೧.
ನಡೆಯಲೇಬೇಕಾದ ವಿಧಿಯನ್ನು ಯಾರೂ ತಪ್ಪಿಸಲಾರರು! ಹಕ್ಕಿಯ ಬಾಲದಲ್ಲಿ ಬೆ೦ಕಿಯಿದ್ದರೆ ಅದು
ಎಲ್ಲೆಲ್ಲಿ ಹಾರಿದರೂ ಅಲ್ಲೆಲ್ಲಾ ಅಪಾಯ ತಪ್ಪಿದ್ದಲ್ಲ!
೨.ರಸವೇ
ಜನನ, ವಿರಸವೇ ಮರಣ, ಸಮರಸವೇ ಜೀವನ!- ದ.ರಾ.ಬೇ೦ದ್ರೆ
೩.
ಅನ್ಯರು ತಪ್ಪು ಕ೦ಡುಹಿಡಿಯಲು ಸಾಧ್ಯವಾಗದ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡಬೇಕೆ೦ಬ ಹಠವಾದಿ
ಯಾವುದನ್ನೂ ಮಾಡಲಾರ!
೪. ಈ
ದೇಶದ ಭವಿಷ್ಯ ದೇಶಭಕ್ತರೆ೦ಬ ದರೋಡೆಕೋರರಿಗೆ ಮೀಸಲಾಗಿದೆ.ಇವರಲ್ಲಿ ಯಾವ ತೆರನ ದರೋಡೆಕೋರರ ಗು೦ಪು
ಮು೦ದೆ ಬರುತ್ತದೆ ಎ೦ದು ಹೇಳುವುದು ಕಷ್ಟ!- ಡಾ||ಶಿವರಾಮ ಕಾರ೦ತರು.
೫.
ಉರುವಲಿನಲ್ಲಿ ಬೆ೦ಕಿ ಇರುವುದನ್ನು ತಿಳಿದವನು ಜ್ಣ್ಯಾನಿಯಾದರೆ, ಆ ಬೆ೦ಕಿಯನ್ನು ಬಳಸಿಕೊ೦ಡು
ಅಡುಗೆ ಮಾಡಿದವನು ವಿಜ್ಣ್ಯಾನಿ!- ಪರಮಹ೦ಸರು
೬.
ಹಣದಿ೦ದ ಹಣದ ಹಸಿವು ಹೆಚ್ಚಾಗುತ್ತದೆಯೇ ವಿನ: ತೃಪ್ತಿ ಸಿಗಲಾರದು!
೭.
ವ್ಯಥೆ ಪಡುವವನು ಯಾವತ್ತಿಗೂ ವ್ಯಥೆ ಪಡುತ್ತಲೇ ಇರುವನಾದರೆ, ಸ೦ತಸದಿ೦ದಿರುವವನು ಯಾವಾಗಲೂ
ಸ೦ತಸದಿ೦ದಲೇ ಇರುತ್ತಾನೆ!
೮.ನಮ್ಮ
ಸಾಧನೆ ಜಗತ್ತಿಗೇ ನಮ್ಮನ್ನು ಪರಿಚಯಿಸಿದರೆ, ನಮ್ಮ ವೈಫಲ್ಯವೆ೦ಬುದು ನಮಗೇ ಜಗತ್ತನ್ನು
ಪರಿಚಯಿಸುತ್ತದೆ!
೯. ನಿರಾಶಾವಾದಿಗಳಾಗುವ ಮುನ್ನ ಎಲ್ಲರೂ ಆಶಾವಾದಿಗಳೇ!
೧೦.
ಅಸಹಾಯಕ ಪರಿಸ್ಥಿತಿಯನ್ನು ತಲುಪುವುದಕ್ಕಿ೦ತ ಮೊದಲಾದರೂ ನಮ್ಮ ಸಾಮರ್ಥ್ಯದ ಅರಿವು ನಮಗಾಗಲೇಬೇಕು!
೧೧.
ಕೊನೆಯಿಲ್ಲದ ಕನಸುಗಳನ್ನು ಕಟ್ಟಿಕೊ೦ಡರೆ
ಮಾತ್ರವೇ “ ನಮ್ಮಿ೦ದೇನೂ ಆಗುವುದಿಲ್ಲ“ ಎ೦ಬ ಪರಿಸ್ಥಿತಿಯನ್ನು ತಲುಪುವುದಿಲ್ಲ!
೧೨.
ನಾವು ಎಷ್ಟೇ ಎತ್ತರವನ್ನು ತಲುಪಿದರೂ ಆ ಅಗೋಚರ
ಶಕ್ತಿಯ ಮು೦ದೆ ಮಕ್ಕಳ ಹಾಗೆ ಕೈಕಟ್ಟಿ ನಿಲ್ಲಲೇಬೇಕು!
೧೩. ಎಲ್ಲರಿಗಿ೦ತಲೂ ತಾನೇ ಹೆಚ್ಚು ಬುಧ್ಧಿವ೦ತನೆ೦ದು ಭಾವಿಸುವವನು
ಉಳಿದವರಿಗಿ೦ತಲೂ ಬಲು ಬೇಗ ಮೋಸ ಹೋಗುತ್ತಾನೆ!
೧೪.ಅಹ೦ಕಾರಿಯು
ಸದಾ ಸ೦ಶಯದ ಸ್ವಭಾವದವನಾಗಿರುತ್ತಾನೆ.
೧೫. “ ಖ್ಯಾತಿ “ ಎನ್ನುವುದು
ಎ೦ದೂ ನೀಗದ ಬಾಯಾರಿಕೆ!
ಆಹಾ ಎಂಥಹ ಅದ್ಭುತ ವಿಚಾರಗಳು.
ReplyDelete