* ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ ಪ್ರತಿ ವರ್ಷ ಒಂದು ಕೋಟಿ ೨೫ ಲಕ್ಷಕ್ಕಿಂತಲೂ ಹೆಚ್ಚು ಮಂದಿ ಹೃದಯ ರೋಗಗಳಿಂದ ಸಾವನ್ನಪ್ಪುತ್ತಾರೆ.
* ಇದು ಈ ವರೆಗೆ ಪ್ರಪಂಚದಲ್ಲಿ ನಡೆದ ಎಲ್ಲಾ ಯುದ್ಧಗಳಲ್ಲೂ ಮರಣ ಹೊಂದಿದವರ ಒಟ್ಟು ಸಂಖ್ಯೆಗಿಂತ ಅತೀ ಹೆಚ್ಚು.
* ವಿಶೇಷವಾಗಿ ಅಭಿವೃದ್ಧಿ ಹೊಂದಿದ ದೇಶಗಳಲ್ಲೇ ಇದು ನಂ.೧ ಕಿಲ್ಲರ್!
* ಅತೀ ದುಬಾರೀ ಚಿಕಿತ್ಸೆ ಮತ್ತು ಆಧುನಿಕ ಶಸ್ತ್ರಚಿಕಿತ್ಸಾ ಕ್ರಮಗಳಿದ್ದರೂ ಕೂಡಾ ಸಾವಿನ ಸಂಖ್ಯೆ ನಿಯಂತ್ರಣವಾಗಿಲ್ಲ.
* ಆಧುನಿಕ ವೈದ್ಯಶಾಸ್ತ್ರದ ಪ್ರಕಾರ ಕೊಲೆಸ್ಟ್ರಾಲ್ ಒಂದೇ ಇದಕ್ಕೆ ಮೂಲ ಕಾರಣ. ಅಂತೆಯೇ ಅದನ್ನು ನಿಯಂತ್ರಿಸುವ ನಾನಾ ತರಹದ ಔಷಧಿಗಳು (statins) ಚಾಲ್ತಿಯಲ್ಲಿದ್ದು ಅವನ್ನೇ ಹೆಚ್ಚು ಹೆಚ್ಚು ಪ್ರಚುರ ಪಡಿಸಿ ರೋಗಿಗಳಿಗೆ ಸೂಚಿಸಲಾಗುತ್ತಿದೆ.
* ಬರೀ statin ಔಷಧಿಗಳನ್ನೇ ಮಾರಾಟ ಮಾಡುವ ೯ ಕಂಪನಿಗಳ ಒಟ್ಟು ಆದಾಯ ಉಳಿದ 490 Fortune-500 ಕಂಪನಿಗಳ ಒಟ್ಟು ಆದಾಯಕ್ಕಿಂತ ಹೆಚ್ಚು.
* ನಾನಾ ಮಾತ್ರೆಗಳ ಪರ್ವತಗಳನ್ನೇ ಸುರಿದರೂ (ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ) ಹೃದಯ ರೋಗ ಮಾತ್ರ ಕಾಳ್ಗಿಚ್ಚಿನಂತೆ ಹಬ್ಬುತ್ತಲೇ ಇದೆ.
* ಹೃದಯ ಶಾಸ್ತ್ರ, ಹಾಗಾಗಿ, ತಪ್ಪು ಕಾರಣದ ಹಿಂದೆ ಬಿದ್ದಿದೆ.
* ಡಾ:ನಾರ್ಟನ್ ಹಡ್ಲರ್, ಎಂ.ಡಿ., ಅವರ ಪ್ರಕಾರ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಅರ್ಥವೇ ಇಲ್ಲ. ಏಕೆಂದರೆ ಶೇ.೯೫ ಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಖಾಯಿಲೆ ಮರುಕಳಿಸುತ್ತದೆ.
