///// ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ ////// ಕೃಣ್ವಂತೋ ವಿಶ್ವಮಾರ್ಯಂ //// //// ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ /////
Monday, December 12, 2011
ಯೋಚಿಸಲೊ೦ದಿಷ್ಟು...೪೭
೧. ನಮ್ಮ ಮನೋದಾರ್ಢ್ಯವೆ೦ದರೆ ನಮ್ಮನ್ನು ಒಬ್ಬ ವ್ಯಕ್ತಿಯು ಟೀಕಿಸಿದಾಗ ಯಾ ಮಾನಸಿಕವಾಗಿ ಘಾಸಿಗೊಳಪಡಿಸಿದಾಗ, ಆ ಸ೦ಧರ್ಭವನ್ನು ಅರ್ಥೈಸಿಕೊಳ್ಳುವುದರಲ್ಲಿದೆಯೇ ವಿನ: ನಾವೂ ಅವನನ್ನು ಟೀಕಿಸುವದರಲ್ಲಿ ಯಾ ಮಾನಸಿಕವಾಗಿ ಘಾಸಿಗೊಳಿಸುವುದರಲ್ಲಿಯಾಗಲೀ ಇಲ್ಲ!!
೨. “ಸ೦ತೋಷ“ ಎ೦ಬುದರ ಬಗ್ಗೆ ಕೇವಲ ಮನಸ್ಸಿನಲ್ಲಿ ಚಿ೦ತಿಸಬೇಕಾಗುವ ಪರಿಸ್ಥಿತಿಯನ್ನು ತ೦ದುಕೊಳ್ಳದಿರೋಣ.. “ಸ೦ತಸ“ ವನ್ನೇ ಕೊಲ್ಲುವಷ್ಟು “ಚಿ೦ತೆ“ಗಳನ್ನು
ಹೃದಯದಲ್ಲಿ ಅಡಗಿಸಿಕೊಳ್ಳದಿರೋಣ.
೩. ಟೀಕೆಗಳು ಸಾಧಕರನ್ನು ಇನ್ನಷ್ಟು ಸಾಧಿಸಲು ಪ್ರೇರೇಪಿಸುತ್ತವೆ!!
೪. ನ್ಯಾಯಯುತವಾಗಿ,ಪ್ರಾಮಾಣಿಕವಾಗಿ ನಮ್ಮ ಬೆನ್ನ ಹಿ೦ದೆ ನಿಲ್ಲುವವರನ್ನು ನಾವು ಗುರುತಿಸೋಣ.
೫. ನದಿಯ ಹಿ೦ದೆ ಹೋದವರಿಗೆ ಸಮುದ್ರದ ದಾರಿಯನ್ನು ಗುರುತಿಸುವುದು ಕಷ್ಟವಲ್ಲ!
೬. ನಮ್ಮ ಆಶೋತ್ತರಗಳ ಮೇಲೆ ತಣ್ಣೀರೆರಚುವವರಿ೦ದ ದೂರವಿರಬೇಕು.
೭. ಮರದ ಮೇಲೇರುವವರು ಕೊ೦ಬೆಯನ್ನು ಹಿಡಿಯಬೇಕೇ ವಿನ: ಹೂವು ಯಾ ಹಣ್ಣುಗಳನ್ನಲ್ಲ!!
೮. ಮುಳ್ಳನ್ನು ಬಿತ್ತಿದವರೇ ಆ ಮುಳ್ಳಿನ ಮೇಲೆ ಬರಿಯ ಕಾಲಿನ ಮೇಲೆ ನಡೆಯಬೇಕಾಗುತ್ತದೆ!!
೯. “ ನಮ್ಮ ಯೋಗ್ಯತೆಯೇ ಇಷ್ಟು“ ಎ೦ಬ “ಸ್ವ-ಸಾ೦ತ್ವನ“ “ಹೇಡಿತನ“ವೆ೦ದೇ ಗುರುತಿಸಲ್ಪಡುತ್ತದೆ!
೧೦. ಸಹೋದ್ಯೋಗಿಗಳನ್ನು ತುಚ್ಛವಾಗಿ ಕಾಣುವವರೆಲ್ಲರೂ “ದಬ್ಬಾಳಿಕೆ“ಯ ಮನೋಸ್ಠಿತಿಯವರೇ..
೧೧. ನಮ್ಮ ಹೃದಯದಲ್ಲಿ ಬಲವಾಗಿ ಬೇರೂರಿರುವ ಭಾವನೆಯೆ೦ದರೆ “ಅಸೂಯೆ“!
೧೨. ಅಭಿಪ್ರಾಯ ಬೇಧವೆಲ್ಲಾ ವಿರೋಧಕ್ಕೆ ಕಾರಣವಲ್ಲ!
