ಮುಕುಂದೂರು ಸ್ವಾಮಿಗಳು ಅಧ್ಯಾತ್ಮ ವಿಚಾರ ತಿಳಿಸುವ ಶೈಲಿ ಬಲು ಸರಳ. ಆದರೆ ಅದ್ಭುತ..........
ಹರಿಯುವ ಝರಿಯದಡದಲ್ಲಿ ಶಾಸ್ತ್ರಿಗಳೊಡನೆ ಕುಳಿತಿದ್ದಾರೆ. ಝರಿಯಲ್ಲಿ ತೇಲಿಹೋಗಿ ಮಾಯವಾಗುವ ಕೆಲವು ಗುಳ್ಳೆಗಳನ್ನು ನೋಡುತ್ತಾ ಅವರ ಬಾಯಲ್ಲಿ ಬಂದ ಮಾತುಗಳನ್ನು ಕೇಳಿ..........
-"ಅಗೋ ನೋಡಪ್ಪಾ ತಮಾಶೆ! ಅದರಪಾಡಿಗೆ ನೀರು ಹರಿದು ಹೋಗ್ತಿದೆ, ಅದೆಲ್ಲಿಂದ ಬಂದ್ವು ಈ ಗುಳ್ಳೆಗಳು! ಅದೆಷ್ಟೊಂದು ಗುಳ್ಳೆಗಳು ಬಂದ್ವು! ಅಗೋ ಅಲ್ಲಿ ನೋಡು, ಅಷ್ಟು ದೂರ ಹೋಗೋ ಹೊತ್ಗೆ ಒಂದೂ ಇಲ್ಲಾ! ಇಲ್ ಹುಟ್ಟಿದ್ಯಾಕೇ? ಅಲ್ಲಿ ವರಗೆ ಹೋಗಿದ್ಯಾಕೇ? ಒಂದೂ ಇಲ್ದಂಗ್ ಹೋಗಿದ್ ಎಲ್ಲಿಗೆ?
ಹುಟ್ಟಿದ್ ಯಾವ್ದು?, ಅಲ್ಲಿಗಂಟ ಹೋಗಿದ್ಯಾವ್ದು? ಆಮೇಲ್ ಇಲ್ವಾಗಿದ್ದು ಯಾವ್ದು? ಎಲ್ಲಾ ನೀರೇ!! ಇಂಗೇ ಅಲ್ವೇ ನಮ್ ಹುಟ್ಟು? ಯಾಕೋ ಏನೋ ಹುಟ್ಟೋದು, ಅದರ ಸೆಳವಿನಾಗೇ ಅಷ್ಟು ದೂರ ಹೋಗೋದು, ಮತ್ ಅದರಾಗೇ ಕಾಣದಂಗಾಗೋದು. ಇದೇ ಅಲ್ವೇ ಕೌತುಕ? ಯಾವ್ದೂ ಇಷ್ಟೇ ಕೌತುಕ ಅಂದ್ರೆ ಕೌತುಕ, ಇಲ್ಲಾ ಅಂದ್ರೆ ಏssನೂ ಇಲ್ಲ.
ಸೃಷ್ಟಿ ರಹಸ್ಯವನ್ನು ನೀರಿನ ಮೇಲಿನ ಗುಳ್ಳೆಯ ಉಧಾಹರಣೆಯೊಂದಿಗೆ ಕಣ್ಣಿಗೆ ಕಟ್ಟುವಂತೆ ಬಿಚ್ಚಿಟ್ಟ ಸ್ವಾಮಿಗಳ ಈ ಶೈಲಿ ಅದ್ಭುತ!!

No comments:
Post a Comment