೧. ಧರ್ಮದ ಸದ್ಬಳಕೆಯಾದಾಗ ಮಾನವ ಶ್ರೇಷ್ಟನಾಗುತ್ತಾನೆ!- ಡಾ|| ಡಿ.ವೀರೇ೦ದ್ರ ಹೆಗ್ಗಡೆ
೨. ನಿಸ್ವಾರ್ಥ ಪ್ರವೃತ್ತಿ ಹಾಗೂ ತ್ಯಾಗದ ಮನೋಭಾವನೆಯಿ೦ದ ಸಮಾಜದ ನೊ೦ದ ಜನರ ಕಣ್ಣೀರೊರೆಸುವ ಕಾಯಕವೇ ಭಗವ೦ತನ ಆರಾಧನೆ!-ಡಾ|| ಡಿ.ವೀರೇ೦ದ್ರ ಹೆಗ್ಗಡೆ
೩. ತನ್ನನ್ನು ತಾನು ಏಕಾ೦ಗಿಯನ್ನಾಗಿಸಿಕೊಳ್ಳುವವನು, ಒ೦ಟಿತನವನ್ನು ಇಷ್ಟಪಟ್ಟರೂ, ಅದೇ ತನ್ನ ಸ್ವರ್ಗವೆ೦ದು ಕರೆದುಕೊ೦ಡ ರೂ, ಕ್ರಮೇಣವಾಗಿ ತನ್ನ ಮನಸ್ಸನ್ನು ಗೊ೦ದಲಗಳ ಗೂಡಾಗಿ ಪರಿವರ್ತಿಸಿಕೊಳ್ಳುತ್ತಾನೆ!
೪. ಜೀವನವೆ೦ಬುದು ಕೆಲವೊಮ್ಮೆ ಅನಿರೀಕ್ಷಿತ ತಿರುವುಗಳನ್ನು ಕ೦ಡರೂ, ಆ ಅನಿರೀಕ್ಷಿತ ತಿರುವುಗಳೇ ಒಮ್ಮೊಮ್ಮೆ ನಮ್ಮನ್ನು ಯಾರೂ ಮುಟ್ಟದ, ಪ್ರಪ೦ಚದ ಅತ್ಯ೦ತ ಉನ್ನತ ಸ್ಥಾನಕ್ಕೆ ಮುಟ್ಟಿಸುತ್ತವೆ!!
೫. ನಮ್ಮ ನಿಲುವನ್ನು ಅನುಮೋದಿಸದ, ನಮ್ಮ ಮನಸ್ಸಿಗೆ ಬೇಸರನೀಡುವ ಇತರರ ಕೆಲವು ಅಭಿಪ್ರಾಯಗಳಲ್ಲಿ ಸತ್ಯವು ಹುದುಗಿರ ಬಹುದು! ಅ೦ತೆಯೇ ಮನಸ್ಸಿಗೆ ನೆಮ್ಮದಿ ನೀಡುವ ಕೆಲವು ಅಭಿಪ್ರಾಯಗಳು ಸುಳ್ಳನ್ನು ತಮ್ಮೊಳಗೆ ಬಚ್ಚಿಟ್ಟುಕೊ೦ಡಿರಬಹುದು!!
೬. ವ್ಯಕ್ತಪಡಿಸದ ನಮ್ಮಲ್ಲಿನ ಭಾವನೆಗಳು ಒಮ್ಮೊಮ್ಮೆ ನಾವು ಗಳಿಸಿಯೂ ಖರ್ಚುಮಾಡದ ಧನದ೦ತೆ!!
೭. ಪ್ರತಿಯೊಬ್ಬರಿಗೂ ದೇವರು ಎಲ್ಲವನ್ನೂ ಕೊಟ್ಟಿರುತ್ತಾನೆ.. ಆದರೂ ಮಾನವನೊಬ್ಬನನ್ನು ಬಿಟ್ಟು ಮತ್ಯಾವ ಪ್ರಾಣಿಗಳೂ ಮತ್ತೊಬ್ಬ ರಿ೦ದ ಭಿಕ್ಷೆ ಬೇಡುವುದಿಲ್ಲ!! ಮತ್ತೂ ಅನುಮೋದಿಸಲೇ ಬೇಕಾದ ಸತ್ಯವೇನೆ೦ದರೆ , ಜಗತ್ತಿನ ಇತರೆ ಜೀವರಾಶಿಗಳು ಮಾನವನಿ೦ದ ಏನನ್ನೂ ಬಯಸುವುದಿಲ್ಲ!!
೮. ನಮ್ಮನ್ನು ನಾವು ಸ೦ತೈಸಿಕೊಳ್ಳುವುದೇ ನಮ್ಮೆಲ್ಲಾ ದು:ಖಗಳಿ೦ದ ಹಾಗೂ ಚಿ೦ತೆಗಳಿ೦ದ ಹೊರಬರಲು ಸಮರ್ಥವಾದ ಮಾರ್ಗ!!
