4 ಏಪ್ರಿಲ್ 2010 ಆಕಾಶಾತ್ ಪತಿತಂ ತೋಯಮ್ ಯಥಾ ಗಚ್ಛತಿ ಸಾಗರಮ್| ಸರ್ವ ದೇವ ನಮಸ್ಕಾರ: ಕೇಶವಮ್ ಪ್ರತಿ ಗಚ್ಛತಿ||
ಆಕಾಶದಿಂದ ಬಿದ್ದ ನೀರೆಲ್ಲವೂ ಸಾಗರವನ್ನು ಸೇರುವಂತೆ ಎಲ್ಲ ದೇವರಿಗೆ ಮಾಡಿದ ನಮಸ್ಕಾರಗಳೂ ಕೇಶವನಿಗೇ ಸೇರುತ್ತವೆ.
ದೇವನೊಬ್ಬ ನಾಮ ಹಲವು ಎಂದೂ, ಏಕಂ ಸತ್ ವಿಪ್ರಾ ಬಹುಧಾ ವದಂತಿ ಎಂದೂ ಹೇಳುವುದನ್ನೂ ಕೇಳಿದ್ದೇವೆ. ನಮ್ಮ ಪೂರ್ವಜರು ಎಷ್ಟು ವಿಶಾಲ ಹೃದಯಿಗಳಾಗಿದ್ದರೆಂಬುದಕ್ಕೆ ಈ ಕೆಲವು ಉಧಾಹರಣೆಗಳು ಸಾಕು. ಬಹಳ ಸರಳವಾಗಿ "ದೇವನೊಬ್ಬ ನಾಮ ಹಲವು" ಎಂದರು.ಇದಕ್ಕೆ ವಿವರಣೆ ಅನಗತ್ಯ. ಸತ್ಯವಾದ ಆ ಪರಬ್ರಹ್ಮ ಒಂದೇ ಜ್ಞಾನಿಗಳು ಅದನ್ನು ನಾನಾ ರೀತಿಯಲ್ಲಿ ಕರೆಯುತ್ತಾರೆ.ನಮ್ಮ ದೇವರೇ ಶ್ರೇಷ್ಠ , ನಿಮ್ಮ ದೇವರು ಕನಿಷ್ಠ ಎಂದು ಬಡಿದಾಡುತ್ತಿರುವ ಇಂದಿನ ಜನರ ಕಿವಿಗೆ ಈ ಮಾತುಗಳು ಬೀಳಬಾರದೇ? ----------------------------------------------------------------------5ಏಪ್ರಿಲ್ 2010 ಚಿಂತಾಯಾಶ್ಚ ಚಿತಾಯಾಶ್ಚ ಬಿಂದುಮಾತ್ರಂ ವಿಶಿಷ್ಯತೇ|ಚಿತಾ ದಹತಿ ನಿರ್ಜೀವಂ ಚಿಂತಾ ದಹತಿ ದೇಹಿನಮ್|| ಚಿಂತೆಗೂ ಚಿತೆಗೂ ಒಂದು ಸೊನ್ನೆ ಮಾತ್ರ ವಿಶೇಷ.ಆದರೆ ಚಿತೆಯು ನಿರ್ಜೀವವನ್ನು ಸುಟ್ಟರೆ ಚಿಂತೆಯು ಜೀವಂತ ದೇಹವನ್ನೇಸುಡುತ್ತದೆ. ಸಂತೋಷವೇ ಯೌವನ, ಚಿಂತೆಯೇ ಮುಪ್ಪು - ಎನ್ನುವ ಮಾತನ್ನೂ ಕೇಳಿದ್ದೇವೆ. ಈಗ ಸ್ಟ್ರೆಸ್ ಅಥವಾ ಒತ್ತಡದಿಂದ ಮನುಷ್ಯನಿಗೆ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧೀ ರೋಗಗಳು ಬರುತ್ತಿವೆ ಎಂದುಎಲ್ಲರಿಗೂ ಗೊತ್ತು. ಇದು ನಮ್ಮ ಪೂರ್ವಿಕರಿಗೆ ಚೆನ್ನಾಗಿಯೇ ಗೊತ್ತಿತ್ತು. ಚಿಂತೆ ಎಂಬುದು ಜೀವಂತ ದೇಹವನ್ನೇ ಸುಡುತ್ತದೆ ಎಂಬಕಟು ಸತ್ಯವನ್ನು ಹೇಳಿದರು. ಸಾಂಸಾರಿಕ ಚಿಂತೆಯಿಂದ ಹತ್ತು ಹಲವು ರೋಗಗಳು, ಭಗವಂತನ ಚಿಂತನೆಯಿಂದ ಆನಂದ! ಯಾವುದು ಬೇಕು? ಆಯ್ಕೆ ನಮ್ಮದು.
ಯಾರಿಗೆ ಈ ಪ್ರಶ್ನೆ ಕೇಳಿದರೂ ಸಿಗುವ ಉತ್ತರ ಸುಖವಾದ ಜೀವನ. ಹಾಗಾದರೆಸುಖದ ಕಲ್ಪನೆ ಏನು?
