ನಮಗೇನಾಗಿದೇ ಅಂದ್ರೆ ಧರ್ಮ-ದೇವರಲ್ಲಿ ಭಯ! ಕಳೆದೆರಡು ವರ್ಷಗಳಿಂದ ನಮ್ಮಲ್ಲಿ ನಡೆಯುತ್ತಿರುವ ವೇದ ಪಾಠಕ್ಕೆ ಸ್ತ್ರೀಯರು ಆರಾಮವಾಗಿ ಬಂದು ಅಗ್ನಿಹೋತ್ರ ಮಾಡ್ತಾರೆ....ವೇದಮಂತ್ರ ಪಠಣ ಮಾಡ್ತಾರೆ....ಆರೋಗ್ಯವಾಗಿ ಸಂತೋಷವಾಗಿದ್ದಾರೆ. ಆದರೆ ಕೆಲವರು ಹೊಸಬರು ಬರ್ತಾರೆ. ಅವರಿಗೆ ಯಾರೋ ಅವರ ಗುರುಗಳು ಹೇಳ್ತಾರೆ " ಅಯ್ಯೋ ವೇದ ಮಂತ್ರ ಹೇಳ್ಬಾರದಮ್ಮಾ! ಅಂತಾ ತಪ್ಪು ಮಾಡಿದ್ರೆ ಬಲು ಕಷ್ಟ ಆಗುತ್ತೆ!!! "
ಛೇ! ವೇದದ ಬಗ್ಗೆ ಇದೇನಾ ಅರಿವು ಗುರುಗಳು ಎನಿಸಿಕೊಂಡವರಿಗೆ? ಗುರುಗಳ ಬಗ್ಗೆ ಮಾತಾಡಿದರೆ ಕೆಲವರಿಗೆ ಸಿಟ್ಟು ಬರೋದು ಸಹಜ. ಅದು ಅವರ ನಂಬಿಕೆಗೆ ಮಾರಕ. ಆದರೆ ಏನು ಮಾಡುವುದು? ಗುರು ಪದದ ಅರ್ಥ ಏನು? ಸ್ವಲ್ಪ ತಿಳಿದುಕೊಳ್ಳಬಾರದೇ? ಅಜ್ಞಾನ ಎಂಬ ಕತ್ತಲೆಯಿಂದ ಜ್ಞಾನ ಎಂಬ ಬೆಳಕಿನ ಕಡೆಗೆ ಕರೆದುಕೊಂದು ಹೋಗುವವನಲ್ಲವೇ ಗುರು? ಆದರೆ ಜ್ಞಾನ [ವೇದ] ಬೇಡ ಎನ್ನುವವರನ್ನು ಗುರುವಾಗಿ ಒಪ್ಪಬೇಕಾ?
ವೇದಮಂತ್ರ ಗಳಲ್ಲಿ ನನ್ನ ಮೇಲೆ ಹೆಚ್ಚು ಪರಿಣಾಮ ಬೀರಿದ ಮಂತ್ರ ವೆಂದರೆ - ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ | ವಿಧ್ಯತಾ ವಿದ್ಯುತಾ ರಕ್ಷ: || ಯಾವುದೇ ವಿಚಾರವನ್ನು ಕುರುಡಾಗಿ ಒಪ್ಪದೆ ಸತ್ಯದ ಆವಿಷ್ಕಾರಮಾಡು ಎನ್ನುವ ಋಗ್ವೇದದ ಮಂತ್ರ.
ಅರ್ಥ ಹೀಗಿದೆ. ಸತ್ಯವನ್ನೇ ಶಕ್ತಿಯಾಗಿ ಹೊಂದಿರುವ ಧೀರರೇ, ನಿಮ್ಮ ಸ್ವಂತ ಮಹಿಮೆಯಿಂದ ಸತ್ಯವನ್ನು ಆವಿಷ್ಕರಿಸಿ. ದುಷ್ಕಾಮನೆಗಳನ್ನು ನಿಮ್ಮ ಜ್ಞಾನಜ್ಯೋತಿಯಿಂದ ಸೀಳಿ ಹಾಕಿರಿ- ವೇದದ ಈ ಮಾತನ್ನು ಕೇಳಿದರೆ ನನ್ನ ಮೈ ಒಮ್ಮೆ ಝುಂ ಎಂದಿತು. ಎಷ್ಟು ನಿಷ್ಟುರವಾದ ಮಾತು !