* ಡಾ:ಜೂಲಿಯನ್ ವಿಟಾಖರ್, ಎಂ.ಡಿ., ರವರ ಪ್ರಕಾರ ಆಂಜಿಯೋಪ್ಲಾಸ್ಟಿ ಬಹು ಅಪಾಯಕಾರೀ ಚಿಕಿತ್ಸೆ. ಇದಕ್ಕೆ ಯಾವುದೇ ವೈಜ್ಞಾನಿಕ ತಳಹದಿಯಿಲ್ಲ. ಈ ವಿಧಾನವನ್ನು ಅಳವಡಿಸಿಕೊಂಡವರಲ್ಲಿ ಹೆಚ್ಚಿನ ಸಾವಿನ ಪ್ರಮಾಣ, ಹೆಚ್ಚಿನ ಮರುಕಳಿಸಿದ ಹೃದಯಾಘಾತ ಮತ್ತು ಪುನ: ಶಸ್ತ್ರಚಿಕಿತ್ಸೆಯ ಅವಶ್ಯಕತೆ ಕಂಡು ಬಂದಿದೆ.
* ಅನೇಕ ಹೃದಯ ತಜ್ಞರು ಅನವಶ್ಯವಾಗಿ ರೋಗಿ ಮತ್ತು ಅವರ ಆಪ್ತರನ್ನು ಕೂಡಲೇ ಸರ್ಜರಿ ಮಾಡದಿದ್ದರೆ ಅಪಾಯ ಎಂದು ಹೇಳಿ ಭಯ ಹುಟ್ಟಿಸುತ್ತಾರೆ. ಡಾ: ವಿಟಾಖರ್ ರವರು ಪ್ರಸಿದ್ಧ ವೈದ್ಯಕೀಯ ಪತ್ರಿಕೆಯಲ್ಲಿ ಬರೆಯುತ್ತಾ ಅಂತಹ ಶೇ.೯೮.೪ ಕ್ಕಿಂತ ಹೆಚ್ಚಿನವರು ಸರ್ಜರಿ ಇಲ್ಲದೇ ಆರೋಗ್ಯವಾಗಿರುವ ವಿಚಾರವನ್ನು ಸ್ಪಷ್ಟಪಡಿಸುತ್ತಾರೆ.
* ಹಾರ್ವರ್ಡ ವೈದ್ಯಕೀಯ ಸಂಸ್ಥೆಯ ಡಾ: ಥಾಮಸ್ ಗ್ರಾಬೋಸ್ ರವರು ಒಂದು ವಿಮರ್ಶಾತ್ಮಕ ಸಂಶೋಧನೆ ನಡೆಸಿದರು. ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಲ್ಪಟ್ಟ ಸುಮಾರು ೧೬೮ ಪ್ರಕರಣಗಳಲ್ಲಿ ಅವರು ಪುನರ್-ಪರಿಶೀಲಿಸಿದಾಗ ಕೇವಲ ೬ ಜನ ಮಾತ್ರಾ ಅಂತಹ ಅತೀ ದುಬಾರಿ ಮತ್ತು ಮಾರಣಾಂತಿಕ ಶಸ್ತ್ರಚಿಕಿತ್ಸೆಗೆ ಅರ್ಹರೆಂಬುದು ಬೆಳಕಿಗೆ ಬಂತು. ಈ ಒಂದು ಅನೈತಿಕ ವ್ಯಾಪಾರೀಕರಣದ ಪ್ರವೃತ್ತಿ ಅಮೆರಿಕದ ಒಂದು ದೊಡ್ಟ ನಾಟಕ ಎಂದು ಡಾ:ಮೈಕೇಲ್ ಓಜ್ನರ್ ಎಂ.ಡಿ. ಖಂಡಿಸಿದ್ದಾರೆ.
