Pages

Saturday, February 5, 2011

ಮನದಾಳದಿಂದ

ವೇದಸುಧೆಯ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡ ಅಭಿಮಾನಿಗಳು ಒಬ್ಬೊಬ್ಬರಾಗಿ ತಮ್ಮ ಮನದಾಳದ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.ಇಂದು ಮೈಸೂರಿನ ಶ್ರೀ ಲಕ್ಷ್ಮೀನಾರಾಯಣರಾವ್ ತಮ್ಮ ಅನಿಸಿಕೆಗಳನ್ನು ವೇದಸುಧೆಯೊಡನೆ ಹಂಚಿಕೊಂಡಿದ್ದಾರೆ. ನಿಮಗೆಲ್ಲಾ ತಿಳಿದಿರುವಂತೆ ವೇದಸುಧೆಯು ಇನ್ನೂ ಒಂದು ವರ್ಷದ ಕೂಸು.ಅದು ಮಾಡಿದ್ದೆಲ್ಲಾ ಸರಿ ಎಂದು ಹೇಳಲು ಸಾಧ್ಯವಾದರೂ ಎಲ್ಲಿ? ಅಲ್ಲದೆ ಪ್ರಮುಖವಾಗಿ ಶ್ರೀ ಸುಧಾಕರಶರ್ಮರು ವೇದವನ್ನು ತಮ್ಮ ಮಾತುಗಳಲ್ಲಿ ಹೇಳುತ್ತಿರುವ ಸಂದರ್ಭಗಳಲ್ಲಿ ಅದು ಸತ್ಯವೆಂದು ತೋರದಿದ್ದಲ್ಲಿ ದಯಮಾಡಿ ನೀವು ವೇದಸುಧೆಗೆ ಬರೆಯ ಬೇಕು. ಯಾರೂ ಪರಿಪೂರ್ಣರಲ್ಲ. ಒಂದೊಮ್ಮೆ ಶರ್ಮರ ಅರ್ಥೈಸುವಿಕೆಯಲ್ಲಿ ತಪ್ಪಾಗಿದ್ದರೆ ಸರಿ ಎನಿಸಿದ್ದನ್ನು ಆಧಾರಪೂರ್ಣವಾಗಿ ಬರೆದರೆ ಒಳ್ಳೆಯದು.ಅಂತೂ ನಮ್ಮ-ನಿಮ್ಮ ಉತ್ತಮ ಬದುಕಿಗಾಗಿ ಒಂದಿಷ್ಟು ಸೂತ್ರಗಳು ವಿಚಾರಮಂಥನದಿಂದ ಲಭ್ಯವಾಗಬೇಕು. ಇದು ವೇದಸುಧೆಯ ಉದ್ಧೇಶ. ಅಂದು ವೇದಿಕೆಯಲ್ಲಿ ತಮ್ಮ ವಿಚಾರವನ್ನು ಹಂಚಿಕೊಂಡವರು ಕು|| ಶೃತಿ , ಸ್ವಾತಿಯಲ್ಲ. ಕು|| ಶೃತಿಯವರ ಮಾತು ಕೇಳುವಾಗ ಸಹಜವಾಗಿ ನನ್ನ ಮನದಲ್ಲಿ ಮೂಡಿದ್ದು" ಇವರಿಗಿನ್ನೂ ಚಿಕ್ಕ ವಯಸ್ಸು, ಈ ವಯಸ್ಸಿಗಾಗಲೇ ಹಲವಾರು ಗ್ರಂಥಗಳನ್ನು, ರಾಮಾಯಣ-ಮಹಾಭಾರತಗಳನ್ನು ಅಧ್ಯಯನ ಮಾಡಿ, ಎಲ್ಲೂ ಜೀವನಕ್ಕೆ ಬೇಕಾದ್ದು ಏನೂ ಸಿಗದಿದ್ದಾಗ ನಾನು ವೇದವನ್ನು ಅಧ್ಯಯನ ಆರಂಭಿಸಿದೆ" ಎನ್ನುವ ಮಾತು ಸೂಕ್ತವೆನಿಸಲಿಲ್ಲ. ಈ ಚಿಕ್ಕ ವಯಸ್ಸಿಗೆ ವೇದಾಧ್ಯಯನ ಮಾಡುತ್ತಿರುವ ಬಗ್ಗೆ ನನಗೆ ಅವರ ಬಗ್ಗೆ ಅಭಿಮಾನವಿದೆಯಾದರೂ ವಿಚಾರ ಮಂಡಿಸುವಾಗ ನನಗೆ ಏನೂ ಗೊತ್ತಿಲ್ಲ, ನನ್ನ ಅಲ್ಪ ತಿಳುವಳಿಕೆಯಲ್ಲಿ ನನಗೆ ಹೀಗೆ ಅನ್ನಿಸುತ್ತಿದೆ ಎಂದು ವಿಚಾರ ಮಂಡಿಸಿದ್ದರೆ ಚೆನ್ನಾಗಿತ್ತು, ಕೇಳುಗರ ಮೆಚ್ಚುಗೆಯೂ ಸಿಗುತ್ತಿತ್ತು. ಮೆಚ್ಚುಗೆಗೆ ಮಾತನಾಡಬೇಕೆಂದೇನೂ ಅಲ್ಲ. ಆದರೆ ಮಾತು ಹೇಗಿರಬೇಕೆಂದು ಶರ್ಮರು ಈಗಾಗಲೇ ಎಚ್ಛರಿಸಿದ್ದಾರಲ್ಲವೇ " ಮಾತಿನಲ್ಲಿ ಸತ್ಯ ವಿದೆಯೇ, ಪ್ರಿಯವಾಗಿದೆಯೇ?, ಹಿತವಾಗಿದೆಯೇ? ಎಂಬ ಎಚ್ಛರಿಕೆಯನ್ನು ಗಮನಿಸಬೇಕಲ್ಲವೇ? ತಂಗಿ ಶೃತಿಯವರಿಗೆ ಅಣ್ಣನಾಗಿ ಇದು ನನ್ನ ಕಿವಿಮಾತು. . ಈಗ ಶ್ರೀ ಲಕ್ಷ್ಮೀನಾರಾಯಣರ ಮಾತುಗಳನ್ನು ಕೇಳಿ. ನಂತರ ನಿಮ್ಮ ಅನಿಸಿಕೆಗಳನ್ನೂ ಹೇಳಿ. 
------------------------------------------

