Pages

Wednesday, February 1, 2012

ವಿಶಿಷ್ಟ ಸತ್ಯನಾರಾಯಣ ಪೂಜೆ

                ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿ ನಾಗರಾಜ್ ಮತ್ತು ಶ್ರೀಮತಿ ಭಾರತಿ  ಇವರ  ಪುತ್ರ  ಚಿ|ರಾ| ವಿನಯ್ ಮತ್ತು ತಿಪಟೂರಿನ ಶ್ರೀಮತಿ ಗೀತಾ ಮತ್ತು ಶ್ರೀ ಶಿವಸ್ವಾಮಿ    ಇವರ ಪುತ್ರಿ ಮಾನಸಳ ವಿವಾವಹವು 29.1.2012 ರಂದು ತಿಪಟೂರಿನಲ್ಲಿ ನಡೆದು ಶ್ರೀ ಸತ್ಯನಾರಾಯಣ ಪೂಜೆ ಮತ್ತು ಆರತಕ್ಷತೆ ಕಾರ್ಯಕ್ರಮಗಳು ಇಂದು  ಹಾಸನದಲ್ಲಿ ನಡೆದವು.ಕಳೆದ ನಾಲ್ಕು ದಶಕಗಳಿಂದ ಸಮಾಜ ಕಾರ್ಯ ಮಾಡುತ್ತಲೇ ಬೆಳೆದ ಶ್ರೀ ನಾಗರಾಜ್ ಅವರು  ಈ ಶುಭಸಂದರ್ಭದಲ್ಲಿ ಸಮಾಜವನ್ನು ಸ್ಮರಿಸುವ ,  ಸಮಾಜದಲ್ಲಿ   ಕುಸಿಯುತ್ತಿರುವ ಕೌಟುಂಬಿಕ ಬಾಂಧವ್ಯವನ್ನು ಬೆಸೆಯುವ  ವಿಶಿಷ್ಟ  ಉಪನ್ಯಾಸವನ್ನು  ಏರ್ಪಡಿಸಿದ್ದರು. ಹಾಸನದ ನಿವೇದಿತಾವಿದ್ಯಾಲಯದ ಕಾರ್ಯದರ್ಶಿಗಳಾದ ಶ್ರೀ ಅನಂತನಾರಾಯಣ ಅವರು ಈ ಸಂದರ್ಭದಲ್ಲಿ ಮಾತನಾಡಿದರು. ಒಂದು ಉತ್ತಮ ಸಮಾಜಕಟ್ಟುವ ದಿಕ್ಕಿನಲ್ಲಿ ಯುವಪೀಳಿಗೆಗೆ ಉತ್ಸಾಹ ತುಂಬುವ  ಈ ಉಪನ್ಯಾಸವನ್ನು ವೇದಸುಧೆಯ ಅಭಿಮಾನಿಗಳಿಗಾಗಿ ಇಲ್ಲಿ ಪ್ರಕಟಿಸಲಾಗಿದೆ.





4 comments:

  1. ನವದಂಪತಿಗೆ ಶುಭಾಶಯಗಳು. ಪೂಜೆ-ಪುನಸ್ಕಾರಗಳಲ್ಲಿ ಅಷ್ಟಾಗಿ ನಂಬಿಕೆಯಿರದ ನಾಗರಾಜರು ಸತ್ಯನಾರಾಯಣ ಪೂಜೆ ಮಾಡಿಸಿದ್ದು ಆಶ್ಚರ್ಯಕ್ಕೆ ಕಾರಣವಾಯ್ತು! ಯಾಕೆ ಸತ್ಯನಾರಯಣ ಪೂಜೆ ಮಾಡಬೇಕು ಎಂಬ ಪ್ರಶ್ನೆ ಉದ್ಭವಿಸಲಿಲ್ಲವೇ?

