"ನಮಸ್ಕಾರ ಶ್ರೀಧರ್ ಸರ್,
ವಾರ್ಷಿಕೋತ್ಸವ ಆದಮೇಲೆ ಓದುಗರ ಉತ್ಸಾಹ ಕಡಿಮೆಯಾಗಿರುವಂತಿದೆ, ಯಾರೂ ಕಾಮೆಂಟ್ ಮಾಡುತ್ತಲೇ ಇಲ್ಲ. ಯಾಕೆ ಸಾರ್?"
ಇಂದು ಹೀಗೊಂದು ಕರೆ ಬಂತು. ಮಾತುಗಳಲ್ಲಿ ಕಳಕಳಿ ಇತ್ತು. ಕಾಮೇಂಟ್ ಬಂದರೆ ಬರೆಯುವವರಿಗೆ ಉತ್ಸಾಹ ಹೆಚ್ಚುತ್ತದೆನ್ನುವುದು ಅವರ ಮಾತಿನ ಅರ್ಥ. ನಾನು ಮಿತ್ರರಿಗೆ ಉತ್ತರಿಸಿದೆ." ವೇದಸುಧೆಯಲ್ಲಿ ಕಾಮೆಂಟ್ ಮಾಡಬೇಕಾದರೆ ಸ್ವಲ್ಪ ಯೋಚಿಸಬೇಕಾಗುತ್ತದೆ. " ಚೆನ್ನಾಗಿದೆ" ಎಂದು ಬರೆದರೆ ನಮಗೆ ಸಂತೋಷವಾಗುತ್ತಾದರೂ ಬರೆದಿಲ್ಲವೆಂದರೆ ಖಂಡಿತವಾಗಿ ಬೇಸರವಾಗುವುದಿಲ್ಲ. ಕಾರಣ ನಿತ್ಯವೂ ನೂರಾರು ಜನರು ವೇದಸುಧೆಯನ್ನು ಓದುತ್ತಿರುವುದು ನಮ್ಮ ಅರಿವಿಗೆ ಬರುತ್ತಲೇ ಇದೆ.ಒಂದು ವೇಳೆ ಓದುಗರ ಸಂಖ್ಯೆ ೧೦-೨೦ ಕ್ಕೆ ಕುಸಿದರೆ ಆಗ ಇಷ್ಟೊಂದು ಸಮಯ ವ್ಯರ್ಥವಾಗುತಿದೆಯೇ? ಎಂದು ಸ್ವಲ್ಪ ತಲೆಕೆಡಸಿಕೊಳ್ಳಬೇಕಾಗುತ್ತದೆ. ಹಾಗಾಗಿಲ್ಲವಲ್ಲಾ! ಆದ್ದರಿಂದ ಒದುತ್ತಿರುವವರಲ್ಲಿ ಒಂದಿಷ್ಟು ಸದ್ವಿಚಾರಗಳನ್ನು ಹಂಚಿಕೊಳ್ಳಲೇ ಬೇಕಾಗುತ್ತದೆಂದು ತಿಳಿಸಿ ಸಮಾಧಾನ ಪಡಿಸಿದೆ.
ಹೌದು, ಮನರಂಜನಾತಾಣಗಳಲ್ಲಿ ಬರೆಯುವಂತೆ ವೇದಸುಧೆಯಲ್ಲಿ ಬರೆಯಲಾಗುವುದಿಲ್ಲ. ಆದರೂ ಗಂಭೀರವಾದ ವಿಷಯಗಳನ್ನೂ ಓದುತ್ತಿರುವ ನಿಮಗೆಲ್ಲರಿಗೂ ಧನ್ಯವಾದಗಳು,
-ಹರಿಹರಪುರಶ್ರೀಧರ್
ಸಂಪಾದಕ, ವೇದಸುಧೆ
ಕಾರ್ಯಕ್ರಮ ಮುಗಿದ ಕೆಲವು ದಿನ ಆ ಬಗ್ಗೆ ಉದಾಸೀನ ತಳೆಯುವುದು ಸಹಜ ತಾನೆ.. ಶರ್ಮರ ಮಾತುಗಳನ್ನು ಕೇಳುವುದೆಂದರೆ ಕರೆಂಟ್ ಶಾಕ್ ಹೊಡೆಸಿಕೊಂಡಂತೆ.. ಎರಡನೇ ಬಾರಿ ಶಾಕ್ ಹೊಡೆಸಿಕೊಳ್ಳಲು ಮೊದಲಿನದ್ದು ವಾಸಿಯಾಗಬೇಕು ತಾನೆ! ತಮಾಶೆಗೆ ಹೇಳಿದೆ ಅಷ್ಟೆ.
ReplyDelete