ಕಳೆದ ಮೂರ್ನಾಲ್ಕು ದಿನಗಳಿಂದ ವೇದಸುಧೆ ಮತ್ತು ಫೇಸ್ ಬುಕ್ ನ "ಸುಮನಸ " ಗುಂಪಿನಲ್ಲಿ ಹಾಗೂ ಕನ್ನಡ ಬ್ಲಾಗ್ ನಲ್ಲಿ ಅದ್ಭುತವಾದ " ಚಿಂತನ -ಮಂಥನ " ನಡೆಯಿತು. ವಿಷಯ: ಯಜ್ಞದಲ್ಲಿ ಪ್ರಾಣಿಬಲಿಯನ್ನು ವೇದವು ಪ್ರೋತ್ಸಾಹಿಸುತ್ತದೆಯೇ? ಎನ್ನುವುದು.
ಚರ್ಚೆಯಲ್ಲಿ ಪಾಲ್ಗೊಂಡವರು ಶ್ರೀಯುತರುಗಳಾದ
1. ಭೀಮಸೇನ್ ಪುರೋಹಿತ್
2. ಗಣೇಶ್ ಖರೆ
3. ಕವಿ ನಾಗರಾಜ್
4. ಮ. ವೆಂ. ರಮೇಶ ಜೋಯಿಸ್,
5 ವಸಂತ್
6. ವಿ.ಆರ್. ಭಟ್
7.ಕಡತೋಕೆ ರಾಮ ಭಟ್ ಅಗ್ನಿಹೋತ್ರಿ , ಮುಂತಾದವರು.
ಇನ್ನೊಬ್ಬ ತರುಣ ಶ್ರೀ ಗಣೇಶ್ ಖರೆ. ಇಪ್ಪತ್ತೆರಡು ವರ್ಷದ ತರುಣ. ಮಹಾರಾಷ್ಟ್ರದ ಪುಣೆಯಲ್ಲಿರುವ ಕನ್ನಡಿಗ. ಇವರು ಕನ್ನಡ,ಹಿಂದಿ ಸಂಸ್ಕೃತ ಮತ್ತು ಇಂಗ್ಲೀಶ್ ಜೊತೆಗೆ ಮರಾಠಿ ಭಾಷೆಗಳನ್ನು ಬಲ್ಲರು. ವೇದದ ಮತ್ತು ನಮ್ಮ ಸಂಸ್ಕೃತಿ ಪರಂಪರೆಯ ಬಗ್ಗೆ ಇವರಿಗಿರುವ ಅಗಾಧ ವಾದ ಶ್ರದ್ಧೆ ಮತ್ತು ಆಸಕ್ತಿಯನ್ನು ಕಂಡು ಅಚ್ಚರಿಗೊಂಡೆ. ಶ್ರೀಯುತರನ್ನು ವೇದಸುಧೆಯ ಪರವಾಗಿ ಅಭಿನಂದಿಸುತ್ತೇನೆ.
ಚರ್ಚೆಯಲ್ಲಿ ಪಾಲ್ಗೊಂಡವರು ಶ್ರೀಯುತರುಗಳಾದ
1. ಭೀಮಸೇನ್ ಪುರೋಹಿತ್
2. ಗಣೇಶ್ ಖರೆ
3. ಕವಿ ನಾಗರಾಜ್
4. ಮ. ವೆಂ. ರಮೇಶ ಜೋಯಿಸ್,
5 ವಸಂತ್
6. ವಿ.ಆರ್. ಭಟ್
7.ಕಡತೋಕೆ ರಾಮ ಭಟ್ ಅಗ್ನಿಹೋತ್ರಿ , ಮುಂತಾದವರು.