    ReplyDelete
  2. ಭಟ್ಟರಿಗೆ ನಮಸ್ಕಾರಗಳು. ನಿಮ್ಮ ಪ್ರಶ್ನೆ ಸೂಕ್ತವಾಗಿದೆ. ನನಗೆ ನಂಬಿಕೆಯಿಲ್ಲದಿದ್ದರೂ ನನ್ನ ಪತ್ನಿ ಮತ್ತು ಮಗನಿಗೆ ಅದರಲ್ಲಿ ನಂಬಿಕೆಯಿದೆ. ನನ್ನ ನಂಬಿಕೆಯನ್ನು ಇನ್ನೊಬ್ಬರ ಮೇಲೆ ಹೇರುವುದು ಸೂಕ್ತವಲ್ಲವಾದ್ದರಿಂದ ಈ ಕಾರ್ಯಕ್ರಮ ನಡೆದಿದೆ. ಅವರವರ ನಂಬಿಕೆ ಅವರಿಗೆ. ಪೂಜೆ ಮಾಡಿದವರು ನನ್ನ ಮಗ ಮತ್ತು ಅವನ ಪತ್ನಿ. ನಂಬಿದ ಹಾದಿ ತಪ್ಪದಿರಲು ನಿಮ್ಮಂತಹವರು ಈರೀತಿ ಪ್ರಶ್ನಿಸಬೇಕಾದುದು ಅತ್ಯಗತ್ಯ. ಧನ್ಯವಾದಗಳು.

    ReplyDelete
  3. ನಾಗರಾಜರೇ, ನಮಸ್ಕಾರಗಳು ತಮಗೂ, ಛೇಡಿಸಿದೆ ಎಂದು ಭಾವಿಸಬೇಡಿ, ಆಡುವವರು ಮಾಡಿಯೂ ತೋರಿಸಬೇಕೆಂಬ ಅನಿಸಿಕೆಯಿಂದ ನಾನು ಕೇಳಿದ್ದು. ಇನ್ನು ಪೂಜೆ-ಪುನಸ್ಕಾರ ಇವೆಲ್ಲಾ ಎಣ್ಣೆ ಹಚ್ಚಿದ ತಲೆಯಂತೇ ಕಣ್ಮನವನ್ನು ಒಟ್ಟಿಗೇ ತಂಪುಮಾಡಲಿಕ್ಕೆ, ಪೂಜಾ ರಹಿತ ಧ್ಯಾನವಿಧಾನ ಎಣ್ಣೆ ರಹಿತ ತಲೆಗೂದಲಿನಂತೇ ದೊರಗು! ನಂಬಿಕೆ-ಭಾವನೆ ಮುಖ್ಯ, ಕೊನೆಯಲ್ಲಿ ನಿಮ್ಮ ಮನೆ-ಮಡದಿ-ಮಕ್ಕಳಿಗಾಗಿಯಾದರೂ ನೀವು ಪೂಜೆಗೆ ಅನುಮತಿಸಿದ್ದು ಖುಷಿಯಾಯ್ತು. ಯಾರೋ ಕೇಳಿದ್ದರು ಯಾಕೆ ಹಾಗೆಲ್ಲಾ ಪೂಜೆ ಮಾಡಬೇಕು? ಎಂದು, ಅದಕ್ಕೆ ಉತ್ತರ ನನ್ನ ಹೀಗಿತ್ತು : ರಾಷ್ಟ್ರಗೀತೆಯನ್ನು ಕುಂತೋ ಮಲಗಿಯೋ ಹಾಡಿದರೆ ಸಾಕಲ್ಲವೇ? ನಿಂತೇ ಯಾಕೆ ಹಾಡಬೇಕು. ಅವರ ಬಾಯಿ ಬಂದಾಯ್ತು. ಪೂಜೆ ನಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವಲ್ಲಿ ಅನುಕೂಲ ಕಲ್ಪಿಸುತ್ತದೆ. ಕೊನೇಪಕ್ಷ ಆ ನೆಪದಲ್ಲಾದರೂ ಒಂದರೆಕ್ಷಣ ದೇವರಬಗ್ಗೆ ನೆನಪಾಗುವುದಲ್ಲಾ ಎಂಬ ಕಾರಣಕ್ಕಾಗಿ, ಧನ್ಯವಾದ.

