///// ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ ////// ಕೃಣ್ವಂತೋ ವಿಶ್ವಮಾರ್ಯಂ //// //// ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ /////
Wednesday, February 9, 2011
ವಿಚಾರಸಂಕಿರಣದಲ್ಲಿ ಶ್ರೀ ನಾಗರಾಜದೀಕ್ಷಿತ್
ವಿಚಾರಸಂಕಿರಣದಲ್ಲಿ ಡಾ|| ವಿವೇಕ್
| ವಿಚಾರಸಂಕಿರಣದಲ್ಲಿ ಪಾಲ್ಗೊಂಡ ಡಾ||ವಿವೇಕ್ |
Tuesday, February 8, 2011
ಒಂದು ಪುಟ್ಟ ಅನುಭವ
ವೇದಸುಧೆಯ ಅಭಿಮಾನಿಗಳಲ್ಲಿ ನನ್ನ ಒಂದು ಪುಟ್ಟ ಅನುಭವವನ್ನು ಹಂಚಿಕೊಳ್ಳಬೇಕೆನಿಸುತ್ತಿದೆ. ವೇದಾಧ್ಯಾಯೀ ಸುಧಾಕರಶರ್ಮರ ಪರಿಚಯವು ನನಗೆ ಕಳೆದ ಮೂರು ವರ್ಷಗಳಿಂದೀಚೆಗೆ, ಅಷ್ಟೆ. ಅವರ ಒಡನಾಟ, ಮಾತುಕತೆ , ವೇದಮಂತ್ರಗಳಿಗೆ ಮನ ಮುಟ್ಟುವಂತೆ ಕೊಡುತ್ತಿದ್ದ ವಿವರಣೆ, ಎಲ್ಲಕ್ಕಿಂತ ಹೆಚ್ಚಾಗಿ "ವೇದ ಎಲ್ಲರಿಗಾಗಿ" ಎಂಬ ಅವರ ಸ್ಪಷ್ಟ ನಿಲುವು, ನನ್ನನ್ನು ಹೆಚ್ಚು ಹೆಚ್ಚು ಅವರ ಸಂಪರ್ಕಕ್ಕೆ ಬರುವಂತೆ ಮಾಡಿತು. ಆದರೆ ತಲೆ ತಲಾಂತರಗಳಿಂದ ನಡೆದುಕೊಂಡು ಬಂದಿರುವ ಆಚರಣೆಗಳ ಬಗ್ಗೆ ಅವರ ನಿಲುವು ನನಗೆ ಬಹಳ ಅಸಮಾಧಾನಕ್ಕೆ ಕಾರಣ ವಾಗುತ್ತಿತ್ತು. ನಮ್ಮ ಋಷಿಮುನಿಗಳು ಹಾಕಿಕೊಟ್ಟ ಮಾರ್ಗದಲ್ಲಿ ತಾನೇ ನಾವು ನಡೆಯುತ್ತಿರುವುದು, ಆದರೆ ಹಲವು ಆಚರಣೆಗಳನ್ನು ಶರ್ಮರು ಒಪ್ಪುವುದಿಲ್ಲವಲ್ಲ! ದೇವರ ಪೂಜೆಯ ವಿಚಾರದಲ್ಲಿಯೂ ನಮ್ಮ ನಂಬಿಕೆ ಯನ್ನು ಕೆಡಸಿ ಬಿಡುವರಲ್ಲಾ! ಹೀಗೆ ಆಲೋಚಿಸುತ್ತಾ ಅವರು ಕಂಡಾಗಲೆಲ್ಲಾ ವಿಪರೀತ ಚರ್ಚೆ ಮಾಡಲಾರಂಭಿಸಿದೆ. ಎಲ್ಲಕ್ಕೂ ಅವರ ಬಳಿ ನನ್ನ ಸಂದೇಹಗಳಿಗೆ ಸಮಾಧಾನಕೊಡುವ ಉತ್ತರ ವಿದ್ದರೂ ಈ ವರಗೆ ನಾನು ಆಚರಿಸಿಕೊಂಡು ಬಂದಿದ್ದ ಹಲವಾರು ಆಚರಣೆಗಳನ್ನು ಸಮರ್ಥಿಸಿ ಅವರೊಡನೆ ಜಗಳದ ರೀತಿಯಲ್ಲೇ ಮೊ೦ಡುವಾದ ಮಾಡುತ್ತಿದ್ದೆ.ಆದರೆ ಅವರಾದರೋ ಸತ್ಯವನ್ನು ಬಿಟ್ಟು ಒಂದಿಂಚೂ ಆಚೀಚೆ ಕದಲದಾಗ ಅವರ ಮಾತಿನಲ್ಲಿ ನಂಬಿಕೆ ಬರುತ್ತಾ ಹೋಯ್ತು. ಆದರೆ ಒಂದು ಸಿಟ್ಟು ಕಾಡುತ್ತಿತ್ತು. ನಾನು ದೇವರ ಪೂಜೆ ಮಾಡುವುದರ ಬಗ್ಗೆಯೂ ನನ್ನ ನಂಬಿಕೆ ಸಡಿಲಿಸಿಬಿಟ್ಟರಲ್ಲಾ! ಎಂದು ಅವರೊಡನೆ ಮತ್ತೆ ಮತ್ತೆ ಕಾದಾಡಿದ್ದಾಯ್ತು. ದೇವರ ಪೂಜೆಯಲ್ಲಿದ್ದ ನನ್ನ ನಂಬಿಕೆಯನ್ನೂ ನೀವು ಕೆಡಸಿ ಬಿಟ್ಟಿರಿ, ನನಗೆ ಪರ್ಯಾಯ ಮಾರ್ಗ ತೋರಿಸಲೂ ಇಲ್ಲವೆಂದು ಸಿಟ್ಟಾದೆ. ಆದರೆ ಶರ್ಮರು ಒಂದು ರಾತ್ರಿ ನಮ್ಮ ಮನೆಯಲ್ಲಿ ಮಲಗ ಬೇಕಾಯ್ತು. ಬೆಳಿಗ್ಗೆ ನಾನು ಆರು ಗಂಟೆಗೆ ಎದ್ದರೆ ಶರ್ಮರು ಆಗಲೇ ಸ್ನಾನ ಮುಗಿಸಿ ಸಂಧ್ಯೋಪಾಸನೆಯಲ್ಲಿ ನಿರತರಾಗಿ ಕಣ್ಮುಚ್ಚಿ ಕುಳಿತಿದ್ದಾರೆ. ಅಂದು ಅವರೆದುರು ನಾನು ಅರ್ಧಗಂಟೆ ಕುಳಿತೆ. ಅವರು ನನ್ನನ್ನುಗಮನಿಸಿರಲಿಲ್ಲ.ಅಂದು ನನಗೆ ಖಾತರಿಯಾಯ್ತು. ಶರ್ಮರು ನನಗೆ ಒಂದು ಪರ್ಯಾಯ ಮಾರ್ಗವನ್ನು ಕೊಡುತ್ತಾರೆಂಬ ನಂಬಿಕೆ ಬಂತು.