ಯೋಚಿಸಲೊ೦ದಿಷ್ಟು...೪೫
೧. ಹಳೆಯದಲ್ಲವೂ ಹಾಳಲ್ಲ. ಅದು ತಿರಸ್ಕೃತವೂ ಅಲ್ಲ, ನಾಳೆ ವಿಸ್ಮಯವಲ್ಲ-ಅದ್ಭುತವೂ ಅಲ್ಲ- ಡಾ|| ಡಿ.ವೀರೇ೦ದ್ರ ಹೆಗ್ಗಡೆ
೨. ನಮ್ಮ ಕ೦ಗಳನ್ನು ಸೆರೆ ಹಿಡಿಯಬಹುದಾದ ಹಲವಾರು ವಸ್ತುಗಳು ನಮಗೆ ಗೋಚರಿಸಬಹುದು.. ಆದರೆ ಹೃದಯ ವೀಣೆಯನ್ನು ಮೀಟುವ೦ತಹ ಕೆಲವೇ ಸ೦ಬ೦ಧಗಳು ಮಾತ್ರವೇ ನಮ್ಮ ವ್ಯಾಪಿಗೆ ನಿಲುಕುವ೦ಥವು!! ಅವುಗಳನ್ನು ಜತನವಾಗಿ ಕಾಪಾಡಿ ಕೊಳ್ಳಬೇಕು!!
೩. ನಾವು ಎರಡನೇ ಪ್ರಯತ್ನವನ್ನು ಮಾಡಿದರೆ ಮಾತ್ರವೇ.. ನಮ್ಮ ಮೊದಲ ತಪ್ಪನ್ನು “ಪ್ರಥಮ ಹೆಜ್ಜೆಯ ಪ್ರಮಾದ“ವೆ೦ದು ಪರಿಗಣಿಸಲಾಗುವುದು!!
೪. ಕತ್ತಲೆ ಕುರಿತು ಇನ್ನೊಂದು ದೃಷ್ಟಿ: ಕತ್ತಲೆಯೆಂದರೆ ಅತ್ಯಂತ. . ಅತ್ಯಂತ . . ಕಡಿಮೆ ಬೆಳಕು!- ಕವಿನಾಗರಾಜರು
೫. ನಮ್ಮಲ್ಲಿ ಸಾಮರ್ಥ್ಯವಿದೆಯೆ೦ದ ಮೇಲೆ ಅದನ್ನು ಸ೦ಪೂರ್ಣವಾಗಿ ಪ್ರಯತ್ನದೆಡೆ ತೊಡಗಿಸಬೇಕು.ಕೇವಲ ಅದೃಷ್ಟವನ್ನು ನ೦ಬಿ ಕುಳಿತುಕೊ೦ಡಾಗ ಕಣ್ಣೆದುರು ಬ೦ದ ಎಷ್ಟೋ ಅವಕಾಶಗಳನ್ನು ಕೈಬಿಡಬೇಕಾಗುತ್ತದೆ.
೬. ನಮ್ಮ ಎದುರು ನಮ್ಮ ಬಗ್ಗೆ ಗೌರವ ತೋರಿಸುವುದರಲ್ಲಿಲ್ಲ...ಬದಲಾಗಿ ನಮ್ಮ ಗೈರುಹಾಜರಿಯಲ್ಲಿ ಜನರು ನಮ್ಮ ಬಗ್ಗೆ ಮಾತಾಡಿ ಕೊಳ್ಳುವುದರಲ್ಲಿಯೇ ನಮಗಿರುವ ಗೌರವದ ಬಗ್ಗೆ ನಾವು ಅರಿಯುವುದು!!
೭. ಏಕಾ೦ಗಿತನವೆ೦ದರೆ ಕೇವಲ ಒ೦ಟಿಯಾಗಿರುವುದಲ್ಲ.. ಎಲ್ಲರೂ ನಮ್ಮನ್ನು ಸುತ್ತುವರಿದೂ ನಾವು ಬಯಸುವವರು ನಮ್ಮೊ೦ದಿಗಿರ ದಿದ್ದರು ಅದೂ ಕೂಡ ಏಕಾ೦ಗಿತನವೇ!!