ಬಲು ಆರೋಗ್ಯಕರವಾದ ಚಿಂತನ-ಮಂಥನ ನಡೆಯಿತು. ಅದಕ್ಕಾಗಿ ಸಹಕರಿಸಿದ "ಸುಮನಸ" ತಂಡದ ಶ್ರೀ ಸದ್ಯೋಜಾತ ಮತ್ತು ಜೋಯಿಸ್ ಎಂ.ವಿ.ಆರ್ ಇವರಿಗೆ ವೇದಸುಧೆಯ ಪರವಾಗಿ ಕೃತಜ್ಞತೆಗಳು. ಈ ಸಂದರ್ಭದಲ್ಲಿ ವಿಶೇಷವಾಗಿ ಈರ್ವರನ್ನು ವೇದಸುಧೆಗೆ ಪರಿಚಯಿಸಬೇಕೆನಿಸುತ್ತಿದೆ.
ಒಬ್ಬರು ಹರಿಹರದ ಶ್ರೀ ಭೀಮಸೇನ ಪುರೋಹಿತ್ . ಇಪ್ಪತ್ತೊಂದು ವರ್ಷದ ತರುಣ. ಇಂಜಿನಿಯರಿಂಗ್ ಓದಿರುವ ಇವರು ಕನ್ನಡ,ಹಿಂದಿ ಸಂಸ್ಕೃತ ಮತ್ತು ಇಂಗ್ಲೀಶ್ ಭಾಷೆಗಳನ್ನು ಬಲ್ಲರು. ವೇದದ ಮತ್ತು ನಮ್ಮ ಸಂಸ್ಕೃತಿ ಪರಂಪರೆಯ ಬಗ್ಗೆ ಇವರಿಗಿರುವ ಅಗಾಧವಾದ ಶ್ರದ್ಧೆ ಮತ್ತು ಆಸಕ್ತಿಯನ್ನು ಕಂಡು ಅಚ್ಚರಿಗೊಂಡೆ. ಶ್ರೀಯುತರನ್ನು ವೇದಸುಧೆಯ ಪರವಾಗಿ ಅಭಿನಂದಿಸುತ್ತೇನೆ.
ಶ್ರೀ ಭೀಮಸೇನ ಪುರೋಹಿತ್ |
ಶ್ರೀ ಗಣೇಶ್ ಖರೆ |
ಈ ಸುಮನಸ ಚರ್ಚೆಯಲ್ಲಿ ಪಾಲ್ಗೊಂಡವರಿಗೆಲ್ಲಾ ಅಭಿನಂದನೆಗಳು.ಚರ್ಚೆಯ ಅಂತಿಮ ನಿಲುವಿನ ಬಗ್ಗೆ ತಿಳಿಯಲು ಕುತೂಹಲಿಯಾಗಿದ್ದೇನೆ... ಶುಭವಾಗಲಿ
ReplyDeleteಶ್ರೀ ವಸಂತ್,
Deleteಅಷ್ಟು ಸುಲಭವಾಗಿ ನಿಲುವನ್ನು ಸ್ಪಷ್ಟ ಪಡಿಸಲು ಸಾಧ್ಯವೇ? ಸಾವಿರಾರು ವರ್ಷಗಳಿಂದ ನಡೆದು ಬಂದಿರುವ ಕೆಲವು ಆಚರಣೆಗಳನ್ನು ಅಷ್ಟು ಸುಲಭವಾಗಿ "ಅದು ವೇದದಲ್ಲಿಲ್ಲ" ಎಂದು ಒಪ್ಪಿಸಲು ಕಷ್ಟವಾಗುತ್ತದೆ. ಆದರೆ ಒಂದು ಸ್ಪಷ್ಟವಾಯ್ತು.ಪ್ರಾಣಿಬಲಿಯನ್ನು ವೇದದಲ್ಲಿ ಹೇಳಿದೆ ಎಂದು ವಾದ ಮಾಡಿದವರೂ ಕೂಡ ಅದು ಬೇಡ ಎಂದೇ ತಮ್ಮ ಸ್ವಂತ ನಿಲುವೆಂದು ಸ್ಪಷ್ಟ ಪಡಿಸಿದ್ದಾರೆ. ನಾನು ಹಲವಾರು ವರ್ಷಗಳಿಂದ ಸಮಾಜಹಿತ ವಿಚಾರಗಳ ಬಗ್ಗೆ ಅಂತರ್ಜಾಲದ ಬೇರೆ ಬೇರೆ ತಾಣಗಳಲ್ಲಿ ಚಿಂತನ-ಮಂಥನ ನಡೆಸುತ್ತಾ ಬಂದಿದ್ದೇನೆ.