ಕಳೆದ ಎರಡುವಾರಗಳ ಹಿಂದೆ ಮತ್ತೊಂದು ಅವಕಾಶವು ದೊರೆಯಿತು. ಹಾಸನಜಿಲ್ಲೆಯ ದೊಡ್ದಮಗ್ಗೆ ಎಂಬ ಹಳ್ಳಿಯಲ್ಲಿ ನಡೆದ ವೇದೋಕ್ತ ಜೀವನ ಪಥ ಕಾರ್ಯಗಾರ. ಅದರಲ್ಲಿ ನಡೆದ ಅಗ್ನಿಹೋತ್ರ. ಅದರಹಿಂದಿನ ರಾತ್ರಿ ಮಿತ್ರರೊಬ್ಬರಿಗೆ ಅನಾರೊಗ್ಯದ ಪರಿಣಾಮವಾಗಿ ಇಡೀರಾತ್ರಿ ನಿದ್ರೆ ಇಲ್ಲದೆ ನಾನೂ ಕೂಡ ಬಳಲಿದ್ದೆ. ವಿಪರೀತವಾದ ತಲೆನೋವಿತ್ತು. ಅಂದು ಅಗ್ನಿಹೋತ್ರಕ್ಕೆ ನನ್ನನ್ನೂ ಕುಳಿತುಕೊಳ್ಳಲು ಶರ್ಮರು ಹೇಳಿದರು. ಅಗ್ನಿಹೋತ್ರ ಮುಗಿಯುವುದರೊಳಗೆ ಪ್ರತಿಶತ ೯೦ ಭಾಗ ತಲೆನೋವು ಮಾಯವಾಗಿತ್ತು. ಮನಸ್ಸೂ ಕೂಡ ಮುದಗೊಂಡಿತ್ತು. ಅಗ್ನಿಹೋತ್ರದ ಸರಳ ಆಚರಣೆ ಬಗ್ಗೆ ಮತ್ತೊಮ್ಮೆ ಬರೆಯುವೆ. ಆಗ ಅದರ ವೀಡಿಯೋ ನಿಮಗಾಗಿ.
ಲೇಖನವನ್ನು ಓದಲು ಸಮಸ್ಯೆ ಇದೆಯೇ?
ಶ್ರೀ ಕವಿ ಸುರೇಶ್ "ವಿನಾ ದೈನ್ಯೇನ ಜೀವನಂ......." ಲೇಖನವನ್ನು ನಿನ್ನೆ ಪ್ರಕಟಿಸಿದ್ದಾರೆ. ನನ್ನಲ್ಲಿ ನುಡಿ ಮತ್ತು ಬರಹ ಎರಡೂ ಅನುಕೂಲಗಳಿರುವುದರಿಂದ ನಾನು ಈ ಲೇಖನವನ್ನು ಓದಲು ಸಾಧ್ಯವಾಯ್ತು. ನನಗೆ ಯಾವ ತಪ್ಪೂ ಕಾಣಲಿಲ್ಲ. ಆದರೆ ಮಿತ್ರರಾದ ಶ್ರೀ ಜಗದೀಶ್ ಇವರು ಲೇಖನವನ್ನು ಓದಲು ಸಾಧ್ಯವಾಗಿಲ್ಲ. ಕಾರಣ ಬಹುಶ: ಸುರೇಶ್ ಅವರು ನುಡಿಯಲ್ಲಿ ಬರೆದಿದ್ದಿರಬಹುದು. ಜಗದೀಶ್ ರವರು ನನಗೆ ತಿಳಿಸಿದಮೇಲೆ ಅದೇ ಬರಹವನ್ನು ಯೂನಿಕೋಡ್ ಗೆ ಕನ್ವರ್ಟ್ ಮಾಡಿ ಹಾಕಿರುವೆ. ಈಗ ಓದಲು ಸಾಧ್ಯವಾಗಬಹುದು. ಈ ರೀತಿಯ ಸಮಸ್ಯೆಯಾದಾಗ ಕೂಡಲೇ ವೇದಸುಧೆಗೆ ಒಂದು ಮೇಲ್ ಕಳಿಸಿದರೆ ನನ್ನ ಗಮನಕ್ಕೆ ಬಂದಕೂಡಲೇ ಸರಿಪಡಿಸುವೆ. ವೇದಸುಧೆಯ ಅಭಿಮಾನಿಗಳು ಸಮಸ್ಯೆಗಳೆದುರಾದರೆ ದಯಮಾಡಿ ವೇದಸುಧೆಯ ಗಮನಕ್ಕೆ ತನ್ನಿ.