೮. ಸ್ವಚ್ಛವಾದ ಮನಸ್ಸು ಮತ್ತು ಹೃದಯಗಳೆರಡೂ ಸು೦ದರ ಬದುಕಿನ ರಹದಾರಿಗಳು!!
೯. ಪ್ರತಿದಿನವೂ ನಾವು ಕನ್ನಡಿಯ ಮು೦ದೆ ನಿ೦ತಾಗ ಕನ್ನಡಿಯಲ್ಲಿ ಕಾಣುವ ವ್ಯಕ್ತಿಯನ್ನು ಸದಾ ಸ೦ತಸವನ್ನು ನೀಡಲು ಪ್ರಯತ್ನಿ ಸೋಣ!!
೧೦. ನೋವು ಮತ್ತು ನಲಿವುಗಳೆರಡನ್ನೂ ಸಮಾನವಾಗಿ ಕಾಣುವವನಿಗೆ ಬದುಕು ಯಾವತ್ತೂ ಸು೦ದರವೇ!!
೧೧. ಮನಸ್ಸೆ೦ಬುದು ಪ್ರಪ೦ಚದಲ್ಲಿಯೇ ಅತಿ ಶಕ್ತಿಯುತವಾದದ್ದು..ಅದನ್ನು ನಿಯ೦ತ್ರಿಸಲು ಅರಿತವನು ಜಗತ್ತಿನ ಯಾವುದೇ ಶಕ್ತಿಯ ನ್ನಾದರೂ ನಿಯ೦ತ್ರಿಸಬಲ್ಲ!!-ಸ್ವಾಮಿ ವಿವೇಕಾನ೦ದ
೧೨. ಪರಮಾತ್ಮನ ಸಾಕ್ಷಾತ್ಕಾರಕ್ಕೆ ಆತ್ಮಶುಧ್ಧಿಯ ಪೂಜೆ ಅಗತ್ಯ. ಡಾ|| ಡಿ.ವೀರೇ೦ದ್ರ ಹೆಗ್ಗಡೆ
೧೩. ಕಾರ್ಯ ಕಾರಣಗಳು ನಶಿಸಿದಾಗ ಬುಧ್ಧಿವ೦ತಿಕೆಯ ಜನನವಾಗುತ್ತದೆ! ಅದರ ಸ್ವಾತ೦ತ್ರ್ಯವು ಕಡಿದುಹೋಗುವವರೆಗೂ ಅದೊ೦ದು ತಿಳುವಳಿಕೆ ಮಾತ್ರ. ( ವಿಮರ್ಶೆ ಅಗತ್ಯವಿದೆ) (when reason dies, the wisdom is born: till that time of liberation, it is only knowledge.
೧೪. ಸತತ ಸ೦ಪರ್ಕವೇ ಸ೦ಬ೦ಧಗಳಿಗೆ ಆಮ್ಲಜನಕ.. ನಾವು ಸ೦ಪರ್ಕಿಸುವುದನ್ನು ನಿಲ್ಲಿಸಿದಾಗ ಸ೦ಬ೦ಧಗಳು ಸಾಯುತ್ತವೆ!!
೧೫. ನಮ್ಮ ಖಾಲಿ ಜೇಬು ಜೀವನದಲ್ಲಿ ಹಲವಾರು ಪಾಠಗಳನ್ನು ಕಲಿಸಿದರೆ, ಬುಧ್ಧಿವ೦ತಿಕೆಯಿರದಿದ್ದಲ್ಲಿ ತು೦ಬಿದ ಕಿಸೆಯು ನಮ್ಮನ್ನು ಹಲವಾರು ವಿಧಗಳಲ್ಲಿ ನಾಶಗೊಳಿಸುತ್ತದೆ!!
///// ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ ////// ಕೃಣ್ವಂತೋ ವಿಶ್ವಮಾರ್ಯಂ //// //// ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ /////
Thursday, November 17, 2011
ಯೋಚಿಸಲೊ೦ದಿಷ್ಟು...೪೫
Tuesday, November 15, 2011
Saturday, November 12, 2011
'ಹೊಸಬೆಳಕು' ಮೂಡಲಿದೆ!