ಪ್ರೀತಿಯ ಶ್ರೀಧರ್,
ನಮನಗಳು. ಕಛೇರಿಯ ಕಾರ್ಯ ವತ್ತಡಗಳಿಂದ ನಿಮಗೆ ಪುನಃ ಬರೆಯಲಾಗಲ್ಲಿಲ್ಲ.
ಶ್ರೀ ಸುಧಾಕರ ಶರ್ಮರನ್ನು ಈ ಹಿಂದೆ ಬರೀ ಆಲಿಸಿ- ಕಂಡದ್ದು. ನಿಮ್ಮಿಂದಾಗಿ ಅವರನ್ನು ಪ್ರತ್ಯಕ್ಷ ಕಾಣುವ ಸೌಭಾಗ್ಯ ಬಂದಿತ್ತು. ಕಾರ್ಯಕ್ರಮದ ಹಿಂದಿನ ದಿನದ ಉಪನ್ಯಾಸ ಕೈ ತಪ್ಪಿದ ಕೊರಗು ಇನ್ನೂ ಇದೆ.
ಹೀಗಿದ್ದರೂ ನೀವು ಕೇಳಿಸುವಿರಲ್ಲ. ಅವರ ಎಲ್ಲಾ ಭೌದ್ಧಿಕ್ ಗಳನ್ನೂ ನಿಧಾನವಾಗಿ ಅಧ್ಯಯನ ಮಾಡಬೇಕಿದೆ.