ವೇದಸುಧೆಯನ್ನು ವಿಶ್ವದಲ್ಲಿ ಎಲ್ಲೆಲ್ಲಿ ನೋಡುತ್ತಾರೆ?
ಅಂತರ್ಜಾಲವನ್ನು ಜಾಲಾಡುತ್ತಾ ಹೋದಂತೆ ಅನೇಕ ವಿಸ್ಮಯಗಳು ಲಭ್ಯವಾಗುತ್ತವೆ. ಇಂದು ವೇದಸುಧೆಯ ಆಳವನ್ನು ಜಾಲಾಡಿದಾಗ ಅಂತರ್ಜಾಲ ಮಾಹಿತಿಗಳು ಲಭ್ಯವಾಗಿದ್ದು ಹೀಗೆ. ವೇದಸುಧೆಯನ್ನು ವಿಶ್ವದಲ್ಲಿ ಎಲ್ಲೆಲ್ಲಿ ನೋಡುತ್ತಾರೆ?ನೋಡಿ. ಇಲ್ಲೊಂದು ಮಾಹಿತಿ ನಿಮಗಾಗಿ
ರಾಷ್ಟ್ರಗಳ ಪ್ರಕಾರವಾಗಿ ಪುಟದ ವೀಕ್ಷಣೆಗಳು
ರಾಷ್ಟ್ರಗಳ ಪ್ರಕಾರವಾಗಿ ಪುಟದ ವೀಕ್ಷಣೆಗಳು
1. ಭಾರತ : 16588
2. ಅಮೇರಿಕಾ ಸಂಯುಕ್ತ ಸಂಸ್ಥಾನ: 1301
3. ಸಂಯುಕ್ತ ಅರಬ್ ಎಮಿರೇಟಸ್: 351
4. ಕೆನಡಾ: 131
5. ಸಿಂಗಪುರ: 115
6. ದಕ್ಷಿಣ ಕೋರಿಯಾ:95
7. ರಶಿಯಾ: 93
8. ಬ್ರಿಟನ್/ಇಂಗ್ಲೆಂಡ್: 62
9.ಮಲೇಶಿಯಾ: 53
10. ನೆದರ್‌ಲ್ಯಾಂಡ್ಸ್: 43
Monday, February 7, 2011
ವೇದಸುಧೆಯ ವಾರ್ಷಿಕೋತ್ಸವಕ್ಕೆ ಬೆಂಬಲವಾಗಿ ನಿಂತ ರಾಷ್ಟ್ರ ಗೌರವ ಸಂರಕ್ಷಣ ಪರಿಷತ್
ಸುಧಾಕರ ಶರ್ಮರು ೨೯ ರಂದೇ ಬರ್ತಾರಾ? ಹಾಗಾದರೆ ಅವರ ಒಂದು ಉಪನ್ಯಾಸವನ್ನು ನಾವು ಆಯೋಜಿಸಿ ಬಿಡುತ್ತೇವೆ, ಎಂದು ಮುಂದೆ ಬಂದವರು ರಾಷ್ಟ್ರ ಗೌರವ ಸಂರಕ್ಷಣ ಪರಿಷತ್ ನ ಸಂಚಾಲಕರುಗಳಾದ ಶ್ರೀ ನಟರಾಜ್ ಮತ್ತು ಶ್ರೀ ರಾಮಸ್ವಾಮಿಯವರು. ಅಧ್ಯಕ್ಷರಾದ ಶ್ರೀ ಸಿ.