೧೩. ಇಡೀ ಮಾನವ ಸಮೂಹವೇ ಏಕಾಭಿಪ್ರಾಯವನ್ನು ಹೊ೦ದಿದ್ದು, ಒಬ್ಬ ಮಾತ್ರ ಅವರ ವಿರೋಧಿಯಾಗಿದ್ದರೂ ಅವನ ಬಾಯಿಯನ್ನು ಮುಚ್ಚಿಸುವುದು ತಪ್ಪು.. ಅ೦ತೆಯೇ ಆ ಒಬ್ಬನಿಗೆ ಎಲ್ಲರ ಬಾಯಿಯನ್ನು ಮುಚ್ಚಿಸುವ ಅಧಿಕಾರವಿದ್ದರೂ ಹಾಗೆ ಮಾಡುವುದು ತಪ್ಪೇ!! ಜೆ.ಎಸ್. ಮಿಲ್
೧೪. ಒಳ್ಳೆಯದ್ದನ್ನು ವರ್ಣಿಸುವಾಗ ಮಾತು ಹೆಚ್ಚಾಗಬೇಕು.. ಬೇಡದನ್ನು ಕ೦ಡಾಗ ಮಾತು ಕಡಿಮೆಯಾಗಬೇಕು!
೧೫. “ ಮೌನದ ಮಹತ್ವ ಮನಗ೦ಡಾಗ ಜಗತ್ತಿನ ಅನೇಕಾನೇಕ ವಿವಾದ-ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ “- ಡಿ.ವೀರೇ೦ದ್ರ ಹೆಗ್ಗಡೆ

Sunday, December 11, 2011
ವೇದಸುಧೆಯ ರಚನೆಯಲ್ಲಿ ಸ್ವಲ್ಪ ಬದಲಾವಣೆ
ವೇದಸುಧೆಯ ಆತ್ಮೀಯ ಅಭಿಮಾನಿಗಳೇ , ವೇದಸುಧೆಯ ರಚನೆಯಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ. ಹೆಡ್ಡರ್ ಅಡಿಯಲ್ಲಿದ್ದ ಪುಟಗಳಿಂದ ಅಷ್ಟಾಗಿ ಪ್ರಯೋಜನ ಇರಲಿಲ್ಲ. ಅಲ್ಲದೆ ಆಯಾ ಪುಟಗಳಿಗೆ ಸೇರ್ಪಡಿಸುವುದು ತ್ರಾಸದ ಕೆಲಸವಾಗಿತ್ತು. ಹಾಗಾಗಿ ಆ ಪುಟಗಳನ್ನು ತೆಗೆದು ಬದಲಿಗೆ ಅದೇ ಜಾಗದಲ್ಲಿ ಮಾಲಿಕೆಗಳನ್ನು ಅಳವಡಿಸಲಾಗಿದೆ. ಈ ವ್ಯವಸ್ಥೆಯಿಂದ ನೀವು ನೋಡಬೇಕಾದ ಮಾಲಿಕೆಯ ಎಲ್ಲಾ ಬರಹಗಳನ್ನೂ ಒಂದೇ ಪುಟದಲ್ಲಿ ತೆರೆಯಬಹುದಾಗಿದೆ. ಇದರಿಂದ ನಿಮಗೆ ಅನಾನುಕೂಲವಾದರೆ ದಯಮಾಡಿ ತಿಳಿಸಿ.
-ಹರಿಹರಪುರ ಶ್ರೀಧರ್ಸಂಪಾದಕ
ದ್ವಿತೀಯ ವಾರ್ಷಿಕೋತ್ಸವ
ಆತ್ಮೀಯರೇ,
ಬರುವ ಫೆಬ್ರವರಿ ಮಾಸಕ್ಕೆ ವೇದಸುಧೆಯು ಮೂರನೇ ವರ್ಷಕ್ಕೆ ಕಾಲಿಡಲಿದೆ. ಫೆಬ್ರವರಿ ಮಾಸದಲ್ಲಿ ಅದರ ದ್ವಿತೀಯ ವಾರ್ಷಿಕೋತ್ಸವ ಮಾಡಬೇಕು. ಈ ಬಗ್ಗೆ ನಿಮ್ಮ ಸಲಹೆಗಳನ್ನು ವೇದಸುಧೆಗೆ ಬರೆಯುವಿರಾ?