ಸ್ವಾಮಿ ಸುಖಬೋಧಾನಂದರು ಒಂದುಚಿಕ್ಕ ಕಥೆ ಹೇಳುತ್ತಾರೆ. ಶ್ರೀಮಂತರೊಬ್ಬರ ಮನೆಯಲ್ಲಿ ಸಾಕಿದ್ದ ನಾಯಿಯನ್ನು ವಾಯುವಿಹಾರಾರ್ಥ ರಸ್ತೆಗೆ ಬಿಟ್ಟಿರುತ್ತಾರೆ. ರಸ್ತೆಯಲ್ಲಿ ಹೋಗುತ್ತಿದ್ದ ನಾಯಿಯು ಒಂದುಒಣಮೂಳೆ ಕಂಡು ಅದನ್ನು ಬಾಯಲ್ಲಿ ಕಚ್ಚಿಕೊಳ್ಳುತ್ತದೆ. ಅದನ್ನು ಕಡಿದು ಕಡಿದು ವಸಡಲ್ಲಿ ರಕ್ತಸ್ರಾವವಾಗುತ್ತೆ. ಮೂಳೆಯಿಂದರಕ್ತ ಬರುತ್ತಿದೆ ಎಂದು ತಿಳಿದ ನಾಯಿಯು ಅದನ್ನು ಚಪ್ಪರಿಸುತ್ತಾಸಂತೋಷಪಡುತ್ತದೆ.ಶ್ರೀಮಂತನ ಮನೆಯ ಮೃಷ್ಟಾನ್ನ ವನ್ನು ಬಿಟ್ಟುಒಣಮೂಳೆಕಡಿಯುತ್ತಾ ತನ್ನ ಬಾಯಲ್ಲಿ ವಸರಿರುವ ರಕ್ತವನ್ನೇ ಚಪ್ಪರಿಸುವ ನಾಯಿಯಂತೆ ನಮ್ಮ ಸ್ಥಿತಿಯೂ ಆಗಿದೆ. ಸುಖದ ಭ್ರಮೆಯಲ್ಲಿ ನಾವು ಹುಡುಕುತ್ತಿರುವುದೆಲ್ಲಾ ಮುಂದೆ ನಮ್ಮನ್ನುನಾಶಮಾಡುತ್ತದೆಂಬ ಪರಿವೆ ನಮಗಿಲ್ಲ. ಮಧ್ಯಪಾನ,ಧೂಮಪಾನ , ವೇಶ್ಯಾಸಹವಾಸ ಎಲ್ಲವೂ ಇಷ್ಟೆ. ತತ್ಕಾಲದಲ್ಲಿ ಸುಖದ ಭ್ರಮೆಯಲ್ಲಿ ತೇಲುವ ನಾವು ಶಾಶ್ವತ ದು:ಖಕ್ಕೆ ನಮ್ಮನ್ನು ಬಲಿಗೊಟ್ಟುಕೊಳ್ಳುತ್ತೇವೆ. ಇದೇ ವೇಳೆನಮ್ಮಮನೆಯಲ್ಲೇ ಲಭ್ಯವಿರುವ ಸುಖವನ್ನುನಾವು ತಿರಸ್ಕರಿಸಿರುತ್ತೇವೆ.ಈ ಹಿನ್ನೆಲೆಯಲ್ಲಿ ಈಗ ನಾವು ನಮ್ಮ ಪರಂಪರೆ ಮತ್ತುಸಾಮಾಜಿಕ ಸ್ವಾಸ್ಥ್ಯದ ಬಗ್ಗೆ ಚಿಂತನ-ಮಂಥನ ನಡೆಸೋಣ.
* ಎಲ್ಲರೂ ಸುಖವಾಗಿರಲಿ:
ಸರ್ವೇಪಿ ಸುಖಿನ: ಸಂತು
ಸರ್ವೇ ಸಂತು ನಿರಾಮಯಾ:
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿತ್ ದು:ಖ ಭಾಗ್ಭವೇತ್||
ಎಲ್ಲರೂ ಸುಖವಾಗಿರಲಿ, ಎಲ್ಲರೂನಿಶ್ಚಿಂತರಾಗಿರಲಿ,ಎಲ್ಲರೂಆರೋಗ್ಯವಾಗಿರಲಿ, ಯಾರಿಗೂ ದು:ಖ ಬರುವುದು ಬೇಡ. ಎಲ್ಲರೂ ಎಂದರೆಯಾರು? ನಮ್ಮ ಮನೆಯವರೇ? ನಮ್ಮೂರಿನವರೇ? ನಮ್ಮ ಜಾತಿಯವರೇ? ನಮ್ಮ ಧರ್ಮದವರೇ? ನಮ್ಮಭಾಷೆಯವರೇ? ಅಥವಾ ಕೇವಲ ಮನುಷ್ಯರೇ? ನಮ್ಮ ಪೂರ್ವಜರ ಚಿಂತನೆ ಅದೆಲ್ಲವನ್ನೂ ಮೀರಿದ್ದು. ಎರಡುಕಾಲಿನಮನುಷ್ಯರು, ನಾಲ್ಕು ಪ್ರಾಣಿಗಳಷ್ಟೇ ಅಲ್ಲ, ಸೃಷ್ಟಿಯ ಗಿಡಮರಬಳ್ಳಿಗಳು,ಜಲಚರಗಳು, ಕ್ರಿಮಿಕೀಟಗಳು, ಎಲ್ಲವೂ ಸುಖವಾಗಿರಲಿ, ಎಂಬುದು ಅವರ ನಿತ್ಯ ಸಂಕಲ್ಪವಾಗಿತ್ತು.ನಮ್ಮ ಚಿಂತನೆಇದೇ ಆದರೆ ಇನ್ನು ದೇಶದಲ್ಲಿ ಸಂಘರ್ಷವಿರಲು ಸಾಧ್ಯವೇ?
ಕಾಲೇ ವರ್ಷತು ಪರ್ಜನ್ಯ:
ಪೃಥ್ವೀ ಸಸ್ಯಶಾಲಿನೀ
ದೇಶೋಯಂ ಕ್ಷೋಭ ರಹಿತ:
ಸಜ್ಜನಾ ಸಂತು ನಿರ್ಭಯಾ:
ಕಾಲಕಾಲಕ್ಕೆ ಮಳೆಯಾಗಲಿ, ಭೂಮಿ ಸಸ್ಯಶಾಮಲೆಯಾಗಿರಲಿ, ದೇಶವುಕ್ಷೋಭರಹಿತವಾಗಿರಲಿ, ಪ್ರಜೆಗಳು ನಿರ್ಭಯದಿಂದ ಬಾಳಲಿ.