ಎಸ್. ಕೃಷ್ಣಸ್ವಾಮಿಯವರ ಅನುಮತಿಪಡೆದೇ ನನ್ನ ಹತ್ತಿರ ಬಂದಿದ್ದರು. ಸರಿ ಉಪನ್ಯಾಸದ ಯೋಜನೆ ಯಾಯ್ತು. ಹೇಗೂ ಸಂಧ್ಯಾಕಾಲದಲ್ಲಿ ಮಾಡುತ್ತಿದ್ದೇವೆ, ಒಂದು ಅಗ್ನಿಹೋತ್ರ ಕಾರ್ಯಕ್ರಮವೂ ನಡೆದುಬಿಡಲಿ, ಎಂಬ ಸಲಹೆ ಬಂತು. ಶರ್ಮರೊಡನೆ ಸಮಾಲೋಚಿಸಿದ್ದಾಯ್ತು. ಶನಿವಾರ ಸಂಜೆ ಮತ್ತು ಭಾನುವಾರ ಬೆಳಿಗ್ಗೆ ಎರಡು ಅಗ್ನಿಹೋತ್ರಗಳನ್ನು ಮಾಡಬಹುದು, ಎಂದು ಶರ್ಮರು ಒಪ್ಪಿಗೆ ಸೂಚಿಸಿದರು. ಶರ್ಮರು ಆಹೊತ್ತಿಗೆ ಬೆಂಗಳೂರಿನಿಂದ ಬರಬೇಕಲ್ಲಾ! ಎಂದು ಯೋಚಿಸುತ್ತಿರುವಾಗಲೇ ಬೆಂಗಳೂರಿನ ಮಿತ್ರ ಪ್ರಸನ್ನ ಮತ್ತು ಚಿತ್ರ ದಂಪತಿಗಳು ನಮ್ಮ ಕಾರ್ ನಲ್ಲೇ ಕರೆದುಕೊಂಡು ಬರುತ್ತೇವೆ. ಆಜವಾಬ್ದಾರಿ ನಮಗಿರಲಿ, ಎಂದರು. ಕೂಡಲೇ ಅಗ್ನಿ ಹೋತ್ರದಲ್ಲಿ ಎಂಟು ಜನ ದಂಪತಿಗಳು ಕುಳಿತು ನಡೆಸಿದರೆ ಸೂಕ್ತ ವೆಂದು ಆಲೋಚಿಸಿ, ಯಾರ್ಯಾರು ಅಗ್ನಿಹೋತ್ರಕ್ಕೆ ಕುಳಿತುಕೊಳ್ಳಬೇಕೆಂದಾಗ ವೇದಸುಧೆಯ ಗೌರವ ಸಂಪಾದಕರಾದ ಶ್ರೀ ನಾಗರಾಜ್, ರಾಷ್ಟ್ರ ಗೌರವ ಸಂರಕ್ಷಣ ಪರಿಷತ್ ನ ಸಂಚಾಲಕರುಗಳಾದ ಶ್ರೀ ನಟರಾಜ್ ಮತ್ತು ಶ್ರೀ ರಾಮಸ್ವಾಮಿಯವರು ಪತ್ನಿ ಸಮೇತರಾಗಿ ಮತ್ತು ಆಯ್ದ ಐದು ಜನ ದಂಪತಿಗಳನ್ನು ಅಗ್ನಿಹೋತ್ರಕ್ಕೆ ಕುಳಿತುಕೊಳ್ಳಲು ಮಾತನಾಡಿಸಿ ನಿಶ್ಚಯಿಸಿದ್ದೂ ಆಯ್ತು. ಎಲ್ಲವೂ ತರಾತುರಿಯಲ್ಲೇ. ಆದರೆ ಎಲ್ಲವೂ ಯಶಸ್ವಿಯಾಯ್ತು.ಈಗ ನೋಡಿ ಅಗ್ನಿಹೋತ್ರ ಮತ್ತು ಉಪನ್ಯಾಸ ಕಾರ್ಯಕ್ರಮಗಳ ಚಿತ್ರಗಳು.
