ಸುಧಾಕರ ಶರ್ಮರೇ ಹಾಗೆ. ವಿಷಯಗಳನ್ನು ಅತಿ ಸರಳವಾಗಿ ಅತ್ಯಂತ ದೃಢತೆಯಿಂದ ಹೇಳುತ್ತಾರೆ. ಇಂದು ಅವರು ಶ್ರಾದ್ಧ ಕರ್ಮದ ಬಗ್ಗೆ ಮಾತನಾಡಿದ್ದಾರೆ.ಕೇಳಿ. ತಲೆ ತಲಾಂತರದಿಂದ ನಡೆಸಿಕೊಂಡು ಬರುತ್ತಿರುವ ಅನೇಕ ಆಚರಣೆಗಳಿಗೆ ಅರ್ಥ ವಿಲ್ಲವೆಂದು ಗೊತ್ತಾದಾಗ ಸ್ವಲ್ಪ ಗಾಭರಿಯಾಗುತ್ತೆ. ಆದರೆ ನಮ್ಮ ಆರೋಗ್ಯಕರ ಬದುಕಿಗೆ ಅಗತ್ಯವಾದ ಸತ್ಯವಾದ ಸರಳವಾದ ವೇದದ ಮಾರ್ಗವನ್ನು ತೋರಿಸುವಾಗ ನಾವು ವಿಮರ್ಷೆಮಾಡಬೇಕಲ್ಲವೇ?
ಆಡಿಯೋ ಲಿಂಕ್ ಕಾಣಿಸ್ತಿಲ್ವಲ್ಲ?
ReplyDeleteಮಹೇಶ್,
Deleteಆಡಿಯೋ ಪ್ಲೆಯರ್ ಇದೆಯಲ್ಲಾ, ನನಗೆ ಆಡಿಯೋ ಕೇಳಿಸುತ್ತಿದೆ.ನಿಮಗೆ ಕೇಳಿಸದಿದ್ದರೆ ತೊಂದರೆ ಬಗ್ಗೆ ತಿಳಿದು ಬೇರೆ ಕಡೆ ಅಪ್ ಲೋಡ್ ಮಾಡಬಹುದು.ಆದ್ದರಿಂದ ಮತ್ತೆ ತಿಳಿಸ್ತೀರಾ?
ಶ್ರಾದ್ಧದ ಬಗ್ಗೆ ಶ್ರೀ ಸುಧಾಕರ ಶರ್ಮರ ಚಿಂತನೆಯ ಆಡಿಯೋ ಕೇಳಿ ಸಂತೋಷವಾಯಿತು. ಶ್ರಾದ್ಧದ ಬಗ್ಗೆ ಬರೆದ ಲೇಖನಕ್ಕೆ ಪೂರಕವಾಗಿ ಈ ಉಪನ್ಯಾಸ ಓದುಗರಿಗೆ ಹೆಚ್ಚಿನ ಮಾಹಿತಿ ಒದಗಿಸುವಲ್ಲಿ ಸಹಕಾರಿ. ಸಮಯೋಚಿತವಾಗಿ ಈ ಆಡಿಯೋವನ್ನು ನೀಡಿದ್ದಾಕ್ಕಾಗಿ ಧನ್ಯವಾದಗಳು. ಈ ಆಡಿಯೋವನ್ನು ಎಲ್ಲ ಮಿತ್ರರಿಗೆ ಕಳುಹಿಸಬೇಕೆಂಬ ಆಸೆ. ಹೇಗೆ ಕಳುಹಿಸಬೇಕು? ಗೊತ್ತಾಗುತ್ತಿಲ್ಲ.
ReplyDeleteಪ್ರಕಾಶ್.
ಅದಕ್ಕೇನಂತೆ, ಎಮ್.ಪಿ-3 ಫೈಲ್ ಮೇಲ್ ಮಾಡುವೆ. ಸ್ವಲ್ಪ ಕಾಲಾವಕಾಶ ಬೇಕು.
Deleteಇದು ಚರ್ಚಿಸ ಬೇಕಾದ ವಿಷಯವೇ . ಇದೂ ಸೇರಿ ನನಗೆ ಮಿತ್ರರು ಕೊಟ್ಟ ಎರಡು weblinks ನಲ್ಲಿ ಬರೆದದ್ದನ್ನು ನೋಡಿದೆ . ಚೆನ್ನಾಗಿಯೇ ಬರೆದಿದ್ದಾರೆ . ಇದರಲ್ಲಿ ವೇದಗಳಲ್ಲಿ ಏನು ಹೇಳಿದೆ ಆ ದ್ರಷ್ಟಿಯಿಂದ ಮಾತಾಡಿದ್ದಾರೆ . ಅದು ತರ್ಕ ಬದ್ಧ ವಾಗಿಯೇ ಇದೆ . ಆದರೆ ಉಳಿದ ಶಾಸ್ತ್ರಗಳಲ್ಲಿ ಏನಿವೆ ಎಂಬ ಕುರಿತು ಹೇಳಲಿಲ್ಲ . ಬೇರೆ ತಿಳಿದವರು , ಅಂಥಹ ವೈದಿಕ ಕ್ರಿಯೆ ಮಾಡುವ ಪುರೋಹಿತರು , ಪಂಡಿತರು ಇತ್ಯಾದಿ ಶ್ರಾದ್ಧ ಗಳನ್ನು ಯಾವ ರೀತಿ ಯಿಂದ ನೋಡುತ್ತಾರೆ, ಮನದಟ್ಟು ಮಾಡುತ್ತಾರೆ ಅಂತ ಅಲ್ಲಿ ನಮಗೆ ಗೊತ್ತಾಗಲಿಲ್ಲ .
ReplyDeleteಇನ್ನೊಂದರಲ್ಲಿ ಈಗಿನ ಕಾಲದ ಜನರ ಲೋಕದ್ರಷ್ಟಿ ಯಿಂದ overview ರೀತಿಯಲ್ಲಿ ಬರೆದಿದ್ದಾರೆ. ಈಗಿನ ಆಧುನಿಕ ಕಾಲ , ಸಮಾಜ ದಲ್ಲಿ ಹೊಸ ತರದ ಸಮಸ್ಯೆ ಗಳಿರುವುದರಿಂದ ನಮ್ಮ ದ್ರಷ್ಟಿಕೊನವೇ ಬಹಳ ರೀತಿಯಲ್ಲಿ ಬದಲಾಗಿರಬಹುದು . ಅದರಿಂದಾಗಿ ಹಳೆ ಕಾಲದಿಂದ ನಡೆದು ಬಂದ ಪದ್ಧತಿ ಗಳ ಅರ್ಥವನ್ನು ಹಿಡಿಯಲು ಕಷ್ಟವಾಗಬಹುದು . ಇನ್ನೂ ಆಳವಾಗಿ ಯೋಚಿಸಿ , deep study ಮಾಡಿ , ಚರ್ಚಿಸಿ , ಶಾಸ್ತ್ರ , ಪುರಾಣಗಳಲ್ಲಿ ಹುಡುಕಿದರೆ ಮತ್ತೆ ಅದರ ಮಹತ್ವದ ಅರ್ಥವೇನಾದರೂ ಇದ್ದರೆ ಅದು ನಮ್ಮ ತಿಳುವಳಿಕೆಗೆ ಬರಬಹುದೋ ಏನೋ ????????