ಕಾರ್ಯಕ್ರಮದ ವ್ಯವಸ್ಥೆ ಅಚ್ಚುಕಟ್ಟು ಇವುಗಳ ಬಗ್ಗೆ ಎರಡು ಮಾತಿಲ್ಲ. ತಪ್ಪು ತಿಳಯದಿದ್ದಲ್ಲಿ ವಿಚಾರ ಸಂಕಿರಣದ ಮೌಲ್ಯ ಮಾಪನ ವಸ್ತುನಿಷ್ಟವಾಗಿ ಮಾಡುವ ಪ್ರಯತ್ನ ಮಾಡಿ. ಹೊರಗಿನ ಯಾವುದೇ ವಿದ್ವಾಂಸ/ಬುದ್ಧಿಜೀವಿ/ಉಪದೇಶಿಗರನ್ನು ಕರೆಯದೆ, ಸುಧೆಯ ಬಳಗದವರನ್ನೆ ಆರಿಸಿಕೊಂಡದ್ದು ಉಚಿತವೇ ಆಗಿದ್ದಾಗ್ಯೂ ನಿಜಕ್ಕೂ ಒಬ್ಬಿಬ್ಬರನ್ನು ಬಿಟ್ಟಲ್ಲಿ ಉಳಿದವರದ್ದು ಹೆಚ್ಚಿನ ಮೌಲಿಖವೆನಿಸಲಿಲ್ಲ. ವಸ್ತುವಿನ ಅಗಾಧ ಹರವು ಮತ್ತು ಅಷ್ಟೇ ಸಮಯದ ಅಭಾವದ ತೊಂದರೆ ಕಾರಣವಿರಬಹುದು.
ಮೊದಲಿಗೆ ಡಾ. ಶ್ರೀವತ್ಸ ಎಸ್ ವಟಿ ಯವರ ಮಾತು ಉಪಯುಕ್ತವೆನಿಸಿದ್ದಾಗ್ಯು ಸುಭಾಷಿತ ಸಂಗ್ರಹಗಳ ಮಂಡನೆ ಎನಿಸಿತ್ತು. ಸಾಕಷ್ಟು ಓದು ಅಧ್ಯಯನ ಗಳಿದ್ದರೂ ಒಂದೊಂದರ ಸುಸಂಭದ್ದತೆಯ ಕೊರತೆ ಎದ್ದು ತೋರಿತು. ಅವರು ನೀಡಿದ ಮಾಹಿತಿಗೆ ನಾವು ಉಪಕೃತರು. ಡಾ||ವಿವೇಕ್ ನಿಜಕ್ಕೂ ಅಚ್ಚುಕಟ್ಟಾಗಿ ವಿಷಯ ಮಂಡಿಸಿ, ಆಯುರ್ವೇದದ ಮಹತ್ವದ ಸಂಕ್ಷಿಪ್ತ ದರ್ಶನ - ಮಾಡುವಲ್ಲಿ ಯಶಸ್ವಿಯಾದರು. ಅವರ ಅರಿವು, ಮಾತುಗಳ ಖಚಿತತೆ, ನಿರೂಪಣೆ ನೈಜಾರ್ಥವನ್ನು ತಲಪಿಸುವಲ್ಲಿ ತೋರಿದ ಜಾಣ್ಮೆ ಕೇಳುಗರ ಬುದ್ಧಿ ಮನಸ್ಸುಗಳಿಗೆ ಪ್ರಚೋದನೆ ನೀಡಿದೆಎನ್ನಬಹುದು.ಶ್ರೀ ನಾಗರಾಜ ದೀಕ್ಷಿತ್ ರವರು ಪ್ರಸ್ತಾಪಿಸಿದ ವ್ಯಾಸ, ಶುಕ, ಕೃಷ್ಣ ರಂದ್ರ, BIG BANG THEORY ,ಸಾವಿರದ ಮುವತ್ತೊಂದರ ಶಾಖೆಯಲ್ಲಿ ಉಳಿದಿರುವುದು ಕೇವಲ ಹನ್ನೊಂದೇ ಎಂಬ ಸಂಕಟದ ಮಾತು ಕೊನೆಗೆ , ಈಗಿನ ವಿಜ್ಞಾನದಲ್ಲಿ " ಅವಿಷ್ಕಾರಗಳಿಲ್ಲ ಕೇವಲ ಸಂಶೋಧನೆ ಮಾತ್ರ" ಎಂಬೆಲ್ಲಾ ಕೇಳಲು ಹಿತವಾದ ಮಾತೆಲ್ಲಾ ಉತ್ಪ್ರೇಕ್ಷೆ ಅಲ್ಲವಾಗಿದ್ದೂ- ಕೊನೆಯಲ್ಲಿ ಶ್ರೀ ಶರ್ಮರ ಯಾವುದೇ ENDORSEMENT ಇಲ್ಲದೆ ರಂಜನೆ ಎನಿಸಿತು. ಶ್ರೀ ಶರ್ಮರು ತಮ್ಮ ಸಮನ್ವಯ ಮಾತಲ್ಲಿ ಇವರ ಕಳಾಜಿಯ ವಿನಃ ಉಳಿದ ಯಾವುದೇ ಮಾತನ್ನು ಅಷ್ಟು ಸೀರಿಯಸ್ಆಗಿ ಪರಿಗಣಿಸಲಿಲ್ಲವೆಂದೆ ತೋರಿತು.ಗತ ವೈಭವ ಉಪಯೋಗವಿಲ್ಲ, ಜೀವಂತವಿರುವುದನ್ನು ಉಳಿಸಿ ಬೆಳಸಿರೆಂಬ ಅವರ ಖಚಿತ ಮಾತು ,ದೀಕ್ಷಿತರ ಜಾಡಿಗಿಂತ ಪೂರ್ಣ ಭಿನ್ನ. ಇನ್ನು ವಿಚಾರ ಸಂಕಿರಣವನ್ನು ಶಾಲಾ ಮಕ್ಕಳ ಚರ್ಚಾಸ್ಪರ್ದೆಯನ್ನಾಗಿ ಭಾವಿಸುವಂತೆ ಮಾಡಿದ್ದು ಕು||ಸ್ವಾತಿಯವರ ಮಾತು. ಘಂಠಾಘೋಷವಾಗಿ ಎಂಬ ಪದವನ್ನು ಹೇಳದೆ,ಯಾವ ಮೇಜನ್ನು ಗುದ್ದದೆ ತಮ್ಮ ಮಾತನ್ನು ಮುಗಿಸಿದ್ದುದು ತಮಾಷೆ ಎನಿಸಿತು. ಅವರ ಹತ್ತಾರು ವರುಷಗಳ ಅಧ್ಯಯನದ ಅರಿವನ್ನು ಅವರು ನಮ್ಮೊಡನೆ ಹಂಚಿಕೊಳ್ಳಲೇ ಇಲ್ಲ. ಏಕೆ ಇಲ್ಲಿ , ಈ ಸಭೆಯಲ್ಲಿ 'ಮಹಿಳೆಯರಿಗೆ ವೇದಾಧ್ಯಯನದ ಅಧಿಕಾರವಿಲ್ಲ'ವೆಂಬ ವಿಚಾರವನ್ನು ಪ್ರಸ್ತಾಪಿಸಿ ಅದನ್ನು ತಾವಿಲ್ಲಿ ಗಟ್ಟಿಯಾಗಿ ವಿರೋಧಿಸಿ ಪಂಥಾಹ್ವಾನ ನೀಡಲು ಬಯಸಿದರೆಂಬುದು ತಿಳಿಯಲಿಲ್ಲ. ಉಳಿದಂತೆ ಶ್ರೀ ದಕ್ಷಿಣಾಮೂರ್ತಿ ಹಾಗು ಶ್ರೀ ವಿ .ಆರ್ .ಭಟ್ ರವರ ಮಾತಲ್ಲಿ ಹೆಚ್ಚಿನ ಯಾವ ಹೊಸ ಹೊಳಹು ಕಾಣಬರಲಿಲ್ಲ. ಹೀಗೆಲ್ಲಾ ಬರೆದನೆಂದ ಮಾತ್ರಕ್ಕೆ ಅವರ ಅಧ್ಯಯನ,ಕಾಳಜಿ ಗಳಬಗ್ಗೆ ನನ್ನ ನಮ್ರ ಗೌರವಪೂರ್ಣ ಅಭಿನಂದನಾ ವಂದನೆಗಳನ್ನು ತಿಳಸದೆ ಮುಗಿಸಿದಲ್ಲಿ ನನ್ನದು ಅಕ್ಷಮ್ಯವಾಗುತ್ತದೆ.