* ಹೆಣ್ಣು ಮಕ್ಕಳು ದೇವಿಯ ಸ್ವರೂಪ:
ದಿನಬೆಳಗಾದರೆ ದಿನಪತ್ರಿಕೆಗಳಲ್ಲಿ, ಟಿವಿ ಮಾಧ್ಯಮಗಳಲ್ಲಿ ನಾವು ಕಾಣುವುದೇನು? ಪತ್ನಿಯನ್ನು ಬೆಂಕಿಯಲ್ಲಿ ಸುಟ್ಟ ಪತಿ! ವರದಕ್ಷಿಣೆಗಾಗಿ ಹೆಣ್ಣಿಗೆ ಹಿಂಸೆ! ಅಪ್ರಾಪ್ತ ಬಾಲಕಿಯಮೇಲೆ ಅತ್ಯಾಚಾರ! ಮಗಳಿನಮೇಲೆಯೇ ತಂದೆಯ ಅತ್ಯಾಚಾರ!!
ಸುದ್ಧಿ ಓದುವಾಗ ತಲೆಸುತ್ತಿ ಬರುತ್ತದೆ. ಯಾಕೆ ಹೀಗೆಲ್ಲಾ? ಹೆಣ್ಣಿನ ಬಗ್ಗೆ ನಮ್ಮ ಪೂರ್ವಜರ ಕಲ್ಪನೆ ಏನಿತ್ತು?
ಯತ್ರ ನಾರ್ಯಸ್ತು ಪೂಜ್ಯಂತೇ
ರಮಂತೇ ತತ್ರ ದೇವತಾ:||
ಎಲ್ಲಿ ಸ್ತ್ರೀಯರು ಪೂಜ್ಯಭಾವದಿಂದಕಾಣಲ್ಪಡುವರೋ ಅಲ್ಲಿ ದೇವತೆಗಳು ಸಂತೋಷವಾಗಿರುತ್ತಾರೆ. ಒಬ್ಬ ಕವಿ ಹೇಳಿದ " ಹರ್ ಬಾಲಾ ದೇವೀಕಿ ಪ್ರತಿಮಾ" ಎಲ್ಲಾ ಹೆಣ್ಣು ಮಕ್ಕಳು ದೇವಿಯ ಸ್ವರೂಪ. ಇಂತಹಾ ಚಿಂತನೆ ನಮ್ಮದಾದರೆ ಯಾವಹೆಣ್ಣು ದೌರ್ಜನ್ಯಕ್ಕೆ ಒಳಗಾಗಲು ಸಾಧ್ಯ? ಬದಲಿಗೆ ಅವಳು ಸಂತಸವಾಗಿದ್ದು ಉಳಿದವರಿಗೆ ತಾಯಿಯ ಪ್ರೀತಿಯನ್ನುಕೊಡಬಲ್ಲಳು .
* ಧರ್ಮದ ಹತ್ತು ಮುಖಗಳು:
ಧೃತಿ: ಕ್ಷಮಾ ದಮೋಸ್ತೇಯಂ ಶೌಚಮಿಂದ್ರಿಯನಿಗ್ರಹ: |
ಧೀರ್ವಿದ್ಯಾ ಸತ್ಯಮಕ್ರೋಧ: ದಶಕಂ ಧರ್ಮ ಲಕ್ಷಣಮ್||
ಧರ್ಮದ ಹತ್ತು ಲಕ್ಷಣಗಳನ್ನು ನೋಡೋಣ.
ಧೃತಿ: - ಏನೇ ಅಡ್ಡಿಬಂದರೂ ಎದೆಗುಂದದೆ ಮುಂದುವರೆಯುವ ಉತ್ಸಾಹ
ಕ್ಷಮಾ- ನಮ್ಮನ್ನು ಯಾರೇ ನಿಂದಿಸಿದರೂ ಅವರನ್ನು ಕ್ಷಮಿಸಿ ಪ್ರೀತಿಯಿಂದ ನೋಡುವಗುಣ
ದಮ: - ಹಿತಮಿತವಾಗಿ ಇಂದ್ರಿಯಗಳಿಂದಅನುಭವಿಸುವ ಕಲೆ
ಅಸ್ತೇಯಮ್- ಕಳ್ಳತನ ಮಾಡದಿರುವಿಕೆ
ಶೌಚಮ್- ಮನಸ್ಸನ್ನು ದೇಹವನ್ನು ಶುಚಿಯಾಗಿಟ್ಟುಕೊಳ್ಳುವುದು
ಇಂದ್ರಿಯನಿಗ್ರಹ: - ಹೊರಗಿನ ಆಸೆಗಳಿಗೆ ಬಲಿಯಾಗದಂತೆ ಹತೋಟಿ
ಧೀ: - ಬುದ್ಧಿಶಕ್ತಿ, ವಿವೇಚನೆ
ವಿದ್ಯಾ- ತಿಳುವಳಿಕೆ
ಸತ್ಯಮ್- ಸತ್ಯವನ್ನೇ ಹೇಳುವುದು
ಅಕ್ರೋಧ: - ಸಿಟ್ಟಾಗದಿರುವುದು
ಮೇಲಿನ ಹತ್ತು ಗುಣಗಳನ್ನು ಹೊಂದಿದ್ದರೆಅವನು ಧರ್ಮಮಾರ್ಗದಲ್ಲಿ ನಡೆದಂತೆ
* ಚತುರ್ವಿದ ಪುರುಷಾರ್ಥಗಳು
ಧರ್ಮ, ಅರ್ಥ,ಕಾಮ ಮೋಕ್ಷ: ಇದುನಾಲ್ಕು ಪುರುಷಾರ್ಥಗಳು.
