದೆ.
[ವೇದಗಳು ಕಲಿಸುವುದು ಆತ್ಮಾವಲಂಬನೆಯ ಭವ್ಯಪಾಠವನ್ನು. ಪ್ರತಿಯೊಬ್ಬ ಜೀವಾತ್ಮನೂ ತನ್ನ ಪತನ ಅಥವಾ ಉತ್ಥಾನಕ್ಕೆ ತಾನೇ ಕಾರಣ]
ReplyDeleteವೇದಮಂತ್ರಗಳಿಗೆ ಪಂ|| ಸುಧಾಕರ ಚತುರ್ವೇದಿಯವರು ಕೊಟ್ಟಿರುವ ವಿವರಣೆ ಎಷ್ಟು ಅರ್ಥಪೂರ್ಣವಾಗಿದೆಯಲ್ಲವೇ?
ಹೀಗೆ ಒಂದು ವೇದಮಂತ್ರವನ್ನು ಆಧರಿಸಿ ಕೊಟ್ಟ ವಿವರಣೆಯನ್ನು ನಾವು ಸ್ವೀಕರಿಸಲು ನಮ್ಮ ಮನ:ಸ್ಥಿಯನ್ನು ಬದಲಿಸಿಕೊಳ್ಳದಿದ್ದರೆ ಸತ್ಯವು ದೂರವೇ ಉಳಿಯುತ್ತದೆ.
ನಮಸ್ತೆ ಸುಧಾಕರ್ ಜೀ,
ReplyDeleteಜೀವಿಗಳ ಉಗಮದ ಬಗ್ಗೆ ವೇದಗಳಲ್ಲಿ ಉಲ್ಲೇಖವಿದೆಯೆ? ಏಕೆಂದರೆ, ಜೀವಿಗಳ ಉಗಮದ ಬಗ್ಗೆ ಆಧುನಿಕ ವಿಜ್ಞಾನಿಗಳು ಹೇಳಿರುವುದು(ಹೇಳಿದ್ದರೂ ಇರಬಹುದು) ನನಗೆ ತಿಳಿದಿಲ್ಲ. ಆದರೆ ಡಾರ್ವಿನ್ ನ ಪ್ರಕಾರ ಒಂದರಿಂದ ಮತ್ತೊಂದು ರೂಪಾಂತರ ಹೊಂದಿತೆಂಬುದು ಆತನ ವಾದಸರಣಿ (ದಾಖಲೆ ಸಹಿತವಾಗಿಯಲ್ಲ). ಅದು ಸತ್ಯವೂ ಅಲ್ಲ ಅಥವ ಅದನ್ನು ಸುಳ್ಳೆಂದು ನಿರಾಕರಿಸಲೂ ಆಗುವುದಿಲ್ಲ.
@ ಪ್ರಸನ್ನ
ಚರ್ಚೆಗೆಂದೆ (ಪ್ರಶ್ನೋತ್ತರಕ್ಕೆ ಎಂಬುದು ಸೂಕ್ತವೇನೊ?) ಪುಟವೊಂದನ್ನು ಮೀಸಲಿಡಲು ಸಾಧ್ಯವೆ?
ಶ್ರೀ ಪ್ರಸನ್ನ,
ReplyDeleteಚರ್ಚೆಗೆಂದೇ "ಅಭಿಮತ" ಪುಟವಿದೆ. ನಿಮ್ಮ ಹೊಸ ಪ್ರಶ್ನೆಯನ್ನು ಅದೇ ಪುಟದಲ್ಲಿ ಪ್ರಕಟಿಸಲಾಗಿದೆ. ನಿಧಾನವಾಗಿಯಾದರೂ ಶರ್ಮರು ಉತ್ತರಿಸುತ್ತಾರೆ.
ನಿಮ್ಮ ಅಭಿಮತ ಹೇಗಿದೆಯೊ ಹಾಗೆ ಆಗಲಿ ಸಾರ್
ReplyDeleteSudhakara sharmaji.....Puranagalu symbolic scripts agive.. adannu artha madikondare adu tatvavagi kanisutte.. illave olle sahitya gnana needutte.. Brahma mattu sarasvati... illi Brahma veda adre.. saraswati adara saaravagide... veda mattu saara bere agakke saadhya illa...
ReplyDeleteyou are a gnani... but think beyond what you know..... I am small child compared to you... veda, purana, sahitya all are symbolic scripts.... In vedas "chatwari shringa" ...mantra of rigveda...is a symbolic ... but if you directly translate it will be a fantasy meaning.. so every script has its own significance...