ಎಲ್ಲಾ ಕಡೆಗಳಲ್ಲೂ ರಸವನ್ನು ಬಿಟ್ಟು ಕಸವನ್ನು ಹಿಡಿದುಕೊಂಡು ಕಚ್ಚಾಟ, ನಿಂದನೆ, ಮನ ನೋಯುವ ಮಾತುಗಳು ಎಲ್ಲವನ್ನೂ ಕಂಡು ಬೇರೆ ಸಹವಾಸವೇ ಬೇಡವೆಂದು ಸ್ವಂತ ತಾಣವನ್ನು ಆರಂಭಿಸಿದ್ದಾಯ್ತು. ನನ್ನ ಅನುಭವದಲ್ಲಿ ಹೇಳಬೇಕೆಂದರೆ ವಿರುದ್ಧ ಬಣದಲ್ಲೂ ಕೂಡ ಅತೀ ಆರೋಗ್ಯಕರ ರೀತಿಯಲ್ಲಿ ವಾದ ಮಂಡಿಸಿ ಓದುಗರ ಮನಸ್ಸನ್ನು ಗೆದ್ದುದು ಅಭಿನಂದನಾರ್ಹ ವಿಚಾರ. ಸಮರ್ಥವಾಗಿ ವಾದ ಮಂಡಿಸಿದ ಇಬ್ಬರು ತರುಣರು ಎಲ್ಲರ ಅಭಿನಂದನೆಗೆ ಪಾತ್ರರಾದರು. ಸಮಾಜಕ್ಕೆ ಅವರುಗಳು ಒಂದು ಆಸ್ತಿ ಎಂದು ಹೇಳಲು ಹೆಮ್ಮೆ ಪಡುತ್ತೇನೆ. ಭಗವಂತನು ಅವರನ್ನು ಇನ್ನೂ ಎತ್ತರಕ್ಕೆ ಬೆಳೆಸಲಿ.
ಪ್ರಿಯ ಶ್ರೀಧರ್, ನಿಮ್ಮ ಈ ಲೇಖನ ಈ ವಿಚಾರದಲ್ಲಿ ಇನ್ನು ಚರ್ಚೆ ಬೇಡ ಎಂಬುದರ ಸೂಚನೆಯೇ? ದಡ ಮುಟ್ಟುವ ಮುನ್ನವೇ ಹುಟ್ಟು ಹಾಕುವುದನ್ನು ನಿಲ್ಲಿಸಿದಂತಾಯಿತೇನೋ ಎಂದು ಅನ್ನಿಸಿದೆ.
ReplyDeleteಶ್ರೀ ನಾಗರಾಜ್, ನನ್ನದೇನೂ ಸುಪ್ರೀಮ್ ಕೋರ್ಟ್ ಆದೇಶವೇ? ಚಿಂತನ-ಮಂಥನ ನಡೆಯುವುದಾದರೆ ಮುಂದುವರೆಯಲಿ. ನಿಮ್ಮಿಂದಲೇ ಇಲ್ಲೇ ಪುನರಾರಂಭವಾಗಲಿ. ನನಗಂತೂ ತುಂಬಾ ಸಂತೋಷ. ನಿಮಗೆ ಗೊತ್ತು-ನಾನೊಬ್ಬ ಆತುರಗಾರ. ಆತುರದಲ್ಲಿ ಕೃತಜ್ಞತೆ ಸಲ್ಲಿಸಿದ್ದೇನೆ. ಇದು ಮಧ್ಯಂತರ ವರದಿ ಎಂದುಕೊಳ್ಳೋಣ. ಸಾಗಲಿ ಚರ್ಚೆ. ಮುಂದೊಮ್ಮೆ ಹಿರಿಯರಾಗಿ ನೀವು ಅದನ್ನು ಸಂಪನ್ನ ಗೊಳಿಸಿ
Deleteಸುಮನಸದಲ್ಲಿ ಚರ್ಚೆ ಮುಂದುವರೆದಿದೆ.
ReplyDelete