ಮನುಷ್ಯ ಹೇಗೆ ಬಾಳಬೇಕೆಂಬುದಕ್ಕೆಇದೊಂದು ಸೂತ್ರ. ಧರ್ಮ ಮತ್ತು ಮೋಕ್ಷದ ಚೌಕಟ್ಟಿನಲ್ಲಿ ಅರ್ಥಕಾಮಗಳನ್ನು ಅನುಭವಿಸುವ ಸೂತ್ರ.
ಗೊರೂರು ರಾಮಸ್ವಾಮಿ ಅಯ್ಯಂಗಾರರಹೆಸರು ಕೆಳಿದ್ದೀರಿ. ಅವರೊಮ್ಮೆ ಅಮೇರಿಕಾಪ್ರವಾಸದಲ್ಲಿದ್ದಾಗ ಅವರ ಪಕ್ಕದಲ್ಲಿದ್ದಅವರ ಪತ್ನಿಯಕಡೆ ಕೈ ತೋರಿಸಿದ ಅಮೇರಿಕಾ ವ್ಯಕ್ತಿ ಕೇಳಿದ-
-ಇವರು ಯಾರು?
ಗೊರೂರರು ಹೇಳಿದರು- ಇವರು ನನ್ನಪತ್ನಿ.
ಅಮೇರಿಕಾ ವ್ಯಕ್ತಿ ಮತ್ತೆ ಕೇಳಿದ- ಎಷ್ಟುದಿನಗಳಿಂದ ಜೊತೆಯಲ್ಲಿದ್ದೀರಿ?
- ನಲವತ್ತು ವರ್ಷಗಳಿಂದ.
ನಲವತ್ತು ವರ್ಷಗಳಿಂದ ಜೊತೆಯಲ್ಲಿಜೀವನ ಮಾಡ್ತಾ ಇದೀರಾ!!? ಎಂದುಆಶ್ಚರ್ಯಚಕಿತನಾಗುತ್ತಾನೆ. ಅದಕ್ಕೆಗೊರೂರರು ಹೇಳುತ್ತಾರೆ. ಅಷ್ಟೇ ಅಲ್ಲ. ನಮ್ಮ ದೇಶದಲ್ಲಿ ಒಮ್ಮೆಮದುವೆಯಾದಮೇಲೆ ಸಾಯುವವರೆಗೂಪತಿಪತ್ನಿಯರಾಗೇ ಇರುತ್ತೇವೆ.
ಇದು ನಮ್ಮ ಭಾರತೀಯ ಪರಂಪರೆ. ನಮಗೆ ಈ ಬಗ್ಗೆ ಏನೂ ವಿಶೇಷವೆನಿಸುವುದಿಲ್ಲ. ಆದರೆ ಈಗ ಹೆಚ್ಚುತ್ತಿರುವ ಏಡ್ಸ್ ಅಂತ ಮಾರಣಾಂತಿಕಖಾಯಿಲೆಗಳ ಮೂಲ ಹುಡುಕಿದಾಗ ಅಡೆತಡೆಯಿಲ್ಲದ ನಿಯಮ ಬಾಹಿರ ಗಂಡು-ಹೆಣ್ಣಿನ ಸಂಪರ್ಕಗಳೇ ಕಾರಣವೆಂಬುದು ಸಾಬೀತಾಗಿದೆ. ಮದ್ದೇ ಇಲ್ಲದ ಮಾರಣಾಂತಿಕ ಖಾಯಿಲೆಗೆ ಮದ್ದೆಂದರೆ ನಮ್ಮ ಪರಂಪರೆಯ ವಿವಾಹ ಬಂಧನ ಮತ್ತು ಅದರ ಪಾಲನೆ.
ಅಗ್ನಿಯನ್ನು ಒಂದೆಡೆ ಸ್ಥಾಪಿಸಿ `ಸ್ವಾಹಾ' ಎಂದು ಅಗ್ನಿಗೆ ಆಹುತಿಯನ್ನು ನೀಡುವ ಯಜ್ಞಕ್ಕೆ `ದ್ರವ್ಯ ಯಜ್ಞ' ಅಥವಾ 'ದೇವ ಯಜ್ಞ' ಎಂದು ಹೆಸರು. (ಯಜ್ಞದ ವಿಸ್ತೃತ ಅರ್ಥ `ಯಜ್ಞೋ ವೈ ಶ್ರೇಷ್ಠತಮಂ ಕರ್ಮ' - ಎಲ್ಲ ಶ್ರೇಷ್ಠತಮ ಕರ್ಮಗಳೆಲ್ಲವೂ ಯಜ್ಞವೇ!) ಬೆಂಕಿಗೆ ಒಂದು ವಿಶೇಷಗುಣವಿರುವುದು ಎಲ್ಲರ ಅನುಭವಕ್ಕೂ ಬಂದಿರುವುದೇ. ಬೆಂಕಿಗೆ ಏನನ್ನು ಹಾಕುತ್ತೇವೆಯೋ ಅದನ್ನುವಿಘಟಿಸಿ ಪರಿಸರಕ್ಕೆ ಹರಡುತ್ತದೆ. ಲೋಬಾನ ಹಾಕಿದರೆ `ಘಂ' ಎಂಬ ಸುಗಂಧವನ್ನು ಹರಡುತ್ತದೆ. ಮೆಣಸಿನಕಾಯನ್ನು ಹಾಕಿದರೆಘಾಟ'ನ್ನು ಹರಡುತ್ತದೆ.