ಇನ್ನು ಶ್ರೀ ಶರ್ಮರ ಸಮನ್ವಯದ ಮಾತನ್ನು ನೋಟ್ ಮಾಡಿಕೊಂಡಿರುವೆ. ಸಾಕಷ್ಟು ನೆನಪಿಸಿಕೊಂಡು ಮತ್ತೆ, ಮತ್ತೆ ಯೋಚಿಸಿ ನನ್ನ ಅರಿವಿಗೆ ಸಿಲುಕಿದ್ದಸ್ಟು, ನನ್ನ ಬೊಗಸೆಗೆ ದಕ್ಕಿದ್ದಷ್ಟು ತಿಳಿಸುವ ಪ್ರಯತ್ನ ಮಾಡುವೆ.
ಪ್ರಿತಿಪೂರ್ವಕವಾಗಿ
ನಮನಗಳೊಂದಿಗೆ,
ಬಿ. ಯಸ್ .ಲಕ್ಷ್ಮೀನಾರಾಯಣರಾವ್
February 5, 2011 2:09 AM

4 comments:

  1. ಶ್ರೀಯುತ ಲಕ್ಷ್ಮೀನಾರಾಯಣರವರಿಗೆ ನಮಸ್ಕಾರ. ವೇದಸುಧೆಯ ಬಳಗದ ಎಲ್ಲಾ ಸದಸ್ಯರೂ ಅಂದು ವಿಚಾರ ಸಂಕಿರಣದಲ್ಲಿ ಕೊಟ್ಟ ವೇಳೆಯ ಪರಿಮಿತಿಯಲ್ಲಿ ತಕ್ಕಮಟ್ಟಿಗೆ ವಿಷಯಗಳನ್ನು ಮಂಡಿಸಿದ್ದಾರೆ. ವೇದದ ಶ್ಲೋಕಗಳು ಕಂಠಸ್ಥವಾಗಿದ್ದಲ್ಲಿ ಮಾತ್ರ ಉದ್ಧರಿಸಲು ಸುಲಭಸಾಧ್ಯವೇ ಹೊರತು ಬರೆದುಕೊಂಡು ಓದುವುದು ಆಗದ ಮಾತು. ಈ ದಿಸೆಯಲ್ಲಿ ಶ್ರೀ ವಟಿಯವರು ಮತ್ತು ಕುಮಾರಿ ಶೃತಿಯವರು ಸ್ವಲ್ಪ ನಿಧಾನಿಸಿರಬಹುದು. ಇನ್ನು ನಾನು ವಿಷಯದ ಗಹನತೆಯ ಬಗ್ಗೆ ಮಾತನಾಡ ಹೊರಟಿದ್ದರೆ ಮಧ್ಯಾಹ್ನಕ್ಕೂ ಮತ್ತೂ ರಾತ್ರಿಗೂ ಸೇರಿ ಒಂದೇ ಊಟಮಾಡಬೇಕಾದ್ ಪ್ರಮೇಯ ಬರುತ್ತಿತ್ತೇನೋ, ಹಾಗಂತ ನಾನು ಉದ್ಧಾಮ ಪಂಡಿತನೋ ಘನಪಾಠಿಯೋ ಅಲ್ಲ--ಆದರೆ ನಿಮ್ಮಂತೇ ವೇದವನ್ನು ತಿಳಿಯುವ ಕುತೂಹಲಿಗಳಲ್ಲಿ ಒಬ್ಬ. ಇನ್ನೂ ಒಂದಂಶ ತಾವು ಗಮನಿಸಬೇಕು. ಎಲ್ಲರಿಗೂ ಬರೇ ಶ್ಲೋಕಗಳು ಮತ್ತು ಅವುಗಳ ಆಳವಾದ ಅರ್ಥವನ್ನು ಗಂಟೆಗಟ್ಟಲೆ ಹೇಳುತ್ತಲೇ ಇದ್ದರೆ ಸಭೆಯ ಅರ್ದಭಾಗ ನಿದ್ದೆಯಲ್ಲಿ ತೊಡಗುತ್ತಿತ್ತು. ಅದಕ್ಕೇ ಮಧ್ಯೆ ಮಧ್ಯೆ ಗಾಯನವನ್ನು ಪ್ರಸ್ತುತಪಡಿಸಿದ್ದೇವೆ.

