Pages

Tuesday, September 13, 2011

ಮಾಯೆ-೩

ಬ್ರಹ್ಮನನು ಅರಿತಿಲ್ಲ.. ನಾ ಬ್ರಾಹ್ಮಣನಲ್ಲಾ..
ಜನಿವಾರವಿಹುದಲ್ಲಾ.. ಅದ ನಾ ಕಿತ್ತೊಗೆದಿಲ್ಲ..
ಸ೦ಸ್ಕಾರವಿದಯ್ಯಾ.. ನಾಮದಲಿ ನಾ ದ್ವಿಜ..
ಸ೦ಸ್ಕಾರದೊಳೂ ಕಾಣುವರು ಬ್ರ್ತಹ್ಮನನು
ಎನ್ನ೦ತರ೦ಗದೇವಾ.. ನಾನಾವ ಬ್ರಾಹ್ಮಣನಯ್ಯ..
ನಿನ್ನರಿಯಲಾಗದವನು...

ಕಣ್ಣಿದ್ದವರೆಲ್ಲಾ ಕಾಣಲಾರರಯ್ಯಾ...
ಬಾಯಿದ್ದವರೆಲ್ಲಾ ಮಾತಾಡರಯ್ಯಾ..
ಆ೦ತರ್ಯದಾ ಚಕ್ಷುಗಳಿ೦ದ ಕಾಣಲು
ನೀನಾರೆ೦ಬುದನು ಅರಿವೆವಯ್ಯಾ..
ಕಣ್ಣಿದ್ದರೂ ಎನಗೆ ಎನ್ನ ರೂಪವು ಕಾಣಿಸದಯ್ಯಾ..
ಎನ್ನ೦ತರ೦ಗದೇವಾ..ನಿನ್ನನ್ನರಿವ ಚಕ್ಷುಗಳ ನೀಡಯ್ಯಾ..

3 comments:

  1. [ಕಣ್ಣಿದ್ದವರೆಲ್ಲಾ ಕಾಣಲಾರರಯ್ಯಾ...]ನೋಡಲಾರರಯ್ಯಾ, ಎಂಬುದು ಸೂಕ್ತವಿರಬಹುದು

    [ನಿನ್ನನ್ನರಿವ ಚಕ್ಷುಗಳ ನೀಡಯ್ಯಾ..]ದೃಢ ಸಂಕಲ್ಪ ಮಾಡಿ ,ಬದುಕನ್ನು ಸರಳಗೊಳಿಸಿ
    ಆತ್ಮವತ್ ಸರ್ವ ಭೂತೇಶು-ಎಂಬುದನ್ನರಿತರೆ ಭಗವಂತನರಿಯಲು ಕಷ್ಟವಿಲ್ಲ ಅಲ್ಲವೇ?

    ReplyDelete
  2. ಸೊಗಸಾಗಿದೆ, ನಾವಡರೇ.

    ReplyDelete
  3. ಬೌದ್ಧಿಕ ಸಂಸ್ಕಾರವನ್ನು ಮಾಡಬಲ್ಲ ಕಾವ್ಯ ಪ್ರಪಂಚ ನಿಮ್ಮದು. ನಿಮ್ಮ ಪೂರಾ ಬ್ಲಾಗನ್ನು ಓದಿ ಮತ್ತೆ ಮತ್ತೆ ಧ್ಯಾನಿಸಲೇ ಇದ್ದು ಬಿಡುತ್ತೇನೆ. ಅಷ್ಟು ಅದ್ಭುತವಾಗಿದೆ.
    ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
    www.badari-poems.blogspot.com
    www.badari-notes.blogspot.com
    www.badaripoems.wordpress.com

    Face book Profile : Badarinath Palavalli

    ನಿಮ್ಮ ಓದಿಗೆ ನನ್ನ ಕವನಗಳು ಕಾದಿವೆ ಮತ್ತು ನಿಮ್ಮ ಅಭಿಪ್ರಾಯದ ಕಾಮೆಂಟುಗಳು ನನಗೆ ದಾರಿ ದೀಪ.

    ReplyDelete