* ೧೯೭೭ ರಿಂದ ಸತತವಾಗಿ ನಡೆಸಿದ ಸಂಶೋಧನೆಗಳಿಂದ ಸ್ಪಷ್ಟವಾಗುವ ಅಂಶವೆಂದರೆ, ಬೇರೆ ಚಿಕಿತ್ಸೆಗಳಿಗಿಂತ ಹೃದಯ ಶಸ್ತ್ರಚಿಕಿತ್ಸೆಯಿಂದ ಉಂಟಾಗುತ್ತಿರುವ ಅನಾಹುತಗಳೇ ಹೆಚ್ಚು.
* ಶಸ್ತ್ರಚಿಕಿತ್ಸೆಯೇ ಅಂತಿಮ ಪರಿಹಾರ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಂಶೋಧನೆಗಳ ಆಧಾರವಿಲ್ಲ. ಆದರೆ ಇದರ ಬಗ್ಗೆ ವ್ಯಾಪಾರೀಕರಣದ ಏಕೈಕ ಗುರಿಯುಳ್ಳವರು ಇದೇ ಅಂತಿಮ ಎಂದು ದಾರಿ ತಪ್ಪಿಸುತ್ತಿದ್ದಾರೆ.
* ಡಾ; ವಿಲಿಯಮ್ ಇ. ಬೊಡೆನ್, ಎಂ.ಡಿ., ರವರು ಲಘು ಹೃದಯಾಘಾತವಾಗಿ ಶಸ್ತ್ರಚಿಕಿತ್ಸೆ ಸೂಚಿಸಲ್ಪಟ್ಟ ಸುಮಾರು ೯೨೦ ರೋಗಿಗಳ ಪ್ರಕರಣಗಳನ್ನು ಪರಿಶೀಲನೆಗೆ ಎತ್ತಿಕೊಂಡರು. ಸುಮಾರು ೨ ೧/೨ ವರ್ಷಗಳ ಕಾಲ ಸಂಶೋಧನೆ ನಡೆಸಿದರು. ಅವರಲ್ಲಿ ೪೫೮ ಜನರಿಗೆ ಔಷಧಿಗಳನ್ನು ನೀಡಲಾಯಿತು ಮತ್ತು ಕಾಲಕಾಲಕ್ಕೆ ಟ್ರೆಡ್ ಮಿಲ್ ನಂತಹ ಬಾಹ್ಯ ಸರಳ ಪರೀಕ್ಷೆಗಳನ್ನು ನಡೆಸಲಾಯಿತು. ಉಳಿದ ೪೬೨ ಜನ ಆಂಜಿಯೋಗ್ರಾಂ ಬಳಿಕ ಆಂಜಿಯೋಪ್ಲಾಸ್ಟಿ ಅಥವಾ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದರು.
ಫಲಿತಾಂಶಗಳು ಅಚ್ಚರಿ ಮೂಡಿಸುವಂತಿತ್ತು. ಮೊದಲ ೯ ದಿನಗಳಲ್ಲೇ ಶಸ್ತ್ರಚಿಕಿತ್ಸೆಗೊಳಗಾದ ೨೧ ರೋಗಿಗಳು ಸತ್ತರು. ಬರೀ ಔಷಧೋಪಚಾರ ಪಡೆದವರಲ್ಲಿ ಕೇವಲ ೬ ಮಂದಿ ಮೃತರಾದರು.
೨ ೧/೨ ವರ್ಷಗಳ ನಂತರ ಶಸ್ತ್ರಚಿಕಿತ್ಸೆಗೊಳಗಾದವರಲ್ಲಿ ೮೦ ಜನ ಮೃತಪಟ್ಟರೆ, ಬರೀ ಔಷಧೋಪಚಾರ ಪಡೆದ ವರ್ಗದಲ್ಲಿ ಕೇವಲ ೫೯ ಜನ ಮಾತ್ರ ಮೃತರಾದರು.