    ಬೆಳೆಯುವಾಗ ನ್ಯೂನತೆಗಳು ಸಹಜವಲ್ಲವೇ? ನಡೆಯುವವರು ಎಡವಿಯೇ ಎಡವುತ್ತಾರೆ ಎಂಬುದು ನನ್ನ ಅನುಭವದ ಅಭಿಮತ. ಹೀಗಾಗಿ ಇದರಲ್ಲಿ ವಿಚಾರವೇತ್ತರಾದ ತಾವೆಲ್ಲಾ ಕೈಜೋಡಿಸಿದ್ದರೆ ಸಂಕಿರಣ ಇನ್ನೂ ಅಗಾಧತೆಯನ್ನು ಪಡೆಯಬಹುದಿತ್ತೇನೋ. ಹಾಗೊಮ್ಮೆ ಇದ್ದರೂ ಮೂರುಗಂಟೆಯ ಸಮಯಕ್ಕೆಲ್ಲಾ ಮುಗಿಸುವ ಕಮ್ಮಟ ಇದಾಗುತ್ತಿರಲಿಲ್ಲ ಎಂಬುದು ನನ್ನ ಅನಿಸಿಕೆ.

    ಒಪ್ಪುತ್ತೇನೆ ನಾನು ಸ್ವಲ್ಪ ವಿಷಯವನ್ನು ದೂರದಿಂದ ದೃಷ್ಟಿಸಿ ಮಾತನಾಡಿದ್ದೇನೆಯೇ ಹೊರತು ಅದರ ಅಗಾಧತೆಗೆ ಯಾವ ಬರೆದ ಶ್ಲೋಕಗಳನ್ನೋ ಭಾಷಣವನ್ನೋ ಪ್ರಸ್ತುತಪಡಿಸಲಿಲ್ಲ. ಅದರಲ್ಲೂ ವಿಷಯವನ್ನೇ ಮೊಟಕುಗೊಳಿಸಬೇಕಾಗಿ ಬಂದ ಸಮಯಪ್ರಜ್ಞೆಯಿಂದ ೧೦ ನಿಮಿಷಗಳಲ್ಲಿ ಮಂಗಳ ಹಾಡಿದ್ದೇನೆ.

    ತಮ್ಮ ಅಭಿಪ್ರಾಯಕ್ಕೆ ನಾವು ಕೃತಜ್ಞರು. ನಿಮ್ಮ ಸಲಹೆಗಳ ಜೊತೆಗೆ ನೇರವಾದ ನಿಮ್ಮ ಪಾಲ್ಗೊಳ್ಳುವಿಕೆಯನ್ನು ಬಯಸುತ್ತೇವೆ,ಧನ್ಯವಾದಗಳು