ವೇದಗಳ ಬಗ್ಗೆ 'ಹೊಸಬೆಳಕು' ಮೂಡಲಿದೆ!
ಪುರಾತನವಾದ ವೇದದ ಕುರಿತು ಸಾಕಷ್ಟು ಆರೋಪ, ಅಪವಾದಗಳಿವೆ. ಅಪದ್ಧವಾಗಿ ಮಾತನಾಡುವ ಕೆಲವರು ವಿದ್ವಾಂಸರೆನಿಸಿಕೊಂಡವರು, ಕೆಲವರು ಕಾವಿಧಾರಿಗಳಿಂದಲೇ ವೇದಕ್ಕೆ ಕೆಟ್ಟ ಹೆಸರು ಬಂದಿದೆಯೆಂದರೆ ತಪ್ಪಾಗುವುದಿಲ್ಲ. ರೂಢಿಗತ ಕಲ್ಪನೆಗಳಿಗೆ ಹೊರತಾದ, ವೇದದ ನಿಜಮುಖವನ್ನು ಪರಿಚಯಿಸುವ ಒಂದು ವಿನೂತನ ಕಾರ್ಯಕ್ರಮ ದೂರದರ್ಶನದ ಚಂದನವಾಹಿನಿಯಲ್ಲಿ ಮೂಡಿಬರಲಿದೆ. ವೇದಾಧ್ಯಾಯಿ ಶ್ರೀ ಸುಧಾಕರಶರ್ಮರವರು ಮತ್ತು ವೇದಗಳ ಬಗ್ಗೆ ಸಾಕಷ್ಟು ಓದಿಕೊಂಡಿರುವ ಶ್ರೀಮತಿ ವಿನಯಾಪ್ರಸಾದ್ ರವರು ನಡೆಸಿಕೊಡಲಿರುವ ಈ ಕಾರ್ಯಕ್ರಮ ಸೋದರ-ಸೋದರಿಯರ ಸಂವಾದರೂಪದಲ್ಲಿದ್ದು ಇದೇ ದಿನಾಂಕ ೧೩-೧೧-೨೦೧೧ರಿಂದ ಪ್ರತಿ ಭಾನುವಾರ ಬೆಳಿಗ್ಗೆ ೯-೩೦ರಿಂದ ೧೦-೦೦ರವರೆಗೆ ೧೩ ಕಂತುಗಳಲ್ಲಿ ಮೂಡಿಬರಲಿದೆ. ಮೊದಲ ಕಂತಿನಲ್ಲಿ ವೇದವಿಜ್ಞಾನ ಮತ್ತು ಷೋಡಶೋಪಚಾರಗಳ ಕುರಿತು ಮಾಹಿತಿ ಕೊಡಲಿದ್ದಾರೆ. ಬ್ರೋಂಜ್ ಕಮ್ಯೂನಿಕೇಷನ್ಸ್ ಎಂಬ ಜಾಹಿರಾತು ಸಂಬಂಧಿ ಸಂಸ್ಥೆ ನಡೆಸುತ್ತಿರುವ ಶ್ರೀಯುತ ರಮೇಶ್ ಮತ್ತು ಸುರೇಶ್ ನಿರ್ಮಾಪಕರಾಗಿರುವ ಈ ಕಾರ್ಯಕ್ರಮಕ್ಕೆ ಯಾವುದೇ ಪ್ರಾಯೋಜಕತ್ವ ಇಲ್ಲ. ವೇದಗಳ ಬಗ್ಗೆ ಇರುವ ತಪ್ಪು ಕಲ್ಪನೆ ಹೋಗಲಾಡಿಸಬೇಕು, ವಿಶೇಷವಾಗಿ ಯುವ ಪೀಳಿಗೆಗೆ ಸರಳವಾಗಿ ವೇದಗಳ ಮಹತ್ವ ತಿಳಿಸಿಕೊಡಬೇಕು ಎಂಬುದಷ್ಟೇ ಅವರ ಆಶಯವಾಗಿದೆ. ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರ ಹಲವಾರು ಉಪನ್ಯಾಸಗಳನ್ನು ಕೇಳಿರುವ ನಾನು ಅವರಿಂದ ಪ್ರಭಾವಿತನಾದವರಲ್ಲಿ ಒಬ್ಬನಾಗಿದ್ದೇನೆ. ಈ ಕಾರ್ಯಕ್ರಮ ವಿನೂತನ ಹಾಗೂ ಚಿಂತನೀಯವಾಗಿರುವುದರಲ್ಲಿ ನನಗೆ ಅನುಮಾನವಿಲ್ಲ. ತಾವು ಈ ಕಾರ್ಯಕ್ರಮ ವೀಕ್ಷಿಸಬಹುದು. ಸಂದೇಹಗಳು, ಪ್ರಶ್ನೆಗಳು ಇದ್ದಲ್ಲಿ ಶ್ರೀ ಸುಧಾಕರಶರ್ಮರವರು ಉತ್ತರಿಸಲು ಸಿದ್ಧರಾಗಿದ್ದಾರೆ.
Wednesday, November 9, 2011
"ಈಶಾವಾಸ್ಯಮ್" ಗೃಹಪ್ರವೇಶ
" ಈಶಾವಾಸ್ಯಂ " ಗೃಹಪ್ರವೇಶದ ಚಿತ್ರಗಳನ್ನು ವೇದಸುಧೆಯಲ್ಲಿ ಪ್ರಕಟಿಸುವುದು ಉಚಿತವೆ? ಹೀಗೆ ನಾಲ್ಕೈದು ದಿನಗಳಿಂದ ಯೋಚಿಸುತ್ತಿದ್ದೆ. ಕೊನೆಗೊಮ್ಮೆ ಗಟ್ಟಿ ನಿರ್ಧಾರಕ್ಕೆ ಬಂದೆ." ಪ್ರಕಟಿಸಬೇಕು" .ಕಾರಣ ನನ್ನ ವಾಸ್ತವ್ಯದ ಜೊತೆ ಜೊತೆಗೆ ಸಮಾಜಕ್ಕಾಗಿಯೂ ಸ್ವಲ್ಪ ಚಿಂತನೆ ನನ್ನ ಯೋಜನೆಯಲ್ಲಿರ ಬೇಕಾದರೆ ,ಪ್ರಕಟಿಸುವುದು ತಪ್ಪಾಗುವುದಿಲ್ಲ.ಸರಿ ಪ್ರಕಟಿಸುವ ನಿರ್ಧಾರ ಮಾಡಿದೆ.
ಈಶಾವಾಸ್ಯಮ್ ನಲ್ಲಿ ಏನೇನಿದೆ?
* ಸತ್ಸಂಗ ಕ್ಕಾಗಿಯೇ ಸುಮಾರು ೮೦ ಜನರು ಕುಳಿತುಕೊಳ್ಳಲು ಅನುಕೂಲವಾಗಿರುವ ಸಭಾಂಗಣ.
