1] ನಮಸ್ತೆ ಸುಧಾಕರ್ ಜೀ, ಜೀವಿಗಳ ಉಗಮದ ಬಗ್ಗೆ ವೇದಗಳಲ್ಲಿ ಉಲ್ಲೇಖವಿದೆಯೆ? ಏಕೆಂದರೆ, ಜೀವಿಗಳ ಉಗಮದ ಬಗ್ಗೆ ಆಧುನಿಕ ವಿಜ್ಞಾನಿಗಳು ಹೇಳಿರುವುದು(ಹೇಳಿದ್ದರೂ ಇರಬಹುದು) ನನಗೆ ತಿಳಿದಿಲ್ಲ. ಆದರೆ ಡಾರ್ವಿನ್ ನ ಪ್ರಕಾರ ಒಂದರಿಂದ ಮತ್ತೊಂದು ರೂಪಾಂತರ ಹೊಂದಿತೆಂಬುದು ಆತನ ವಾದಸರಣಿ (ದಾಖಲೆ ಸಹಿತವಾಗಿಯಲ್ಲ). ಅದು ಸತ್ಯವೂ ಅಲ್ಲ ಅಥವ ಅದನ್ನು ಸುಳ್ಳೆಂದು ನಿರಾಕರಿಸಲೂ ಆಗುವುದಿಲ್ಲ.
-ಪ್ರಸನ್ನ
2] ಸತ್ಯದ ಹುಡುಕಾಟ ತು೦ಬಾ ಒಳ್ಳೆಯದೆ. ಯಾವ ಸತ್ಯವೇ೦ದು ಕೆಳಬಹುದೆ? ಸಾರ್ವಕಲಿಕ ಸತ್ಯವಾದರೆ ಆದು ಪರಬ್ರಹ್ಮ ಒ೦ದೆ ಅಲ್ಲವೇ. ಮಿಕ್ಕಿದ್ದೆಲ್ಲ ಕ್ಷಣಿಕ ಸತ್ಯ ಅಲ್ಲವೇ. ಪ್ರಸನ್ನರವರು ಕೆಳಿದ ಮೂಲ ಪ್ರಶ್ನೆ (ಸತ್ಯ ದ ಹುಡುಕಾಟದಲ್ಲಿ) ಕಳೆದು ಹೋಯಿತೆ? ನಾವು ಇರುವುದು(ಈ ದೇಹದಲ್ಲಿ) ಸತ್ಯ ಅಲ್ಲವೇ? ಆದರೆ ತು೦ಬಾ ಸೂಕ್ಷ್ಮವಾದ, ಅತ್ತ್ಯುತ್ತಮವಾದ ವಿಷಯವನ್ನು ಪ್ರಾರ೦ಭಿಸಿದ್ದಕ್ಕೆ ಧನ್ಯವಾದಗಳು
-ವಿನಾಯಕ ಭಟ್
3] ವೇದವೆಂದರೆ ಸಾವಿರಾರು ವರ್ಷಗಳ ಹಿಂದಿನ ಸಂಸ್ಕೃತ ವಾಕ್ಯಗಳು ಮಾತ್ರವೇ?
