ಭೇತವ್ಯಂ ನ ತಥಾ ಶತ್ರೋರ್ನಾಗ್ನೇರ್ನಾಹೇರ್ನ ಚಾಶನೇಃ ।
ಇಂದ್ರಿಯೇಭ್ಯೋ ಯಥಾ ಸ್ವೇಭ್ಯಸ್ತೈರಜಸ್ರಂ ಹಿ ಹನ್ಯತೇ ॥
ಶತ್ರುವಿಗಾಗಲಿ, ಬೆಂಕಿಗಾಗಲಿ, ಸರ್ಪಕ್ಕಾಗಲಿ, ಸಿಡಿಲಿನ ಹೊಡೆತಕ್ಕಾಗಲಿ ನಾವು ಅಷ್ಟು ಹೆದರಬೇಕಾಗಿಲ್ಲ. ತನ್ನ ಇಂದ್ರಿಯಗಳಿಗೆ ಹೆಚ್ಚು ಹೆದರಬೇಕಾಗಿದೆ. ಏಕೆಂದರೆ ಅವುಗಳು ಸದಾ ಪೀಡಕವು . ಅವುಗಳು ಪೀಡಿಸಿದಷ್ಟು ಬೇರಾವುದೂ ಪೀಡಿಸುವುದಿಲ್ಲ.
ಅಬ್ಭಾ! ಎಂತಹ ಮಾತು!! ನಮ್ಮ ಇಂದ್ರಿಯದಾಟವನ್ನು ನಾವು ಗೆದ್ದರೆ ಬೇರೇನನ್ನೂ ಗೆಲ್ಲುವುದು ಕಷ್ಟವೇನಿಲ್ಲ. ಇಂದ್ರಿಯನಿಗ್ರಹ ಇದೆಯಲ್ಲಾ, ಅದೇ ಬಲು ಕಷ್ಟ. ಸಾಧನೆ ಅಂದರೆ ಬೇರೇನು? ಅದನ್ನು ಸಾಧಿಸಬೇಕು.ಕಷ್ಟಪಟ್ಟು ಸಾಧಿಸುವುದರಲ್ಲಿ ಸಂತಸ ಕಾಣಬೇಕು.
ಇಂದ್ರಿಯ ಸಮಸ್ತದಖಿಲಾನುಭವಗಳ ನೀನು |
ReplyDeleteಕೇಂದ್ರೀಕೃತಂಗೆಯ್ದು ಮನನದಿಂ ಮಥಿಸಿ ||
ತಂದ್ರಿಯಿರದಾತ್ಮ ಚಿಚ್ಛಕ್ತಿಯಿಂದುಜ್ಜುಗಿಸೆ |
ಸಾಂದ್ರತತ್ತ್ವಪ್ರಾಪ್ತಿ - ಮರುಳ ಮುನಿಯ || (೨೬೨)
ಇಂದ್ರಿಯಗಳಿಗೆ ಸಂಬಂಧಪಟ್ಟ ಎಲ್ಲಾ ಅನುಭವಗಳನ್ನು ನೀನು ಅಂತರಂಗದಲ್ಲಿ ಏಕಾಗ್ರಗೊಳಿಸಿ, ಮನಸ್ಸಿನೊಳಗಡೆ ಅವುಗಳನ್ನು ನಿರಂತರ ಚಿಂತನ ಮಂಥನಗಳಿಂದ ಕೂಲಂಕುಷವಾಗಿ ಆಲೋಚಿಸಿ, ಆಲಸ್ಯ(ತಂದ್ರಿ)ದಿಂದರದ ಆತ್ಮದ ಜ್ಞಾನಶಕ್ತಿ(ಚಿಚ್ಛಕ್ತಿ...)ಯಿಂದ ಸಾಧನೆಗೈದಲ್ಲಿ ಪರಬ್ರಹ್ಮ ಸಾಕ್ಷಾತ್ಕಾರ ಆಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")
ಹೌದು,ನಿಮ್ಮ ಪ್ರತಿಕ್ರಿಯೆ ಅರ್ಥಗರ್ಭಿತ.
ReplyDelete