ಈ ಗುಣವನ್ನು ಕಂಡವರು ಬೆಂಕಿಗೆ ಔಷಧೀಯ ಗುಣವುಳ್ಳ ವಸ್ತುಗಳನ್ನು ಹಾಕಿದರೆ ಔಷಧೀಯ ಗುಣಗಳೇ ಪರಿಸರಕ್ಕೆಹರಡುತ್ತಲ್ಲವೇ?! - ಎಂದು ದೇವ ಅಥವಾ ದ್ರವ್ಯಯಜ್ಞದಲ್ಲಿ ಔಷಧೀಯ ಗುಣಗಳಿರುವ ವಸ್ತುಗಳನ್ನೇ ಹಾಕಿ (ರವಿಕೆ ಕಣ, ರೇಷ್ಮೆ ವಸ್ತ್ರ, ದುಡ್ಡು-ಕಾಸು ಮೊದಲಾದುವನ್ನು ಹಾಕುವುದು ಅವೈಜ್ಞಾನಿಕ ಮತ್ತು ಅವೈದಿಕ) ಪರಿಸರ ಶುದ್ಧತೆಯನ್ನು ಕಾಪಾಡಿಕೊಳ್ಳುವವ್ಯವಸ್ಥೆಯನ್ನು ಮಾಡಿದರು. ಅರಳೀಮರದ ಕಡ್ಡಿ, ಆಲದ ಕಡ್ಡಿ, ತುಪ್ಪ, ಎಳ್ಳು, ಬೆಲ್ಲ, ಕೊಬ್ಬರಿ, ಅರಳು, ಭತ್ತ, ದರ್ಭೆ, ಅಮೃತಬಳ್ಳಿ, ಔದುಂಬರ (ಅತ್ತಿ), ಬಿಲ್ವ, ತುಳಸಿ ಮುಂತಾಗಿ ಅನೇಕ ದ್ರವ್ಯಗಳಿವೆ. ಭೂಪಾಲ್ ಅನಿಲ ದುರಂತದ ಸಂದರ್ಭದಲ್ಲಿ `ಅಗ್ನಿಹೋತ್ರ'ದಅಭ್ಯಾಸವಿರುವವರು, ಅಗ್ನಿಹೋತ್ರ ಮಾಡಿ ವಾಯುವಿನಲ್ಲಿಯ ದೋಷವನ್ನು ಪರಿಹರಿಸಿಕೊಂಡಿದ್ದಾರೆ. (ಇದಕ್ಕೆ ಸಂಬಂಧಿಸಿದಅನ್ನು ಸಧ್ಯದಲ್ಲೇ ಒದಗಿಸುವೆ). ಆಯುರ್ವೇದದಲ್ಲಿ ವಿಶಿಷ್ಟ ದ್ರವ್ಯಗಳನ್ನು ಬಳಸಿಕೊಂಡು ರೋಗನಿವಾರಣೇಮಾಡುವ, ಮಾಡಿಕೊಳ್ಳುವ ಉಲ್ಲೇಖಗಳಿವೆ. (ಧೂಮಪಾನ! ತಂಬಾಕಿನದಲ್ಲ ಬಿಡಿ!) ಹೀಗೊಂದು ಪ್ರಶ್ನೆ ಕೇಳಬಹುದು - ಬೆಂಕಿಗೆವಸ್ತುಗಳನ್ನು ಹಾಕಿದರೆ ಸಾಕಲ್ಲ, ಮಂತ್ರಗಳನ್ನು ಹೇಳಬೇಕ್ಯಾಕೆ? ಮಂತ್ರಗಳನ್ನು ಸುಮ್ಮನೆ ಹೇಳುವುದಲ್ಲ, ಮಂತ್ರ ತಿಳಿದೇಹೇಳಬೇಕು. (ತಜ್ಜಪಸ್ತದರ್ಥಭಾವನಮ್ - ಪತಂಜಲಿ) ಅರ್ಥ ತಿಳಿದು ಹೇಳಿದಾಗಲೇ ಜಪ. ಇಲ್ಲವಾದಲ್ಲಿ ಗಿಣಿಪಾಠ!! ಅರ್ಥತಿಳಿದುಮಂತ್ರಗಳನ್ನು ಹೇಳಿದಾಗ ನಮ್ಮ ಅಂತರಂಗದ ಶುದ್ಧತೆಗೆ ಅದು ಕಾರಣವಾಗುತ್ತದೆ. ಏಕಕಾಲಕ್ಕೆ ಹೊರ ಮತ್ತು ಒಳಪರಿಸರಗಳನ್ನು ಶುದ್ಧೀಕರಿಸುವ ವ್ಯವಸ್ಥೆಯೇ ಯಜ್ಞ.