* ಆದುದರಿಂದ ಶಸ್ತ್ರಚಿಕಿತ್ಸೆಯೇ ಅಂತಿಮ ಪರಿಹಾರ ಎನ್ನುವ ಈಗಿನ ಪ್ರವೃತ್ತಿ ಕೇವಲ ಒಂದು ಢೋಂಗಿತನ. ಸತ್ಯ ಮೇಲಿನ ಸಂಶೋಧನೆಯಿಂದ ಸ್ಷಷ್ಟವಾಗುತ್ತದೆ.
* ಡಾ:ಡ್ವೈಟ್ ಲಂಡೆಲ್, ಖ್ಯಾತ ಹೃದಯತಜ್ಞ, ಇವರು ಬರೆದ The Cure for Heart Diseases ಮತ್ತುe-book : The Great Cholesterol Lie ನಲ್ಲಿ ಹೃದಯ ಶಸ್ತ್ರಚಿಕಿತ್ಸೆಗಳ ಮತ್ತು ಸ್ಟ್ಯಾಟಿನ್ ಔಷಧಿಗಳ ಅರ್ಥಹೀನತೆಯನ್ನು ವಿವರಿಸಿದ್ದಾರೆ. ಹೃದಯ ಶಸ್ತ್ರಚಿಕಿತ್ಸಕರಾಗಿ ಅವರ ದಿನಾದಾಯ ರೂ.೫೦ ಲಕ್ಷ ವಿತ್ತು. ಆದರಿಂದು ಪ್ರತಿ ರೋಗಿಗೆ ಕೇವಲ ರೂ.೫೦ ರಂತೆ (ಸರಳ ಔಷಧಿಗಳನ್ನು ಸೂಚಿಸಿ) ಪಡೆದು ಸಂತಸ ಕಂಡುಕೊಂಡಿದ್ದಾರೆ.
ಅಮೆರಿಕನ್ ಹಾರ್ಟ ಅಸೋಷಿಯೇಷನ್ ಮತ್ತು ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿಯ ಫೆಲೋ ಮತ್ತು ಮಂಡಳಿ ಪ್ರಮಾಣಿತ ಹೃದಯತಜ್ಞರಾದ ಡಾ: ಮೈಕೇಲ್ ಓಜನರ್, ಎಂ.ಡಿ., ರವರು ತಮ್ಮ ಪುಸ್ತಕ: The Great American Heart Hoax ನಲ್ಲಿ ಹೀಗೆ ಬರೆದಿದ್ದಾರೆ:
- ೧೯೭೦ ರ ಅಂತ್ಯದಲ್ಲಿ ಮತ್ತು ೧೯೮೦ ರ ಪೂರ್ವದಲ್ಲಿ ನಡೆಸಿದ ಸಂಶೋಧನೆಗಳ ರೀತ್ಯಾ ಸಾಂಪ್ರದಾಯಿಕ ಚಿಕಿತ್ಸೆಗಳು ಬೈ-ಪಾಸ್ ಸರ್ಜರಿಗಿಂತ ಹೆಚ್ಚು ಪರಿಣಾಮಕಾರಿ.
- ಶಸ್ತ್ರಚಿಕಿತ್ಸೆಗೆ ಒಳಗಾದವರು ಶಸ್ತ್ರಚಿಕಿತ್ಸೆಗೆ ಒಳಗಾಗದವರಿಗಿಂತ ಹೆಚ್ಚು ಕಾಲ ಬದುಕಲಿಲ್ಲ ಮತ್ತು ಹೆಚ್ಚಿನ ಮರುಕಳಿಸಿದ ಹೃದಯಾಘಾತಗಳನ್ನು ಎದುರಿಸಿದ್ದರು.
- ಆಂಜಿಯೋಪ್ಲಾಸ್ಟಿ ಸಹ ಹೆಚ್ಚಿನ ಉತ್ತೇಜನಕರ ಫಲಿತಾಂಶ ತೋರಲಿಲ್ಲ. ಬದಲಾಗಿ ಅದು ಮರಣದ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಿತ್ತು.
