ಮೊನ್ನೆ ಬೆಂಗಳೂರಿನ ವಿದ್ಯಾರಣ್ಯಪುರಂ ಗೆ ಹೋಗಿದ್ದೆ. ಅಲ್ಲೊಂದು ದುರ್ಗಿ ದೇವಾಲಯ.ಭಕ್ತರ ಸಂಖ್ಯೆ ಅಪಾರ.ನನ್ನ ಜೊತೆಯಲ್ಲಿದ್ದವರೆಲ್ಲಾ ಕ್ಯೂನಲ್ಲಿ ನಿಂತು ದೇವಿದರ್ಶನ ಮಾಡಿದರು. ಹೊರಗೆ ದೇವಸ್ಥಾನದ ಮೇಲೆ ಸಿಮೆಂಟಿನಲ್ಲಿ ಮಾಡಿದ್ದ ದೇವರ ಪ್ರತಿಮೆಗಳತ್ತ ನನ್ನ ದೃಷ್ಟಿ ಹೋಯ್ತು. ನೂರಾರು ಚಿತ್ರವಿಚಿತ್ರ ಪ್ರತಿಮೆಗಳು. ಅದರಲ್ಲೊಂದನ್ನು ಇಲ್ಲಿ ಪೇರಿಸಿರುವೆ. ಈ ಕೆಳಗೆ ಇನ್ನೊಂದು ಚಿತ್ರವೂ ಇದೆ. ಎರಡನ್ನೂ ನೋಡಿ,ನಿಮ್ಮ ಅಭಿಪ್ರಾಯ ತಿಳಿಸಿ.
--------------------------------------------
ಈ ವಿಗ್ರಹ ನಮ್ಮೂರಿನ ಮಾಧವ ಕೃಷ್ಣ. ಐನೂರು ವರ್ಷಗಳ ಇತಿಹಾಸ ಉಳ್ಳದ್ದು. ಇದೇ ದೇವಾಲಯದಲ್ಲಿ ಪ್ರತೀ ಶನಿವಾರ ಮಾಡುತ್ತಿದ್ದ ಭಜನೆಯಲ್ಲಿ ಮೈ ಮರೆಯುತ್ತಿದ್ದೆ.ಕೃಷ್ಣಶಿಲೆಯ ಮೂರ್ತಿಯು ಬೇಲೂರು ಚೆನ್ನಕೇಶವನಿಗಿಂತಲೂ ಸುಂದರವಾಗಿದೆ.ಈ ದೇವಾಲಯ ಈಗ ಶಿಥಿಲಾವಸ್ಥೆಯಲ್ಲಿದೆ.ದೇವಾಲಯಕ್ಕೆ ಹೋಗುವವರೇ ಇಲ್ಲ. ಅಪರೂಪಕ್ಕೆ ಊರಿಗೆ ನೆಂಟರಿಷ್ಟರು ಬಂದಾಗ ಈ ದೇವರಿಗೆ ಅದೃಷ್ಟ ಕೂಡಿ ಬರುತ್ತೆ! ಎರಡೂ ಪ್ರತಿಮೆಗಳನ್ನು ನೋಡಿದಿರಿ. ನೀವೇನು ಹೇಳುವಿರಿ?
No comments:
Post a Comment