ವೇದಗಳ ದೃಷ್ಟಿಯಲ್ಲಿ ಧಾರ್ಮಿಕರಾದವರನ್ನು ವರ್ಣಿಸುತ್ತಾ ಋಗ್ವೇದ ಹೇಳುತ್ತದೆ:-
ಏತೇ ಅಸೃಗ್ರಮಾಶವೋssತಿ ಹ್ವರಾಂಸಿ ಬಭ್ರವಃ |
ಸೋಮಾ ಋತಸ್ಯ ಧಾರಯಾ ||
(ಋಕ್. ೯.೬೩.೪.)
ಇಂದ್ರಂ ವರ್ಧಂತೋ ಅಪ್ತುರಃ ಕೃಣ್ವಂತೋ ವಿಶ್ವಮಾರ್ಯಮ್ |
ಅಪಘ್ನಂತೋ ಅರಾವ್ಣಃ ||
(ಋಕ್. ೯.೬೩.೫.)
ಸುತಾ ಅನು ಸ್ವಮಾ ರಜೋsಭ್ಯರ್ಷಂತಿ ಬಭ್ರವಃ |
ಇಂದ್ರಂ ಗಚ್ಛಂತ ಇಂದವಃ ||
(ಋಕ್. ೯.೬೩.೬.)
[ಏತೇ ಆಶವಃ ಸೋಮಾಃ] ಈ ಆಲಸ್ಯ-ಪ್ರಮಾದರಹಿತರೂ, ಶುಭ್ರವಾದ ಆಚಾರ-ವಿಚಾರಗಳನ್ನುಳ್ಳವರೂ, ಶಾಂತಿಗುಣಪ್ರಧಾನರೂ ಆದ ಉತ್ತಮ ಮಾನವರು, [ಋತಸ್ಯ ಧಾರಯಾ] ಧರ್ಮದ ಪ್ರವಾಹದೊಂದಿಗೆ ನಡೆಯುತ್ತಾ, [ಹ್ವರಾಂಸಿ ಅತಿ] ಕುಟಿಲ ಭಾವನೆಗಳನ್ನು ದಾಟಿ, ಅಸೃಗ್ರಮ್] ಮುಂದೆ ಸಾಗುತ್ತಾರೆ.
[ಅಪ್ತುರಃ] ಕಾರ್ಯ ಮಾಡುವುದರಲ್ಲಿ ವೇಗಶಾಲಿಗಳಾದ ಇವರು, [ಇಂದ್ರಂ ವರ್ಧಂತಃ] ತಮ್ಮ ಆತ್ಮವಿಶ್ವಾಸ ಮಾಡಿಕೊಳ್ಳುತ್ತಾ, [ವಿಶ್ವಂ ಆರ್ಯಂ ಕೃಣ್ವಂತಃ] ಸಂಕುಚಿತ ಭಾವನೆಗಳನ್ನು ತುಂಡರಿಸಿ ಚೆಲ್ಲುತ್ತಾರೆ.
[ಸುತಾಃ ಬಭ್ರವಃ ಇಂದವಃ] ಭಗವಂತನ ಮಕ್ಕಳಾದ ನಿರ್ಮಲಚರಿತರಾದ, ನೀರಸಜೀವನವನ್ನು ಸರಸಗೊಳಿಸುವ ಇವರು, [ಇಂದ್ರಮ ಗಚ್ಛಂತಃ] ಸರ್ವಶಕ್ತಿಮಾನ್ ಪ್ರಭುವಿನೆಡೆಗೆ ಹೋಗುತ್ತಾ, [ಸ್ವಂ ರಜಃ ಅನು] ತಮ್ಮ ತಮ್ಮ ಸಾಮರ್ಥ್ಯಕ್ಕನುಸಾರವಾಗಿ, [ಆ ಅಭಿ ಅರ್ಷಂತಿ] ನಿರಂತರವಾಗಿ ಜೀವನದ ಎಲ್ಲ ಮುಖಗಳಿಂದಲೂ ಮುಂದುವರೆಯುತ್ತಾರೆ.
ಮಂತ್ರಗಳು ಅತೀ ಸ್ಪಷ್ಟವಾಗಿವೆ. ಆದರ್ಶ ಜೀವನಪಥದ ವೈಭವವಿದು. ತಾವು ಒಳ್ಳೆಯವರಾದರೆ ಸಾಲದು. ಸಂಪೂರ್ಣ ಮಾನವ ಸಮಾಜವನ್ನೇ ಒಳಿತಾಗಿ ಮಾಡಬೇಕು. ಈರೀತಿ ಆಗುವ ಮತ್ತು ಮಾಡುವ ಶಕ್ತಿ ಸಿದ್ಧಿಸುವುದು ನಿಷ್ಕಳ ಜ್ಞಾನಪ್ರಾಪ್ತಿಯಿಂದ, ಪರಿಶುದ್ಧ ಕರ್ಮಾನುಷ್ಠಾನದಿಂದ, ಪವಿತ್ರ ಪ್ರಭೂಪಾಸನಾಚರಣದಿಂದ. ಆದುದರಿಂದ, ಮುಂದಿನ ಅಧ್ಯಾಯದಲ್ಲಿ ಈ ಮೂರು ಧರ್ಮಾಂಗಗಳ ನಿಜವಾದ ಸ್ವರೂಪವನ್ನರಿತುಕೊಳ್ಳೋಣ ಬನ್ನಿ.
************

ಪ್ರತಿಕ್ರಿಯೆಯು ಉದ್ದವಾಗುತ್ತದೆಂದು ಪ್ರತ್ಯೇಕ ಲೇಖನವನ್ನೇ ಮಾಡಿರುವೆ. ಅಲ್ಲಿ ನೀವು ಪ್ರಕಟಿಸಿರುವ ಮಂತ್ರಗಳು ಮತ್ತು ಅದರ ಅರ್ಥವನ್ನು ನಕಲು ಮಾಡಿ ನನ್ನ ಅನಿಸಿಕೆ ಮತ್ತು ವೇದಸುಧೆಯ ಓದುಗರಲ್ಲಿ ಮನವಿಯೊಂದನ್ನು ಮಾಡಿರುವೆ.ನಕಲು ಮಾಡಿ ಮಾಡಿರುವ ಲೇಖನಕ್ಕಾಗಿ ನಿಮ್ಮ ಕ್ಷಮೆ ಕೋರುವೆ.
ReplyDeleteತುಂಬಾ ಒಳ್ಳೆಯ ಕೆಲಸ, ಶ್ರೀಧರ್. ಕ್ಷಮೆ ಕೋರುವ ಅಗತ್ಯವಿತ್ತೆಂದು ನನಗೆ ಅನ್ನಿಸಿಲ್ಲ.
ReplyDelete-ಕ.ವೆಂ.ನಾಗರಾಜ್.