-ಹರಿಹರಪುರಶ್ರೀಧರ್
Saturday, December 10, 2011
ಮನದಲಿ ಮೂಡಿಬಂದ ಭಾವನೆಗಳು
ಇಂದು ಭಗವಾನ್ ಶ್ರೀಧರಸ್ವಾಮಿಗಳ ಜನ್ಮದಿನ. ಸಾಮಾನ್ಯವಾಗಿ ಬೆಳಿಗ್ಗೆ ನನ್ನ ನಿತ್ಯಕರ್ಮಗಳನ್ನು ಮುಗಿಸಿದ ಮೇಲೆ ಕಂಪ್ಯೂಟರ್ ಮುಂದೆ ಕೂರುವ ನಾನು ಇಂದೇಕೋ ನೆಟ್ ತೆರೆಯಬೇಕೆನಿಸಿತು. ತೆರೆದರೆ ವಿ.ಆರ್. ಭಟ್ಟರು ತಮ್ಮ ಬ್ಲಾಗಿನಲ್ಲಿ ಭಗವಾನ್ ಶ್ರೀಧರ ಸ್ವಾಮಿಗಳ ಬಗ್ಗೆ ಲೇಖನ ಒಂದನ್ನು ಬರೆದಿರುವ ಬಗ್ಗೆ ನನ್ನ ಬ್ಲಾಗಿನಲ್ಲೇ ಗೊತ್ತಾಯ್ತು. ಕ್ಲಿಕ್ಕಿಸಿದೆ. ಭಗವಾನರ ದರ್ಶನವಾಯ್ತು. ಲೇಖನವನ್ನು ಓದಿ ಭಗವಾನರನ್ನು ಮನದಲ್ಲಿ ತುಂಬಿಕೊಂಡು ಹೋಗಿ ಸ್ನಾನ ಮುಗಿಸಿ ಅಗ್ನಿಹೋತ್ರ ಮಾಡಲು ಕುಳಿತೆ. ಅಗ್ನಿಹೋತ್ರವನ್ನು ಮುಗಿಸಿ ಕಣ್ಮುಚ್ಚಿ ಕುಳಿತೆ. ಮನದಲ್ಲೆಲ್ಲಾ ಭಗವಾನರೇ ತುಂಬಿದ್ದರು. ಅವರ ದರ್ಶನವಾಗಿತ್ತು. ಮನದಲ್ಲಿ ಮೂಡಿಬಂದ ಪದಗಳಿಂದ ಭಗವಾನರನ್ನು ಸ್ತುತಿಸಿದೆ. ತೋಚಿದ ರಾಗದಲ್ಲಿ ಹಾಡಿದ್ದೆ. ಅದನ್ನೇ ರೆಕಾರ್ಡ್ ಮಾಡಿಕೊಂಡು ನಮ್ಮ ಲಲಿತಳ ಧ್ವನಿಯಲ್ಲಿ ರೆಕಾರ್ಡ್ ಮಾಡಿಸಬೇಕೆಂದು ಕೊಂಡೆ, ಅದಾಗಲೇ ಅವಳೂ ಅವಳ ಪತಿಯೊಡನೆ ನಮ್ಮ ಮನೆಗೆ ಹಾಜರ್. ಭಗವಾನರೇ ಕರೆಸಿದ್ದಾರೆ. ಅವಳ ಧ್ವನಿಯಲ್ಲಿ ಇದೀಗ ರೆಕಾರ್ಡ ಮಾಡಿಕೊಂಡು ಪ್ರಕಟಿ ಸಿರುವೆ. ಭಗವಾನರನ್ನು ಕಂಡಾಗ ನನ್ನ ಮನದಲಿ ಮೂಡಿಬಂದ ಭಾವನೆಗಳು ಇಲ್ಲಿವೆ.
ಕಂಡೆನಾ ಗೋವಿಂದನಾ
ನನ್ನೊಳಗೆ ನಾ ಕಂಡೇನಾ ಗೋವಿಂದನಾ||
ಅಲ್ಲಲ್ಲಿ ಸುತ್ತಾಡಿ ಎಲ್ಲೆಲ್ಲೊ ಓಡಾಡಿ
ಎಲ್ಲೂ ಕಾಣದ ಅವನ ಇಲ್ಲೇ ಕಂಡೇ ||
ಗೋವಿಂದನಾ ಕಂಡೆ ಮೃಷ್ಟಾನ್ನ ನಾ ಉಂಡೆ
ಗಂಗಾ ಯಮುನೆಯರ ತೀರ್ಥದಲಿ ನಾ ಮಿಂದೆ||
ಅಗ್ನಿಯ ಶಾಖ ಕಂಡೆ,ಜ್ಯೋತಿಯ ಬೆಳಕ ಕಂಡೆ
ಆಕಾಶದಲ್ಲಿ ನಾ ಹಕ್ಕಿಯಂತೆ ಹಾರಿದಂತೆ||
ನೀರಿನಲ್ಲಿ ಮೀನುಗಳು ಈಜಿದಂತೆ ಕಂಡೆ
ಲತೆಯ ಕಮಲಗಳು ಅರಳಿದಂತೆ ಕಂಡೆ ||
ಅಮ್ಮನ ಮಡಿಲಲ್ಲಿ ಕಂದನು ಮಲಗಿದಂತೆ
ಕರುವು ಹಸುವಿನ ಹಾಲ ಕುಡಿವಂತೆ||
Friday, December 9, 2011
ವೇದಸುಧೆಯ ಅಂಕಿಅಂಶಗಳು
ಇಂದಿನಂತೆ ವಿಶ್ವದಲ್ಲಿ ವೇದಸುಧೆಯನ್ನು ವೀಕ್ಷಿಸಿರುವ ಅಂಕಿಅಂಶಗಳು ಇಲ್ಲಿವೆ.
|
Subscribe to:
Posts (Atom)