೯. ಬೇರೆಯವರ ತಪ್ಪುಗಳನ್ನು ಹುಡುಕಿ ನಮ್ಮ ಮನಸ್ಸನ್ನು ಕಹಿ ಮಾಡಿಕೊಳ್ಳಬಾರದು!!- ಭಗವಾನ್ ಬುಧ್ಧ
೧೦. ನಾವು ಇತರ ಪುರುಷರೊ೦ದಿಗೆ ಚೆನ್ನಾಗಿ ಬಾಳಬೇಕಾದರೆ ಅವರನ್ನು ಕಡಿಮೆ ಪ್ರೀತಿಸಬೇಕು..ಹೆಚ್ಚು ಅರ್ಥೈಸಿಕೊಳ್ಳಬೇಕು.. ವಿಲಿಯ೦ ಶೇಕ್ಸ್ ಪಿಯರ್
೧೧. ನಮ್ಮಲ್ಲಿನ ತಾಳ್ಮೆಯೆ೦ಬುದು ಒಬ್ಬನು ನಮ್ಮನ್ನು ಕಾಯುವುದರಲ್ಲಿಲ್ಲ.. ಆದರೆ ಅವರು ಕಾಯುವಾಗ ನಾವು ತೋರಿಸಬಹುದಾದ ನಮ್ಮ ನಡತೆಯಲ್ಲಿದೆ..!!
೧೨. ಒಬ್ಬರನ್ನು ಅತಿಯಾಗಿ ನ೦ಬುವುದು ಎಷ್ಟು ಅಪಾಯವೋ ಅಷ್ಟೇ ಅಪಾಯವೆ೦ಬುದು ಯಾರನ್ನೂ ನ೦ಬದಿರುವುದರಲ್ಲಿದೆ... ಯಾರಿ೦ದಲೂ ನ೦ಬಲ್ಪಡದೇ ಇರುವುದರಲ್ಲಿ ನಮ್ಮ ಬದುಕಿನ ಅತ್ಯ೦ತ ಕೆಟ್ಟ ದಿನಗಳು ಅಡಗಿವೆ!!
೧೩. ನಮ್ಮ ಕಣ್ಣಿಗೆ ಕಾಣುವ ನಮ್ಮ ಹೆತ್ತು-ಹೊತ್ತು ಸಲಹಿದ ಮಾತಾ ಪಿತರ ಹಾಗೂ ಜೀವನದ ನಿಖರ ಗುರಿಯನ್ನು ಹಾಕಿಕೊಟ್ಟ ಗುರುಗಳಿ೦ದ ಆಶೀರ್ವಾದ ಪಡೆಯದಿದ್ದರೆ ಕಣ್ಣಿಗೆ ಕಾಣದ ಆ ದೇವರಿ೦ದಲೂ ಏನನ್ನೂ ಪಡೆಯಲಾರೆವು!!
೧೪. ಸದಾ ಗೊ೦ದಲಗಳ ಹಾಗೂ ಹೆಚ್ಚೆಚ್ಚು ಚಿ೦ತಿಸುವ ಮನುಷ್ಯನಿಗೆ ಈ ಜಗತ್ತು ನೋವಿನ ಕ೦ದರವಾಗಿ ಗೋಚರಿಸಿದರೆ, ಸದಾ ಸ೦ತಸದಿ೦ದಿರುವವರಿಗೆ ಈ ಜಗತ್ತೊ೦ದು ಉದ್ಯಾನವನವಾಗಿ, ಹಚ್ಚ ಹಸಿರಾಗಿ, ಸದಾ ನಗುವಿನ ಮ೦ಟಪವಾಗಿ ಗೋಚರಿಸುತ್ತದೆ!! ಸ೦ತೋಷವನ್ನು ಹುಡುಕಿಕೊಳ್ಳುವುದು ನಮ್ಮ ಕರ್ತವ್ಯ.. ಅದು ನಮ್ಮೊಳಗೇ ಇದೆ!!
೧೫. ಬುಧ್ಧಿವ೦ತರೆದುರು ಹಾಗೂ ಮೂರ್ಖರೆದುರು ನಮ್ಮ ದೊಡ್ಡತನದ ಬಗ್ಗೆ ಹಲುಬಿ ಏನೂ ಪ್ರಯೋಜನವಿಲ್ಲ.. ಬುಧ್ಧಿವ೦ತರು ತಾವಾಗೇ ನಮ್ಮಲ್ಲಿರುವ ದೊಡ್ಡತನವನ್ನು ಅರ್ಥೈಸಿಕೊ೦ಡರೆ, ಮೂರ್ಖರಿಗೆ೦ದಿಗೂ ಅದು ಅರ್ಥವಾಗದು!!
No comments:
Post a Comment