| ಶ್ರೀಮತಿ ಲಲಿತಾರಮೇಶ್ ರಿಂದ ಪ್ರಾರ್ಥನೆ |
| ಪರಿಷತ್ತಿನ ಪರಿಚಯ ಮಾಡಿದ ಶ್ರೀ ನಟರಾಜ್ |
| ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿನಾಗರಾಜರಿಂದ ಪರಿಷತ್ತಿನ ಅಧ್ಯಕ್ಷರಿಗೆ ಪುಷ್ಫಾರ್ಪಣೆ |
| ವೇದಸುಧೆಯ ಸಂಪಾದಕ ಶ್ರೀ ಹರಿಹರಪುರಶ್ರೀಧರರಿಂದ ಶ್ರೀ ಸುಧಾಕರಶರ್ಮರಿಗೆ ಪುಷ್ಫಾರ್ಪಣೆ |
| ಪರಿಷತ್ತಿನ ಸಂಚಾಲಕರಾದ ಶ್ರೀ ರಾಮಸ್ವಾಮಿಯರರಿಂದ ಹಿರಿಯ ಚಿಂತಕರಾದ ಡಾ.ಎ.ಎಸ್.ವೇಣುಗೋಪಾಲ್ ರಾವ್ ಅವರಿಗೆ ಪುಷ್ಫಾರ್ಪಣೆ |
| ವೇದಾಧ್ಯಾಯೀ ಸುಧಾಕರ ಶರ್ಮರಿಂದ ಉಪನ್ಯಾಸ |
| ಸಭೆಯ ಒಂದು ನೋಟ |
| ಪರಿಷತ್ತಿನ ಸಂಚಾಲಕರಾದ ಶ್ರೀ ರಾಮಸ್ವಾಮಿಯರರಿಂದ ಕಾರ್ಯಕ್ರಮದ ವಿವರಣೆ |
| ಹಿರಿಯ ಚಿಂತಕರಾದ ಡಾ.ಎ.ಎಸ್.ವೇಣುಗೋಪಾಲರಾವ್ |
| ಶ್ರೀ ಶಂಕರಮಠದ ಧರ್ಮಾಧಿಕಾರಿಗಳಾದ ಶ್ರೀ ಎಂ.ಎಸ್. ಶ್ರೀಕಂಠಯ್ಯನವರು |
| ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸಿ.ಎಸ್.ಕೃಷ್ಣಸ್ವಾಮಿಯವರು |
| ವೇದಸುಧೆಯ ಸಂಪಾದಕ ಶ್ರೀ ಹರಿಹರಪುರಶ್ರೀಧರರಿಂದ |
| ಪರಿಷತ್ತಿನ ಅಧ್ಯಕ್ಷರಿಗೆ ಗೌರವಾರ್ಪಣೆ |
| ಶ್ರೀ ಶಂಕರಮಠದ ಧರ್ಮಾಧಿಕಾರಿಗಳಾದ ಶ್ರೀ ಎಂ.ಎಸ್. ಶ್ರೀಕಂಠಯ್ಯನವರಿಗೆ ಗೌರವಾರ್ಪಣೆ |
| ಹಿರಿಯ ಚಿಂತಕರಾದ ಡಾ.ಎ.ಎಸ್.ವೇಣುಗೋಪಾಲರಾವ್ ಅವರಿಗೆ ಗೌರವಾರ್ಪಣೆ |
| ವೇದಾಧ್ಯಾಯೀ ಶ್ರೀ ಸುಧಾಕರಶರ್ಮರಿಗೆ ಗೌರವಾರ್ಪಣೆ |
| ಶಾಂತಿಮಂತ್ರದ ನಂತರ ವಂದೇ ಮಾತರಮ್ |
| ವಂದೇ ಮಾತರಮ್ ಹಾಡುತ್ತಿರುವ ಶ್ರೀಮತಿ ಲಲಿತಾ ನರಸಿಂಹಮೂರ್ತಿ |
Subscribe to:
Posts (Atom)