- ಡಾ: ಓಜನರ್ ಪ್ರಕಾರ ಸ್ಟೆಂಟ್ ಗಳು (ಸ್ವದೇಶಿ - ವಿದೇಶೀ ಎಂದು ಹೇಳಿ ದೊಡ್ಡ ಮೊತ್ತ ಕೀಳುವ ದಂಧೆ - ಸ್ಟಂಟು!) ಕೂಡಾ ಅನುಪಯುಕ್ತ ಮತ್ತು ಅಪಾಯಕಾರಿ. ಅದರ ಅಳವಡಿಕೆಯಿಂದ ಮರುಕಳಿಸುವ ಹೃದಯಾಘಾತ ಮತ್ತು ಹೃದಯ ಸ್ತಂಭನ ಪ್ರಕರಣಗಳೇ ಹೆಚ್ಚು. ಸ್ಟೆಂಟ್ ಅಳವಡಿಸಿದ ೧/೩ ರಷ್ಟು ಜನರಲ್ಲಿ ೬ ತಿಂಗಳೊಳಗೆ ರಕ್ತನಾಳದ ಬ್ಲಾಕೇಜ್ (ತಡೆ) ಪುನ: ಕಾಣಿಸಿಕೊಂಡಿದೆ. ಸ್ಟೆಂಟ್ ಹಾಕಿದ ಭಾಗದಲ್ಲಿ ಅನಿರೀಕ್ಷಿತವಾಗಿ ರಕ್ತ ಹೆಪ್ಪುಗಟ್ಟಿ ತಕ್ಷಣ ಹೃದಯ ಸ್ತಂಭನ ಆಗುವ ಸಂದರ್ಭಗಳೂ ಹೆಚ್ಚು.
* ಅಮೆರಿಕನ್ ಹಾರ್ಟ ಅಸೋಷಿಯೇಷನ್ ಮತ್ತು ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿಯನ್ನು ಬೆಂಬಲಿಸುವ ಅನೇಕ ವೈದ್ಯರು ಶಸ್ತ್ರಚಿಕಿತ್ಸೆ ಬಿಟ್ಟರೆ ಅನ್ಯಮಾರ್ಗವಿಲ್ಲ ಎಂಬುದನ್ನು ಬಿಟ್ಟರೆ, ಉಳಿದ ಮತ್ತು ಸಾಕಷ್ಟು ಪುರಾವೆ ಸಹಿತ ಒದಗಿಸಿದ ಅನ್ಯ ಮಾರ್ಗಗಳನ್ನು, ಅವರು ಒಪ್ಪಲು ತಯಾರಿಲ್ಲ. ಕಾರಣ ಸುಸ್ಪಷ್ಟ. ಕೇವಲ ಹಣ ಮಾಡುವ ದಂಧೆ ಮತ್ತು ದುರುದ್ದೇಶ.
* ರಕ್ತನಾಳಗಳಲ್ಲಿ ಉಂಟಾಗುವ ಅನೇಕ ಸಣ್ಣಸಣ್ಣ ಬ್ಲಾಕ್ ಗಳನ್ನು ತಾನಾಗೆ ಸರಿಪಡಿಸಿಕೊಳ್ಳುವ ಸ್ವಾಭಾವಿಕ ವ್ಯವಸ್ಥೆ ನಮ್ಮ ದೇಹದೊಳಗೇ ಇದೆ. ಅದು ಹಾಗಾಗದಾದಾಗ ಹೃದಯಾಘಾತವಾಗುವ ಸಂಭವ ಇರುತ್ತದೆ.
