ಹೇ ವಿನಾಯಕ ಸುಖ ಪ್ರದಾಯಕ
ಆಲಿಸೆನ್ನಯ ಪ್ರಾರ್ಥನೆ|
ಕಾಲಚಕ್ರದ ಆಹುತಿಗೆ ಸಿಲುಕಿದೆನು
ಸಲಹೈ ದೇವನೇ..ದೇವನೇ....||
ಸತ್ಯವೆನ್ನುವ ಸೊಲ್ಲು ಅಡಗಿದೆ
ಸಿರಿಯು ಗರ್ವದಿ ಮೆರೆದಿದೆ|
ಹಣವು ಉಳ್ಳವ ಗೆಲ್ಲ ಬಲವಿದೆ|
ಅವಗೆ ಜಗ ಶಿರ ಬಾಗಿದೆ||
ದುಡಿಮೆ ಪ್ರಾಮಾಣಿಕತೆ ಇಂದು
ಕಾಣದಾಗಿದೆ ಜಗದಲಿ|
ಜನರ ವಂಚಿಪ ಸ್ವಾರ್ಥ ಸಾಧಿಪ|
ಲೋಕ ಬದುಕಿದೆ ಸೊಗದಲಿ||
ಶಾಲೆಯ ಶಿಕ್ಷಕರ ಜಿಲಾಮಟ್ತದ ಒಂದು ಸಭೆ. ಆ ಸಭೆಗೆ ನಾನು ಆಹ್ವಾನಿಸಲಪಟ್ಟಿದ್ದೆ. ಕಾರ್ಯಕ್ರಮದ ಆರಂಭದಲ್ಲಿ ಒಬ್ಬ ಟೀಚರ್ ಆಕೆಯ ಅಣ್ಣ ರಚಿಸಿದ್ದ ಈ ಹಾಡು ಹಾಡಿದರು. ನಾನು ತಲೆ ದೂಗಿದೆ. ಆದರೆ ಒಬ್ಬ ಹಿರಿಯರು ತಮ್ಮ ಆಕ್ಷೇಪ ಎತ್ತಿದರು. ಏನು ಈ ಹಾಡು ನಿರಾಸಾದಾಯಕವಾಗಿದೆಯಲ್ಲಾ! ಅವರ ಆಕ್ಷೇಪದ ಮಾತು.
ನನ್ನ ಅಭಿಪ್ರಾಯದಲ್ಲಿ ಒಬ್ಬ ಕವಿ ತನ್ನ ಭಾವನೆಗೆ ಅಕ್ಷರವನ್ನು ಕೊಡುತ್ತಾನೆ. ಅದು ಆಶಾದಾಯಕ ವಾಗಿರುತ್ತದೋ , ನಿರಾಶೆಯಿಂದ ತುಂಬಿರುತ್ತದೋ, ಏನೋ ಒಂದು ಭಾವ ಹೊತ್ತು ಹಾಡು ಮೂಡಿ ಬಂದಿರುತ್ತದೆ. ಇಲ್ಲಿ ಕವಿಯು ತೋಡಿ ಕೊಂಡಿರುವ ಭಾವನೆ ಸುಳ್ಳೇ? ವಾಸ್ತವ ವಲ್ಲವೇ? ನಿರಾಶೆಯಿಂದ ತುಂಬಿದೆ ಎಂದರೆ ಇಲ್ಲಿ ಕವಿಯು ಎತ್ತಿರುವ ಪ್ರಶ್ನೆಗಳಿಗೆ ಆಶಾದಾಯಕವಾಗಿ ಸೂತ್ರ ರೂಪಿಸಬೇಕಾದ ಜವಾಬ್ದಾರಿ ಆಕ್ಷೇಪ ಮಾಡುವವರದ್ದು ತಾನೇ? ನೀವೇನು ಅನ್ನುವಿರಿ? ನಿಮ್ಮ ಪ್ರತಿಕ್ರಿಯೆ ನಿರೀಕ್ಷಿಸುವೆ.
No comments:
Post a Comment