ಲಾಲಯೇತ್ ಪಂಚ ವರ್ಷಾಣಿ ದಶ ವರ್ಷಾಣಿ ತಾಡಯೇತ್ ।
ಪ್ರಾಪ್ತೇಷು ಷೋಡಶೇ ವರ್ಷೇ ಪುತ್ರಂ ಮಿತ್ರ ವದಾಚ್ಜರೇತ್ ॥
ಮಗು ಹುಟ್ಟಿದ ಐದು ವರ್ಷಗಳ ತನಕ ಮುದ್ದಾಡಬೆಕು, ಹಾಗೆಯೇ ಮುಂದಿನ ಹತ್ತು ವರ್ಷಗಳು ಹೊಡೆದು ಬುದ್ಧಿ ಹೇಳಬೇಕು. ಆಮೇಲೆ ಹದಿನಾರನೆಯ ವರ್ಷದಿಂದ ಮಗನನ್ನು ಗೆಳೆಯನಂತೆ ಕಾಣಬೇಕು.
ಪ್ರಾಪ್ತೇಷು ಷೋಡಶೇ ವರ್ಷೇ ಪುತ್ರಂ ಮಿತ್ರ ವದಾಚ್ಜರೇತ್ ॥
ಮಗು ಹುಟ್ಟಿದ ಐದು ವರ್ಷಗಳ ತನಕ ಮುದ್ದಾಡಬೆಕು, ಹಾಗೆಯೇ ಮುಂದಿನ ಹತ್ತು ವರ್ಷಗಳು ಹೊಡೆದು ಬುದ್ಧಿ ಹೇಳಬೇಕು. ಆಮೇಲೆ ಹದಿನಾರನೆಯ ವರ್ಷದಿಂದ ಮಗನನ್ನು ಗೆಳೆಯನಂತೆ ಕಾಣಬೇಕು.
ಈಗ ಇಂದಿನ ಸಮಾಜಸ್ಥಿತಿಯನ್ನು ಸ್ವಲ್ಪ ವಿಮರ್ಷೆ ಮಾಡೋಣ. ಐದು ವರ್ಷಗಳ ತನಕ ಮಗುವನ್ನು ಮುದ್ದಾಡುತ್ತೇವೆಯೇ? ಇಲ್ಲಾ. ಆ ಮಗುವನ್ನು ಬೇಬಿ ಸಿಟ್ಟಿಂಗ್,ಎಲ್.ಕೆ.ಜಿ, .ಉ.ಕೆ.ಜಿ ಅಂತಾ ಮೂರುತರಗತಿಗಳನ್ನು ಆ ಮಗು ತನ್ನ ಐದು ವರ್ಷದೊಳಗೆ ಪೂರೈಸಿರಬೇಕು. ಮಗು ಅತ್ತರೂ ಬಿಡುವುದಿಲ್ಲ!! ಮಕ್ಕಳನ್ನು ಮುದ್ದಾಡುವುದಕ್ಕೆ ನಮಗೆ ಸಮಯವಿಲ್ಲ. ಟಿ.ವಿ. ನೋಡಬೇಕಲ್ಲಾ!!
ಇನ್ನು ಹತ್ತು ವರ್ಷಗಳ ತನಕ ಯೂನಿ ಫಾರ್ಮ್ ಹಾಕಿಕೊಂಡು ಬೆನ್ನಮೇಲೆ ಐವತ್ತು ಕೆ.ಜಿ ಭಾರವನ್ನು ಹೊತ್ತು ಮಕ್ಕಳನ್ನು ಸ್ಕೂಲಿಗೆ ಕಳಿಸುವ ನಾವು ಆ ಮಗು ಮನೆಗೆ ಬರುವ ಹೊತ್ತಿಗೆ ಸುಸ್ತಾಗಿ ಟೀಚರ್ ಕೊಟ್ಟಿರುವ ಹೋಮ್ ವರ್ಕ್ ಮಾಡಲಾರದೆ ಒದ್ದಾಡುವುದನ್ನು ನೋಡಲಾರದೆ ನಾವೇ ಮಕ್ಕಳ ಹೋಮ್ ವರ್ಕ್ ಬರೆದು ಮಕ್ಕಳಿಗೆ ಕಾಡಿ ಬೇಡಿ ಊಟ ಮಾಡಿಸುತ್ತೇವೆ. ಇನ್ನು ಹೊಡೆದು ಬುದ್ಧಿಯನ್ನು ಯಾರಿಗೆ ಕಲಿಸಬೇಕು. ಅದಕ್ಕಿಂತ ಘೋರಶಿಕ್ಷೆಯನ್ನು ಶಾಲೆಯಲ್ಲೇ ಕೊಡಲು ವ್ಯವಸ್ಥೆ ಆಗಿದೆಯಲ್ಲಾ!