    ReplyDelete
  2. ಶ್ರೀ ಲಕ್ಷ್ಮೀ ನಾರಾಯಣ್
    ನಮಸ್ತೆ,
    ನಿಮ್ಮ ಕಾಳಜಿಗೆ ಶರಣು. ಇದು ಇಂದಿನ ಅಗತ್ಯವೆಂದು ನಾನು ಭಾವಿಸುವೆ. ಒಂದು ಸಮಾಜದ ಸ್ವಾಸ್ಥ್ಯದ ಮತ್ತು ವ್ಯಕ್ತಿಯ ಆರೋಗ್ಯಪೂರ್ಣ ಬದುಕಿನ ಬಗ್ಗೆ ಚಿಂತನ-ಮಂಥನ ನಡೆದು ಕೆಲವು ಅಂಶಗಳು ಸೂತ್ರದ ರೂಪದಲ್ಲಿ ಲಭ್ಯವಾಗಬೇಕು. ಆಗಮಾತ್ರ ಏನಾದರೂ ಪ್ರಯೋಜನವಾಗಬಹುದು. ವೇದಸುಧೆಯಾದರೋ ಅಂಬೆಗಾಲಿಡುತ್ತಾ ಮೊದಲವರ್ಷದಲ್ಲೇ ಅದರ ಸಾಮರ್ಥ್ಯವನ್ನೂ ಗಣನೆಗೆ ತೆಗೆದುಕೊಳ್ಳದೆ ತನ್ನ ಶಕ್ತಿ ಮೀರಿದ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಅದರ ನಿರೀಕ್ಷೆಗೂ ಮೀರಿದ ಯಶಸ್ಸಂತೂ ಸಿಕ್ಕಿದೆ ಎಂಬ ಸಮಾಧಾನವಿದೆ. ಆದರೆ ಹೊಣೆಯು ಹೆಚ್ಚಾಗುವುದು ಈಗಲೇ. ನಮ್ಮ ದೇಶದಲ್ಲಿ ಆರ್.ಎಸ್.ಎಸ್. ನಂತ ಸಂಘಟನೆಗಳಿಗಿಂತ ಬೇರೆ ಬೇಕೆ? ಎಂಬ ಪ್ರಶ್ನೆ ಬರುತ್ತೆ. ಆದರೆ ಬೇಕು, ಎಂಬ ಉತ್ತರವೂ ಎದುರಾಗುತ್ತದೆ. ಕಾರಣ ಆರ್.ಎಸ್.ಎಸ್. ನಿಂದ ಪ್ರೇರಣೆ,ಸಂಸ್ಕಾರವನ್ನು ಪಡೆದ ನೂರಾರು ಕಾರ್ಯಕರ್ತರು ಈಗ ಸಮಾಜದ ಹಲವು ಕ್ಷೇತ್ರಗಳಲ್ಲಿ ಇಂತಹ ಸದ್ವಿಚಾರಕ್ಕಾಗಿ ತಮ್ಮ ತಮ್ಮ ಮಟ್ಟದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ದಿಕ್ಕಿನಲ್ಲಿ ಸಂಘದ ಕೆಲಸ ಸಾರ್ಥಕವಾಗಿದೆ. ಮೂಲದಲ್ಲಿ ಸಂಘದ ಕಾರ್ಯಕರ್ತನಾದ ನಾನು ಸಂಘದಿಂದ ಪಡೆದ ಸಂಸ್ಕಾರದ ಫಲವಾಗಿ ಬೆಳೆಯುತ್ತಾ ಇದೀಗ ನಾನು ಆರಿಸಿಕೊಂಡಿರುವ ಈ ಕ್ಷೇತ್ರವು ನನಗೆ ಸಂತೋಷವನ್ನು ನೀಡಿದೆ. ನಿಮ್ಮಂತಹ ಚಿಂತಕರು ವೇದಸುಧೆಗೆ ಜೋಡಿಸಿಕೊಂಡರೆ[ಈಗಾಗಲೇ ವೇದಸುಧೆಯೊಡನಿದ್ದೀರಿ] ನಾವೆಲ್ಲಾ ಕೂಡಿ ಚಿಂತನ-ಮಂಥನ ನಡೆಸಿ ಸಮಾಜದಲ್ಲಿ ಸಾಮಾನ್ಯರಿಗೆ ವೇದದ ಸಾರ ತಿಳಿಸುವ, ತನ್ಮೂಲಕ ಜನರ ಅಭ್ಯುದಯಕ್ಕೆ ಪೂರಕವಾಗುವ ಕನಿಷ್ಟತಮ ಕಾರ್ಯಕ್ರಮಗಳನ್ನು ಹಾಕಿಕೊಂಡು ವೇದಸುಧೆಯ ಕೆಲಸವನ್ನು ವಿಸ್ತಾರಗೊಳಿಸಬೇಕೆಂಬ ಹಂಬಲವಿದೆ. ಇಲ್ಲಿ ವೇದಸುಧೆ ಎಂಬ ಹೆಸರೂ ಕೂಡ ಅನಿವಾರ್ಯವೇನಲ್ಲಾ. ಆದರೆ ಶ್ರೀ ಸುಧಾಕರ ಶರ್ಮರಂತಹ ಸರಳ ಸಜ್ಜನರ ಸಹಕಾರ ಪಡೆದು ಒಂದು ಸರಳವಾದ ವಿನೂತನ ಹಾಗೂ ಸಮಾಜಮುಖಿ ಕಾರ್ಯಕ್ರಮವನ್ನು ಎಲ್ಲೆಡೆ ಹಮ್ಮಿಕೊಳ್ಳಬೇಕೆಂಬ ಆಸೆ ನನ್ನ ಹಲವಾರು ಮಿತ್ರರದು. ನಿಧಾನವಾಗಿ ಯಾದರೂ ಜೊತೆಜೊತೆಯಲ್ಲಿ ಈ ದಿಸೆಯಲ್ಲಿ ಹೆಜ್ಜೆ ಇಡೋಣ.