* ಉಪನ್ಯಾಸಕಾರಿಗೆ ವಿಶ್ರಾಂತಿ ಕೊಠಡಿ
*ಸಭಾಂಗಣದಲ್ಲಿ ಶಾಶ್ವತ ಧ್ವನಿ ವರ್ಧಕ
* ಅನಿವಾರ್ಯವಾದವರಿಗೆ ಖುರ್ಚಿ
* ಶೌಚಾಲಯ
*ಅಡಿಗೆ ಸಿದ್ಧಪಡಿಸಲು ಪ್ರತ್ಯೇಕ ವ್ಯವಸ್ಥೆ
*ತಡೆರಹಿತ ವಿದ್ಯುತ್
ಉದ್ಧೇ ಶಿತ ಕಾರ್ಯ ಕ್ರಮಗಳು
*ವರ್ಷದಲ್ಲಿ ಹತ್ತಾರು ಅಧ್ಯಾತ್ಮ ಶಿಬಿರಗಳು
*ಮಾಸಿಕ ಸತ್ಸಂಗ
*ನಿತ್ಯ ಅಗ್ನಿಹೋತ್ರ \ಧ್ಯಾನ\ಪ್ರಾಣಾಯಾಮ ಅಭ್ಯಾಸ
-------------------------------------------------------
ಕಳೆದ ಎರಡರಂದು ನಮ್ಮ ಮನೆ ವು ಸಾಂಗವಾಗಿ ನೆರವೇರಿತು. ಮುದ್ರಿತ ಆಮಂತ್ರಣವಿಲ್ಲದ ,ಕೇವಲ ಈ ಮೇಲ್ ಮತ್ತು ದೂರವಾಣಿಯ ಮೂಲಕ ಮಾಡಿದ ಮನವಿಗೆ ಸ್ನೇಹಿತರು ಮತ್ತು ಬಂಧುಗಳು ಬಂದು ಶುಭ ಕೋರಿದರು.ವರ್ಕಿಂಗ್ ಡೇ ಆದ್ದರಿಂದ ಹಲವರಿಗೆ ಬರಲಾಗಲಿಲ್ಲ. ಆದರೂ ಭಾವನಾತ್ಮಕ ವಾತಾವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನನ್ನ ಹಲವು ವರ್ಷಗಳ ಕನಸಾದ " ಸತ್ಸಂಗ ಸಭಾಂಗಣ" ತುಂಬಿತ್ತು. ನನ್ನ ಜೀವನದಲ್ಲಿ ನನ್ನನ್ನು ಕೈ ಹಿಡಿದು ನಡೆಸಿದವರನ್ನು ಸ್ಮರಿಸುವ ಕಾರ್ಯಕ್ರಮ " ಸಮಾಜ ಸ್ಮರಣೆ " ಹಲವರಿಗೆ ಸಂತಸ ನೀಡಿತು. ನನ್ನ ಅಧ್ಯಾತ್ಮ ಕ್ಷೇತ್ರದಲ್ಲಿ ಮಾರ್ಗದರ್ಶಿಗಳಾಗಿರುವ ಬೆಂಗಳೂರಿನ ಭವತಾರಿಣಿ ಆಶ್ರಮದ ಮಾತಾಜಿ ವಿವೇಕಮಯೀ ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾ. ಸ್ವ.ಸಂಘದ ಹಿರಿಯ ಪ್ರಚರಕರೂ " ಕುಟುಂಬ ಪ್ರಭೋದನ್" ಪರಿವಾರದ ಅಖಿಲ ಭಾರತ ಪ್ರಮುಖರೂ ಆದ ಮಾನ್ಯ ಶ್ರೀ ಸು.ರಾಮಣ್ಣ ನವರು ಉಪಸ್ಥಿತರಿದ್ದು ನಮ್ಮನ್ನು ಹಾರೈಸಿದರು. ನಮ್ಮ ಕುಟುಂಬದ ಹಿರಿಯರೂ ಅಂದೇ 86 ನೇ ವರ್ಷಕ್ಕೆ ಕಾಲಿಟ್ಟ ಶ್ರೀ ಹೆಚ್.ಆರ್. ಶ್ರೀಕಂಠಯ್ಯನವರು ಸಭೆಯ ಅಧ್ಯಕ್ಷತೆ ವಹಿಸಿದ್ದು ಹಲವರಿಗೆ ವಿಶೇಷ ವೆನಿಸಿತು.ಸಭೆಯಲ್ಲಿ ಉಪಷ್ಟಿತರಿದ್ದ ನನ್ನ ಗುರುಗಳಾದ ಶ್ರೀ ಹನುಮೇ ಗೌಡರನ್ನೂ, ನನಗೆ ತುತ್ತಿಕ್ಕಿ ಬೆಳಸಿದ ನೂರಾರು ಅನ್ನದಾತರ ಪರವಾಗಿ ಶ್ರೀ ಬೆಳವಾಡಿ ಕೃಷ್ಣ ಮೂರ್ತಿಗಳನ್ನೂ, ಸಮಾಜದಲ್ಲಿ ನನ್ನನ್ನು ತಿದ್ದಿ ತೀಡಿ ಬೆಳಸಿದ ಶ್ರೀ ಸು.ರಾಮಣ್ಣ ನವರನ್ನೂ ಗೌರವಿಸಲಾಯ್ತು. ನನ್ನ ಕನಸಿನ ಮನೆ " ಈಶಾವಾಸ್ಯಮ್" ನಿರ್ಮಾಣದಲ್ಲಿ ಹಗಲಿರುಳು ದುಡಿದ ಕಾರ್ಮಿಕ ವರ್ಗವನ್ನೂ, ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ ಅಕ್ಕ ಪಕ್ಕದ ಮನೆಯವರನ್ನೂ ಸಹ ಗೌರವಿಸಲಾಯ್ತು. ಮಿತ್ರ ಚಿನ್ನಪ್ಪ ಸೆರೆ ಹಿಡಿದಿರುವ ಕೆಲವು ದೃಶ್ಯಗಳು ಇಲ್ಲಿವೆ.