* ವಿಶೇಷವಾಗಿ ದೊಡ್ಡ ರಕ್ತನಾಳಗಳು ಬ್ಲಾಕ್ ಆಗಿ ಒಡೆಯುವ ಸಂದರ್ಭಗಳು ಅತೀ ವಿರಳ. ಆದರೆ ಅದು ಹಾಗಾಗಿದೆ ಎಂದು ಸ್ವಾರ್ಥ ಉದ್ದೇಶಕ್ಕಾಗಿ ಹೆದರಿಸುವ ವೈದ್ಯರೇ ಬಹು ಮಂದಿ.
* ಮತ್ತೊಂದು ವಿಶೇಷ ಅಂಶವೆಂದರೆ ದೊಡ್ಡ ರಕ್ತನಾಳಗಳು ಬ್ಲಾಕ್ ಆದರೂ ಸಹಜವಾಗಿಯೇ ಪರ್ಯಾಯ ರಕ್ತನಾಳಗಳು (collateral new blood vessels) ಬ್ಲಾಕ್ ನ್ನು ಬಳಸಿ ಬೇರೆ ಸಂಪರ್ಕ ಕಲ್ಪಿಸಿಬಿಡುತ್ತವೆ. ಇದನ್ನೇ ಡಾ: ಓಜನರ್ ರವರು ಸಹಜ ಬೈ-ಪಾಸ್ ಎಂದು ಕರೆಯುತ್ತಾರೆ. ಈ ಅಂಶವನ್ನೂ ಸಹ ವೈದ್ಯರು ರೋಗಿಗಳಲ್ಲಿ ಮರೆ ಮಾಚುತ್ತಾರೆ.
* ನೀವು ಜೀವಂತ ಬಾಂಬ್ ಮೇಲೆ ಇದ್ದೀರಿ, ನೀವು ಯಾವುದೇ ಕ್ಷಣ ಸಾಯಬಹುದು ಇತ್ಯಾದಿ ಬೆದರಿಕೆಗಳನ್ನು ಶಸ್ತ್ರಚಿಕಿತ್ಸೆ ಬೇಡವೆನ್ನುವ ಅನೇಕರಿಗೆ ವೃತ್ತಿ-ನಿಯತ್ತು ಇಲ್ಲದ ಮತ್ತು ಕಪಟ ವೈದ್ಯರು ಹಾಕುತ್ತಾರೆ. ಉತ್ತಮ ವೈದ್ಯರು ಸಾಕಷ್ಟಿದ್ದಾರೆ. ಆದರೆ ಹಣಕ್ಕಾಗಿಯೇ ವೈದ್ಯ ಮಾಡುವ ವೃತ್ತಿ-ದ್ರೋಹಿಗಳು ಅವರಿಗಿಂತ ಹೆಚ್ಚಾಗಿದ್ದಾರೆ.
* ಡಾ: ವಿಟಾಖರ್ ರವರ ಪ್ರಕಾರ ಇಂತಹ ಮತಿಹೀನ ಚಿಕಿತ್ಸೆಗಳಿಂದ ಅಮೇರಿಕೆಯಲ್ಲೇ ಪ್ರತಿ ವರ್ಷ ೩೩,೦೦೦ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದು ಸಾವಲ್ಲ; ವ್ಯವಸ್ಥಿತ ಹರಣ. ಏಕೆಂದರೆ ಈ ಫಾರ್ಮ ಲಾಬಿ ನಮ್ಮನ್ನು ಹೆದರಿಸಿ, ವಸ್ತುಸ್ಥಿತಿ ಮರೆಮಾಚಿ ಸದಾ ಕತ್ತಲೆಯಲ್ಲೇ ಇಡಲು ನಿರಂತರ ಶ್ರಮಿಸುತ್ತಿದೆ.