    ReplyDelete
  3. Hello, This is shruthi, With humility and humbleness I would take all the comments written about me I do accept that I did commit the mistake of getting excited that day in the function but that also had reasons and I beg every one to consider me on these grounds basically I was sitting in among elders and I thought I was very young to talk in between them secondly I was not prepared thoroughly to talk about women in background of vedas but was prepared for something else and thirdly that topic itself was such that I had no choice but get excited, with a simple observation of what is happening to women in our society we can make out that women still are deprieved of many things. In the issue of vedas it is still largely percieved that women are nowhere or secondary inspite of the availability of ample proof of women being responsible for expansion vedas, I must tell you here that even I have undergone and still undergoing the problem of being considered secondary for the reason that I am a woman in the above issue altough not to boast but I can chant the hymns well better than many of my male counterparts. Sometimes we must understand that BOMBS BLASTS ARE REQUIRED TO SUPPRESS OR SURPASS UNLAWFUL THINGS so did I speak with my heart open fully that day. I AM REALLY SORRY FOR BEING ROUGH but I was just helpless as I am being made to get frustrated by society in a few issues along with the one above, in the process of fighting them I prove to be very aggressive but PLEASE NOTE THAT MY REMARKS WERE ONLY TO THOSE WHO DO SUCH BIASES AND CERTAINLY NOT TO OTHERS. However I am very contended and happy today on being a learner of vedas and am TOTALLY GRATEFUL TO MY TEACHERS WHO ARE ALL MALES. I thank all those who gave me an oppurtunity to speak that day on that stage.

    ReplyDelete
  4. ಸೋದರಿ ಶೃತಿ,
    ನಮಸ್ತೆ,
    ಈ ಸಮಾಜವು ಸ್ತ್ರೀಯರನ್ನು ಹೇಗೆ ನಡೆಸಿಕೊಳ್ಳುತಿದ್ದೆ? ಎಂಬುದನ್ನು ಗಮನಿಸಿದಾಗ ನಿಮ್ಮಂತೆ ಸಿಟ್ಟು ಬರುವುದು ಸಹಜ.ಆದರೆ ಮೊನ್ನೆ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಬಹುಪಾಲು ಜನರಿಗೆ ಸ್ತ್ರೀಯರ ಬಗ್ಗೆ ಅತ್ಯಂತ ಗೌರವವಿದೆ. ಆದರೆ ಸಮಾಜದಲ್ಲಿ ಇನ್ನೂ ಇರುವ ಸ್ತ್ರೀಯರ ಶೋಷಣೆಯ ವಿರುದ್ಧ ವೇದದ ಬೆಳಕಿನಲ್ಲಿ ಜಾಗೃತಿ ಮೂಡಿಸುವ ಕೆಲಸವೂ ಖಂಡಿತಾ ಆಗಬೇಕಿದೆ. ಈ ವಿಚಾರದಲ್ಲಿ ವೇದಸುಧೆಯು ನಿಮ್ಮ ಜೊತೆ ನಿಲ್ಲುತ್ತದೆ. ಕನ್ನಡದಲ್ಲಿ ಬರೆಯಲು ಅಭ್ಯಾಸ ಮಾಡಿಕೊಂಡರೆ ನಿಮ್ಮ ವಿಚಾರಗಳನ್ನು ಹಲವರಿಗೆ ಈ ಬ್ಲಾಗ್ ಮೂಲಕ ತಲುಪಿಸಬಹುದು. ಕಾರಣ ಇದು ಕನ್ನಡ ಬ್ಲಾಗ್. ಆಂಗ್ಲ ಮಾಧ್ಯಮದಲ್ಲಿ ಬರೆಯಬಾರದೆಂದೇನೂ ಅಲ್ಲ, ಬರೆಯಬಹುದು, ಅನಿವಾರ್ಯವಾದಾಗ.ನಿಮ್ಮ ಈ ಮೇಲ್ ವಿಳಾಸವನ್ನು ವೇದಸುಧೆಗೆ ಕಳುಹಿಸಿಕೊಡಿ. ಅಧಿಕೃತ ಆಹ್ವಾನವನ್ನು ಕಳಿಸಿಕೊಡಲಾಗುವುದು.

    ReplyDelete