ಮಕ್ಕಳು ಹದಿನಾರು ಸಮೀಪಿಸುತ್ತಿರುವಾಗ ಎಸ್.ಎಸ್.ಎಲ್.ಸಿ ಮುಗಿಸಿ ಪಿ.ಯು.ಸಿ ಮೆಟ್ಟಿಲು ಹತ್ತುತ್ತಿರುವಾಗ ಹಗಲು ರಾತ್ರಿ ಟ್ಯೂಶನ್ ಕಾಟ. ಮಗನಂತೂ ಫುಲ್ ಬಿಜಿ*. ಈ ಅವಸ್ಥೆಯಲ್ಲಿ ಮಾತನಾಡಿಸಲು ಮಕ್ಕಳಿಗೆ ಪುರಸೊತ್ತಿಲ್ಲ. ಅವನೊಡನೆ ಹೇಗೆ ನಡೆದುಕೊಳ್ಳಬೇಕೆಂದು ಅಪ್ಪ-ಅಮ್ಮನಿಗೆ ಗೊತ್ತಾಗುವುದೇ ಇಲ್ಲ. ಕಾರಣ ಅವನು ಇವರ ಕೈಗೆ ಸಿಕ್ಕುವುದೇ ಇಲ್ಲ.
ನಾವೇ ಕಟ್ಟಿಕೊಂಡಿರುವ ಈ ವಿಷ ವರ್ತುಲದಿಂದ ಹೊರಬಾರದೆ ನಾವು ನಮ್ಮ ಮಕ್ಕಳಿಂದ ಏನು ನಿರೀಕ್ಷಿಸಲು ಸಾಧ್ಯ? ಜೊತೆಗೆ ಟಿವಿ,ಇಂಟರ್ ನೆಟ್, ಮೊಬೈಲ್....ಎಲ್ಲವೂ ನಮ್ಮ ಸಂಬಂಧಗಳನ್ನು ಹಾಳುಮಾಡಲು ನಾವೇ ನಿರ್ಮಿಸಿಕೊಂಡಿರುವ ವಿಷ ವರ್ತುಲ!!!
ಸೂಕ್ತ: ಶ್ರೀ ಸದ್ಯೋಜಾತರಿಂದ ಪ್ರಕಟಿತ
ಚಿಂತನೆ: ಹರಿಹರಪುರಶ್ರೀಧರ್
Nanjunda Raju
ReplyDeleteಮಾನ್ಯರೇ, ನಿಜ ನೀವು ಹೇಳುವುದು ಸರಿ.ನಾವೇ ನಿರ್ಮಿಸಿಕೊಂಡಿರುವ ವಿಷ ವರ್ತುಲ!!!
ಆದರೆ,ಅನಿವಾರ್ಯ ಅಲ್ಲವೇ? ನಮ್ಮ ನೆರೆ ಹೊರೆಯವರು ಎಲ್ಲರೂ ಅದನ್ನೇ ಮಾಡುವಾಗ, ನಾವು
ಬೇರೆ ಮಾಡಲು ಸಾಧ್ಯವೇ? ಇಲ್ಲವಾದರೆ, ನಮ್ಮ ಮಕ್ಕಳ ಭವಿಷ್ಯ ಏನಾಗುತ್ತದೋ ಎಂಬ ಭಯ
ಅಲ್ಲವೇ?
--