* ಶಸ್ತ್ರ ಚಿಕಿತ್ಸೆಯಿಲ್ಲದ ಸರಳ ಉಪಾಯವನ್ನು ಎರಡು ಬಾರಿ ನೊಬೆಲ್ ಪ್ರಶಸ್ತಿ ಪಡೆದ ಡಾ: ಲಿನಸ್ ಪಾಲಿಂಗ್ ರವರು ತಿಳಿಸಿದ್ದಾರೆ. ಈಗಿನ ಕಟ್ಟು ಕಥೆಗಳೆಲ್ಲ ಫಾರ್ಮ ಲಾಬಿ ಮತ್ತು ಹೃದಯ ಹೀನ ಹೃದಯ ಸಂಸ್ಥೆಗಳ ಲಾಬಿ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಜೀವನಶೈಲಿಯ ಸೂಕ್ತ ಬದಲಾವಣೆಯೇ ಈ ಅಪಾಯವನ್ನು ಅತೀ ಪರಿಣಾಮಕಾರಿಯಾಗಿ ಎದುರಿಸಬಲ್ಲದು ಮತ್ತು ವಿಟಮಿನ್-ಸಿ ಕೂಡಾ ಅತೀ ಸಹಾಯಕಾರಿ.
* ಈ ಖಾಯಿಲೆ ಇಷ್ಟು ಭಯಾನಕವಾಗಿ ಇಂದಿಗೂ ಇರಲು ಫಾರ್ಮ ಲಾಬಿ ಮತ್ತು ಅದರಿಂದ ಅನಾಯಾಸವಾಗಿ ಲಾಭ ಮಾಡಿಕೊಳ್ಳುತ್ತಿರುವ ಸ್ವಾರ್ಥೀ ವೈದ್ಯರುಗಳೇ ಪ್ರಮುಖ ಕಾರಣ. ಅವರಿಗೆ ಸತ್ಯ ತಿಳಿಯುವ ಹಂಬಲವಿಲ್ಲ; ಬಯಕೆಯೂ ಇಲ್ಲ. ಆದರೆ ಅವರಿಗೆ ಸತ್ಯವನ್ನೆದುರಿಸುವ ಭಯವಿದೆ (ಏಕೆಂದರೆ ಅದು ಅವರ ಆದಾಯದ ಮೇಲೆ ಪರಿಣಾಮ ಬೀರಲಿದೆ). ಆದರೆ ಇಂತಹ ಸುಶಿಕ್ಷಿತ, ಪ್ರಜ್ಞಾವಂತ ಮತ್ತು ಆರ್ಥಿಕವಾಗಿ ಸದೃಢರಾದ ಈ ವರ್ಗವೇ (ವೈದ್ಯರುಗಳೇ) ಸತ್ಯದ ಈ ಬೆಳಕನ್ನು ಏಕೆ ಕಂಡೂ ಕಾಣದಂತಿದ್ದಾರೆಂಬುದೇ ಯಕ್ಷ ಪ್ರಶ್ನೆ!
[Bhavans Journal – June 30, 2011 – Article: The Healers and the Killers by G.A. Mahew]
ಸಾರಾಂಶ ಕನ್ನಡದಲ್ಲಿ: ಕವಿ ವೆಂ. ಸುರೇಶ್, ಶಿವಮೊಗ್ಗ.
ಹೃದಯ ನಿಮ್ಮದೇ : ಅದರ ಹೊಣೆಯೂ ನಿಮ್ಮದೇ : ತೀರ್ಮಾನ ನಿಮ್ಮ ಕೈಯಲ್ಲಿದೆ.