![]() |
| ಶ್ರೀಮತಿ ಲಲಿತಾ ರಮೇಶ್ ಹಾಡಿದ್ದು " ಇದ್ದರಿರಬೇಕು ನಿನ್ನಂತೆ ಸದ್ದಿಲ್ಲದಂತೆ" |
![]() |
| ವೇದಿಕೆಯಲ್ಲಿ ಮಾನ್ಯ ಶ್ರೀ ಸು.ರಾಮಣ್ಣ,ಶ್ರೀ ಹೆಚ್.ಆರ್.ಶ್ರೀಕಂಠಯ್ಯಮತ್ತು ಮಾತಾಜಿ ವಿವೇಕ ಮಯೀ |
![]() |
| ಶ್ರೀ ಸು.ರಾಮಣ್ಣ ನವರಿಂದ ನಮ್ಮ ಮನೆ ಹೇಗಿರ ಬೇಕು? ಮಾರ್ಗದರ್ಶನ |
![]() |
| ಕೈ ಹಿಡಿದು ನಡೆಸಿದವರಿಗೆ ಗೌರವಾರ್ಪಣೆ |
![]() |
| ಪೂಜ್ಯ ಗುರುಗಳಿಗೆ ಗೌರವಾರ್ಪಣೆ |
![]() |
| ತುತ್ತಿಕ್ಕಿ ಬೆಳಸಿದ ಬೆಳವಾಡಿ ಕೃಷ್ಣಮೂರ್ತಿಗಳು |
![]() |
| ಕಟ್ಟಡ ನಿರ್ಮಿಸಿಕೊಟ್ಟ ಶ್ರೀ ದ್ಯಾವಪ್ಪ |
![]() |
| ಮರಳು ಇಟ್ಟಿಗೆ ಹೊತ್ತ ಸಂದೀಪ |
![]() |
| ಕುಟುಂಬದ ಹಿರಿಯರಾದ ಶ್ರೀಕಂಠಯ್ಯ |
![]() |
| ತುತ್ತು ಅನ್ನಕ್ಕಾಗಿ ಪರಿತಪಿಸುತ್ತಿದ್ದಾಗ ತಾತ್ಕಾಲಿಕ ಉದ್ಯೋಗ ಕೊಡಿಸಿದ ಭಾವ ಕೃಷ್ಣ ಮೂರ್ತಿ |
![]() |
| ಹೊಳೆ ನರಸೀಪುರ ಅಧ್ಯಾತ್ಮ ಪ್ರಕಾಶ ಕಾರ್ಯಾಲಯದ ಪೂಜ್ಯ ಅಧ್ವಯಾ ನಂದೇಂದ್ರ ಸರಸ್ವತೀ |
![]() |
| ಶ್ರೀ ಅನಂತನಾರಾಯಣ ರಿಂದ ಕಾರ್ಯಕ್ರಮ ನಿರ್ವಹಣೆ |
Subscribe to:
Posts (Atom)






