ಇಷ್ಟಾದಮೇಲೆಯೂ ಈ ಯಾವುದೇ ಮಾತುಗಳನ್ನು ನಂಬಬೇಕಾದ್ದಿಲ್ಲ. ಕೆಲವು ತಿಂಗಳುಗಳಾದರೂ `ಅಗ್ನಿಹೋತ್ರ'ದಪ್ರಯೋಗವನ್ನು ನಿಮ್ಮ ಮನೆಯಲ್ಲಿ ಮಾಡಿರಿ. ಏನಾದರೂ ಧನಾತ್ಮಕ ಬದಲಾವಣೆ ಕಂಡರೆ, ಆಗ ಮಾತ್ರ ಒಪ್ಪಬಹುದು. *ಆರೋಗ್ಯಕರ ವಸ್ತುಗಳನ್ನು ಹಾಕಿ * ಮಂತ್ರಗಳ ಅರ್ಥ ತಿಳಿದು ಮಾಡಿ. `
ಎಲ್ಲರಿಗಾಗಿ ವೇದ ತಾಣದಲ್ಲಿ ವೇದಪಾಠವನ್ನು ದಯಮಾಡಿ ಬೇಗ ಆರಂಭಿಸಿ. ಕೆಲವಾದರೂ ವೇದ ಮಂತ್ರಗಳನ್ನು ಸ್ವರಸಹಿತ ನೀವು ತಾಣದಲ್ಲಿ ಪೇರಿಸಿದರೆ ಅದನ್ನು ಕೇಳಿಕೊಂಡು ನಮ್ಮಂತ ಕೆಲವರಾದರೂ ಕಲಿಯಬಹುದು. ಜೊತೆಗೆ ಅದರ ಅರ್ಥವನ್ನು ಬರಹರೂಪದಲ್ಲಿ ಪ್ರಕಟಿಸಿದರೂ ಸರಿ ಅಥವಾ ಆಡಿಯೋ ಹಾಕಿದರೂ ಸರಿ. ಈ ಪ್ರಯತ್ನ ಬೇಗ ಆಗಬೇಕು. ಇದು ಬಲು ಜನರ ಅಪೇಕ್ಷೆ. ಕನಿಷ್ಟ ವಾರಕ್ಕೊಂದಾದರೂ ಮಂತ್ರ ವನ್ನು ಅರ್ಥ ಸಹಿತ ಕಲಿಯುವಂತಾದರೆ ಉತ್ತಮ. ಇಲ್ಲೊಂದು ಮಾತು - ತಾವು ಮುಂದಿನ ನಿಮ್ಮ ಬರಹದಲ್ಲಿ ವೇದಮಂತ್ರವನ್ನು ಜನಸಾಮಾನ್ಯರು ಹೇಗೆ ಕಲಿಯಬೇಕು? ಅದಕ್ಕೇನಾದರೂ ನೀತಿ ನಿಯಮಾವಳಿಗಳಿವೆಯೇ? ಎಂಬ ಬಗ್ಗೆ ಬರೆದರೆ ಉತ್ತಮ.ನಿಮ್ಮಿಂದ ಈ ಬಗ್ಗೆ ಒಂದು ಪ್ರತಿಕ್ರಿಯೆ ಬಂದರೂ ಅದನ್ನು ಪ್ರಮುಖವಾಗಿಯೇ ಪ್ರಕಟಿಸಲಾಗುವುದು.
ಇಂದು ಈ ಭೂಮಿಯನ್ನು ದುರ್ದೈವವೊಂದು ಮುತ್ತಿದೆ. ಮೃತ್ಯುವು ಕೇಕೆ ಹಾಕುತ್ತಾ ಕುಣಿಯುತ್ತಿದೆ. ಪ್ರತಿದಿನದ ಲೋಕದ ವಾರ್ತೆಗಳು ತಲೆ ಸುತ್ತು ಬರಿಸುತ್ತಿವೆ. ಇದಕ್ಕೆಲ್ಲಾ ಕಡೆ ಎಂದು?
ಡಿ ವಿ ಜಿ ಯವರು ಆದಿನಗಳ ಬಗ್ಗೆಯೇ ಅಷ್ಟು ನೊಂದು ಮನದಾಳದ ನೋವನ್ನು ಕಗ್ಗದಮೂಲಕ ಹೊರಹಾಕಿದ್ದಾರೆ. ಇಂದು ಡಿ ವಿ ಜಿ ಬದುಕಿದ್ದರೆ! ಗಾಂಧೀಜಿ ಬದುಕಿದ್ದರೆ! ಮೊನ್ನೆ ತಾನೇ ಚಪಲ ಚನ್ನಿಗರಾಯ ನಿತ್ಯಾನಂದ[ಸ್ವಾಮಿ]ಯ ರಾದ್ಧಾಂತ! ರೇಣುಕಾಚಾರ್ಯ ಜಯಲಕ್ಷ್ಮಿ ವಿಲಾಸ!! ದೇಶದ ಹಣ ರಾಜಾರೋಶವಾಗಿ ಲೂಟಿ ಮಾಡುತ್ತಿರುವ ರಾಜಕಾರಣಿಗಳು! ದೇಶದ ಭದ್ರತೆಗೆ ಸವಾಲೊಡ್ದಿರುವ ಆತಂಕವಾದಿಗಳು! ಕೊಲೆ ಸುಲಿಗೆಗಳು! ಅತ್ಯಾಚಾರಗಳು!! ಇದು ದುರ್ದೈವವಲ್ಲವೇ? ಇಂತಹ ಸುದ್ಧಿಗಳಿಂದ ತಲೆ ಸುತ್ತಿಬರಬೇಡವೇ? ಇದಕ್ಕೆಲ್ಲಾ ಕಡೆ ಎಂದು? ಉತ್ತರಿಸುವವರಾರು? ಉತ್ತರಿಸಬೇಕಾದ ಯುವಕರೆಲ್ಲಾ ಟಿ.ವಿ. ಮುಂದೆ ಕುಳಿತು ಕ್ರಿಕೆಟ್ ನೋಡುತ್ತಾ ಕೇಕೆ ಹಾಕುತ್ತಿದ್ದಾರೆ! ಆ ಭಗವಂತನೇ ಧರೆಗೆ ಇಳಿದು ಬರಬೇಕೆ? ------------------------------------------------------------------------------------------------ ಇಳೆಯ ಬಿಟ್ಟಿನ್ನು ಮೆತ್ತಲುಮೈದದ ಪ್ರೇತ ವಲೆವಂತೆ ಲೋಕ ತಲ್ಲಣಿಸುತಿಹುದು| ಹಳೆಧರ್ಮ ಸತ್ತಿಹುದು ಹೊಸಧರ್ಮ ಹುಟ್ಟಿಲ್ಲ| ತಳಮಳಕೆ ಕಡೆಯೆಂದೋ? ಮಂಕುತಿಮ್ಮ||
