ಓ ದೇವರೇ, ನೀನೆಲ್ಲಿರುವೆ?
ಇಲ್ಲಿ, ಭೂಲೋಕದಲ್ಲಿ ನಿನ್ನ ಬಗ್ಗೆ
ಅದೆಷ್ಟು ಚರ್ಚೆಗಳು! ಅದೆಷ್ಟು ವಾದಗಳು!
ಎಲ್ಲವೂ ನಿನ್ನ ಗಮನಕ್ಕೆ ಬಂತೇ?
ಗುಡಿಯಲ್ಲಿ ಬಂಧಿಸುವವರು ನಿನ್ನ ಕೆಲವರು|
ಅಷ್ಟೇ ಸಾಲದೆಂಬಂತೆ ನಿನಗೆ
ಸ್ನಾನ ಮಾಡಿಸುವವರೆಷ್ಟು ಮಂದಿ!
ಬೆಳಕು ತೋರುವವರೆಷ್ಟು ಮಂದಿ!
ಉಣ ಬಡಿಸುವವರೆಷ್ಟು ಮಂದಿ!
ಇದ ನೋಡಿದ ಕೆಲವರು ನಕ್ಕು
ಸುಮ್ಮನಾಗಿದ್ದರೆ ಪರವಾಗಿರಲಿಲ್ಲ|
ನಿನಗೆ ಉಣಿಸಿದರನ್ನೇ [!!] ಗೇಲಿ ಮಾಡುವರು
ನಿನ್ನ ಆಕಾರವ ನೋಡಿ ಕೇಕೆ ಹಾಕುವರು||
ದ್ವೈತ/ಅದ್ವೈತ/ವಿಶಿಷ್ಟಾದ್ವೈತ ವಂತೆ
ನಿನ್ನ ನೋಡಲು ಹಲವು ದಾರಿಗಳ೦ತೆ!
ಹವನ ಹೋಮ ಗಳಂತೆ! ವ್ರತ ಕತೆಗಳಂತೆ!!
ನಿನಗೆ ಇವೆಲ್ಲಾ ಲಂಚ ವಂತೆ!!
ಹೇ ಭಗವಾನ್,
ನಿನ್ನನ್ನೂ ಬ್ರಷ್ಟ ನನ್ನಾಗಿ ಮಾಡಿದ
ಶ್ರೇಷ್ಠರು ಇಲ್ಲಿದ್ದಾರೆ!
ನಿನಗೆ ಕಾಣದಿದ್ದರೆ ನಿನ್ನ ಕಣ್ಣು ಕುರುಡೇ?
ಸರ್ವ ಶಕ್ತನಾದ ನಿನಗೆ
ಈ ರಂಪಾಟದ ಅರಿವಾಗಿಲ್ಲವೇ?
ಅರರೆ ನಾನಾರಿಗೆ ಹೇಳುತ್ತಿರುವೆ?
ಸರ್ವಶಕ್ತನಿಗೆ ನಾನು ಹೇಳಿದ ಮೇಲೆ ತಿಳಿಯಬೇಕೇ?
ಅಂತೂ ನನ್ನ ದೃಷ್ಟಿಯಲ್ಲಿ
ನೀನೊಂದು ಶಕ್ತಿ ಅಷ್ಟೇ|.
ಹೌದು, ನನ್ನ ಊಹೆಗೂ ಮೀರಿದ ಶಕ್ತಿ!
ಎಲ್ಲವನೂ ಅಟ್ಟಾಡಿಸುವ ಶಕ್ತಿ!
ನನ್ನೊಳಗೆ, ಇವನೊಳಗೆ ಎಲ್ಲರೊಳಗೆ|
ಎಲ್ಲೆಲ್ಲೂ, ಎಂದೆಂದೂ, ಕಣ್ ಮಿಟುಕಿಸದೆ
ಕಾಯುತ್ತಿರುವ ನೀ ಅನಂತ ಶಕ್ತಿ|
ನಿನ್ನ ನಂಬುವುದೊಂದೇ ಯುಕ್ತಿ||
ನಿನ್ನ ಹೆಸರಲಿ ಬಡಿದಾಡುವ
ಬ್ಲಾಕ್ ಮೇಲ್ ಮಾಡುವ
ಜನರದು ಕುಯುಕ್ತಿ
ಅವರಿಗಿಲ್ಲ ಶ್ರದ್ಧಾ ಭಕ್ತಿ||
No comments:
Post a Comment