-ಮಹೇಶ್
------------------------------------------------------
ನನ್ನ ಅನಿಸಿಕೆ:
ವೇದಗಳು ಪ್ರಪಂಚಕ್ಕೆ ಜ್ಞಾನಭಂಡಾರವೆಂದು ನಂಬುವ ಜನರು ನಾವು. ಆದರೆ ಇಂದು ನೂರಾರು ವರ್ಷಗಳಿಂದ ಪುರಾಣ ಕಥೆಗಳ ಆಧಾರದಮೇಲೆ ನಮ್ಮ ಆಚರಣೆಗಳು ನಡೆದಿದ್ದು ವೇದವು ಕಳೆದುಹೋಗಿದೆ ಎಂದು ಅನ್ನಿಸುವುದಿಲ್ಲವೇ? ವೇದ ಎಂದರೆ ಒಂದಿಷ್ಟು ಮಂತ್ರಗಳ ಪಠಣೆಯೇ? ಆದರೆ ವೇದಾಧ್ಯಾಯೀ ಸುಧಾಕರ ಶರ್ಮರು ವೇದಮಂತ್ರಗಳ ಅರ್ಥವನ್ನು ವಿವರಿಸುತ್ತಾ ಅವುಗಳು ಮಾನವನ ಜೀವನಕ್ಕೆ ಹೇಗೆ ಅನುಕೂಲಕರವಾಗಿವೆ, ಎಂಬ ವಿವರಣೆ ಕೊಡುತ್ತಿದ್ದಾರೆ.ಅದೇ ಸಮಯದಲ್ಲಿ ನಮ್ಮ ಆಚರಣೆಗಳಲ್ಲಿನ ಕೆಲವು ದೋಷಗಳನ್ನೂ ನಮಗೆ ಮನವರಿಕೆ ಮಾಡುತ್ತಾ ನಾವು ಅದೆಷ್ಟು ಕುರುಡಾಗಿ ಹಲವು ಆಚರಣೆಗಳನ್ನು ಮಾಡುತ್ತಿದ್ದೇವೆಂಬುದನ್ನು ಆಧಾರಸಹಿತವಾಗಿ ಮನವರಿಕೆ ಮಾಡುತ್ತಿದ್ದಾರೆ. ಅವರ ಮಾತುಗಳಲ್ಲಿ ಸತ್ಯ ಕಾಣುತ್ತಿದೆ.ಉಧಾಹರಣೆಗೆ ಅಗ್ನಿಹೋತ್ರ ಕ್ರಿಯೆ. ಎಷ್ಟು ಸರಳ! ಪಕೃತಿಗೆ ಅದೆಷ್ಟು ಪೂರಕ! ಸರಿಯಾಗಿ ಮಾಡಿದ್ದೇ ಆದರೆ ಮನೆಯಲ್ಲಿದ್ದವರಷ್ಟೇ ಅಲ್ಲದೆ ಸುತ್ತಮುತ್ತಲ ಜನರ ಮೇಲೂ ಅದರ ಪ್ರಭಾವವಾಗುವುದರಲ್ಲಿ ಸಂಶಯವಿಲ್ಲ.ಯಾವ ಗೊಂದಲ ಗೋಜಿಲ್ಲ. ಜಾತಿ ಮತದ ಅಡ್ದಗೋಡೆಯಿಲ್ಲ. ಸಸ್ಯಾಹಾರ ಮಾತ್ರ ಕಡ್ಡಾಯ. ಮನುಷ್ಯ ಮನುಷ್ಯನ ನಡುವೆ ಭೇದವಿಲ್ಲದೆ ಯಾರೇ ಆಗಲೀ ಸಸ್ಯಾಹಾರಿ ಯಾಗಿದ್ದುಕೊಂಡು, ಸದ್ವಿಚಾರ ಮಾಡುತ್ತಾ, ಪರಿಶುದ್ಧವಾದ ಜೀವನ ನಡೆಸುತ್ತಾ, ನೂರಾರು ದೇವರುಗಳ ಗೊಂದಲವಿಲ್ಲದೆ ಸರ್ವ ಶಕ್ತನೂ ಸರ್ವವ್ಯಾಪಿಯೂ ಸಾರ್ವಭೌಮನೂ ಆದ ವಿಶ್ವಚೇತನವನ್ನು ಆರಾಧಿಸುತ್ತಾ,ನಿತ್ಯ ಸಂಧ್ಯೋಪಾಸನೆ ಮಾಡುತ್ತಾ , ನಿತ್ಯ ಜೀವನವೇ ಒಂದು ಯಜ್ಞವೆಂದು ಭಾವಿಸುತ್ತಾ ನಡೆಸುವ ಬದುಕಿನಲ್ಲಿ ನಿರಾಳ,ನೆಮ್ಮದಿ ಸಿಗಲಾರದೇ? ಶರೀರ ಮನಸ್ಸು ಆರೋಗ್ಯಕರ ವಾಗಿರಲಾರದೇ? ಇನ್ನೊಬ್ಬರಿಗೆ ದ್ರೋಹವಾಗದಂತೆ ನಡೆಸುವ ಸರಳಜೀವನವು ಸಹಜವಾಗಿ ಹಗುರವಾಗಿರಲಾರದೇ?
ನನ್ನ ದೃಷ್ಟಿಯಲ್ಲಿ ಇದುವೇ ಸತ್ಯದ ಹುಡುಕಾಟ.
-ಹರಿಹರಪುರಶ್ರೀಧರ್

No comments:
Post a Comment