ಇಹವನ್ನು ತೊರೆದು ಪರವನ್ನೂ ಮುಟ್ಟದ ಪ್ರೇತವು ದಿಕ್ಕುತಪ್ಪಿ ಅಲೆಯುವಂತೆ ಜಗತ್ತು ಹಪಹಪಿಸುತ್ತಿದೆ. ಇದ್ದ ಹಳೆಯ ಧರ್ಮವು ಸತ್ತು ಹೋಗಿದೆ. ಹೊಸ ಧರ್ಮವು ಹುಟ್ಟಿಲ್ಲ. ಈಗಿನ ತಲ್ಲಣಕೆ ಕೊನೆ ಎಂದೋ?- ಎಂದು ಡಿ ವಿ ಜಿ ಯವರು ಆತಂಕ ವ್ಯಕ್ತಪಡಿಸುತ್ತಾರೆ. ಡಿವಿಜಿಯವರು ಏಳೆಂಟು ದಶಕಗಳ ಹಿಂದೆ ಕಂಡುಕೊಂಡ ಸತ್ಯವು ಇಂದು ಇನ್ನೂ ಹೆಚ್ಚು ಅನ್ವಯವಾಗುವಂತೆ ತೋರುತ್ತಿದೆ. ನಮ್ಮ ಋಷಿ ಮುನಿಗಳು ತಮ್ಮ ತಪಸ್ಸಿನ ಫಲವಾಗಿ ಹಾಕಿಕೊಟ್ಟ ಮಾರ್ಗವನ್ನು ಸಂದೇಹದಿಂದ ನೋಡುತ್ತಾ ಅದನ್ನು ಗೊಡ್ಡು ಎಂದು ದೂರತಳ್ಳಿ[ಹಳೆ ಧರ್ಮ ಸತ್ತಿಹುದು] ಹೊಸ ದಾರಿಯನ್ನು ಕಂಡುಕೊಳ್ಳಲಾಗದೆ ತಲ್ಲಣಗೊಂಡಿರುವ ನಮ್ಮ ಇಂದಿನ ಸ್ಥಿತಿಯು ಅಂದು ಡಿ ವಿ ಜಿ ಕಂಡ ಸ್ಥಿತಿಗಿಂತಲೂ ಇನ್ನೂ ಕೆಟ್ಟಿದೆಯಲ್ಲವೇ? ನಮ್ಮ ಪೂರ್ವಜರು ಬೆಳೆಸಿದ್ದ ಧರ್ಮ ವೃಕ್ಷದಡಿಯಲ್ಲಿ ಮರವೇ ಕಾಣದಂತೆ ಕಳೆ ಬೆಳೆದಿರುವುದು ನಿಜ. ಆ ಕಳೆಯನ್ನು ತೆಗೆದು ಮರಕ್ಕೆ ಗೊಬ್ಬರ ನೀರು ಹಾಕಿ ಬೆಳೆಸ ಬೇಕೋ ಅಥವಾ ಮರದ ಸುತ್ತ ಕಳೆಯಿದೆ ಎಂದು ಮರವನ್ನೇ ಉರುಳಿಸ ಬೇಕೋ? ಮರವನ್ನು ಉರುಳಿಸುವ ಕೆಲಸವಂತೂ ಭರದಿಂದ ಸಾಗಿದೆ.ನೆರಳು ಮಾಯವಾಗಿದೆ. ಜನತೆ ಕಂಗಾಲಾಗಿದ್ದಾರೆ. ಕಳೆ ತೆಗೆದುಮರವನ್ನು ಉಳಿಸುವ ಕೆಲಸ ಆಗಬೇಕಿದೆ. ಅದು ನಮ್ಮ ಕೈಲೇ ಇದೆ.
ವಿದ್ಯೆಗೆ ಸಮನಾದ ಕಣ್ಣಿಲ್ಲ. ಸತ್ಯಕ್ಕೆ ಸಮನಾದ ತಪಸ್ಸಿಲ್ಲ. ರಾಗಕ್ಕೆ ಸಮನಾದ ದು:ಖವಿಲ್ಲ. ತ್ಯಾಗಕ್ಕೆ ಸಮನಾದ ಸುಖವಿಲ್ಲ.
ವಿದ್ಯಾವಂತನಾಗದೆ ಕಣ್ಣಿದ್ದರೂ ಕುರುಡನಂತೆಯೇ. ಕುರುಡನೂ ವಿದ್ಯಾವಂತನಾಗಿದ್ದರೆ ಅವನು ಕುರುಡನಲ್ಲ. ಮಾನವನಿಗೆ ವಿದ್ಯೆಯೇ ನಿಜವಾದ ಕಣ್ಣು. ಜೀವನದಲ್ಲಿ ಸತ್ಯವಂತನಾಗಿ ಬಾಳಿದರೆ ಅದರ ಮುಂದೆ ಯಾವ ತಪಸ್ಸೂ ಕಡಿಮೆಯೇ.
ದು:ಖಕ್ಕೆ ಮೂಲ ಯಾವುದು? ಇದು ನನ್ನದು, ನನ್ನದು ಎಂಬ ಅನುರಾಗ. ನನ್ನದೆಂಬುದಕ್ಕೆ ಕಿಂಚಿತ್ ನೋವಾಗುವುದನ್ನೂ ಮನ ಸಹಿಸದು.ಮಿತಿಮೀರಿದ ಪ್ರೀತಿಯೇ ಅನುರಾಗ. ಅದರಿಂದಲೇ ದು:ಖ. ನನ್ನದೇನೂ ಇಲ್ಲ, ಅವನದೇ ಎಲ್ಲಾ, ಎಂದು ಎಲ್ಲಾ ಆ ಭಗವಂತನದೇ ಎಂದು ತಿಳಿದರೆ ದು:ಖಕ್ಕೆ ಕಾರಣವೆಲ್ಲಿ?
