ಪ್ರೀತಿ .................ಒಂದಷ್ಟು ಹರಟೆ
"ನನ್ನ ಪ್ರೀತಿಯ ಬುದ್ಧ ದೇವನಿಗೆ ಹಚ್ಚಿದ ಸುಗಂದದ ಬತ್ತಿಯ ಸುವಾಸನೆ ಹೊರಗೆಲ್ಲ ಹರಡಿದರೆ ನನ್ನ ದೇವನಿಗೆ ಕಡಿಮೆ ಆಗುವುದಿಲ್ಲವೇ?" ಎಂಬ ಯೋಚನೆ ಒಮ್ಮೆ ಓರ್ವ ಭಕ್ತನಿಗೆ ಬಂತು. ತಕ್ಷಣ ಹಚ್ಚಿದ್ದ ಬತ್ತಿಯನ್ನು ನಂದಿಸಿ ಒಂದು ಅಂದವಾದ, ಕುಸುರಿ ಕೆಲಸಮಾದಲಾದ ಒಂದು ಚಿಕ್ಕ ಪೆಟ್ಟಿಗೆ ತಂದು ಅದರಲ್ಲಿ ತನ್ನ ಇಷ್ಟ ದೇವನಾದ ಬುದ್ಧನನ್ನು ಕೂರಿಸಿ ಸುತ್ತಲೂ ಸಾಟಿನ್ ಬಟ್ಟೆಯಿಂದ ಅಲಂಕರಿಸಿ, ಸುಗಂದದ ಬತ್ತಿಗಾಗಿ ಒಂದು ಪ್ರತ್ಯೇಕ ಜಾಗ ಕಲ್ಪಿಸಿ ಬತ್ತಿ ಹಚ್ಚಿ ಬಾಗಿಲು ಮುಚ್ಚಿಬಿಟ್ಟ. ಏನೋ ಒಂದು ರೀತಿಯ ಸಮಾಧಾನ. ಈಗ ನನ್ನ ದೇವನು ಮಾತ್ರ ಇರುವ ಸುಗಂಧವನ್ನೆಲ್ಲ ತೆಗೆದುಕೊಳ್ಳುತ್ತಿದ್ದಾನೆ ಎಂದು ಬಹಳ ಸಂತೋಷವಾಯಿತು.
ದಿನವೂ ಈ ರೀತಿಯ ಭಕ್ತಿಯ ಪೂಜೆ ಅತ್ಯಂತ ಶ್ರದ್ಧೆ ಯಿಂದ ನಡೆಯುತ್ತಿತ್ತು. ಒಂದು ತಿಂಗಳು ಕಳೆದು ನೋಡುವಾಗ ಬುದ್ಧದೇವನ ಮುಖ ಕಪ್ಪಿಟ್ಟಿತ್ತು. ಭಕ್ತನಿಗೆ ಅತ್ಯಂತ ದುಃಖ ಮತ್ತು ಚಿಂತೆಯಾಯಿತು. ಏನು ಮಾಡಲು ತೋಚಲಿಲ್ಲ. ಈ ವಿಷಯವನ್ನು ಹತ್ತಿರದಲ್ಲಿದ್ದ ಝೆನ್ ಗುರುವಲ್ಲಿ ಹೋಗಿ ನಿವೇದಿಸಿಕೊಂಡು "ಈ ರೀತಿಯಾಗಲು ಕಾರಣವೇನು? ನನ್ನ ಭಕ್ತಿಯಲ್ಲಿ ಏನಾದರು ಲೋಪವಾಯಿತೆ ? ದಯಮಾಡಿ ವಿವರಿಸಿ." ಎಂದು ಹಲುಬಿದ. ಝೆನ್ ಗುರು ಒಂದು ಕ್ಷಣ ಸುಮ್ಮನಿದ್ದು " ನೀನು ನಿನ್ನ ಇಷ್ಟದೇವನಿಗೆ ತೋರಿದ ಪ್ರೀತಿ ಅತ್ಯಂತ ಸ್ವಾರ್ಥದಿಂದ ಕೂಡಿತ್ತು. ಈ ರೀತಿಯಾದ ಪ್ರೀತಿಯಿಂದಲೇ ನಿನ್ನ ದೇವನ ಮುಖ ಕಪ್ಪಿಟ್ಟಿದೆ." ಭಕ್ತ ಹೌಹಾರಿದ. "ನನ್ನ ಪ್ರೀತಿ ಸ್ವಾರ್ಥವೇ?" ಗುರುವು ಸಂತೈಸುತ್ತ " ಹೌದು ನೀನು ತೋರಿಸಿದ ಪ್ರೀತಿ ಸ್ವಾರ್ಥದ್ದೆ ಆಗಿತ್ತು. ಈ ಪ್ರೀತಿ ಸ್ವಲ್ಪ ಕಾಲ ಚನ್ನಾಗಿರುತದೆ, ನಂತರದಲ್ಲಿ ಇದು ತನ್ನ ಮೂಲ ಉದ್ದೇಶವನ್ನೇ ತೆಗೆದು ಹಾಕಿ ಬಿಡುತ್ತದೆ. ನಿರಪೇಕ್ಷ ಭಾವದಿಂದ ತೋರುವ ಪ್ರೀತಿ ಮಾತ್ರ ಶಾಶ್ವತವಾಗಿ ನಿಲ್ಲುತ್ತದೆ. ನಿನ್ನ ಬುದ್ಧನಿಗೆ ಸಲ್ಲುವ ಸುಗಂಧ ಜಗತಿನ ಎಲ್ಲರಿಗೂ ಸಿಗಲಿ ಎನ್ನುವ ವಿಶಾಲ ಭಾವದಲ್ಲಿ ಪೂಜೆ ಮಾಡು, ಆಗ ನಿನ್ನ ದೇವನ ಮುಖದಲ್ಲಿ ಮಂದಹಾಸ ಕಾಣುತ್ತದೆ." ಎಂದನು.
ಪ್ರೀತಿಯ ಆಯ್ಕೆ ನಮ್ಮದೇ................
ಪ್ರಕಾಶ್
No comments:
Post a Comment