    ReplyDelete
  4. ಭಟ್ಟರೇ, ನಿಮ್ಮ ಮೊದಲ ಪ್ರತಿಕ್ರಿಯೆ ಕುಹಕದಿಂದ ಕೂಡಿತ್ತೆಂದು ನಾನು ಭಾವಿಸಿದ್ದೆ. ಬಲವಂತವಾಗಿ ಯಾರನ್ನೂ ಒಪ್ಪಿಸುವ ಮನೋಭಾವ ಸರಿಯಲ್ಲವೆಂಬ ನನ್ನ ನಂಬಿಕೆಗನುಗುಣವಾಗಿ ನಾನು ನಂಬಿದಂತೆ ನಡೆಯಬೇಕೆಂದು ನಾನು ನನ್ನ ಕುಟುಂಬದ ಸದಸ್ಯರ ಮೇಲೆ ನಾನು ಎಂದೂ ಒತ್ತಾಯಿಸಿಲ್ಲ. ಪೂಜೆ, ಪುನಸ್ಕಾರ, ಇತ್ಯಾದಿಗಳು ಅಂತಿಮ ಗುರಿಯಲ್ಲ, ಅಂತಿಮ ಗುರಿಯೆಡೆಗೆ ಇಡುವ ಹೆಜ್ಜೆಗಳಷ್ಟೇ. ಅಲ್ಲಿಗೇ ಅಂಟಿಕೊಂಡು ಕೂರುವವರು ಮೆಟ್ಟಿಲ ಮೇಲೇ ಇರಬಯಸುವವರು, ಮೆಟ್ಟಲೇರುವುದು ಯಾವಾಗ? ಆಯಾ ವ್ಯಕ್ತಿಗಳು ತಮಗೆ ಸೂಕ್ತವೆನಿಸಿದ ಮಾರ್ಗ ಅನುಸರಿಸಬೇಕು,ಹೀಗೆಯೇ ಮಾಡಬೇಕೆಂದು ಬಲವಂತ ಮಾಡಲಾಗದು. ಶಿಶುವಿಹಾರಕ್ಕೆ ಹೋಗುವ ಮಕ್ಕಳಿಗೆ ಭೌತಶಾಸ್ತ್ರ, ಖಗೋಳಶಾಸ್ತ್ರ ಕಲಿಸಲಾಗುವುದೇ? ಕಲಿಯುವ ಹಂತದಲ್ಲಿ ಅವರವರ ಶಕ್ತಿ, ಸಾಮರ್ಥ್ಯ ಅನುಸರಿಸಿ ಕಲಿಯಬೇಕಷ್ಟೆ. ಪೂಜೆ ಮಾಡಿದರೆ ಮಾತ್ರ ದೇವರ ನೆನಪಾಗಬೇಕಿಲ್ಲ. ಇಷ್ಟಕ್ಕೂ ಶ್ರೀಧರರ ಲೇಖನ ಆ ಸಂದರ್ಭದಲ್ಲಿ ನಡೆದ ಸಮಾಜಕ್ಕಾಗಿ ಉಪಯೋಗಿಯಾಗಬೇಕೆಂಬ ಮನೋಭಾವ ಮೂಡಿಸುವ ಮಂಗಳನಿಧಿ ಕಾರ್ಯಕ್ರಮದ ಬಗ್ಗೆ ಆಗಿದೆ. ವಿಷಯಾಂತರದ ಚರ್ಚೆ ನಮ್ಮಲ್ಲಿ ನಡೆಯುತ್ತಿದೆ. ಇಲ್ಲಿಗೆ ಮುಗಿಸೋಣವೇ? ಧನ್ಯವಾದಗಳು.

    ReplyDelete