Pages

Tuesday, August 2, 2011

ನಿಮ್ಮ ಸಲಹೆ ಏನು?

ವೇದಸುಧೆಯ ಆತ್ಮೀಯ ಗೆಳೆಯರೇ,
ನಿಮ್ಮೆಲ್ಲರ ಸಹಕಾರದಿಂದ ವೇದಸುಧೆಗೆ ಭೇಟಿ ನೀಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೇ ವರ್ಷ ಜನವರಿ ೩೧ ರಂದು ನಡೆದ ವಾರ್ಷಿಕೋತ್ಸವ ಸಂದರ್ಭಕ್ಕೆ ೨೫ ಸಹಸ್ರ ದಾಟಿದ್ದ ಸಂಖ್ಯೆಯು ಇದೀಗ ಆರು ತಿಂಗಳಲ್ಲಿ ೧೬ ಸಹಸ್ರ ಹೆಚ್ಚಿದ್ದು ಇದೀಗ ಸಂಖ್ಯೆ ೪೧ ಸಹಸ್ರ ದಾಟಿದೆ.ವೇದಸುಧೆಯಿಂದ ಜನರು ಹೆಚ್ಚು ಅಪೇಕ್ಷೆ ಪಡುತ್ತಿರುವುದು ಗಮನಕ್ಕೆ ಬಂದಿದೆ. ಶ್ರೀ ಸುಧಾಕರಶರ್ಮರ ಉಪನ್ಯಾಸಗಳು,ಕವಿನಾಗರಾಜರು ಬರೆಯುತ್ತಿರುವ ವೇದೋಕ್ತ ಜೀವನಪಥ,ಸುಬ್ರಹ್ಮಣ್ಯರು ಬರೆಯುತ್ತಿರುವ ವಿವೇಕಚೂಡಾಮಣಿ,ಬ್ರಹ್ಮಚಾರಿ ಸುಧರ್ಮ ಚೈತನ್ಯರ ಉಪನ್ಯಾಸ [ಶ್ರೀ ಶಂಕರಾಚಾರ್ಯ ವಿರಚಿತ ಸಾಧನಾ ಪಂಚಕಮ್]ಹಾಗೂ ಇನ್ನೂ ಹಲವು ಬರಹಗಳು ಮತ್ತು ಆಡಿಯೋಗಳು ಯಾವತ್ತಿಗೂ ಪ್ರಸ್ತುತವೇ ಆಗಿವೆ. ಆದ್ದರಿಂದ ಇಂದು ಬರೆದ ಲೇಖನಗಳು ನಾಳೆಗೆ ಹಳೆತಾಗಿ ಮರೆತುಬಿಡುವ ಲೇಖನಗಳಲ್ಲ. ವೇದಸುಧೆಯ ಹಲವಾರು ಹಳೆಯ ಲೇಖನಗಳನ್ನು ನಿತ್ಯವೂ ಓದುತ್ತಿರುವ ಅಭಿಮಾನಿಗಳಿದ್ದಾರೆ.ಎಂದೋ ಮಾಡಿರುವ ಉಪನ್ಯಾಸಗಳನ್ನು ಇಂದು ಕೇಳುತ್ತಿರುವ ಬಂಧುಗಳಿದ್ದಾರೆ. ಆದ್ದರಿಂದ ವೇದಸುಧೆಯಲ್ಲಿ ಪ್ರಕಟವಾಗಿರುವ ಬಹುಪಾಲು ಹಳೆಯ ಲೇಖನಗಳನ್ನು ಜನರು ಹುಡುಕಿ ಓದುತ್ತಿರುವ ಉಧಾಹರಣೆಗಳು ಗಮನಕ್ಕೆ ಬಂದಿದೆ. ಅಷ್ಟೇ ಅಲ್ಲ, ವಿದೇಶಗಳಲ್ಲಿರುವ ಹಲವಾರು ಕನ್ನಡಿಗರು ನಿತ್ಯವೂ ತಪ್ಪದೆ ವೇದಸುಧೆಯನ್ನು ನೋಡುವ ಅಭ್ಯಾಸವಿಟ್ಟುಕೊಂಡಿರುತ್ತಾರೆ. ಇಷ್ಟೆಲ್ಲಾ ನಿಮ್ಮ ಗಮನಕ್ಕೆ ತಂದ ಕಾರಣವೇನೆಂದರೆ ವೇದಸುಧೆಯ ಬಳಗದಲ್ಲಿರುವ ನಿಮ್ಮೆಲ್ಲರಿಗೂ ವೇದಸುಧೆಯ ಚಟುವಟಿಕೆಗಳು ತಿಳಿದಿರಬೇಕು. ಕಾಲಕಾಲಕ್ಕೆ ಸಲಹೆಗಳನ್ನು ಕೊಡುತ್ತಿರಬೇಕು.ಸಾಧ್ಯವಾದರೆ ಎಲ್ಲರೂ ವರ್ಷದಲ್ಲಿ ಒಂದೆರಡು ಭಾರಿ ಕುಳಿತು ವೇದಸುಧೆಯ ಮುಂದಿನ ಚಟುವಟಿಕೆಗಳ ಬಗ್ಗೆ ಚರ್ಚಿಸಬೇಕು.ವೇದಸುಧೆಯ ಲೇಖಕ ಬಳಗದಲ್ಲಿ ಈಗಾಗಲೇ ಇಪ್ಪತ್ತಾರು ಲೇಖಕರಿದ್ದಾರೆಂಬುದೂ ಕೂಡ ಅಭಿಮಾನದ ಸಂಗತಿಯೇ ಆಗಿದೆ.ಈಗ ನಿಮ್ಮಲ್ಲೊಂದು ಮನವಿ.ವೇದಸುಧೆಯಲ್ಲಿ ನಿಮಗೆ ಹೆಚ್ಚು ಇಷ್ಟವಾದ ಮಾಲಿಕೆ ಯಾವುದು? ವೇದಸುಧೆಗೆ ನಿಮ್ಮ ಸಲಹೆ ಏನು? ನಿಮ್ಮ ಸಾಲುತ್ತರ ನಿರೀಕ್ಷೆಯಲ್ಲಿ..
ಅಂದಹಾಗೆ ನಿಮ್ಮ ವೈಯಕ್ತಿಕ ಬ್ಲಾಗ್ ಇದ್ದರೆ ಅದರ ಕೊಂಡಿ ಕಳುಹಿಸಿಕೊಡಿ.ಸಮಾನ ಮಾನಸಿಕ ಬ್ಲಾಗಿಗರ ಒಂದು ಗುಂಪುರಚಿಸೋಣ.
-ಹರಿಹರಪುರಶ್ರೀಧರ್
ಸಂಪಾದಕ,ವೇದಸುಧೆ
-----------------------------------------------------------
ಕೆಲವು ಸಲಹೆಗಳು ಬಂದಿವೆ. ಇನ್ನು ಕೆಲವು ಮುಂದೆ ಬರುವ ನಿರೀಕ್ಷೆ ಇದೆ. ಬಂದಿರುವ ಮೇಲ್ ಗಳನ್ನೂ ಎಲ್ಲರ ಗಮನಕ್ಕಾಗಿ ಪ್ರಕಟ ಪಡಿಸಲಾಗಿದೆ.