ನನಗಾಗಿ ಎಷ್ಟು ಮಾಡಿಕೊಂಡರೂ ಇನ್ನೂ ಬೇಕೆಂಬ ಅತೃಪ್ತಿ ಇದ್ದೇ ಇರುತ್ತದೆ. ಆದರೆ ಕೈಲಾಗದವನಿಗೆ ಒಂದಿಷ್ಟು ಸಹಾಯ ಮಾಡಿ ನೋಡಿ, ಅವನ ಕಣ್ಣಲ್ಲಿ ನಲಿವು ಕಂಡಾಗ ಆಗುವ ಸಂತೋಷಕ್ಕಿಂತ ಬೇರೆ ಏನು ಬೇಕು?
-------------------------------------------------------------------
2 ನೇ ಏಪ್ರಿಲ್ 2010 ಜಠರಂ ಪೂರಯೇದರ್ಧಂ ತದರ್ಧಂ ತು ಜಲೇನ ಚ| ವಾಯೋ: ಸಂಚಾರೇಣಾರ್ಥಂ ತು ಭಾಗಯೇಕಂ ವಿಸರ್ಜಯೇತ್||
ಹೊಟ್ಟೆಯ ಅರ್ಧಭಾಗ ಆಹಾರ, ಉಳಿದರ್ಧದಲ್ಲಿ ಅರ್ಧಭಾಗ ನೀರು, ಕಾಲುಭಾಗವನ್ನು ಗಾಳಿಯ ಸಂಚಾರಕ್ಕಾಗಿ ಬಿಡಬೇಕು.
ನಮ್ಮ ಪೂರ್ವಜರ ಸೂತ್ರ ಹೇಗಿದೆ ನೋಡಿ.ಜಾನಪದದಲ್ಲಿ ಒಂದು ಮಾತಿದೆ. ಒಂದು ಹೊತ್ತು ಉಂಡವ ಯೋಗಿ. ಎರಡೊತ್ತು ಉಂಡವ ಭೋಗಿ, ಮೂರೊತ್ತು ಉಂಡವ ರೋಗಿ, ನಾಲ್ಕೊತ್ತು ಉಂಡವನನ್ನು ಹೊತ್ಕೊಂಡ್ ಹೋಗಿ. ಈ ಎರಡೂ ಸೂತ್ರಗಳು ಮಿತಾಹಾರವನ್ನೇ ಹೇಳುತ್ತವೆ. ಮನುಷ್ಯನಾದರೋ ಬಾಯಿ ಚಪಲಕ್ಕೆ ಹೆಚ್ಚೆಚ್ಚು ಆಹಾರ ಸೇವಿಸಿ ರೋಗಕ್ಕೆ ತುತ್ತಾಗುತ್ತಾನೆ. ----------------------------------------------------------------------3ನೇ ಏಪ್ರಿಲ್ 2010 ಪ್ರಿಯವಾಕ್ಯ ಪ್ರದಾನೇನ ಸರ್ವೇ ತುಷ್ಯಂತಿ ಜಂತವ:| ತಸ್ಮಾತ್ ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ||
ಪ್ರಿಯವಾದ ಮಾತಿನಿಂದ ಎಲ್ಲಾ ಪ್ರಾಣಿಗಳೂ ಸಂತೋಷಪಡುತ್ತವೆ. ಆದ್ದರಿಂದ ಸದಾ ಪ್ರಿಯವಾದ ಮಾತುಗಳನ್ನೇ ಆಡಬೇಕು. ಪ್ರಿಯವಾದ ಮಾತಿಗೆ ಬಡತನವುಂಟೆ?
ಭಗವಂತನು ಕರುಣಿಸಿರುವ ಅದ್ಭುತ ಸಂಪತ್ತೆಂದರೆ ಮಾತು. ಮನುಷ್ಯನನ್ನು ಸಂತೋಷಗೊಳಿಸಲು ಎಲ್ಲಕ್ಕಿಂತಲೂ ಉತ್ತಮಮಾರ್ಗವೆಂದರೆ ಮಾತು. ಯಾವುದರಿಂದಲೂ ಸಮಾಧಾನಪಡಿಸಲಾಗದ್ದು ಒಳ್ಳೆಯ ಮಾತಿನಿಂದ ಸಾಧ್ಯವಾಗುತ್ತದೆ. ಮಾತೇಮುತ್ತು. ಮಾತೇ ಮೃತ್ಯು. ಒಳ್ಳೆಯ ಮಾತನ್ನಾಡಿ ಸಮಾಜದಲ್ಲಿ ಒಳ್ಳೆಯವನೆನಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಮಾತಿನಿಂದಲೇಮತ್ತೊಬ್ಬರಿಗೆ ತಲೆನೋವು ತರುವ ಜನರೂ ಇದ್ದಾರೆ. ಕೆಲವರಿಗೆ ಮಾತು ಒಂದು ಚಟ.ಆದರೆ ನಿರ್ಮಲ ಹೃದಯದಿಂದಮತ್ತೊಬ್ಬರಿಗೆ ಕಿರಿಕಿರಿಯಾಗದಂತೆ ಮಾತನಾಡುವುದು ಒಂದು ಕಲೆಯೂ ಹೌದು, ಗುಣವೂ ಹೌದು. ಪ್ರಿಯವಾದ ಮಾತಿಗೆಬಡತನವಿಲ್ಲ. ಪ್ರಿಯವಾದ ಮಾತನ್ನೇ ಆಡೋಣ.
---------------------------------------------------------------------------------------------