ಯೋಚನೆ ಮಾಡಬೇಕಲ್ಲವಾ? ಸ್ತ್ರೀಯರು ಯಾಕೆ ವೇದ ಮಂತ್ರ ಪಠಿಸಬಾರದು? ಏನಾಗುತ್ತೆ? ಬಾರದು ಎಂದು ವೇದದಲ್ಲಿ ಎಲ್ಲಿ ಹೇಳಿದೆ? ಹೇಳಿಲ್ಲದಿದ್ದರೂ ಪರವಾಗಿಲ್ಲ. ಯಾರಿಗೆ ಏನು ತೊಂದರೆ ಆಗಿದೆ? ಇದನ್ನು ಆ ಗುರುಗಳು ತಿಳಿಸಬಾರದಾ?
ಅನ್ಯಾಯವಾಗಿ ಹೆದರಿಸಿ ಬಿಟ್ಟರಲ್ಲಾ!
ಮೊದಲು ಭಯ ಇರಬಾರದು. ವೇದವನ್ನು ಅನುಸರಿಸಿದರೆ ಭಯ ತಾನೇ ತಾನಾಗಿ ಪಲಾಯನ ಮಾಡುತ್ತೆ

ಆಧ್ಯಾತ್ಮಿಕ ಚಿಂತನೆಯಿಂದಲೀ ಯಾರಾದರೂ ಗುರಿ ಮುಟ್ಟಿದ್ದಾರಾ ಎಂಬುದೇ ನನ್ನ ಬರಹಗಳ ಮೊದಲನೇ ಪ್ರಶ್ನೆ ಇದು ವರಿವಿಗೂ ಯಾರೂ ನಾನು ಕಂಡೆ ಅರಿತೆ ಅನುಭವಿಸಿದೆ ಎಲ್ಲರಿಗೂ ಏಟುಕುವುದು ಇದು ಸಿದ್ಧಾಂತವಿದು ಎಂದು ಹೇಳಿದವರಿಲ್ಲ. ಮತ್ತೇ ನಿಮ್ಮ ಯಾವುದೇ ಗುರುಗಳು ಶತವಧಾನಿಗಳು ಸಾಧು ಸಂತರು ಯಾರಾದರು ಒಬ್ಬನೇ ಒಬ್ಬ ಸಿಗಲಾರ. ಸಿಕ್ಕದಾ ವಿಚಾರಕ್ಕೆ ಏಕೆ ಈ ಪರದಾಟ ಎಂಬುದೇ ಉತ್ತರ.
ReplyDeleteಗುರಿ ಮುಟ್ಟುವುದೆಂದರೇನು? ನಾನು ಹಾಗೆ ಯೋಚಿಸಿದವನೇ ಅಲ್ಲ. ನಿತ್ಯ ಬದುಕಿನಲ್ಲಿ ನೆಮ್ಮದಿ ಬೇಕಲ್ಲಾ ! ಅದಕ್ಕೆ ಇವೆಲ್ಲಾ. ಕೆಲವರು ನೆಮ್ಮದಿ ಹಾಳಾದಾಗ ಕ್ಲಬ್ಬಿಗೆ ಹೋಗುತ್ತಾರೆ.ಅಲ್ಲಿ ನೆಮ್ಮದಿ ಮತ್ತೂ ಹಾಳಾಗುತ್ತೆ. ಮನಸ್ಸು ವ್ಯಗ್ರವಾಗುತ್ತೆ. ನಾನು ಮಾಡುತ್ತಿರುವ ಚಟುವಟಿಕೆಗಳ ಪರಿಣಾಮ ನೆಮ್ಮದಿ ಕೆಡುವುದೇ ಇಲ್ಲ. ಆನಂದವಾಗಿರುತ್ತೇನೆ. ಒಂದು ದಿನ ಕಂತೆ ಬಿಸಾಕುವೆ.
ReplyDelete