ಸಲಹೆ-1:
ಮಾನ್ಯ ಶ್ರೀಧರ್ ಅವರೇ,
ವೇದಸುಧೆಯಲ್ಲಿ ಎಲ್ಲವೂ ಒಂದಿಲ್ಲೊಂದು ಕಾರಣಕ್ಕೆ ಇಷ್ಟವಾಗಿದೆ. ನನ್ನ ಒಂದೇ ಒಂದು ಸಲಹೆ ಏನೆಂದರೆ ವೇದಸುಧೆಯಲ್ಲಿ ಹೊಸ ಲೇಖನಗಳು ಬಂದಂತೆಲ್ಲಾ ಫೇಸ್ ಬುಕ್ ನಲ್ಲಿ ಅಪ್ ಡೇಟ್ ಆಗುವಂತಾದರೆ ಇನ್ನೂ ಹೆಚ್ಚು ಜನರನ್ನು ತಲುಪಬಹುದು ಅನಿಸುತ್ತದೆ. ಅಲ್ಲದೆ ಬ್ಲಾಗ್ ನಲ್ಲಿ ಲೈವ್ ಚರ್ಚೆಗಳು ನಡೆಯುವುದು ಅಪರೂಪ. ಫೇಸ್ ಬುಕ್ ನಲ್ಲಾದರೆ ಅಪ್ಡೇಟ್ ಗಳನ್ನು ಯಾರು ಬೇಕಾದರೂ ಶೇರ್ ಮಾಡಿ ಚರ್ಚೆ ಕೂಡಾ ನಡೆಸಬಹುದು. ಏನಂತೀರಿ?

ಸಲಹೆ-2:
ವೇದಸುಧೆಯ ಫೇಸ್ಬುಕ್ ಅಕೌಂಟ್ಗೆ (ಇದ್ದರೆ) access ಸಿಕ್ಕರೆ ಕೆಲಸವನ್ನು ನಾನು ಮಾಡಬಲ್ಲೆ.
-Prasanna SP

ಸಲಹೆ-3:
ಮಾನ್ಯರೇ,
ಈಗಾಗಲೇ ಬಹು ಜನರು ಬಹು ವಿಧವಾಗಿ ಮೆಚ್ಚುವಂಥ
ವೇದಸುಧೆತುಂಬಾ ಒಳ್ಳೆ ಪ್ರಯತ್ನ.
ನನ್ನ ಮನವಿ ಎಂದರೆ
ವೇದಸುಧೆ ಪ್ರವಚನ ಮತ್ತು ಮಾಹಿತಿಗಳ ಧ್ವನಿ ಮುದ್ರಿಕೆ :-)
ಸಾಧ್ಯವಾದರೆ ಬೆಂಗಳೂರಿನಲ್ಲೂ ಸತ್ಸಂಗಗಳ ಆಯೋಜನೆ.
ವಂದನೆಗಳೊಂದಿಗೆ
-ಸ್ವರ್ಣ


No comments:

Post a Comment