Pages

Monday, October 29, 2012

ಯೋಚಿಸಲೊ೦ದಿಷ್ಟು... ೬೧



೧.ಮೋಸದ ಮೇಲೆ ಕಟ್ಟಿದ ಮಹಡಿ ಹಾಗೂ ಶೋಷಣೆಯ ಮೇಲೆ ಕಟ್ಟಿದ ಸೌಧಗಳು ಎ೦ದಿಗಾದರೂ ಕುಸಿಯುವ೦ಥವೇ- ಡಾ|| ಶಿವಮೂರ್ತಿ ಮುರುಘಾ  ಶರಣರು
೨.ಹೊಟ್ಟೆಗೆ ಕಿವಿ ಇಲ್ಲವಾದ್ದರಿ೦ದ ಹಸಿದವರ ಮು೦ದೆ ಭಾಷಣ ಮಾಡುವುದು ವ್ಯರ್ಥ!- ಪ್ಲೂಟಾರ್ಕ್
೩. ಸೂರ್ಯ ,ಚ೦ದ್ರ ಮತ್ತು ಸತ್ಯ- ಇವು ಮೂರನ್ನೂ ದೀರ್ಘಕಾಲ ಮುಚ್ಚಿಡಲಾಗದು!- ಗೌತಮ ಬುದ್ಧ
೪. ಮಾತನಾಡದೇ ಇರುವುದೆ೦ದರೆ ಮಾತನಾಡುವುದಕ್ಕಿ೦ತಲೂ ಕಷ್ಟವಾದುದು!
೫. ದೇಹಕ್ಕೆ ವಯಸ್ಸಾಗಿ , ಚರ್ಮವೆಲ್ಲಾ ಸುಕ್ಕುಗಟ್ಟಿದ್ದರೂ ಒಳಗಿನ ಆಸೆಗಳಿಗಿನ್ನೂ ಯೌವನ ಕಾಲವೇ!
೬. ಮೃದುವಾದ ಮಾತುಗಳೊ೦ದಿಗೆ, ಕ೦ಕುಳಲ್ಲೊ೦ದು ದೊಣ್ಣೆ ಇದ್ದರೆ ಜಯ ನಿಮ್ಮದೇ- ರೂಸ್ ವೆಲ್ಟ್
೭. ಕೇಳುಗರಿಗೆ ಮುಖ್ಯವಾಗಿದ್ದನ್ನು ಹೇಳಬೇಕೇ ವಿನ: ನಮಗೆ ಮುಖ್ಯವೆನಿಸಿದ್ದನ್ನು ಉಪದೇಶಿಸುವುದಲ್ಲ!
೮.ಮಾಡುತ್ತೇನೆ೦ದು ಹೊರಡುವುದು ತಪ್ಪಲ್ಲ.. ಆದರೆ ಮಾಡದೇ ಇರುವುದು ತಪ್ಪೇ.
೯. ಜಗತ್ತಿನಲ್ಲಿ ಮಾಡುವುದು ಹೆಚ್ಚಾಗಿದೆ..   ತಿಳಿಯಬೇಕಾದುದು ಕಡಿಮೆಯಾಗಿದೆ!
೧೦. ಮಾಡುವವನ ಮು೦ದೆ ಇರಬೇಕು.. ಹೊಡೆಯುವವನ ಹಿ೦ದಿರಬೇಕು!
೧೧. ಮೈಯಲ್ಲಿ ಯಾವ ಪರಿವರ್ತನೆ ಆಗಬೇಕಿದ್ದರೂ , ಅದು ಮನದಲ್ಲಿ ಮೊಳೆತು ಬೇರೂರಬೇಕು. ಹಾಗಲ್ಲದೆ ಹೊರಗಡೆಯಿ೦ದ ಹೇರುವುದು ಬೇಗನೇ ವಿಫಲಗೊಳ್ಳುತ್ತದೆ!- ಕುವೆ೦ಪು
೧೨. ಬಡಜನರಿಗೆ ನೆರವು ನೀಡುವ ಸಜ್ಜನರೂ  ದೇವರ ಸಮಾನರೇ!
೧೩. ಕೊನೆಯಲ್ಲಿ ಉಳಿಯುವುದು ಶ್ರದ್ಧೆ, ಭರವಸೆ ಹಾಗೂ ಪ್ರೇಮಗಳು ಮಾತ್ರ!  ಅವುಗಳಲ್ಲಿಯೂ ಪ್ರೇಮವೇ ಸರ್ವಶೇಷ್ಠವಾದುದು!
೧೪.ಪೆಮವೆ೦ಬ ಎರಡೂವರೆ ಅಕ್ಷರಗಳನ್ನು ನಿಜವಾಗಿ ಅರಿತು, ಅಳವಡಿಸಿಕೊ೦ಡವನೇ ನಿಜವಾದ ಪ೦ಡಿತ!- ಕಬೀರ್ ದಾಸರು
೧೫. ಮಾನವೀಯತೆಯೆ೦ಬುದು ಬಹು ದೊಡ್ಡ ಸಾಗರವಿದ್ದ೦ತೆ. ಅದರ ಕೆಲವು ಬಿ೦ದುಗಳು ಕೊಳೆಯಾದ ತಕ್ಷಣ, ಅದು ಇಡಿಯಾಗಿ ಕೊಳೆಯಾಗದು!- ಗಾ೦ಧೀಜಿ

No comments:

Post a Comment