ತುಂಬಾ ಉಪಯುಕ್ತ ಲೇಖನ.ಧನ್ಯವಾದಗಳು,ಸುರೇಶ್. ಜೀವನಶೈಲಿಯ ಸೂಕ್ತ ಬದಲಾವಣೆಯೇ ಈ ಅಪಾಯವನ್ನು ಅತೀ ಪರಿಣಾಮಕಾರಿಯಾಗಿ ಎದುರಿಸಬಲ್ಲದು-ಎಂಬ ಮಾತು ನೂರಕ್ಕೆ ನೂರು ಸತ್ಯ. ನಮ್ಮ ಋಷಿಮುನಿಗಳು ಎಂತಹಾ ಉತ್ಕೃಷ್ಟ ದಾರಿ ತೋರಿಸಿದ್ದಾರೆ! ಅದನ್ನು ಬಿಟ್ಟು ಪಶ್ಚಿಮದ ಕಡೆಗಿರುವ ನಮ್ಮ ಆಕರ್ಷಣೆಯೇ ಎಲ್ಲಾ ಸಮಸ್ಯೆಗಳಿಗೆ ಮೂಲವಾಗಿದೆ.ನಿಜವಾಗಲೂ ಹೃದಯ ರೋಗವನ್ನೂ ನಮ್ಮ ವಿಕೃಉತ ಜೀವನ ಶೈಲಿಯಿಂದ ತಂದುಕೊಂಡು ಇಂತಹ ನೀಚ ವೈದ್ಯರಿಗೆ ನಮ್ಮನ್ನು ಬಲಿಕೊಡುತ್ತಿರುವುದು ನಮ್ಮ ದುರ್ದೈವ.
ReplyDeleteಸುರೇಶ್ ಸಾಹೇಬರೇ ಬರಹ ಇಷ್ಟವಾಯಿತು, ಇದು ಸದ್ಯದ ಪರಿಸ್ಥಿತಿ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಭಾರತೀಯ ಮೂಲದ ಯೋಗ, ಆಯುರ್ವೇದ, ಆಹಾರ ಪದ್ಧತಿ, ಆಚರಣೆಗಳನ್ನು ಧಿಕ್ಕರಿಸಿ ಬೇರೇ ಹಲವನ್ನು ಆತುಕೊಂಡ ಜನರಿಗೆ ತಲುಪಬೇಕಾದ ಅಂಶ. ಅಂದಹಾಗೇ ಆ ತರಗತಿಯ ಜನರೇ ಇಂದು ಜಾಸ್ತಿ ಇದ್ದಾರೆ ಅಲ್ವೇ?
ReplyDeleteಖಂಡಿತಾ ಹೌದು. ಕುರಿ ಕಟುಕನನ್ನೇ ನಂಬುವಂತೆ,ಹೆಚ್ಚು ಹೆಚ್ಚು ಫೀ ಹಾಕಿ, ಅನವಶ್ಯಕ ಪರೀಕ್ಷೆ ಮತ್ತು ಮದ್ದುಗಳನ್ನು ಸೂಚಿಸುವ ವೈದ್ಯರನ್ನೇ ಸುಶಿಕ್ಷಿತರೂ ನಂಬುತ್ತಿರುವುದು ಇಂದಿನ ವಿಪರ್ಯಾಸ. ತಕ್ಷಣ ಪರಿಹಾರ ಪಡೆಯುವ ತವಕದಲ್ಲಿ ಶಾಶ್ವತವಾದ ತೊಂದರೆಯನ್ನು ಆಹ್ವಾನಿಸುವುದು ಎಷ್ಟು ಸೂಕ್ತ?
ReplyDeleteಡಾ|| ದೀಪಕ್ ಅವರು ತಮ್ಮ ಬರಹ ಮುಂದುವರೆಸಲು ತಿಳಿಸಿ, ಸುರೇಶ್
ReplyDeleteಎಲ್ಲರಿಗೂ ಧನ್ಯವಾದಗಳು. ಪುನ: ಸ್ಪಷ್ಟ ಪಡಿಸುತ್ತೇನೆ. ಇದು ನನ್ನ ಲೇಖನವಲ್ಲ. ಕೇವಲ ಮೂಲಲೇಖನದ ಕನ್ನಡಕ್ಕೆ ಅನುವಾದಿತ ಸಾರಾಂಶ ಅಷ್ಟೆ.
ReplyDelete'ವೇದಜೀವನ' ದಲ್ಲಿ ಆಯುರ್ವೇದ ಲೇಖನ ಮುಂದುವರಿದಿದೆ.